ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಫೀಕ್‌  ಪ್ರಾಯ 40 ವರ್ಷ ತಂದೆ. ಅಬೂಬಕ್ಕರ್‌, ವಾಸ: ದರ್ಖಾಸು ಮನೆ,ಸವಣಾಲು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 18-01-2023ರಂದು ಸವಣಾಲು-ಜೈನಬಸದಿ ರಸ್ತೆಯಲ್ಲಿ  ಅಟೋ ರಿಕ್ಷಾ ಕೆಎ21ಎ6439 ನೇದನ್ನು ಅದರ ಚಾಲಕ ಸವಣಾಲು  ಕಡೆಯಿಂದ ಜೈನಬಸದಿ ಕಡೆಗೆ  ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು  ಮದ್ಯಾಹ್ನ 1-30 ಗಂಟೆಗೆ  ಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ ನಡ್ತಿಕಲ್ಲು ಎಂಬಲ್ಲಿಗೆ ತಲುಪಿದಾಗ ಅಟೋ ರಿಕ್ಷಾವನ್ನು ಅದರ ಚಾಲಕ ಒಮ್ಮೆಲೆ ದುಡುಕುತನದಿಂದ ಚಲಾಯಿಸಿಕೊಂಡು ಹೋದ ಪರಿಣಾಮ ಅಟೋ ರಿಕ್ಷಾವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಗೆ  ಮಗಚಿ ಬಿದ್ದು ಅಟೋ ರಿಕ್ಷಾದಲ್ಲಿದ್ದ ಪ್ರಯಾಣಿಕೆ ಶ್ರೀಮತಿ ರೇಖಾ ರವರಿಗೆ ಬಲಕೈ ಭುಜಕ್ಕೆ ಗುದ್ದಿದ ಗಾಯ ಹಾಗೂ ಹಣೆಗೆ ತರಚಿದ ಗಾಯವುಂಟಾಗಿದ್ದು ಗಾಯಾಳು ರೇಖಾ ರವರನ್ನು  ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಅಭಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 04/2023 ಕಲಂ: 279,337 ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಫಾತಿಮತ್‌ ಅಫೀಪಾ, ಪ್ರಾಯ 14 ವರ್ಷ, ತಂದೆ: ಅಶ್ರಫ್‌. ಹೆಚ್,  ವಾಸ: ಪಿಲಿಗೂಡು ಮನೆ, ಬಾರ್ಯ ಅಂಚೆ &  ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 18-01-2023 ರಂದು 21:15  ಗಂಟೆಗೆ ಆರೋಪಿ ಅಟೋ ರಿಕ್ಷಾ ಚಾಲಕ ಅಶ್ರಫ್‌ ಹೆಚ್ ಎಂಬವರು KA-21-B-4441ನೇ ನೋಂದಣಿ ನಂಬ್ರದ ಅಟೋ ರಿಕ್ಷಾವನ್ನು ಉಪ್ಪಿನಂಗಡಿ-ಹಿರೇಬಂಡಾಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ನಿನ್ನಿಕಲ್ಲು ಕಡೆಯಿಂದ ಪಿಲಿಗೂಡು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಎದುರಿನಿಂದ ಬರುತ್ತಿರುವ ವಾಹನಗಳನ್ನು ಕಂಡು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಒಮ್ಮಲೇ ಬ್ರೇಕ್‌ ಹಾಕಿದ ಪರಿಣಾಮ, ಅಟೋ ರಿಕ್ಷಾ ಸ್ಕಿಡ್‌ ಆಗಿ ಪಲ್ಟಿಯಾಗಿ ರಸ್ತೆಗೆ ಬಿದ್ದು ಅಟೋ ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಪಿರ್ಯಾದುದಾರರಿಗೆ ಬಲಕಾಲಿನ ಪಾದಕ್ಕೆ, ಮಣಿಗಂಟಿಗೆ, ಕೋಲುಕಾಲಿಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು ಪಿರ್ಯಾದುದಾರರ ತಂಗಿ ಫಾತಿಮ ಐಫಾ(14) ಎಂಬವರಿಗೆ ಎಡಕಾಲಿನ ಮೊಣಗಂಟಿಗೆ, ತಲೆಗೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆರೋಪಿ ಅಟೋ ರಿಕ್ಷಾ ಚಾಲಕನಿಗೆ ಸಣ್ಣ-ಪುಟ್ಟ ಗುದ್ದಿದ ಗಾಯವಾಗಿದ್ದು, ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ 09/2023 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್‌ ಅಫೀಲ್‌ (21) ತಂದೆ: ಅಜೀಜ್‌ ಬಿ.ಆರ್‌ ವಾಸ: ಬಾಸಲ್‌ ಮಿಷನ್‌ ಹಿಲ್‌ ಮನೆ, ಬೊಳ್ವಾರು, ಪುತ್ತೂರು ಕಸಬಾ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 19-01-2023 ರಂದು 11:15 ಗಂಟೆಗೆ ಆರೋಪಿ ಕಾರು ಚಾಲಕ ಅಬ್ದುಲ್‌ ರಜಾಕ್‌  ಎಂಬವರು KA-21-Z-2976 ನೇ ನೋಂದಣಿ ನಂಬ್ರದ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಲಿನೆಟ್‌ ಜಂಕ್ಷನ್‌  ಎಂಬಲ್ಲಿ, ಭಾರತ್‌ ಪೆಟ್ರೋಲ್‌ ಪಂಪ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ಬಲಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಮಹಮ್ಮದ್‌ ಅಫೀಲ್‌ ಸವಾರರಾಗಿ, ಮಹಮ್ಮದ್‌ ನಿಝಾಮುದ್ದೀನ್‌ ರವರನ್ನು ಸಹ ಸವಾರರನ್ನಾಗಿ  ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ ನೇರಳಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-70-J-0656 ನೇ  ನೊಂದಣಿ ನಂಬ್ರದ ಸ್ಕೂಟರಿಗೆ ಕಾರು ಅಪಘಾತವಾಗಿ ಪಿರ್ಯಾದುದಾರರು ಮತ್ತು ಸಹಸವಾರ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಎಡಕೈ ಭುಜಕ್ಕೆ, ಎಡಕಾಲಿನ ಮಣಿಗಂಟಿಗೆ, ಎಡಕೈಯ ತಟ್ಟಿಗೆ ಗುದ್ದಿದ ಹಾಗೂ ತರಚಿದ ರಕ್ತಗಾಯ ಮತ್ತು ಸಹಸವಾರನಿಗೆ ಎಡಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ 10/2023 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅವ್ವಮ್ಮ ಪ್ರಾಯ   ವರ್ಷ, ಗಂಡ: ದಿ ಚಾಬಾ ಬ್ಯಾರಿ ವಾಸ: ಆರೋದು ಮನೆ, ತೆಂಕಕಜೆಕಾರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ: 18.01.2023 ರಂದು ರಾತ್ರಿ  7.00 ಗಂಟೆಗೆ  ಪಿರ್ಯಾದಿದಾರರು ಬಂಟ್ವಾಳ ತಾಲೂಕು ತೆಂಕಕಜೆಕಾರು ಗ್ರಾಮದ ಆರೋದು ಎಂಬಲ್ಲಿ ತನ್ನ ಮನೆಯಲ್ಲಿ ಒಬ್ಬಳೇ ಇರುವ ಸಮಯ ಪಿರ್ಯಾದಿದಾರರ  ಮಗ ಮಹಮ್ಮದ್‌ ನ 2ನೇ ಹೆಂಡತಿಯಾದ  ಅಸ್ಮಾ ಹಾಗೂ ಅವರ ಮನೆಯವರಾದ ಕಾಸಿಂ, ಅಬ್ದುಲ್‌ ರಹಿಮಾನ್‌, ಅಶ್ರಫ್‌ , ಆಶೀಕ್‌ ಎಂಬವರು ಏಕಾಏಕಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, “ನಿನ್ನ ಮಗ ಎಲ್ಲಿ, ಮೊಮ್ಮಗ ಎಲ್ಲಿ” ಎಂದು ಪಿರ್ಯಾದಿದಾರರಲ್ಲಿ ಕೇಳಿದಾಗ,  ಪಿರ್ಯಾದಿದಾರರು ತನ್ನ ಮನೆಯೊಳಗೆ ಯಾಕೆ ಬಂದಿದ್ದೀರಿ ಎಂದು ಮರುಪ್ರಶ್ನಿಸಿದಾಗ ಆರೋಪಿತರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ,ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರನ್ನು ದೂಡಿ ಹಾಕಿದಾಗ ಪಿರ್ಯಾದಿದಾರರಿಗೆ ಗುದ್ದಿದ ಗಾಯವಾಗಿರುತ್ತದೆ.  