ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಮೀನಾ, ಪ್ರಾಯ 60 ತಂದೆ:  ಮಹಮ್ಮದ್ ವಾಸ: ಅನ್ವರ್ ಮಂಜಿಲ್, ಪಾನೇಲ, ಪಜೀರು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 17-07-2022 ರಂದು ಪಿರ್ಯಾದಿದಾರರು ತನ್ನ ಗಂಡನವರೊಂದಿಗೆ ಸಂಬಂದಿಕರ ಮನೆಯಾದ ತುಂಬೆಗೆ ಹೋಗಿ ವಾಪಾಸು ಮನೆ ಕಡೆಗೆ ಬರುತ್ತಾ ಸಮಯ ಸುಮಾರು 19:30 ಗಂಟೆಗೆ ಬಂಟ್ವಾಳ ತಾಲೂಕು ತುಂಬೆ  ಗ್ರಾಮದ ತುಂಬೆ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ಸಮಯ ಮಂಗಳೂರು ಕಡೆಯಿಂದ KA-19MC-9485 ನೇ ಕಾರು ಚಾಲಕ ಮೊಹಮ್ಮದ್ ಜವಾಝ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಸೊಂಟಕ್ಕೆ ಗುದ್ದಿದ ಗಾಯ, ಬಲಕಾಲಿನ ಮಣಿಗಂಟಿಗೆ ತರಚಿದ ಗಾಯ ಹಾಗೂ ಎಡಕೈ ಮೊಣಗಂಟಿಗೆ ಗುದ್ದಿದ ನೋವಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 79/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್‌ ಶಾಕೀರ್‌ ಪ್ರಾಯ (23)ತಂದೆ:  ಅಬ್ದುಲ್‌ ಲತೀಪ್‌ ವಾಸ ಬಾರೆಬೆಟ್ಟು ಮನೆ&ಅಂಚೆ ಕೊಳ್ನಾಡು ಗ್ರಾಮ. ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:09.07.2022 ರಂದು ಪಿರ್ಯಾಧಿ ಎಂದಿನಂತೆ ಬೆಳಿಗ್ಗೆ  09.15 ಗಂಟೆಗೆ ತನ್ನ ಅಜ್ಜನ ಮನೆಯಾದ ಕಾಡುಮಠದಿಂದ ಕೆಎ.19-HH-7321ನೇ ದ್ವಿಚಕ್ರ ವಾಹನದಲ್ಲಿ  ಸವಾರನಾಗಿ ತನ್ನ ಪರಿಚಯದ ಮಹಮ್ಮದ್‌ ಶಪೀಕ್‌ನು ಪಿರ್ಯಾಧಿ ಹಿಂಬದಿ ಸವಾರನಾಗಿ ಕುಳಿತುಕೊಂಡು  ಸಾಲೆತ್ತೂರು- ವಿಟ್ಲ  ಸಾರ್ವಜನಿಕ  ಡಾಮಾರು ರಸ್ತೆಯಲ್ಲಿ ಸಂಚಾರಿಸುತ್ತಾ ವಿಟ್ಲ ಕಡೆಗೆ ಬರುವಾಗ ಸಮಯ  ಸುಮಾರು ಬೆಳಿಗ್ಗೆ 09.30 ಗಂಟೆಗೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಾಡುಮಠದ ಅಶ್ವಕಟ್ಟೆ ಬಳಿ ತಲುಪಿದಾಗ ಏಕಾಏಕಿ ನಾಯಿಯೊಂದು ಪಿರ್ಯಾಧಿದಾರರ ದ್ವಿಚಕ್ರ ವಾಹನಕ್ಕೆ ಅಡ್ಡ ಬಂದಾಗ ಸವಾರನು ಮೋಟಾರು ಸೈಕಲ್‌ನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿದ ಪರಿಣಾಮ ಸವಾರನ ಚಾಲನ ನಿಯಂತ್ರಣ  ತಪ್ಪಿ ರಸ್ತೆಯ ಬಲ ಬದಿಗೆ ದ್ವಿಚಕ್ರ ಸಮೇತ ಬಿದ್ದ ಪರಿಣಾಮ ಪಿರ್ಯಾಧಿಯ ಬಲ ಕೋಲು ಕೈಗೆ ಗುದ್ದಿದ ಗಾಯ ಮತ್ತು  ಎಡಕಾಲಿನ  ಪಾದಕ್ಕೆ  ತರಚಿದ ಗಾಯವಾಗಿರುತ್ತದೆ. ಹಾಗೂ ಸವಾರನಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳುವನ್ನು ಬಳಿಕ ಚಿಕಿತ್ಸೆ ಬಗ್ಗೆ  ಒಂದು  ವಾಹನದಲ್ಲಿ  ಚಿಕಿತ್ಸೆ ಬಗ್ಗೆ  ವಿಟ್ಲ  ಬೆನಕ ಆಸ್ಪತ್ರಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯಾಧಿಕರಿಯವರು ಪ್ರಥಮ ಚಿಕಿತ್ಸೆ ವೈದ್ಯರ ಸಲಹೆಯಂತೆ  ಹೆಚ್ಚಿನ ಚಿಕಿತ್ಸೆ ಬಗ್ಗೆ  ಪಿರ್ಯಾಧಿ ಮಂಗಳೂರು ದೇರಳಕಟ್ಟೆ ಕೆ.