ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಂಕರ ನಾರಾಯಣ ಭಟ್. ವಿ.ಎಸ್, 66 ವರ್ಷ, ತಂದೆ: ದಿ|| ವಿ.ಸುಬ್ರಹ್ಮಣ್ಯ ಭಟ್, ವಾಸ: ಪ್ರಭಾ ನಿಲಯ, ಬಾಳಿಲ ಅಂಚೆ ಮತ್ತು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 17-09-2022 ರಂದು ಸಂಜೆ ಈ ಪ್ರಕರಣದ ಪಿರ್ಯಾದಿದಾರರು ಸ್ವಂತ ಕೆಲಸದ ಬಗ್ಗೆ ಬೆಳ್ಳಾರೆ ಪೇಟೆಗೆ ಬಂದು ಕೆಲಸ ಮುಗಿಸಿ ಬಳಿಕ ಮನೆ ಕಡೆಗೆ ಬೆಳ್ಳಾರೆ ಬಸ್ಸು ನಿಲ್ದಾಣದಿಂದ ಬಾಳಿಲದ ವರೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಹೋಗಿ ಬಸ್ಸಿನಿಂದ ಇಳಿದು ರಸ್ತೆ ದಾಟಿ ಬೆಳ್ಳಾರೆ-ನಿಂತಿಕಲ್ಲು ರಸ್ತೆಯ ಬಲ ಬದಿ ಮಣ್ಣು ಕಛ್ಚಾ ರಸ್ತೆಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಾ ಬಾಳಿಲ ಗ್ರಾಮ ಪಂಚಾಯತ್ ಕಛೇರಿಯ ಎದುರುಗಡೆ ತಲಪಿದಾಗ ಸಮಯ 19-00 ಗಂಟೆಗೆ ವಿರುದ್ದ ದಿಕ್ಕಿನಿಂದ ಮೋಟಾರು ಸೈಕಲ್ ನಂ KA21Y-5463 ನೇಯದ್ದನ್ನು ಅದರ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಯಲ್ಲಿ ಬಿದ್ದು, ಅವರ ಎಡ ಕಾಲಿನ ಮಂಡಿಗೆ ಗುದ್ದಿದಗಾಯವಾಗಿದ್ದು, ಗಾಯಾಳುವನ್ನು ಸ್ಥಳೀಯರು ಉಪಚರಿಸಿ ಪಿರ್ಯಾದಿದಾರರ ಪತ್ನಿಗೆ ಮಾಹಿತಿ ನೀಡಿದ್ದು, ಪತ್ನಿ ವಸಂತಿ.ಎಸ್ ರವರು ಗಾಯಾಳುವನ್ನು ಕಾರಿನಲ್ಲಿ ಬೆಳ್ಳಾರೆ ಕ್ಲಿನಿಕ್ ಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಶಂಕರ ನಾರಾಯಣ ಭಟ್.ವಿ ರವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡುತ್ತಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ.  C,PÀæ 73/2022  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಮನುಷ್ಯ ಕಾಣೆ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನವೀನಕುಮಾರ್ ಪ್ರಾಯ 31 ವರ್ಷ ತಂದೆ:ಕೃಷ್ಣ ನಾಯ್ಕ್‌ ವಾಸ:ಪೋಯ್ಯಮೂಲೆ ಮನೆ, ಪುಣಚ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ತಂದೆ ಕೃಷ್ಣ ನಾಯ್ಕ್‌ ಪ್ರಾಯ 62 ವರ್ಷ ಎಂಬವರು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪೊಯ್ಯಮೂಲೆ ಎಂಬಲ್ಲಿಂದ ನಿನ್ನೆ ದಿನಾಂಕ:17-09-2022 ರಂದು ಮದ್ಯಾಹ್ನ 2.30 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ಸಂಜೆಯಾದರು ಮನೆಗೆ ಬಂದಿರುವುದಿಲ್ಲ. ನಂತರ ಪಿರ್ಯಾಧಿದಾರರು ಹಾಗೂ ಅವರ ತಾಯಿ ಮನೆಯ ಸುತ್ತಮುತ್ತ ಹುಡುಕಾಡಿದ್ದು. ಅಲ್ಲದೇ ನೆರೆಕರೆಯವರಲ್ಲಿ ಹಾಗೂ ಸಂಬಂದಿಕರಲ್ಲಿ ಪಿರ್ಯಾಧಿದಾರರ ತಂದೆಯ ಬಗ್ಗೆ ವಿಚಾರಿಸಿದಾಗ ಪತ್ತೆಯಾಗಿರುವುದಿಲ್ಲ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 146/2022  ಕಲಂ: ಮನುಷ್ಯ ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎಂಬವರ ದೂರಿನಂತೆ ದಿನಾಂಕ:18.09.2022 ಆಂಜನೇಯ ರೆಡ್ಡಿ ಜಿ.