ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್‌ ಹನೀಫ್‌, ಪ್ರಾಯ 40 ವರ್ಷ, ತಂದೆ: ದಿ|| ಅಬೂಬಕ್ಕರ್‌,  ವಾಸ: ಯಾಕೂಬ್‌ ಸಾಹೇಬರ ಮನೆ, ಬಪ್ಪಳಿಗೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 19-02-2021 ರಂದು 10-30 ಗಂಟೆಗೆ ಆರೋಪಿ ಖಾಸಗಿ ಅಟೋರಿಕ್ಷಾ ಚಾಲಕ ಚಿದಾನಂದ ಪೂಜಾರಿ ಎಂಬವರು KA-21-B-0631 ನೇ ನೋಂದಣಿ ನಂಬ್ರದ ಅಟೋರಿಕ್ಷಾದಲ್ಲಿ ಪಾರ್ವತಿ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಸಂತೆ ಮಾರ್ಕೆಟ್‌ ಕಡೆಯಿಂದ ಸರಕಾರಿ ಆಸ್ಪತ್ರೆಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಸರಕಾರಿ ಆಸ್ಪತ್ರೆಯ ಎದುರು  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಏಕಾಏಕಿಯಾಗಿ ಸರಕಾರಿ ಆಸ್ಪತ್ರೆಯ ಕಡೆಗೆ ಚಲಾಯಿದಾಗ ಎಸಿ ಕಛೇರಿ ಕಡೆಯಿಂದ ಚೇತನಾ ಆಸ್ಪತ್ರೆಯ ಕಡೆಗೆ ಹೋಗುವ ರಸ್ತೆಯಲ್ಲಿ ಫಿರ್ಯಾದಿ ಮೊಹಮ್ಮದ್‌ ಹನೀಫ್‌ರವರು ಸವಾರರಾಗಿ ಅವರ ಮಗಳು 10 ವರ್ಷದ ಫಾತಿಮತ್‌ ರಿಶಾನಾಳೊಂದಿಗೆ  ಹೋಗುತ್ತಿದ್ದ KA-21-V-0695ನೇ ನೋಂದಣಿ ನಂಬ್ರದ ಮೋಟಾರು ಸೈಕಲಿಗೆ ಅಟೋರಿಕ್ಷಾವು ಅಪಘಾತವಾಗಿ ಮೊಹಮ್ಮದ್‌ ಹನೀಫ್‌ರವರಿಗೆ, ಫಾತಿಮತ್‌ ರಿಶಾನಾಳಿಗೆ ಮತ್ತು ಅಟೋರಿಕ್ಷಾದಿಂದ ಹೊರಗೆ ಬಿದ್ದ ಪಾರ್ವತಿಯವರಿಗೆ ಗಾಯಗಳಾಗಿ  ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  35/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಕೃಷ್ಣವೇಣಿ ಪ್ರಾಯ:30 ವರ್ಷ ಗಂಡ:ನಿತ್ಯಾನಂದ ನಾಯ್ಕ ವಾಸ:ಪದಡ್ಕ ಮನೆ ಪಡುವನ್ನೂರು ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಕೃಷ್ಣವೇಣಿ ರವರ ಗಂಡ ನಿತ್ಯಾನಂದ ನಾಯ್ಕರವರು ಉದಯ ಮೇಸ್ತ್ರಿಯವರೊಂದಿಗೆ ಸಾರಣೆ ಮಾಡುವ ಹೆಲ್ಪರ್‌ ಕೆಲಸ ಮಾಡಿಕೊಂಡಿದ್ದು, ದಿನಾಂಕ 18-02-2021 ರಂದು ನಿತ್ಯಾನಂದ ನಾಯ್ಕರವರು ಬೆಳಿಗ್ಗೆ 8-00 ಗಂಟೆಗೆ ಉದಯ ಮೇಸ್ತ್ರೀರವರ ಜೊತೆಯಲ್ಲಿ ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಪೇರಾಲು ಎಂಬಲ್ಲಿ ಪ್ರಭಾಕರ ರೈ ರವರ ಬಾಬ್ತು  ನಿರ್ಮಾಣ ಹಂತದಲ್ಲಿರುವ ಮನೆಯ ಕೆಲಸಕ್ಕೆ ಹೋಗಿದ್ದು, ಪಿರ್ಯಾದಿದಾರರು ಮನೆಯಲ್ಲಿರುವ ಸಮಯ ಮದ್ಯಾಹ್ನ ಸುಮಾರು 12-30 ಗಂಟೆಗೆ ಅವರೊಂದಿಗೆ ಕೆಲಸ ಮಾಡುವ ಇನ್ನೋರ್ವ ಕೆಲಸದಾಳು ರವಿರಾಜ ಎಂಬವರು ಫೋನ್‌ ಮಾಡಿ ಗಂಡ ನಿತ್ಯಾನಂದ ನಾಯ್ಕರವರು ಪ್ರಭಾಕರ ರೈರವರ ಬಾಬ್ತು ನಿರ್ಮಾಣ ಹಂತದ ಮನೆಯ ಹೊರ ಭಾಗದ ಸನ್‌ಶೇಡ್‌ಗೆ ಹತ್ತಿ ಗಾರೆಯನ್ನು ಕೊಡುತ್ತಿರುವಾಗ ಸಮಯ ಸುಮಾರು 11-00 ಗಂಟೆಗೆ ನಿರ್ಮಾಣ ಹಂತದ ಮನೆಯ ಸನ್‌ಶೇಡ್‌ನಿಂದ ಕೆಳಗೆ ಬಿದ್ದು ಎರಡೂ ಕಾಲುಗಳಿಗೆ ಮತ್ತು ಬೆನ್ನಿಗೆ ಗುದ್ದಿದ ಗಾಯವಾಗಿದ್ದು, ಪುತ್ತೂರು ಸಿಟಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆ ಬಗ್ಗೆ ತಮ್ಮನಾದ ವಿನೋದ್‌ನ ಜೊತೆಯಲ್ಲಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಹೋಗಿ  ಚಿಕಿತ್ಸೆಯಲ್ಲಿದ್ದ ಗಂಡನನ್ನು ನೋಡಲಾಗಿ ಅವರ ಎಡ ತೊಡೆಗೆ ಮತ್ತು ತರಚು ಗಾಯ, ಬಲ ಕೋಲು ಕಾಲು ಮತ್ತು ಎಡ ಕೋಲು ಕಾಲಿಗೆ ತರಚು ಗಾಯ, ಬಲ ಕಣ್ಣಿನ ಬಳಿ ಕಣಿದ ಗಾಯ ಹಾಗೂ ಬೆನ್ನಿಗೆ ಗಂಭೀರ ರೀತಿಯ ಗುದ್ದಿದ ನೋವಾಗಿದ್ದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಬಳಿಕ ನಿತ್ಯಾನಂದರವರನ್ನು ವೆನ್ಲಾಕ್‌ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ತಮ್ಮ ವಿನೋದ್‌ರವರೊಂದಿಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಈ ಘಟನೆಗೆ ನನ್ನ ಗಂಡ ನಿತ್ಯಾನಂದ ನಾಯ್ಕರವರನ್ನು ಮೇಸ್ತ್ರಿ ಉದಯರವರು ಪ್ರಭಾಕರ ರೈರವರ ಬಾಬ್ತು ನಿರ್ಮಾಣ ಹಂತದಲ್ಲಿರುವ ಮನೆಯ ಸಾರಣೆ ಮಾಡುವ ಹೆಲ್ಪರ್‌ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಸದ್ರಿ ಮನೆಯ ಸನ್‌ಶೇಡ್‌ಗೆ ಹತ್ತಿ ಗಾರೆಯನ್ನು ಕೊಡುತ್ತಿರುವ ಸಮಯ ಗಂಡನನ್ನು ಕೆಲಸಕ್ಕೆಂದು ಕರೆದುಕೊಂಡು ಹೋದ ಮೇಸ್ತ್ರೀಯಾದ ಉದಯ ಮತ್ತು ನಿರ್ಮಾಣ ಹಂತದಲ್ಲಿರುವ ಮನೆಯ ಮಾಲಿಕ ಕೆಲಸಗಾರರ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮವನ್ನು ವಹಿಸದೇ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಕಾರಣವಾಗಿದೆ ಎಂಬುದಾಗಿ ನೀಡಿದ ದೂರಿನ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಆ.ಕ್ರ 16/21 ಕಲಂ338  ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಬ್ರಮಣ್ಯ ಪೊಲೀಸ್ ಠಾಣೆ : ದಿನಾಂಕ: 19.02.2021  ರಂದು  ಸುಬ್ರಹ್ಮಣ್ಯ  ಪೊಲೀಸ್ ಠಾಣೆ ಅ.ಕ್ರ ನಂಬ್ರ : 07-2021 ,ಕಲಂ: IPC 1860 (U/s-323,504,506) & Scheduled Castes and Scheduled Tribes (Prevention of Atrocities) Amendment Ordinance 2014 (U/s-3(1) ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ವೇಣೂರು ಪೊಲೀಸ್ ಠಾಣೆ : ದಿನಾಂಕ 19-02-2021ರಂದು ಬೆಳ್ತಂಗಡಿ ತಾಲೂಕು ಪೆರಾಡಿ  ಗ್ರಾಮದ ಪೆರಾಡಿ ವೈನ್ ಶಾಪ್ ಬಳಿಯ  ಸರಕಾರಿ ಗುಡ್ಡ ಜಾಗದಲ್ಲಿ ಕೆಲವು ಜನರು ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ವೇಣೂರು ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು 15-15 ಗಂಟೆಗೆ ತಲುಪಿ ದಾಳಿ ನಡೆಸಿದಾಗ ಅಲ್ಲಿ ಸೇರಿದವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿ ಪರಾರಿಯಾಗುತ್ತಿದ್ದಂತೆಯೇ ಅವರ ಪೈಕಿ 04 ಜನರನ್ನು ಹಿಡಿದುಕೊಂಡಿದ್ದು ಅವರ ಬಳಿ ಜೂಜಾಟದಲ್ಲಿ ತೊಡಗಿಸಿದ  100 ರೂ ಮುಖಬೆಲೆಯ 3ನೋಟುಗಳು, 50 ರೂ ಮುಖಬೆಲೆಯ 2 ನೋಟುಗಳು, 20 ರೂ ಮುಖಬೆಲೆಯ 4 ನೋಟುಗಳು, 10 ರೂ ಮುಖಬೆಲೆಯ 6 ನೋಟುಗಳಿದ್ದು ಹೀಗೆ ಒಟ್ಟು ರೂ. 