ಎಸ್‌ ಹೆಗ್ಡೆ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು  ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ  ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 121/2022    ಕಲಂ: 279 ,337  ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಶಾಂತ್ ಶೆಟ್ಟಿ, ಪ್ರಾಯ 33 ವರ್ಷ ತಂದೆ: ನಾರಾಯಣ ಶೆಟ್ಟಿ ವಾಸ: ಮನೆ ನಂಬ್ರ: 2-37 ಡಿ, ಆಲದಪದವು ಮನೆ, ಅಜ್ಜಿಬೆಟ್ಟು ಗ್ರಾಮ, ಕೊರಗಟ್ಟೆ ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ: 15-07-2022 ರಂದು ಫಿರ್ಯಾದಿದಾರರು ತನ್ನ ಬಾಬ್ತು ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ಆಲದಪದವು ಎಂಬಲ್ಲಿ ಶ್ರೀದುರ್ಗಾ ವೆಲ್ಡಿಂಗ್ & ಫ್ಯಾಬ್ರಿಕೇಷನ್ ಶಾಪ್‌ ನಲ್ಲಿರುವ ಸಮಯ 09.15 ಗಂಟೆಗೆ ಶಾಪ್‌ನ ಮುಂಭಾಗ ಕುದ್ಕೋಳಿ-ಮೂರ್ಜೆಗೆ ಹಾದುಹೋಗುವ ಡಾಮಾರು ರಸ್ತೆಯಲ್ಲಿ ಕುದ್ಕೋಳಿ ಕಡೆಯಿಂದ ಬಂದ ಪಿಕಪ್ ವಾಹನ KA19AC1850 ನೇದರ ಚಾಲಕ ಸಂದೀಪ್ ಎಂಬಾತನು ತನ್ನ ಬಾಬ್ತು ಪಿಕಪ್‌ನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಮೂರ್ಜೆ ಕಡೆಯಿಂದ ಬಂದ ಆಕ್ಟಿವಾ ವಾಹನ KA19HC0514 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಆಕ್ಟಿವಾ ವಾಹನದ ಸವಾರ ಹಾಗೂ ಸಹಸವಾರನಾಗಿದ್ದ ಸಂಜಯ್ ಎಂಬವರುಗಳು  ರಸ್ತೆಯ ಅಂಚಿಗೆ ಎಸೆಯಲ್ಪಟ್ಟಿದ್ದು, ಪರಿಣಾಮವಾಗಿ  ಸಹಸವಾರ ಸಂಜಯ್‌ಗೆ ಬಲ ಕೆನ್ನೆಗೆ, ಹಣೆಗೆ, ತುಟಿಯ ಮೇಲ್ಭಾಗಕ್ಕೆ, ಬಲಕಾಲಿನ ಮೊಣಗಂಟಿಗೆ ರಕ್ತಗಾಯ ಹಾಗೂ ದೇಹದ ಇತರ ಭಾಗಗಳಿಗೆ ತರಚಿದ ಗಾಯಗಳಾಗಿದ್ದು, ಎಜೆ ಆಸ್ಪತ್ರೆ ಮಂಗಳೂರು ನಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆಕ್ಟಿವಾ ವಾಹನದ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಅಪಘಾತದಿಂದ ಎರಡೂ ವಾಹನಗಳು ಭಾಗಶಃ ಜಖಂಗೊಂಡಿರುತ್ತದೆ..ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 50/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್‌ ಮಜೀದ್‌ ಪ್ರಾಯ 50 ವರ್ಷ, ತಂದೆ: ಹೆಚ್‌. ಮಹಮ್ಮದ್‌, ವಾಸ: ಸಾಮೇತ್ತಡ್ಕ ಮನೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆದಿನಾಂಕ 18-07-2022 ರಂದು 14-40 ಗಂಟೆಗೆ ಆರೋಪಿ ಮಾರುತಿ-800 ಕಾರು ಚಾಲಕ ಮಹಮ್ಮದ್‌ ನವಾಝ್ ಎಂಬವರು  KA-19-P-8197ನೇ ನೋಂದಣಿ ನಂಬ್ರದ ಮಾರುತಿ-800 ಕಾರಿನಲ್ಲಿ ಅನ್ಸಾರ್‌ ಎನ್‌ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕೂಟೇಲು ಎಂಬಲ್ಲಿ ರಾಯಲ್‌ ಮೆಕ್ಸಿಕೋ ಹೋಟೆಲ್‌ ಬಳಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರಾದ ಅಬ್ದುಲ್‌ ಮಜೀದ್‌ ಹೆಚ್‌ ರವರು