ವಿ ಪೊಲೀಸು ಉಪನಿರಿಕ್ಷಕರು ಕಡಬ ಪೊಲೀಸು ಠಾಣೆ ರವರು  ಠಾಣಾ ಸಿಬ್ಬಂದಿಯವರುಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿ ಕಡಬ ತಾಲೂಕು ಕೊಂಬಾರು ಗ್ರಾಮದಲ್ಲಿ ಸಂಚರಿಸಿ ಕೊಂಡಿರುವಾಗ ಕಡಬ ತಾಲೂಕು ಕೊಂಬಾರು ಗ್ರಾಮದ ಬೋನಡ್ಕ ಎಂಬಲ್ಲಿಗೆ ಸಮಯ 17.30 ಗಂಟೆಗೆ ತಲುಪಿದಾಗ ಆರೋಪಿ ಗಣೇಶ ಪ್ರಾಯ:39 ವರ್ಷ ತಂದೆ:ಹೊನ್ನಪ್ಪ ಗೌಡ ವಾಸ:ಬೋನಡ್ಕ ಮನೆ ಕೊಂಬಾರು ಗ್ರಾಮ ಕಡಬ ಎಂಬಾತನು ಸಾರ್ವಜನಿಕ ಸ್ಥಳದಲ್ಲಿ ಮ್ಯದ್ಯಪಾನ ಮಾಡುತಿದ್ದು ಸದ್ರಿ ಆರೋಪಿತನನ್ನು ಮತ್ತು ಆತನು ಮದ್ಯಪಾನ ಮಾಡಲು ಉಪಯೋಗಿಸಿದ ನೀರು ಮಿಶ್ರಿತ ಪ್ಲಾಸ್ಟಿಕ್‌ ಗ್ಲಾಸಿನಲ್ಲಿದ್ದ ಮದ್ಯವನ್ನು ಮತ್ತು ಆರೋಪಿತನು ಕುಡಿಯಲು ಉಪಯೋಗಿಸಿದ ಖಾಲಿ ಮದ್ಯದ ಸ್ಯಾಚೇಟ್‌ ಹಾಗೂ ಮತ್ತು ಕುಡಿಯಲು ಉಪಯೋಗಿಸಿದ ಖಾಲಿ ಪ್ಲಾಸ್ಟೀಕ್‌ ಗ್ಲಾಸನ್ನು ಸ್ವಾದೀನಪಡಿಸಿಕೊಂಡು ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 81/2022 ಕಲಂ: ಕಲಂ: 15(A).32(3) K.E ACT-1965ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ದಿನಾಂಕ:18-9-2022 ರಂದು ಸುಳ್ಯ ಪೊಲೀಸ್ ಠಾಣಾ ಪಿ.ಎಸ್.ಐ ದಿಲೀಪ್ ಜಿ ಆರ್ .ರವರು ಸಿಬ್ಬಂದಿಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ  ಸುಳ್ಯ ತಾಲೂಕು ಆಲೆಟ್ಟಿ ಅರಂಬೂರು ಬಸ್ಸು ತಂಗುದಾಣದ ಬಳಿ ಸಮಯ 13-00 ಗಂಟೆಗೆ ಒಬ್ಬ ವ್ಯಕ್ತಿಯು ಕುಳಿತುಕೊಂಡು ಏನೋ ಸೇವಿಸುತ್ತಿದ್ದು, ಆತನ ಬಳಿಗೆ ಹೋಗಿ ನೋಡಲಾಗಿ ತನ್ನ ಕೈಯಲ್ಲಿ ಮದ್ಯದ ಬಾಟ್ಲಿಯನ್ನು ಇರಿಸಿಕೊಂಡು ಸೇವನೆ ಮಾಡುತ್ತಿದ್ದವನನ್ನು ವಿಚಾರಿಸಲಾಗಿ ಬಿಯರ್ ಸೇವನೆ ಮಾಡುತ್ತಿರುವುದಾಗಿ ತಿಳಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುವುದು ಕರ್ನಾಟಕ ಅಪರಾಧ ಎಂದು ತಿಳಿಸಿ ಸದ್ರಿ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಎಲ್ಲರಿಗೂ ಗೋಚರಿಸುವಂತೆ ಮದ್ಯ ಸೇವನೆ ಮಾಡುತ್ತಿದ್ದು ಕರ್ನಾಟಕ ಅಬಕಾರಿ ಕಾಯಿದೆಯಡಿಯಲ್ಲಿ ಅಪರಾಧ ಎಸಗಿರುವುದರಿಂದ ಸದ್ರಿ ವ್ಯಕ್ತಿಯ  ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಅನೀಶ್, ಪ್ರಾಯ 34 ವರ್ಷ, ತಂದೆ:ರಘುವೀರ, ವಾಸ:ರತ್ನ ನಿವಾಸ್, ತ್ರಿಕನ್ನಾಡ, ಪೋಸ್ಟ್, ಬೇಕಲ್ ಪೋಸ್ಟ್, ಉದುಮಾ ಪಂಚಾಯತ್, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಮದ್ಯದ ಬಾಟ್ಲಿಯನ್ನು ವಶಕ್ಕೆ ಪಡಕೊಂಡು ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 103/2022 ಕಲಂ 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನವೀನಕುಮಾರ್ ಪ್ರಾಯ 