ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗುರುರಾಜ್‌ (35 )ತಂದೆ: ದಿ|ನಂದಪ್ಪ ಬಲ್ಲಾಳ್‌   ವಾಸ: ಎರುಂಬು ಮನೆ,ಅಳಿಕೆ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರಾದ ಗುರುರಾಜ್‌ ರವರು ದಿನಾಂಕ:18-03-2023 ರಂದು ಮಧ್ಯಾಹ್ನ ಸುಮಾರು 2.20 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಅಪ್ಪೇರಿ ಪಾದೆ ಹೈವೇ ಹೆಸರಿನ ವಾಹನ ತೂಕ ಮಾಡುವ ಸ್ಥಳದಲ್ಲಿರುವ ಸಮಯ ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ಕೆಎ-51-ಎಂಜೆ-1675ನೇ ಬೋರವೆಲ್‌ ಲಾರಿಯನ್ನು ಅದರ ಚಾಲಕ ಶರವಣ್‌ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ಹೋಗುತ್ತಿದ್ದ ಕೆಎ-21-ಎಸ್‌-5603ನೇ ಸ್ಕೂಟರನಲ್ಲಿ ರಂಜೀತ್‌ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ನಿತೀನ್‌ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಅಪಘಾತಪಡಿಸಿದರು. ಪರಿಣಾಮ ಸ್ಕೂಟರ್‌, ಸ್ಕೂಟರ್‌ನಲ್ಲಿದ್ದ ಸವಾರ ಹಾಗೂ ಸಹ ಸವಾರ ರಸ್ತೆಗೆ ಬಿದ್ದಿದ್ದು, ಕೂಡಲೇ ಪಿರ್ಯಾಧಿ ಅಲ್ಲಿಗೆ ಹೋದಾಗ ಸ್ಕೂಟರ್‌ ಸಹ ಸವಾರವರ ರಂಜೀತರವರ  ತಲೆಯ ಭಾಗ ಜಜ್ಜಿ ರಕ್ತ ಸೋರುತ್ತಿರುವುದು ಕಂಡು ಬಂದಿದ್ದಲ್ಲದೇ ಸ್ಕೂಟರ್‌ ಸವಾರರಿಗೆ ಕೈ ಕಾಲಿನಲ್ಲಿ ರಕ್ತ ಗಾಯವಾಗಿರುತ್ತದೆ. ಸ್ಕೂಟರ್‌ ಸಹ ಸವಾರನು ಪಿರ್ಯಾಧಿ  ಪರಿಚಯದ ರಂಜಿತ್‌ ಎಂಬವರಾಗಿದ್ದು, ಸ್ಕೂಟರ್‌ ಸವಾರ ನಿತಿನ್‌ ಎಂಬವರಾಗಿರುತ್ತಾರೆ. ಅಪಘಾತದಲ್ಲಿ ಗಾಯಗೊಂಡ ಸ್ಕೂಟರ್‌ ಸಹ ಸವಾರ ರಂಜೀತ್‌ ಹಾಗೂ ಸವಾರ ನಿತಿನ್‌ ರವರನ್ನು ಆ  ಸಮಯ ವಿಷಯ ತಿಳಿದು ಅಲ್ಲಿಗೆ ಬಂದ ರಂಜಿತ್‌ ರವರ ಮಾವ ಲತೀಶ್‌  ರವರೊಂದಿಗೆ ಪಿರ್ಯಾಧಿದಾರರು ಒಂದು ಅಂಬ್ಯುಲೆನ್ಸ್‌ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮಧ್ಯಾಹ್ನ 3.00 ಗಂಟೆಯ ಸಮಯಕ್ಕೆ ರಂಜಿತ್‌ರವರು ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 40/2023  ಕಲಂ: 279,337,304 (ಎ) ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಂಗಣ್ಣ (41) ತಂದೆ:ಅಮರಣ್ಣ ವಾಸ:ಮಾವಿನಬಾವಿ ಮನೆ ಲಿಂಗಸೂರು ತಾಲೂಕು ರಾಯಚೂರು ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದುದಾರರು  ದಿನಾಂಕ: 17-03-2023 ರಂದು ಕೆ.ಎ-34-ಸಿ-6660 ನೇ ಲಾರಿಯಲ್ಲಿ ಮಂಗಳೂರಿನಿಂದ ಕಲ್ಲಿದ್ದಲು ತುಂಬಿಕೊಂಡು 11.00 ಗಂಟೆಯ ಸಮಯಕ್ಕೆ ಹೊರಟು ಬಳ್ಳಾರಿ ಕಡೆಗೆ ಹೋಗುತ್ತಾ ಮದ್ಯಾಹ್ನ 2.30 ಗಂಟೆಯ ಸಮಯಕ್ಕೆ ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಗುಂಡ್ಯ  ಕಡೆಯಿಂದ ಕೆ.