ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಆರ್.ವಿಜಯ ಕುಮಾರ್ , ಪ್ರಾಯ 41 ವರ್ಷ.ತಂದೆ: ಪಿ.ಕೆ.ರಾಮನ್ ವಾಸ: ಉಪ್ಪುಗುಡ್ಡೆ ಮನೆ, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 17.08.2022 ರಂದು KA-19-F-3316 ನೇ K.S.R.T.C ಬಸ್ಸಿನಲ್ಲಿ ಕುಳಿತುಕೊಂಡು ಮಂಗಳೂರಿನಿಂದ ಸುಳ್ಯ ಕಡೆಗೆ ಪ್ರಯಾಣಿಸಿಕೊಂಡು ಹೋಗುವರೇ ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮ ಕಲ್ಲಡ್ಕ ಎಂಬಲ್ಲಿಗೆ ತಲುಪಿದಾಗ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ನಿರ್ವಹಣೆ ಜವಾಬ್ದಾರಿಯನ್ನು ಹೊಂದಿರುವವರು ಸರಿಯಾಗಿ ನಿರ್ವಹಣೆ ಮಾಡದೇ ಬಸ್ಸಿನ ಚಾಲಕ ಅಬ್ದುಲ್ ಎಂಬವರು ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಹೊಂಡ ಗುಂಡಿಗಳನ್ನು ತಪ್ಪಿಸಲು ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನ ಕೊನೆಯ ಸೀಟಿನ ಮೇಲೇ ಕುಳಿತು ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದ ಪಿರ್ಯಾದಿದಾರರು ಸೀಟಿನಿಂದ ಮೇಲಕ್ಕೆ ಹಾರಿ ಬಸ್ಸಿನ ಒಳಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಸೊಂಟಕ್ಕೆ ಗುದ್ದಿದ ನೋವಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಬಂಟ್ವಾಳ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್‌ ಠಾಣಾ ಅ.ಕ್ರ 91/2022 ಕಲಂ: 279, 337,283 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಶಿಕಾಂತ, ಪ್ರಾಯ 37 ವರ್ಷ.ತಂದೆ:  ದಿ|| ಅಣ್ಣು ಮೂಲ್ಯ ವಾಸ: #1-14/1, ಬೋಳಂತೂರು ಮನೆ,  ಬೋಳಂತೂರು ಗ್ರಾಮ ಮತ್ತು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 17-08-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು KA-19-HE-1897 ನೇ ಮೋಟಾರ್ ಸೈಕಲಿನಲ್ಲಿ ಮಂಗಳೂರಿನಿಂದ  ಮನೆ ಕಡೆಗೆ ಬರುತ್ತಾ ಸಮಯ ಸುಮಾರು 15:00 ಗಂಟೆಗೆ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ತುಂಬೆ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KA-19-B-1511 ನೆ ಲಾರಿಯನ್ನು ಅದರ ಚಾಲಕ ಸೀತಾರಾಮ ಎಂಬವರು ದುಡುಕುತನ ಹಾಗೂ ನಿರ್ಲಕ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಅಪಘಾತವಾಗಿದ್ದು, ಅಪಘಾತದಲ್ಲಿ ಪಿರ್ಯಾದಿದಾರರ ಎಡಕೈಗೆ ಗುದ್ದಿದ ರಕ್ತಗಾಯ, ಗಲ್ಲಕ್ಕೆ ಗುದ್ದಿದ ರಕ್ತ ಗಾಯಗೊಂಡವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋದಾಗ ಪ್ರಥಮ ಚಿಕಿತ್ಸೆ ನೀಡಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 92/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರುತಿ ರೈ, ಪ್ರಾಯ 36 ವರ್ಷ, ತಂದೆ: ಕಿಟ್ಟಣ್ಣ ರೈ, ವಾಸ: ವಿಶೃಜ ನಿಲಯ, ಕೂಡುರಸ್ತೆ, ನರಿಮೊಗರು ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 18-08-2022 ರಂದು 09-10 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಭಾನುಷ್‌ ಎಂಬವರು KA-21-EC-0723 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪಡೀಲ್‌ ಚಾಮುಂಡೇಶ್ವರಿ ಗ್ಯಾರೇಜ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಆರೋಪಿಯ ಮುಂದಿನಿಂದ ಪಿರ್ಯಾದುದಾರರು ಪಡೀಲ್‌ ಕಡೆಯಿಂದ ನೆಹರೂನಗರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Z-1497 ನೇ ನೋಂದಣಿ ನಂಬ್ರದ ಕಾರಿಗೆ  ಮೋಟಾರ್‌ ಸೈಕಲೊಂದು ಅಡ್ಡ ಬಂದಾಗ ಪಿರ್ಯಾದುದಾರರು ಬ್ರೇಕ್‌ ಹಾಕಿದ್ದು, ಆ ವೇಳೆಗೆ ಪಿರ್ಯಾದುದಾರರ ಕಾರಿನ ಹಿಂಭಾಗಕ್ಕೆ ಮೋಟಾರ್‌ ಸೈಕಲ್‌ ಅಪಘಾತವಾಗಿ ಕಾರು ಜಖಂಗೊಂಡಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  131/2022  ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಂಬರೀಶ್ ಪ್ರಾಯ 21 ವರ್ಷ ತಂದೆ: ಭೀಮಣ್ಣ ವಾಸ: ಹುನ್ಸಗಿ ಹೋಬಳಿ, ಬೈಜಿಪಾಲ್ ಗ್ರಾಮ ಸುರುಪುರ ತಾಲೂಕು, ಯಾದಗಿರಿ ಎಂಬವರ ದೂರಿನಂತೆ ಫಿರ್ಯಾದಿದಾರರು ತನ್ನ ಸ್ನೇಹಿತರಾದ ರಾಜು, ಭೀಮಣ್ಣ, ಪ್ರಭು, ಭರತ್ ಹಾಗೂ  ಪ್ರಭುದೇವ್ ರವರೊಂದಿಗೆ  ಚಾರ್ಮಾಡಿ ಘಾಟ್‌, ಧರ್ಮಸ್ಥಳ, ಬೀಚ್ ಕಡೆಗೆ ಟ್ರಿಪ್‌ ಹೋಗುವರೇ ದಿನಾಂಕ 17-08-2022 ರಂದು ರಾತ್ರಿ  ಬೆಂಗಳೂರಿನಿಂದ ಕಾರಿನಲ್ಲಿ ಹೊರಟು ದಿನಾಂಕ 18-08-2022 ರಂದು ಬೆಳಿಗ್ಗೆ 04.00 ಗಂಟೆಗೆ ಚಾರ್ಮಾಡಿ ಘಾಟ್‌ ತಲುಪಿ ವಿಶ್ರಾಂತಿ ಪಡೆದು ಬೆಳಿಗ್ಗೆ ಚಾರ್ಮಾಡಿ ಘಾಟ್‌ ಪರಿಸರವನ್ನು ವೀಕ್ಷಿಸಿ, ನಂತರ ಫಿರ್ಯಾದಿದಾರರ ಪರಿಚಯದ ಯುವತಿಯೊಬ್ಬಳನ್ನು ತಮ್ಮ  ಜೊತೆಯಲ್ಲಿ ಕರೆದುಕೊಂಡು ಹೋಗುವರೇ, ಸುಮಾರು 09.30 ಗಂಟೆಗೆ  ಸಿದ್ದಕಟ್ಟೆಗೆ ಬಂದು, ಸದ್ರಿಯವಳನ್ನು ತಮ್ಮ ಕಾರಲ್ಲಿ ಕುಳ್ಳಿರಿಸಿಕೊಂಡು, ಕಾವಳಕಟ್ಟೆಯ ಕೊರಗಜ್ಜನ ಸನ್ನಿಧಾನಕ್ಕೆ ಹೋಗಿ, ಅಲ್ಲಿಂದ ಮಲ್ಪೆ ಬೀಚ್‌ ಹಾಗೂ ಉಳ್ಳಾಲ ಬೀಚ್‌ ಗೆ ಹೋದಾಗ, ಅಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲದೇ ಇರುವುದರಿಂದ ಮಂಗಳೂರಿನಲ್ಲಿ ಊಟ ಮಾಡಿ, ನಂತರ ಸದರಿ ಯುವತಿಯನ್ನು ಮರಳಿ ಮನೆಯ ಕಡೆಗೆ ಬಿಡುವರೇ ಬಂಟ್ವಾಳ ತಾಲೂಕು ಕುಕ್ಕಿಪಾಡಿ ಬಳಿ ಬಂದಾಗ, ಯಾರೋ ಅಪರಿಚಿತ ಇಬ್ಬರು ಯುವಕರು ಸ್ಕೂಟರ್ ನಲ್ಲಿ ಬಂದು,  ಫಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ, ಯುವತಿಯ ಬಗ್ಗೆ ವಿಚಾರಿಸುತ್ತಾ ಫಿರ್ಯಾದಿದಾರನ್ನು ಕಾರಿನಿಂದ ಹೊರಗೆ ಎಳೆದು ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕಾಲಿನಿಂದ ತುಳಿಯುತ್ತಿದ್ದಾಗ ಸುಮಾರು 6-7 ಅಪರಿಚಿತ ಯುವಕರು ಅಲ್ಲಿಗೆ ಬಂದು, ಕಾರಿನಿಂದ ಫಿರ್ಯಾದಿಯ ಸ್ನೇಹಿತರನ್ನು ಕಾರಿನಿಂದ ಇಳಿಸಿ, ಎಲ್ಲರಿಗೂ ಕೈಯಿಂದ ಹಾಗೂ  ಕಲ್ಲಿನಿಂದ  ಹಲ್ಲೆನಡೆಸಿ , ನೆಲಕ್ಕೆ  ಬೀಳಿಸಿ ಕಾಲಿನಿಂದ ತುಳಿದಿದ್ದು, ಈ  ಸಮಯ ಅಲ್ಲಿಗೆ ಬಂದ ಪೊಲೀಸರನ್ನು ಕಂಡು ಹಲ್ಲೆ ನಡೆಸಿದ ಅಪರಿಚಿತರು ಪರಾರಿಯಾಗಿರುತ್ತಾರೆ. ಹಲ್ಲೆಗೊಳಗಾದ ಫಿರ್ಯಾದಿ ಹಾಗೂ  ಫಿರ್ಯಾದಿದಾರರ ಸ್ನೇಹಿತರು ಚಿಕಿತ್ಸೆ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 58/2022 ಕಲಂ 143, 147, 148,  341, 323, 324, 504,149  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 18-08-2022 ರಂದು ಸಮಯ ಸುಮಾರು 06.30 ಗಂಟೆಗೆ ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಮಂಜೊಟ್ಟಿ ಆಂತ್ರಾಯ  ಪಲ್ಕೆ ಎಂಬಲ್ಲಿ   ವಾಹನ ತಪಾಸಣೆ ನಡೆಸುವ ನಿಮಿತ್ತ ಕೆಎ 01 ಪಿ 2462 ನೇ ಮಾರುತಿ  800 ಕಾರನ್ನು  ತಡೆದು ನಿಲ್ಲಿಸಿ ವಿಚಾರಿಸುತ್ತಿರುವಾಗ ಅದರ ಹಿಂದಿನಿಂದ ಕ್ವಾಲಿಸ್ ಕಾರು  ನಂಬ್ರ ಕೆಎ 21 ಎಮ್ 2646 ನೇ ಬರುತ್ತಿರುವುದನ್ನು ಕಂಡು  ಸಿಬ್ಬಂದಿಗಳಿಗೆ ನಿಲ್ಲಿಸುವಂತೆ ಸೂಚಿಸಿದಾಗ  ಮಾರುತಿ ಕಾರಿನಲ್ಲಿದ್ದ ಚಾಲಕ ಮತ್ತು ಇನ್ನೊರ್ವ ಕಾರನ್ನು ಬಿಟ್ಟು ಕತ್ತಲೆಯಲ್ಲಿ ಪರಾರಿಯಾಗಿದ್ದು ನಂತರ ಕಾರುಗಳನ್ನು ಸುತ್ತುವರೆದು ಪರಿಶೀಲಿಸಿದಾಗ ಕ್ವಾಲಿಸ್ ಕಾರಿನಲ್ಲಿ ಎರಡು ಹಸು ಹಾಗೂ ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಕಂಡುಬಂದಿರುತ್ತದೆ. ಕ್ವಾಲಿಸ್ ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಅವರುಗಳ  ಹೆಸರು 1) ರಜಾಕ್ ಪಿ 2) ಮಹಮ್ಮದ್ ರಫೀಕ್ 3) ನಾಗೇಶ ಶೆಟ್ಟಿ ಎಂದು ತಿಳಿಸಿದ್ದು ಓಡಿ ಪರಾರಿಯಾದ  ವ್ಯಕ್ತಿಗಳನ್ನು ರಾವೂಫ್ @ ಮಹಮ್ಮದ್ ಆಸಿಫ್ ಮತ್ತು ರಾಜೇಶ್‌ ಸುರ್ಯ ಎಂಬುದಾಗಿ ತಿಳಿಸಿರುತ್ತಾರೆ.  ಸ್ವಾಧೀನಪಡಿಸಿಕೊಂಡ  ಜಾನುವಾರುಗಳ ಅಂದಾಜು ಮೌಲ್ಯ ರೂ 55,000/- ಆಗಿದ್ದು ಎರಡು ವಾಹನಗಳ ಮೊತ್ತ  3.60.000/- ರೂ  ಒಟ್ಟು ಸ್ವಾಧೀನಪಡಿಸಿಕೊಂಡ ಸೊತ್ತುಗಳ ಮೌಲ್ಯ  4,15,000/- ಆಗಬಹುದು.ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 54/2022 ಕಲಂ: 4, 5, 7, 8, 12 ಕರ್ನಾಟಕ ಗೋಹತ್ಯೆ ಪ್ರತಿಬಂಧಕ & ಜಾನುವಾರು ಸಂರಕ್ಷಣಾ ಆಧ್ಯಾದೇಶ ನಿಯಮ 2020 ಮತ್ತು ಕಲಂ;53(1) ಜೊತೆಗೆ 192 ಐ ಎಮ್  ವಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಿದಾನಂದ ಎಂ ಪ್ರಾಯ 36 ವರ್ಷ ತಂದೆ:ಚೆನ್ನಯ್ಯ ಪೂಜಾರಿ ವಾಸ:ಮಾವಲಮೂಲೆ ಮನೆ ಬಾರ್ಯ ಗ್ರಾಮ ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ಪಿರ್ಯಾದಿದಾರರ ಅಣ್ಣ ಮಹೇಶ್ ಬಂಗೇರ ಪ್ರಾಯ 54 ವರ್ಷ ಎಂಬವರು ಸುಮಾರು 25 ವರ್ಷಗಳಿಂದ ಬಾಂಬೆಯ ಖಾಸಗಿ ಕಂಪನಿಯ ಹಡಗಿನಲ್ಲಿ ಉದ್ಯೋಗ ಮಾಡಿಕೊಂಡಿದ್ದವರು ಸುಮಾರು 6 ತಿಂಗಳ ಹಿಂದೆ ಮಹೇಶ ಬಂಗೇರ ರವರಿಗೆ ಹೃಧಯಕ್ಕೆ ಸಂಬಂಧಿಸಿ ಬೈಪಾಸ್ ಶಸ್ತ್ರ ಚಿಕಿತ್ಸೆ ಆಗಿ ತನ್ನ ಮನೆಯಾದ ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ, ಕಜೆ ಎಂಬಲ್ಲಿ ಇರುವಾಗ ಈ ದಿನ ದಿನಾಂಕ 18-08-2022ರಂದು ಬೆಳಿಗ್ಗೆ 10.00 ಗಂಟೆಗೆ ತೀವ್ರ ಎದೆನೋವು ಕಾಣಿಸಿಕೊಂಡವರನ್ನು ಮನೆಯಲ್ಲಿ ಉಪಚರಿಸಿ ಚಿಕಿತ್ಸೆಯ ಬಗ್ಗೆ ಒಂದು ಅಂಬ್ಯುಲೆನ್ಸ್ ನಲ್ಲಿ ಬೆಳಿಗ್ಗೆ 11.00 ಗಂಟೆಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಮಹೇಶ್ ಬಂಗೇರ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 19/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-08-2022 10:20 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080