ಬಳಿಕ ಆರೋಪಿಗಳು  ನಿನ್ನ ಮಗ, ಮೊಮ್ಮಕ್ಕಳನ್ನು ಎಲ್ಲಿ ಅಡಗಿಸಿಟ್ಟಿದ್ದೀಯಾ ಹೇಳು ಇಲ್ಲದಿದ್ದರೆ ನಿನ್ನ ಕೈಕಾಲು ಕಡಿದು ಕೊಂದು ಹಾಕುತ್ತೇವೆ ಎಂದು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಒಡಿದ್ದು.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 07/2023 ಕಲಂ: 143, 147, 448, 341, 323, 504, 506 ಜೊತೆಗೆ 149 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ವಿಟ್ಲ ಪೊಲೀಸ್ ಠಾಣೆ : ದಿನಾಂಕ: 19-01-2023 ರಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 009/2023  ಕಲಂ: 143,147,323,504,354,506 ಜೊತೆಗೆ 149 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ದಿನಾಂಕ: 19-01-2023   ರಂದು  ಸುಬ್ರಹ್ಮಣ್ಯ ಠಾಣೆಯಲ್ಲಿ ಕಲಂ: 354, 506 ಐಪಿಸಿ, ಕಲಂ;11,12 ಪೋಕ್ಸೋ ಕಾಯ್ದೆ-2012ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 3

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರೇಮಲತಾ (43) ಗಂಡ: ಪಿ.ಡಿ ಸುರೇಶ ವಾಸ: ಕಜೆಮೂಲೆ ಮನೆ, ಪೆರಾಜೆ ಗ್ರಾಮ ಮತ್ತು ಅಂಚೆ ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದುದಾರರ ತಮ್ಮ ರೋಹಿತ್ (38) ಎಂಬಾತನು ಕಳೆದ 10 ದಿನಗಳ ಹಿಂದೆ ಪಿರ್ಯಾದುದಾರರಿಗೆ ಪೋನ್ ಮಾಡಿ ತನಗೆ ಚಿಕನ್ ಫಾಕ್ಸ್ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದು, ಈ ದಿನ ದಿನಾಂಕ 19.01.2023 ರಂದು  ಪಿರ್ಯಾದುದಾರರ ತವರು ಮನೆಯ ಪರಿಸರದ ನಿವಾಸಿ ದಿನೇಶ್ ಎಂಬವರು ಸಮಯ ಸುಮಾರು 12:00 ಗಂಟೆಗೆ ಪಿರ್ಯಾದುದಾರರಿಗೆ ಪೋನ್ ಮುಖಾಂತರ ಕರೆಮಾಡಿ ಲೋಹಿತ್ ನ್ನು ಅಸ್ಪಸ್ಥಗೊಂಡಿದ್ದು ಕೂಡಲೇ ಬರುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದುದಾರರು ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಇಂದುಗುಂಡಿ ಎಂಬಲ್ಲಿರುವ ತಮ್ಮ ತವರು ಮನೆಗೆ  ಬಂದು ಸಮಯ ಸುಮಾರು 15:00 ಗಂಟೆಗೆ ಲೋಹಿತ್ ನನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೇನ್ಸ್ ವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಹೊದಲ್ಲಿ ಅಲ್ಲಿನ ವೈದ್ಯರು ಲೋಹಿತ್ ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ.ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ    ಯುಡಿಆರ್    ನಂ: 04/2023 ಕಲಂ: 174 ಸಿಆರ್ ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಕವಿತಾ (45) ಗಂಡ: ಸುಂದರ ನಾಯ್ಕ ವಾಸ: ಅರಂಬೂರು ಮನೆ, ಆಲೆಟ್ಟಿ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 18.01.2023 ರಂದು ಸುಂದರ ನಾಯ್ಕರವರು ಕೆಲಸಕ್ಕೆ ಹೋಗದೇ ವಿಪರೀತ ಮದ್ಯಪಾನ ಸೇವನೆ ಮಾಡಿ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಅರಂಬೂರು ಎಂಬಲ್ಲಿರುವ ತಮ್ಮ ಮನೆಯಲ್ಲೆಯೇ ಇದ್ದು ಪಿರ್ಯಾದುದಾರರು ಸುಂದರ ನಾಯ್ಕ್ ರವರನ್ನು ಉದ್ದೇಶಿಸಿ ಯಾಕೆ ಹೀಗೆ ಮಾಡುತ್ತಿರಿ ಎಂದು ಕೇಳಿದಾಗ ಸುಂದರ ನಾಯ್ಕ್ ರವರು ಸಮಯ ಸುಮಾರು ಮಧ್ಯಾಹ್ನ 12:00 ಗಂಟೆಗೆ ಮನೆಯಿಂದ ಹೊರಗೆ ಹೋದವರು ವಾಪಾಸ್ ಮನೆಗೆ ಬಾರದೇ ಇದ್ದು, ನಂತರ ದಿನಾಂಕ 19.01.2023 ರಂದು ಸಮಯ ಸುಮಾರು 16:00 ಗಂಟೆಗೆ ಪಿರ್ಯಾದುದಾರರು ಮನೆಯ ಬದಿಯಲ್ಲಿರುವ ಶೌಚಾಲಯಕ್ಕೆ ಹೋದಾಗ  ಕ್ರಿಮಿನಾಶಕದ ಘಾಟು ವಾಸನೆ ಬಂದಿದ್ದು, ಪಿರ್ಯಾದುದಾರರು ಅವರ  ಮಗಳು ಕಾವ್ಯಳನ್ನು ಕರೆದು ನೋಡುವಂತೆ ತಿಳಿಸಿದಾಗ ಕಾವ್ಯಳು  ಟಾರ್ಚ್ ಹಾಕಿ ಅಟ್ಟದಲ್ಲಿ ನೋಡಿದಾಗ ಸುಂದರ ನಾಯ್ಕ ಮಲಗಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು, ನಂತರ ನೆರೆಯ ಶಿವರಾಮ ರೈ ರವರನ್ನು ಕರೆಸಿ ನೋಡಿದಲ್ಲಿ  ಪಿರ್ಯಾದುದಾರರ ಗಂಡ ಸುಂದರ ನಾಯ್ಕ ನು ಯಾವುದೋ ಕ್ರಿಮಿ ನಾಶಕವನ್ನು ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ    ಯುಡಿಆರ್  ನಂ: 05/2023 ಕಲಂ: 174 ಸಿಆರ್ ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಯಂತ, ಪ್ರಾಯ:46 ವರ್ಷ, ತಂದೆ: ನಾರಾಯಣ ನಾಯ್ಕ, ವಾಸ: ಪೆರ್ಮಜೆ ಮನೆ, ಪಂಬೆತ್ತಾಡಿ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ನಾರಾಯಣ ನಾಯ್ಕ, ಪ್ರಾಯ: 70 ವರ್ಷ ಎಂಬವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಎಂದಿನಂತೆ ದಿನಾಂಕ 16-01-2023 ರಂದು ಬೆಳಿಗ್ಗೆ ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ರೆಂಜದ ಮಜಲು  ಸಂಜೀವ ನಾಯ್ಕ ಎಂಬವರಲ್ಲಿಗೆ ಕೂಲಿ ಕೆಲಸಕ್ಕೆ ಹೋದವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ದ್ದು, ದಿನಾಂಕ 19-01-2023 ರಂದು ಬೆಳಿಗ್ಗೆ 07-00 ಗಂಟೆಗೆ ಸಂಜೀವ ನಾಯ್ಕರವರ ಪತ್ನಿ ಪುಷ್ಪಾವತಿ ದೂರವಾಣಿ ಕರೆ ಮಾಡಿ ನಾರಾಯಣ ನಾಯ್ಕರವರು ಮನೆಯ ಬಾವಿಗೆ ಬಿದ್ದು ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಹೋಗಿ ನೋಡಲಾಗಿ ನಾರಾಯಣ ನಾಯ್ಕರವರು ಬಾವಿಗೆ ಬಿದ್ದು ಶವ ಬಾವಿಯಲ್ಲಿ ತೇಲುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆ ಯುಡಿಆರ್‌  ನಂಬ್ರ  : 03/2023 ಕಲಂ: 174 ಸಿಆರ್‌ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-01-2023 11:04 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080