31 ವರ್ಷ ತಂದೆ:ಕೃಷ್ಣ ನಾಯ್ಕ್‌ ವಾಸ:ಪೋಯ್ಯಮೂಲೆ ಮನೆ, ಪುಣಚ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ತಂದೆ ಕೃಷ್ಣ ನಾಯ್ಕ್‌ ಪ್ರಾಯ 62 ವರ್ಷ ಎಂಬವರು ಬಿಪಿ ಸಮಸ್ಯಯಿಂದ ಬಳಲುತ್ತಿದ್ದವರು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪೊಯ್ಯಮೂಲೆ ಎಂಬಲ್ಲಿಂದ ದಿನಾಂಕ:17-09-2022 ರಂದು ಮದ್ಯಾಹ್ನ 2.30 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ಸಂಜೆಯಾದರು ಮನೆಗೆ ಬಂದಿರುವುದಿಲ್ಲ. ನಂತರ ಪಿರ್ಯಾಧಿದಾರರು ಹಾಗೂ ಅವರ ತಾಯಿ ಮನೆಯ ಸುತ್ತಮುತ್ತ ಹುಡುಕಾಡಿದ್ದು. ಅಲ್ಲದೇ ನೆರೆಕರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ಪಿರ್ಯಾಧಿದಾರರ ತಂದೆಯ ಬಗ್ಗೆ ವಿಚಾರಿಸಿದಾಗ ಪತ್ತೆಯಾಗಿರುವುದಿಲ್ಲ ಈ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದು. ದಿನಾಂಕ:18-09-2022 ರಂದು ಬೆಳಿಗ್ಗೆ ಪಿರ್ಯಾಧಿ ಮತ್ತು ನೆರೆಕರೆಯವರು ಪಿರ್ಯಾಧಿದಾರರ ತೋಟದ ಕೆರೆಯ ಬಳಿ ಹೋಗಿ ಕೆರೆಗೆ ಕೋಲು ಹಾಕಿ ಹುಡುಕಾಡಿದಾಗ ಮದ್ಯಾಹ್ನ 3.30 ಗಂಟೆಗೆ ಪಿರ್ಯಾಧಿಯ ತಂದೆಯ ಮೃತದೇಹ ಪತ್ತೆಯಾಗಿರುತ್ತದೆ. ಪಿರ್ಯಾಧಿಯ ತಂದೆ ಕೆಳಗಿನ ತೋಟದ ಕಡೆಗೆ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿದೆ.ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 38/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಕೃಷ್ಣ. ಡಿ, ಪ್ರಾಯ: 39 ವರ್ಷ. ತಂದೆ: ರಾಮಚಂದ್ರ ಗೌಡ, ವಾಸ: ದರ್ಖಾಸ್ತು ಮನೆ, ಪಾಲೆಪ್ಪಾಡಿ, ಐವರ್ನಾಡು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಫಿರ್ಯಾದಿದಾರರ ತಂದೆ ರಾಮಚಂದ್ರ ಗೌಡ ಪ್ರಾಯ 70 ವರ್ಷ ಎಂಬವರು ಸುಳ್ಯ ತಾಲೂಕು ಐವರ್ನಾಡು ಗ್ರಾಮದ ದರ್ಖಾಸ್ತು ಎಂಬಲ್ಲಿ ವಾಸವಿದ್ದು, ಕೃಷಿಕರಾಗಿದ್ದು ಇತ್ತೀಚಿಗೆ ತೀವ್ರ ಖಾಯಿಲೆ ಪೀಡಿತರಾಗಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದೇ ಇದ್ದುದರಿಂದ ಮಾನಸಿಕ ಖಿನ್ನತೆಗೊಳಗಾಗಿ ಯಾರಲ್ಲಿಯೂ ಮಾತನಾಡದೇ ಮನೆಯಲ್ಲಿಯೇ ಇದ್ದು ದಿನಾಂಕ 17.09.2022 ರಂದು ಸಂಜೆ 7.00 ಗಂಟೆಗೆ ಮನೆಯಲ್ಲಿ ಯಾರಿಗೂ ತಿಳಿಯದಂತೆ ಯಾವುದೇ ಕೀಟ ನಾಶಕವನ್ನು ಸೇವಿಸಿ ಅಸ್ವಸ್ಥಗೊಂಡು ಮನೆಯ ಜಗುಳಿಯಲ್ಲಿ ವಾಂತಿ ಮಾಡಿ ಹೊರಳಾಡುತ್ತಿದ್ದವರನ್ನು ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 9.10 ಗಂಟೆಗೆ ಮೃತ ಪಟ್ಟಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್  27/2022   ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 19-09-2022 11:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080