ಕೆಮ್ಮರ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ KA-19-MF-3911ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ, ಪಿರ್ಯಾದುದಾರರ ಕಾರು ಪಲ್ಟಿಯಾಗಿ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಸಣ್ಣ ಪುಟ್ಟ ಗುದ್ದಿದ ಗಾಯವಾಗಿದ್ದು ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ಆರೋಪಿ ಕಾರು ಚಾಲಕ ಹಾಗೂ ಅದರಲ್ಲಿದ್ದ ಪ್ರಯಾಣಿಕ ಅನ್ಸಾರ್‌.ಎನ್‌ ರವರಿಗೆ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಅಂಬುಲೆನ್ಸ್‌ ನಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  123/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ವೇಣೂರು ಪೊಲೀಸ್ ಠಾಣೆ : ದಿನಾಂಕ 18-07-2022 ರಂದು  ವೇಣೂರು ಠಾಣಾ ಅ.ಕ್ರ ನಂಬ್ರ 43-2022 ಕಲಂ 498(A),504,506,324   IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ : ಸುಳ್ಯ ಠಾಣಾ ಪೊಲೀಸ್ ಉಪನಿರೀಕ್ಷಕನಾದ ದಿಲೀಪ್ ಜಿ ಆರ್ ರವರು ದಿನಾಂಕ: 18-7-2022 ರಂದು ಠಾಣಾ ಸಿಬ್ಬಂದಿಗಳೊಂದಿಗೆ ಸಮಯ 10-30 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕುರುಂಜಿಗುಡ್ಡೆ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಹೊರಭಾಗದಲ್ಲಿ  ಮೂರು ಯುವಕರು ಕುಳಿತು ಧೂಮಪಾನ ಮಾಡುತ್ತಾ ಅನುಚಿತವಾಗಿ ವರ್ತಿಸುತ್ತಿರುವುದು ಕಂಡು ಸದ್ರಿಯವರ ಬಳಿಗೆ ಹೋದಾಗ ಸದ್ರಿಯವರು  ಮಾದಕ ದ್ರವ್ಯ ಗಾಂಜಾ ಸೇವನೆ ಮಾಡಿದ ಬಗ್ಗೆ ಘಾಟು ವಾಸನೆ ಬಂತು.  ಸದ್ರಿಯವರುಗಳನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಿಸಲಾಗಿ 1)ಅಬ್ದುಲ್ ಜಲೀಲ್,ಪ್ರಾಯ 24 ವರ್ಷ ತಂದೆ: ಉಮ್ಮರ್, ವಾಸ: ಕುರುಂಜಿಗುಡ್ಡೆ ಮನೆ, ಸುಳ್ಯ ಕಸಬಾಗ್ರಾಮ, ಸುಳ್ಯ ತಾಲೂಕು, 2)ಅಭಿಷೇಕ್, ಪ್ರಾಯ 24 ವರ್ಷ ತಂದೆ: ನಾರಾಯಣ, ವಾಸ: ಕುರುಂಜಿಗುಡ್ಡೆ ಮನೆ ಭಸ್ಮಡ್ಕ , ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು 3)ಆಶಿಕ್, ಪ್ರಾಯ 18 ವರ್ಷ ತಂದೆ: ಇಬ್ರಾಹಿಂ, ವಾಸ: ಕುರುಂಜಿಗುಡ್ಡೆ ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ಎಂಬುದಾಗಿ ತಿಳಿಸಿರುತ್ತಾರೆ. ಬಳಿಕ ಸದ್ರಿಯವರುಗಳನ್ನು ವೈದ್ಯಕೀಯ ತಜ್ಞ ಪರೀಕ್ಷೆಗೆ ಒಳಪಡಿಸಲು ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಲಾಗಿ ವೈದ್ಯಾಧಿಕಾರಿಯವರು ಸದ್ರಿಯವರನ್ನು ಪರೀಕ್ಷಿಸಿ ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ದೃಢಪತ್ರ ನೀಡಿರುತ್ತಾರೆ. ಸದ್ರಿಯವರು ಕಾನೂನು ಬಾಹಿರ ಗಾಂಜಾವನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಗೋಚರಿಸುವಂತೆ ಕುಳಿತು ಸೇವನೆ ಮಾಡಿ ಅನುಚಿತವಾಗಿ ವರ್ತಿಸುತ್ತಿದ್ದುದ್ದರಿಂದ ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 83/2022 ಕಲಂ: 27 NDPS Act  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜೀವನ್ ಜೆ, ರೈ (36) ತಂದೆ: ಜಗನ್ನಾಥ ರೈ ವಾಸ: ಮೊರ್ಗಪಣೆ, ಜ್ಯೋತಿ ಸರ್ಕಲ್ ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರ ತಂದೆ ಜಗನ್ನಾಥ ರೈ, ಕೆ  (67) ಎಂಬವರು ಈ ದಿನ ದಿನಾಂಕ 18.07.2022 ರಂದು ಜ್ವರದಿಂದ ಬಳಲುತ್ತಿದ್ದವರನ್ನು ಸಮಯ ಸುಮಾರು 20:30 ಗಂಟೆಗೆ ಚಿಕಿತ್ಸೆಗಾಗಿ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಬಾಳಿಮಕ್ಕಿ ಎಂಬಲ್ಲಿರುವ ಡಾ|| ರವಿ ಶಂಕರ್ ರವರು ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಆ ಸಂದರ್ಭ ಜಗನ್ನಾಥ ರೈ ರವರು ಕುಸಿದು ಬಿದ್ದವರನ್ನು ಪಿರ್ಯಾದುದಾರರ ಭಾವ ಮತ್ತು ತಂಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಜಗನ್ನಾಥ್ ರವರನ್ನು ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಜಗನ್ನಾಥ ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ  ಯುಡಿಆರ್ ನಂ:31/2022 ಕಲಂ: 174 ಸಿಆರ್ ಸಿಪಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಸಂತ ಪ್ರಾಯ:32ವರ್ಷ, ತಂದೆ: ಅಣ್ಣು ಮುಗೇರ ವಾಸ: ಮಾಲೆಸರ ಮನೆ, ಬಂದಾರು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರಾದ ವಸಂತರವರ  ತಂದೆಗೆ ಸುಮಾರು ಎರಡು ವರ್ಷಗಳಿಂದ ಪಿಡ್ಸ್‌ ಖಾಯಿಲೆ ಇದ್ದು, ಅದಕ್ಕೆ ಮಂಗಳೂರಿನಿಂದ ಔಷದಿಯನ್ನು ಮಾಡಿಕೊಂಡಿದ್ದು ನಂತರ ಹುಷಾರು ಆಗಿ ಕೂಲಿ ಕೆಲಸ ಮಾಡಿಕೊಂಡಿದ್ದವರು ಎರಡು ದಿನಗಳಿಂದ ಮನೆಯಲ್ಲಿದ್ದು,  ದಿನಾಂಕ:18-07-2022 ರಂದು 10:00 ಗಂಟೆಯಿಂದ   ಪಿರ್ಯಾದಿದಾರರ ತಂದೆಗೆ  ಸ್ವಲ್ಪ ಸ್ವಲ್ಪ ಪಿಡ್ಸ್‌ ಬರುತ್ತಿದ್ದರಿಂದ ಚಿಕಿತ್ಸೆಗೆಂದು ಪಿರ್ಯಾದಿದಾರರ ತಾಯಿ ಹಾಗೂ ತಮ್ಮನ ಜೊತೆ ಆಟೋ ರಿಕ್ಷಾ ಒಂದರಲ್ಲಿ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಪಿರ್ಯಾದಿದಾರರು ಹಿಂದಿನಿಂದ ಮೋಟಾರ್‌ ಸೈಕಲ್‌ ನಲ್ಲಿ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈಧ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಆಂಬ್ಯುಲೆನ್ಸ್‌ ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ 4:40 ಗಂಟೆ ಸಮಯಕ್ಕೆ ಪಿರ್ಯಾದಿದಾರರ ತಂದೆಯವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ 41/2022 ಕಲಂ: 174 ಸಿಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-07-2022 12:52 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080