540/= ನಗದನ್ನು ಹಾಗೂ ಸುಮಾರು 2 ಅಡಿ ಉದ್ದ ಮತ್ತು 2 ಅಡಿ ಅಗಲದ ಬಿಳಿ ಬಣ್ಣದ ಪ್ಲಾಸ್ಟಿಕ್ ಗೋಣಿ ಚೀಲ ಒಂದನ್ನು ಮತ್ತು 52 ಇಸ್ಪೀಟ್ ಎಲೆಗಳನ್ನು ಸ್ವಾಧೀನಪಡಿಸಿಕೊಂಡು, ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 11-2021 ಕಲಂ 87 KP Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗುರುಪ್ರಸಾದ್ ಪ್ರಾಯ 22 ವರ್ಷ, ತಂದೆ:ಉಮ್ಮಣ್ಣ ಗೌಡ, ವಾಸ:ಪಜ್ಜಡ್ಕ ಮನೆ, ಆಲಂಕಾರು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:18.02.2021 ರಂದು ಕಡಬ ತಾಲೂಕು, ಆಲಂಕಾರು ಗ್ರಾಮದ ಪಜ್ಜಡ್ಕ ಮನೆ ಎಂಬಲ್ಲಿ ರಾತ್ರಿ 21-00 ಗಂಟೆಗೆ ಪಿರ್ಯಾದಿದಾರರು ಕುಟುಂಬಸ್ಥರೊಂದಿಗೆ ಊಟ ಮಾಡಿ ನಂತರ ಬೇರೆ-ಬೇರೆ ಕೊಣೆಯಲ್ಲಿ ಮಲಗಿದ್ದು, ಎಂದಿನಂತೆ ಬೆಳಿಗ್ಗೆ 6-00 ಗಂಟೆಗೆ ಪಿರ್ಯಾದಿಯ ತಾಯಿಯು  ಎದ್ದು ನೋಡಿದಾಗ ಮನೆಯ ಎದುರು ಬಾಗಿಲು ತೆರೆದಿದ್ದು, ಅದೇ ಕ್ಷಣ ಪಿರ್ಯಾದಿಯ ತಂದೆಯವರು ರಾತ್ರಿ ಮಲಗಿದ್ದ ಕೋಣೆಯಲ್ಲಿ ನೋಡಿದಾಗ ಅವರು ಕಾಣದೇ ಇರುವುದರಿಂದ ಪಿರ್ಯಾದಿಯಲ್ಲಿ ವಿಷಯ ತಿಳಿಸಿದ್ದು ನಂತರ ಪಿರ್ಯಾದಿಯು ತನ್ನ ಚಿಕ್ಕಪ್ಪನಾದ ರಾಮಕೃಷ್ಣ ರವರಿಗೆ ವಿಷಯ ತಿಳಿಸಿ ಅವರೊಂದಿಗೆ ಸೇರಿ ಮನೆಯ ಸುತ್ತ-ಮುತ್ತಲು ಹುಡುಕಾಡಿದಲ್ಲಿ ಮನೆಯ ಎದುರುಗಡೆ ಇರುವ ತೋಟದಲ್ಲಿ ಪಿರ್ಯಾದಿಯ ತಂದೆಯವರು ತೋಟದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 02/2021 ಕಲಂ: 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಠಲ ಆಚಾರ್ಯ (55), ವಾಸ: ಮೋಹಿನಿ ನಿವಾಸ ,ನೀರಲ್ಕೆ ಮನೆ ವೇಣೂರು  ಗ್ರಾಮ ಮತ್ತು ಅಂಚೆ  ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ಮಗಳು ದ್ವಿತೀಯ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸುಮಾರು ಒಂದು  ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿರುವುದಾಗಿದೆ, ಈ ಬಗ್ಗೆ ಚಿಕಿತ್ಸೆ ಕೊಡಿಸಿದ್ದರೂ ಗುಣಮುಖವಾಗದಿದ್ದು ದಿನಾಂಕ 19-02-2021  ರಂದು ಬೆಳಿಗ್ಗೆ 06.00 ಗಂಟೆಯ ಸಮಯಕ್ಕೆ ಮನೆಯಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಇದ್ದವಳನ್ನು, ಕೊಡಲೇ ಮನೆಯವರು ಅವಳನ್ನು ನೇಣುನಿಂದ ಇಳಿಸಿ ಬೆಳ್ತಂಗಡಿ ಸರಾಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 07-2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-02-2021 11:09 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080