ಎಲ್- 39-ಎ- 1265 ನೇ ಕಾರನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ  ತೀರ ಬಲ ಬದಿಗೆ ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಲಾರಿ ಜಖಂಗೊಂಡಿರುತ್ತದೆ. ಕಾರಿನ ಚಾಲಕನಿಗೆ ಕೈಗೆ ರಕ್ತಗಾಯ ಹಾಗೂ ಮುಖಕ್ಕೆ ತರಚಿದ ಗಾಯವಾಗಿರುತ್ತದೆ. ಕಾರಿನ ಚಾಲಕನನ್ನು ಚಿಕಿತ್ಸೆಯ ಬಗ್ಗೆ ಆಂಬ್ಯುಲೆನ್ಸ್ ವಾಹನದಲ್ಲಿ ಕಳುಹಿಸಿಕೊಟ್ಟಿರುತ್ತಾರೆ.ಪಿರ್ಯಾದಿದಾರರಿಗೆ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 32/2023 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕು| ರೇವತಿ ಪ್ರಾಯ: 47 ವರ್ಷ, ತಂದೆ: ಮೋಂಟ ಗೌಡ, ವಾಸ:  ಸಂಕೇಶ ಮನೆ, ಮುಕ್ಕೂರು ಅಂಚೆ, ಪೆರುವಾಜೆ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 09.03.2023 ರಂದು ಸುಳ್ಯ ತಾಲೂಕು ಕನಕಮಜಲು ಎಂಬಲ್ಲಿರುವ ತನ್ನ ಅಕ್ಕ ಭಾವನ ತೋಟಕ್ಕೆ ನೀರು ಹಾಯಿಸಿ ವಾಪಾಸು ತನ್ನ ಮನೆಯಾದ ಪೆರುವಾಜೆ ಗ್ರಾಮದ ಸಂಕೇಶಕ್ಕೆ ಹೋಗುವರೇ ಕನಕಮಜಲು ಬಸ್‌ ಸ್ಟ್ಯಾಂಡ್‌ ಬಳಿ ಮಾಣಿ ಮೈಸೂರು ಹೆದ್ದಾರಿಯನ್ನು  ದಾಟಿ ರಸ್ತೆಯ ಬಲಬದಿ ತಲುಪಿದ ಸಮಯ ಸುಮಾರು 14:55 ಗಂಟೆಗೆ  ಪಿರ್ಯಾದಿದಾರರ ಹಿಂದಿನಿಂದ ಅಂದರೆ ಮಡಿಕೇರಿಯಿಂದ ಪುತ್ತೂರು ಕಡೆಗೆ  ಕಾರೊಂದನ್ನು ಅದರ ಬಾಬ್ತು ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಪಿರ್ಯಾದಿದಾರರು ರಸ್ತೆಯ ಬದಿಗೆ ಬಿದ್ದು, ಅವರ ಸೊಂಟಕ್ಕೆ ಮತ್ತು ಎಡ ಮೊಣಕೈಗೆ ಗುದ್ದಿದ ನೋವುಂಟಾದವರನ್ನು ಅಲ್ಲಿಯೇ ಇದ್ದ ಧನಂಜಯರವರ ಅಂಗಡಿಯ ಹತ್ತಿರವಿದ್ದ ಗಂಗಾಧರ ಮತ್ತು ಸ್ಥಳೀಯರು ಉಪಚರಿಸಿದ್ದು, ಡಿಕ್ಕಿ ಉಂಟು ಮಾಡಿದ ಕಾರಿನ ನಂಬ್ರ ನೋಡಲಾಗಿ KA12MB3049 ನೇ ನಂಬ್ರ ವ್ಯಾಗನರ್‌ ಕಾರು ಆಗಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 28/2023    ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ದಿನಾಂಕ 18.03.2023 ರಂದು ಸಮಯ 09-30 ಗಂಟೆಗೆ ಕುರುಂಜಿಗುಡ್ಡೆಯ ಕೆವಿಜಿ ಬ್ಯಾಡ್ಮಿಂಟನ್‌‌ ಕೋರ್ಟ್ ಬಳಿ ಇರುವ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬದಿಯಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಕಾರೊಂದರಲ್ಲಿ ಕುಳಿತುಕೊಂಡು ಗಿರಾಕಿಗಳಿಗೆ ಮಾದಕ ವಸ್ತುವನ್ನು ವಶದಲ್ಲಿಟ್ಟುಕೊಂಡು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾಗ ದಾಳಿ ನಡೆಸಿದ ದಿಲೀಪ್ ಜಿಆರ್ ಪೊಲೀಸ್ ಉಪನಿರೀಕ್ಷಕರು, ಸುಳ್ಯ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ಕಬೀರ್‌‌ ಎಸ್‌(36) ತಂದೆ:ಲೆಟ್‌‌ ಅಬೂಬಕ್ಕರ್‌‌ ವಾಸ:ಬೆಟ್ಟಂಪಾಡಿ ಮನೆ, ಸುಳ್ಯ ಕಸಬಾ ಗ್ರಾಮ ಸುಳ್ಯ ಎಂಬಾತನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ ರೂ 1,05,000/-ಗಳ MDMA ಎಂಬ ಮಾದಕ ವಸ್ತು, ಒಂದು ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಸಹಿತ ಒಟ್ಟು ಒಟ್ಟು ಮೌಲ್ಯ ರೂ.1,80,000/-ಸ್ವತ್ತುಗಳನ್ನು ಸ್ವಾಧಿನ ಪಡಿಸಲಾಗಿದ್ದು, ಈ ಬಗ್ಗೆ ಸುಳ್ಯ ಪೊಲೀಸ್‌    ಠಾಣಾ ಅ,ಕ್ರ   ನಂ: 27/2023 ಕಲಂ: 8(ಸಿ),22(ಸಿ) NDPS ಕಾಯ್ದೆ 1985  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹರೀಶ ಪ್ರಾಯ 55 ವರ್ಷ    ತಂದೆ: ಸೀತರಾಮ ಶೆಟ್ಟಿ ವಾಸ: ಕರ್ಬೆಟ್ಟು ಮನೆ ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ    ತಮ್ಮನಾದ ಸದಾನಂದ ಪ್ರಾಯ 51 ವರ್ಷ ತಂದೆ: ಸೀತರಾಮ ಶೆಟ್ಟಿ ವಾಸ: ಕರ್ಬೆಟ್ಟು ಮನೆ ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ಇವರು ಅವಿವಾಹಿತರಾಗಿದ್ದು, ಪಿರ್ಯಾಧಿದಾರರ ಮನೆಯ ಪಕ್ಕದಲ್ಲಿಯ ಮತ್ತೊಂದು ಮನೆಯಲ್ಲಿ ವಾಸವಾಗಿದ್ದು, ಬಿಪಿ ಖಾಯಿಲೆಯಿಂದ ನರಳುತ್ತಿರುವುದಾಗಿದೆ.  ದಿನಾಂಕ 05-03-2023 ರಂದು ರಾತ್ರಿ 10.00 ಗಂಟೆಗೆ ಬಿಪಿಯ ಏರಿಳಿತದಿಂದ ಮನೆಯ ಅಂಗಳದಲ್ಲಿ ಬಿದ್ದು ತಲೆಗೆ ಗಾಯಗೊಂಡವರನ್ನು ಫಿರ್ಯಾದಿದಾರರು ಚಿಕಿತ್ಸಗೆ ಬಗ್ಗೆ ವೆನ್ ಲಾಕ್ ಆಸ್ವತ್ರೆ ದಾಖಲಿಸಿರುತ್ತಾರೆ ನಂತರ ವಿಶ್ರಾಂತಿಯಲ್ಲಿದ್ದರು. ದಿನಾಂಕ 13-03-2023 ರಂದು ಭಾವನಾದ ನಾಗೇಶನು ಪಿರ್ಯಾಧಿದಾರರ ತಮ್ಮನಾದ ಸದಾನಂದರನ್ನು  ಸ್ಕ್ಯಾನಿಂಗ್ ಬಗ್ಗೆ ಕರೆದುಕೊಂಡು ಹೋಗಿ ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಊಟ ಮಾಡಿ ಮಲಗಿದ್ದರು ರಾತ್ರಿ 12.00 ಗಂಟೆಯ ವೇಳೆಗೆ ಮೂತ್ರ ಶಂಕೆಗೆಂದು ಹೊರಗಡೆ ಹೋದವರು  ಮನೆಯ ಮೆಟ್ಟಿಲು ಇಳಿಯುವಾಗ ಆಯತಪ್ಪಿ  ನೆಲಕ್ಕೆ ಬಿದ್ದ ರಭಸಕ್ಕೆ ಹಿಂದೆ ಬಿದ್ದು ಗಾಯವಾಗಿದ್ದ ಜಾಗಕ್ಕೆ ಮತ್ತೆ ಗಾಯವಾಗಿ ತಲೆಯಿಂದ ರಕ್ತ ಬರಲಾರಂಭಿಸಿದ್ದು, ಕೂಡಲೇ ಪಿರ್ಯಾಧಿದಾರರು ವೆನಲಾಕ್ ಆಸ್ವತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ. ದಿನಾಂಕ 17-03-2023 ರಂದು ಸಂಜೆ 5.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಪಿರ್ಯಾಧಿದಾರರ  ತಮ್ಮನಾದ ಸದಾನಂದ ಮರಣ ಹೊಂದಿರುವುದಾಗಿ ವೈದ್ಯರು ದೃಢಪಡಿಸಿರುತ್ತಾರೆ.  .ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 13-2023 ಕಲಂ: 174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-03-2023 12:11 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080