ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಮೇಶ ಕೆ, ಪ್ರಾಯ 39 ವರ್ಷ, ತಂದೆ: ಅಣ್ಣಿಪೂಜಾರಿ, ವಾಸ: 1-123(1), ಕುದ್ರಡ್ಕ ಮನೆ, ತಣ್ಣೀರುಪಂತ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 18-12-2022 ರಂದು ತನ್ನ ಬಾಬ್ತು ಆಟೋ ರಿಕ್ಷಾ ನಂಬ್ರ KA21B 3666    ನೇದರಲ್ಲಿ ಬಾಡಿಗೆ ನಿಮಿತ್ತ ಮಡಂತ್ಯಾರಿನಿಂದ ಬಳ್ಳಮಂಜಕ್ಕೆಂದು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಮಡಂತ್ಯಾರಿನಿಂದ ಹೊರಟು ಮಡಂತ್ಯಾರು- ಬಳ್ಳಮಂಜ ಡಾಮಾರು ರಸ್ತೆಯಲ್ಲಿ ತನ್ನ ಬಾಬ್ತು ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಬರುತ್ತಾ ಬೆಳಗ್ಗೆ ಸುಮಾರು 9.15 ಗಂಟೆಗೆ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಬ್ರಹ್ಮಗಿರಿ ತಿರುವು ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಅಂದರೆ ಬಳ್ಳಮಂಜ ಕಡೆಯಿಂದ KA19N 9148  ನೇ ನಂಬ್ರದ ಸ್ಯಾಂಟ್ರೋ ಕಾರು ಚಾಲಕ ಚಂದ್ರಶೇಖರ ಶೆಟ್ಟಿಗಾರ ಎಂಬವರು ತನ್ನ ಬಾಬ್ತು ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಪ್ರಯಾಣಿಕರ ಸಮೇತ ಎಡಬದಿಗೆ ಮಗುಚಿ ಬಿದ್ದು, ಆಟೋರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ  ಸುಮಿತ್ರ, ವಿನೋದ, ಬೈರ ಶೆಟ್ಟಿರವರಿಗೆ ಗುದ್ದಿದ ರೀತಿಯ ಗಾಯವಾಗಿರುವುದಲ್ಲದೇ ಆಟೋರಿಕ್ಷಾದ ಮುಂಭಾಗದ ಗಾಜು ಹಾಗೂ ಆಟೋರಿಕ್ಷಾದ ಬಲಬದಿ ಜಖಂಗೊಂಡಿರುತ್ತದೆ.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 99/2022 ಕಲಂ: 279,  337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಿಜಾನಂದ ಸ್ವಾಮಿ  (29) ತಂದೆ:ಬಸವರಾಜ್‌ ವಾಸ: ಬಳ್ಳೆಕಟ್ಟೆ ಮನೆ,ಕುಪ್ಪಾಳು ಅಂಚೆ,ತಿಪ್ಪಟೂರು ತಾಲೂಕು, ತುಮಕೂರು ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿದಾರರು  ದಿನಾಂಕ: 17-12-2022 ರಂದು  ಕೆಎ 70-2384 ನೇ ಆಟೋ ರಿಕ್ಷಾದಲ್ಲಿ ಇತರರರೊಂದಿಗೆ ಸಹ ಪ್ರಯಾಣಿಕರಾಗಿ ಕುಳಿತುಕೊಂಡು ಆಟೋ ರಿಕ್ಷಾವನ್ನು ಅದರ ಚಾಲಕ  ಉಜಿರೆ- ಸೂರ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 5.30 ಗಂಟೆಗೆ ಬೆಳ್ತಂಗಡಿ ತಾಲೂಕು, ಉಜಿರೆ ಗ್ರಾಮದ ಪಡುವೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ  ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾವನ್ನು ಅದರ ಚಾಲಕ ಒಮ್ಮೆಲೇ ದುಡುಕುತನದಿಂದ ಚಲಾಯಿಸಿದ ಪರಿಣಾಮ ಆಟೋ ರಿಕ್ಷಾ ಬಲಮಗ್ಗುಲಾಗಿ ರಸ್ತೆಗೆ ಬಿದ್ದು ವಿರುದ್ದ ದಿಕ್ಕಿನಿಂದ  ಅಂದರೆ ಸೂರ್ಯ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಕೆಎ19 AA 8811 ನೇ ಕಾರಿಗೆ ಢಿಕ್ಕಿ ಹೊಡೆದ  ಪರಿಣಾಮ   ಪಿರ್ಯಾದಿದಾರರಿಗೆ ಎದೆಗೆ, ಬೆನ್ನಿಗೆ ಗುದ್ದಿದಗಾಯ, ಪಿರ್ಯಾದಿದಾರರ ತಾಯಿ ಅನ್ನಪೂರ್ಣರವರಿಗೆ ಮುಖಕ್ಕೆ ,ಬೆನ್ನಿಗೆ, ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಉಜಿರೆ ಎಸ್‌ ಡಿ ಎಮ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ .ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 162/2022 ಕಲಂ; 279 337,  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹರೀಶದಾಮಿ(38) ತಂದೆ:ಬೀರ್‌ ಬಹುದ್ದೂರ್ ವಾಸ:ಬಾದಶಾಹಪುರ,ಗುರುಗಾನ್‌ ಜಿಲ್ಲೆ, ಹರಿಯಾಣ ರಾಜ್ಯ,ಎಂಬವರ ದೂರಿನಂತೆ ದಿನಾಂಕ: 16-12-2022 ರಂದು ತನ್ನ ಬಾಬ್ತು ಕೆಎ 70 ಜೆ 2207 ನೇ ದ್ವೀಚಕ್ರ ವಾಹನದಲ್ಲಿ  ಸಹ ಸವಾರ ನರೇಶ್‌ ಎಂಬುವರನ್ನು ಕುಳ್ಳಿರಿಸಿಕೊಂಡು ಮುಂಡಾಜೆ- ಧರ್ಮಸ್ಥಳ ರಸ್ತೆಯಲ್ಲಿ ಧರ್ಮಸ್ಥಳ ಕಡೆಗೆ ಸವಾರಿಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ರಾತ್ರಿ 7.00 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಹೈಸ್ಕೂಲ್‌ ಬಳಿ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಮುಂಡಾಜೆಕಡೆಗೆ ಕೆಎ21 ಬಿ 5719 ನೇ ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿಚಕ್ರವಾಹನಕ್ಕೆ ಢಿಕ್ಕಿ ಹೋಡೆದನು. ಪರಿಣಾಮ ದ್ವಿ ಚಕ್ರ ಸವಾರ ಹರೀಶದಾಮಿ ಯವರಿಗೆ ಎಡ ಕೈಭುಜಕ್ಕೆ ಗುದ್ದಿದ ಗಾಯ, ಹಣೆಯ ಎಡಬದಿಗೆ ತರಚಿದ ಗಾಯ, ಹಾಗೂ ಸಹ ಸವಾರ ನರೇಶ ರವರಿಗೆ ಬಲ ಬದಿಯ ಹಣೆಗೆ, ಕೆನ್ನೆಗೆ, ತಲೆಗೆ, ತರಚಿದ ಗಾಯವಾಗಿರುತ್ತದೆ. ಗಾಯಾಳುಗಳು ಉಜಿರೆ ಎಸ್‌ ಡಿ ಎಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 163/2022 ಕಲಂ; 279 337,  ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 18.12.2022ರಂದು ಪೊಲೀಸ್ ಉಪ-ನಿರೀಕ್ಷಕರಾದ ರಾಮಕೃಷ್ಣರವರು ಠಾಣಾ ಸಿಬ್ಬಂದಿಗಳೊಂದಿಗೆ ಕರ್ತವ್ಯದಲ್ಲಿ ಪುತ್ತೂರು-ಪಾಣಾಜೆ- ಪೆರ್ಲ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕೊಂದಲ್ಕಾನ ಸೇತುವೆಯ ಬಳಿಯಿದ್ದಾಗ ಸಮಯ ಬೆಳಿಗ್ಗೆ 9.45 ಗಂಟೆಗೆ ಆರ್ಲಪದವು  ಕಡೆಯಿಂದ ಪೆರ್ಲ  ಕಡೆಗೆ ಪಿಕಪ್‌ ವಾಹನವೊಂದು ಬರುತ್ತಿದ್ದು, ಫಿರ್ಯಾದುದಾರರು ಸದ್ರಿ ವಾಹನವನ್ನು ನಿಲ್ಲಿಸುವಂತೆ ಅದರ ಚಾಲಕನಿಗೆ ಸೂಚಿಸಿದಾಗ ಅದರ  ಚಾಲಕನು  ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ, ಸದ್ರಿ ವಾಹನದ ಚಾಲಕ ಮತ್ತು ಅದರಲ್ಲಿದ್ದ  ವ್ಯಕ್ತಿಯೊಬ್ಬ ವಾಹನದಿಂದ ಇಳಿದು, ಓಡಿ ಹೋಗಲು ಪ್ರಯತ್ಸಿಸಿದ್ದು, ಆ ವೇಳೆ ಫಿರ್ಯಾದುದಾರರು ಮತ್ತು ಸಿಬ್ಬಂದಿಯವರು ಸದ್ರಿಯವರನ್ನು ಸುತ್ತುವರಿದು, ತಡೆದು ನಿಲ್ಲಿಸಿ,  ಬಳಿಕ ಪಂಚರೊಂದಿಗೆ ಸದ್ರಿ ಪಿಕಪ್‌ ವಾಹನವನ್ನು ಪರಿಶೀಲಿಸಿದಲ್ಲಿ ಸದ್ರಿ ವಾಹನದ ಹಿಂಬದಿ ಬಾಡಿಯಲ್ಲಿ ನಸು ಕಂದು  ಬಣ್ಣದ ಒಂದು ಹಸು ಮತ್ತು ನಸು ಕೆಂಪು ಬಣ್ಣದ ಒಂದು ಹೆಣ್ಣು ಕರು ಇರುವುದು  ಕಂಡು ಬಂದಿರುತ್ತದೆ.  ಬಳಿಕ ಫಿರ್ಯಾದುದಾರರು ಸದ್ರಿ ಪಿಕಪ್‌ ವಾಹನದ ಚಾಲಕನಲ್ಲಿ ಸದ್ರಿ ಹಸು ಮತ್ತು ಕರುವನ್ನು ಸಾಗಾಟ ಮಾಡುವರೇ ಪರವಾನಿಗೆ ಅಥವಾ ಪಶು ವೈದ್ಯಾಧಿಕಾರಿಯವರ ಪ್ರಮಾಣಪತ್ರ ಇದೆಯೇ ಎಂದು ಕೇಳಲಾಗಿ ಸದ್ರಿ ಹಸು ಮತ್ತು ಕರುವನ್ನು  ಸಾಗಾಟ ಮಾಡಲು ಪರವಾನಿಗೆ ಅಥವಾ  ಪಶು ವೈದ್ಯಾಧಿಕಾರಿಯವರ ಪ್ರಮಾಣಪತ್ರ ಇರುವುದಿಲ್ಲ ಎಂಬುದಾಗಿಯೂ, ಸದ್ರಿ ಹಸು ಮತ್ತು ಕರುವನ್ನು  ಈಗ ತನ್ನೊಂದಿಗಿರುವ ಜಗನ್ನಾಥರವರು ಕೇರಳಕ್ಕೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿಯೂ ಪಿಕಪ್‌ ವಾಹನದ ಚಾಲಕನು  ತಿಳಿಸಿರುತ್ತಾನೆ. ಬಳಿಕ ಸದ್ರಿ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ  ಗೌರೀಶಂಕರ ಆಳ್ವ, ಪ್ರಾಯ- 51 ವರ್ಷ, ತಂದೆ- ವಿಶ್ವನಾಥ ಆಳ್ವ , ವಾಸ-ಅನುಗ್ರಹ ನಿಲಯ, ವಾಣಿನಗರ ಮನೆ, ಪಡ್ರೆ ಗ್ರಾಮ, ಮಂಜೇಶ್ವರ ತಾಲೂಕು ಕಾಸರಗೋಡು ಜಿಲ್ಲೆ ಎಂಬುದಾಗಿ ತಿಳಿಸಿರುತ್ತಾನೆ. ಅದೇ ರೀತಿ ಸದ್ರಿ ವಾಹನದಲ್ಲಿದ್ದ ಇನ್ನೊಬ್ಬ ವ್ಯಕ್ತಿಯ  ಹೆಸರು ವಿಳಾಸ ವಿಚಾರಿಸಲಾಗಿ  ಜಗನ್ನಾಥ, ಪ್ರಾಯ- 62 ವರ್ಷ, ತಂದೆ- ಸಂಕು ಪೂಜಾರಿ , ವಾಸ-ಬೈರಡ್ಕ ಮನೆ, ಪಡ್ರೆ ಗ್ರಾಮ, ಮಂಜೇಶ್ವರ ತಾಲೂಕು ಕಾಸರಗೋಡು ಜಿಲ್ಲೆ ಎಂಬುದಾಗಿ ತಿಳಿಸಿರುತ್ತಾನೆ.  ಸದ್ರಿ ಪಿಕಪ್ ವಾಹನವನ್ನು ಪರಿಶೀಲಿಸಲಾಗಿ  ಇದು ಮಹೀಂದ್ರಾ ಕಂಪೆನಿಯ ಹಳದಿ ಮತ್ತು  ಬಿಳಿ  ಬಣ್ಣದ ಪಿಕಪ್ ವಾಹನವಾಗಿದ್ದು, ಇದರ ನೋಂದಣಿ ಸಂಖ್ಯೆ ಕೆಎ 19 ಸಿ 1339  ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂಪಾಯಿ 3,00,000/- ಆಗಬಹುದು.  ಸದ್ರಿ  ಪಿಕಪ್‌ನೊಳಗೆ ಇರುವ ಹಸುವನ್ನು ಪರಿಶೀಲಿಸಲಾಗಿ ಸದ್ರಿ ಹಸು  ನಸು ಕಂದು  ಬಣ್ಣದ್ದಾಗಿದ್ದು, ಅದರ ಅಂದಾಜು ಮೌಲ್ಯ ರೂಪಾಯಿ 15,000/-  ಆಗಬಹುದು. ಈ ಬಗ್ಗೆ ಪುತ್ತೂರು ಗ್ರಾಮಾಂತರ   Cr.No. 111/20225, 7, 12 The Karnataka Prevention of Slaughter and Preservation of Cattle Act - 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಝೌರ ಪ್ರಾಯ 30 ವರ್ಷ ಗಂಡ: ಅಬ್ದುಲ್ ರಜಾಕ್ ವಾಸ:ಜಯನಗರ ಮನೆ, ಸುಳ್ಯ ಕಸಬಾ ಗ್ರಾಮ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರಾದ  ಝೌರ (ಪ್ರಾಯ 30 ವರ್ಷ)  ರವರ ಗಂಡ ಅಬ್ದುಲ್ ರಜಾಕ್ (ಪ್ರಾಯ 38 ವರ್ಷ) ರವರು ಸ್ವಂತ ರಿಕ್ಷಾದಲ್ಲಿ ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದು, ಈ ದಿನ ದಿನಾಂಕ 18.12.2022 ರಂದು ಪಿರ್ಯಾದಿದಾರರು, ಗಂಡ ಅಬ್ದುಲ್ ರಜಾಕ್  ಮತ್ತು ಮಗಳು ಸುಳ್ಯ ಕಸಬಾ ಗ್ರಾಮದ ಜಯನಗರ ಎಂಬಲ್ಲಿರುವ ತಮ್ಮ ಮನೆಯಲ್ಲಿರುವ ಸಮಯ ಮಧ್ಯಾಹ್ನ 