ಅಭಿಪ್ರಾಯ / ಸಲಹೆಗಳು

 ಇತರೆ ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಾಬು ಮುಗೇರ ಪ್ರಾಯ 50 ವರ್ಷ ತಂದೆ:ಚೋಮ ವಾಸ:ಮುರ ಮನೆ ಹಿರೇಬಂಡಾಡಿ ಗ್ರಾಮ ಪುತ್ತೂರು ತಾಲೂಕು  ಎಂಬವರ ದೂರಿನಂತೆ ತನ್ನ ಬಾಬ್ತು ಸ್ಥಿರಾಸ್ಥಿಗೆ ದಿನಾಂಕ: 17-10-2021 ರಂದು  ಸಂಜೆ 6.30 ಗಂಟೆಗೆ ನೆರೆ ಮನೆಯ ವಾಸಿಗಳಾದ ದೇವಿದಾಸ್ ರೈ, ಜಾನಕಿ, ಕುಸುಮಾಧರ, ದೇವಿಶ್ ಎಂಬವರು ಅಕ್ರಮ ಪ್ರವೇಶ ಮಾಡಿ  ಸುಮಾರು 3500 ಅಂದಾಜು ಬೆಲೆಯ 26 ತೆಂಗಿನ ಗಿಡಗಳನ್ನು ನಾಶಮಾಡಿರುವುದಲ್ಲದೇ  ದಿನಾಂಕ: 18-10-2021ರಂದು ಬೆಳಿಗ್ಗೆ 09.00 ಗಂಟೆಗೆ ದೇವಿದಾಸ್ ರೈ, ಜಾನಕಿ,ಕುಸುಮಾಧರ,ದೇವಿಶ್ ಹಾಗೂ ಇತರ 3 ಮಂದಿ ಪಿರ್ಯಾದಿಯ ಮನೆಗೆ ಬಂದು ಪಿರ್ಯಾದುದಾರರ ಹೆಂಡತಿಯನ್ನು ಉದ್ದೇಶಿಸಿ ನೀವು ನಮ್ಮ ಜಾಗವನ್ನು ಅತಿಕ್ರಮಿಸಿದ್ದೀರಿ ನಿಮಗೆ ಊರಿನ ದೈವ ಬಿಡಲಿಕ್ಕಿಲ್ಲ ನಿಮ್ಮನ್ನು ಬಿಡುವುದಿಲ್ಲ ಎಂದು ಹೇಳಿದ್ದಲ್ಲದೇ ಇನ್ನು ಮುಂದೆ ಜಾಗದ ತಕರಾರಿಗೆ ಬಂದಲ್ಲಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ  ಆರೋಪಿಗಳು ಪಿರ್ಯಾದುದಾರರ ಜಾಗಕ್ಕೆ  ಅಕ್ರಮವಾಗಿ ಪ್ರವೇಶಿಸಿ ಧ್ವಂಸಗೊಳಿಸಿದ ತೆಂಗಿನ ಗಿಡಗಳ  ಮೌಲ್ಯ  ರೂ 3500/- ಆಗಬಹುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:110/2021 ಕಲಂ:447, 427, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪಿ. ನಾಗೇಶ್ ಭಟ್ಟ, ಪ್ರಾಯ: 62, ತಂದೆ: ಕೆ. ಸುಬ್ರಹ್ಮಣ್ಯ ಭಟ್ಟ, ವಾಸ: ಪಾದೆಕರ್ಯ ಮನೆ, ಬಡಗನ್ನೂರು ಗ್ರಾಮ, ಪುತ್ತೂರು  ತಾಲೂಕು ಎಂಬವರ ದೂರಿನಂತೆ, ದಿನಾಂಕ: 17.10.2021 ರಂದು ರಾತ್ರಿ ಸುಮಾರು 10.00 ಗಂಟೆಗೆ ಎಲ್ಲರೂ ಊಟ ಮುಗಿಸಿ ಫಿರ್ಯಾದಿದಾರರು ಮತ್ತು ಅವರ ಹೆಂಡತಿ ಮಕ್ಕಳು ಮನೆಯ ಮಹಡಿ ಕೋಣೆಯಲ್ಲಿ ಮಲಗಿದ್ದು, ಫಿರ್ಯಾದಿದಾರರ ತಂದೆ ತಾಯಿ ಕೆಳಗಿನ ಕೋಣೆಯಲ್ಲಿ ಮಲಗಿದ್ದವರು ದಿನಾಂಕ: 18.10.2021 ರಂದು ಬೆಳಿಗ್ಗೆ 06.00 ಗಂಟೆಯಾದರೂ ಎದ್ದೇಳದವರನ್ನು ಫಿರ್ಯಾದಿಯ ಪತ್ನಿ ಹೋಗಿ ನೋಡಿದಲ್ಲಿ ಫಿರ್ಯಾದಿದಾರರ ತಾಯಿ ಶ್ರೀಮತಿ ಶಾರದಾ ರವರು ಕುತ್ತಿಗೆಗೆ ಫ್ಯಾನಿಗೆ ನೈಲಾನ್ ಹಗ್ಗಕಟ್ಟಿ, ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿ ನೇತಾಡುತ್ತಿರುವುದನ್ನು ನೋಡಿ ಫಿರ್ಯಾದಿದಾರರಲ್ಲಿ ತಿಳಿಸಿದಂತೆ ಫಿರ್ಯಾದಿದಾರರು ಬಂದು ನೋಡಿದ್ದು, ಆ ಸಮಯ  ತಂದೆಯವರು ಕಾಣದೇ ಇದ್ದು, ಹುಡುಕಲಾಗಿ ಮನೆಯ ಇನ್ನೊಂದು ಕೋಣೆಯಲ್ಲಿ ಫ್ಯಾನಿನ ಹಗ್ಗ ಕಟ್ಟಿ ಕುಣಿಕೆ ಮಾಡಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಫಿರ್ಯಾದಿದಾರರ ತಾಯಿಯವರು ಸಕ್ಕರೆ ಖಾಯಿಲೆ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ತಂದೆ ತಾಯಿಯವರಿಬ್ಬರೂ ಮನನೊಂದು ದಿನಾಂಕ: 17.10.2021 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ: 18.10.2021 ರಂದು ಬೆಳಿಗ್ಗೆ 06.00 ಗಂಟೆಯ ಮಧ್ಯೆ ಫ್ಯಾನಿಗೆ ಹಗ್ಗಕಟ್ಟಿ ಕುಣಿಕೆ ಮಾಡಿ  ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಯುಡಿಆರ್ ನಂ: 35/2021, ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಎಸ್.ಪಿ ಹಂಝ ಪ್ರಾಯ 40 ವರ್ಷ ತಂದೆ:ಹುಸೈನ್ ಬ್ಯಾರಿ ವಾಸ:ಸುಂಠಿಪಳೊಕೆ ಮನೆ ಉರುವಾಲು ಪದವು ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು      ಎಂಬವರ ದೂರಿನಂತೆ ಉರುವಾಲು ಮನೆಯಿಂದ ತನ್ನ ಕಾರಿನಲ್ಲಿ ಉಪ್ಪಿನಂಗಡಿ ದಿನಾಂಕ 18.10.2021 ರಂದು ಬರುತ್ತಾ  ಬೆಳಿಗೆ 9,.30 ಗಂಟೆಗೆ ಉಪ್ಪಿನಂಗಡಿ ನೇತ್ರಾವತಿ  ನದಿಯ ಸೇತುವೆ ತಲುಪಿದಾಗ ಸೇತುವೆ  ಮೇಲಿನಿಂದ  ಕೆಳಗೆ ನದಿ ನೀರಿಗೆ ಒಬ್ಬ ವ್ಯಕ್ತಿಯು  ಹಾರಿದ್ದನ್ನು ಕಂಡು ಇವರು ಇತರ ರೊಂದಿಗೆ ನದಿ ನೀರಿನಲ್ಲಿ ಈಜಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ದಡಕ್ಕೆ ತಂದು ನೋಡಿದಾಗ ಇವರು ಪರಿಚಯದ  ಮತ್ತಪ್ಪ ಶೆಟ್ಟಿ ಆಗಿದ್ದು, ಅವರಿಗೆ ಸುಮಾರು 75 ವರ್ಷ ಪ್ರಾಯವಾಗಿದ್ದು, ಇವರು ಕಳಿಯ ಗ್ರಾಮದ ಪರಪ್ಪು ದರ್ಖಾಸು ಮನೆಯವರಾಗಿರುತ್ತಾರೆ. ಇವರು ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಇವರು ತುಂಬಾ ನೊಂದಿರುತ್ತಾರೆ . ಇವರನ್ನು ಕೂಡಲೇ ಅಂಬುಲೆನ್ಸ್ ನಲ್ಲಿ  ಉಪ್ಪಿನಂಗಡಿ ಆಸ್ಪೆತ್ರೆ ತಂದಾಗ ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯುಡಿಆರ್ ನಂಬ್ರ 32/2021 ಕಲಂ:174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲೋಕೇಶ ಪ್ರಾಯ 27 ವರ್ಷ, ತಂದೆ: ದಾಸಪ್ಪ ನಾಯ್ಕ, ವಾಸ: ಜೋಗಿಯಡ್ಕ ಮನೆ, ಅಮರಪಡ್ನೂರು ಗ್ರಾಮ, ಸುಳ್ಯ ತಾಲೂಕು, ದ.ಕ. ಜಿಲ್ಲೆ ಎಂಬವರ ದೂರಿನಂತೆ ತನ್ನ ತಮ್ಮ ತೀರ್ಥೇಶ್ವರ ಪ್ರಾಯ 20 ವರ್ಷ, ದವನು ಗಾರೆ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯ ಸೇವನೆ ಮಾಡುತ್ತಿದ್ದವನು ಸರಿಯಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದವನು  ದಿನಾಂಕ 17.10.2021 ರಂದು ಬೆಳಿಗ್ಗೆ 10-00 ಗಂಟೆಗೆ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ರಾತ್ರಿಯಾದರೂ ಮನೆಗೆ ಬಾರದೇ ಪೋನ್ ಕರೆಯನ್ನು ಸ್ವೀಕರಿಸದೇ ಇದ್ದು, ರಾತ್ರಿ 11-00 ಗಂಟೆಗೆ ಮನೆಗೆ ಬಂದು ಸ್ನಾನ ಮಾಡಿ ಬರುವುದಾಗಿ ಹೇಳಿ ಬಚ್ಚಲು ಮನೆಗೆ ಹೋದವನು ವಾಪಾಸ್ ಬಾರದೇ ಇದ್ದು, ಸುತ್ತಮುತ್ತಲಿನಲ್ಲಿ ಹುಡುಕುತ್ತಿದ್ದಾಗ ಮನೆಯ ಹಿಂಬದಿ ಗುಡ್ಡದಲ್ಲಿ ರಬ್ಬರ್ ಮರವೊಂದಕ್ಕೆ ಸೀರೆಯೊಂದನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಬಗ್ಗೆ ಬೆಳ್ಳಾರೆ  ಪೊಲೀಸ್ ಠಾಣೆ, ಸುಳ್ಯ ಯುಡಿಆರ್ ನಂ 22/2021 ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತ್ತೀಚಿನ ನವೀಕರಣ​ : 19-10-2021 01:50 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080