1.00 ಗಂಟೆಗೆ ಅಬ್ದುಲ್ ರಜಾಕ್ ರವರು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ನೆರೆಕರೆಯವರಿಗೆ ವಿಚಾರ ತಿಳಿಸಿ ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ 1.15 ಗಂಟೆಗೆ ಬಂದಾಗ ವೈದ್ಯರು  ಅಬ್ದುಲ್ ರಜಾಕ್ ರವರನ್ನು  ಪರೀಕ್ಷಿಸಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದು,.ಈ ಬಗ್ಗೆ ಸುಳ್ಯ ಠಾಣಾ ಯುಡಿಅರ್ ನಂಬ್ರ 54/2022 ಕಲಂ 174 ಸಿಅರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬೇಬಿ,ಪ್ರಾಯ:48 ವರ್ಷ, ಗಂಡ:ಶಿವಾನಂದ,  ವಾಸ:ಸೋಮೇಶ್ವರ ದೇವಸ್ಥಾನದ ಹತ್ತಿರ, ಕೋಟೆಕಾರ್ ಅಂಚೆ, ಸೋಮೇಶ್ವರ ಗ್ರಾಮ, ಮಂಗಳೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಿಗೆ ದಿನಾಂಕ:17-12-2022 ರಂದು ಅವರ ಮಗ ಲೋಕೇಶ್, ಪ್ರಾಯ: 30 ವರ್ಷ ಎಂಬಾತನು ಕೂಲಿ ಕೆಲಸಕ್ಕೆ ಹೋಗುತ್ತಿರುವಾಗ ಆಕಸ್ಮಿಕವಾಗಿ ಕುಸಿದು ಬಿದ್ದು ಮೃತಪಟ್ಟ ಬಗ್ಗೆ ದೂರವಾಣಿ ಕರೆ ಬಂದ ಮೇರೆಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಅವರ ಮಗ ಲೋಕೇಶ್ ನ ಮೃತದೇಹವನ್ನು ನೋಡಿದ್ದು, ಮೃತ ಲೋಕೇಶ್ ನು ತನ್ನ ಜೊತೆಗಾರರಾದ ಮಂಜುನಾಥ ಮತ್ತು ಕೃಷ್ಣಪ್ಪರೊಂದಿಗೆ ಕುಮಾರಪರ್ವತದ ಗಿರಿಗದ್ದೆ ಎಂಬಲ್ಲಿಗೆ ಕೂಲಿ ಕೆಲಸಕ್ಕೆ ಹೋಗುತ್ತಿರುವಾಗ ಅಪರಾಹ್ನ 3:30 ಗಂಟೆಗೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಹತ್ತಿರ ಕಲ್ಲುಗುಡ್ಡೆ ಎಂಬಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದು ನಂತರ ಚಿಕಿತ್ಸೆ ಬಗ್ಗೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ ಮೃತಪಟ್ಟಿರುವ ಬಗ್ಗೆ ವೈದ್ಯಾಧಿಕಾರಿಯವರು ತಿಳಿಸಿರುತ್ತಾರೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣಾ ಯುಡಿಆರ್  ನಂಬ್ರ  : 25/2022 ಕಲಂ   , 174 ಸಿಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-12-2022 04:16 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080