ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬೂಬಕ್ಕರ ಎನ್ ಎ ಪ್ರಾಯ :55 ವರ್ಷ ತಂದೆ: ಅಬ್ದುಲ್ ರಹಿಮಾನ್ ವಾಸ: ನೆಕ್ಕರೆ ಮನೆ ಆಲಂಕಾರು ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ:17.02.2023 ರಂದು ಸಮಯ ರಾತ್ರಿ 09.30 ಗಂಟೆಗೆ ಕಡಬ ತಾಲೂಕು ಪೆರಾಬೆ ಗ್ರಾಮದ ಕೋಚಕಟ್ಟೆ ಎಂಬಲ್ಲಿ ರಸ್ತೆಯ ಬದಿಯಲ್ಲಿ  ಫೋನಿನಲ್ಲಿ ಮಾತನಾಡಿಕೊಂಡಿರುವ ಸಮಯ ಕಡಬ ಕಡೆಯಿಂದ  KA-12 K-3336  ನೇ ಮೋಟಾರ ಸೈಕಲ್‌ ಚಲಾಯಿಸಿಕೊಂಡು ಸವಾರನೊಬ್ಬನು ಬರುತ್ತಿರುವಾಗ ಅದೇ ಸಮಯಕ್ಕೆ  ಆಲಂಕಾರು ಕಡೆಯಿಂದ KA-21 EB-2039 ನೇ ಮೋಟಾರ ಸೈಕಲ್ ನಲ್ಲಿ ಆರೋಪಿತನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೀರಾ ಅಜಾಗೂರೂಕತೆ ಮತ್ತು ನಿರ್ಲಕ್ಷ್ಯತನದಿಂದ ಮೋಟಾರ್‌ ಸೈಕಲ್‌ ಚಲಾಯಿಸಿಕೊಂಡು ಬಂದು ಕಡಬ ಕಡೆಯಿಂದ ಬರುತ್ತಿದ್ದ ಮೋಟಾರ್‌ ಸೈಕಲ್ ಸವಾರನಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಎರಡು ಮೋಟಾರ್ ಸೈಕಲ್‌ ಸವಾರರು ಮೋಟಾರ್‌ ಸೈಕಲ್‌ ಸಮೇತ ಡಾಮಾರು ರಸ್ತೆಗೆ ಬಿದ್ದಿದನ್ನು.ಅಲ್ಲಿಯೇ ಇದ್ದ ಪಿರ್ಯಾದುದಾರರು  ನೋಡಿದ್ದು ತಕ್ಷಣ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ಕಡಬ ಕಡೆಯಿಂದ ಬರುತ್ತಿದ್ದ KA-12 K-3336 ನೇ ಮೋಟಾರ್‌ ಸೈಕಲ್‌ ಸವಾರನಾದ  ತಂಗದೊರೆ ಎಂಬಾತನಿಗೆ ತಲೆಗೆ ಹಾಗೂ ಎಡಕಾಲಿಗೆ ಗಾಯವಾಗಿರುತ್ತದೆ ಅಲ್ಲದೆ ಸ್ಮೃತಿ ಕಳೆದುಕೊಂಡಿರುತ್ತಾನೆ. ಹಾಗೂ  ಆಲಂಕಾರು ಕಡೆಯಿಂದ ಬರುತ್ತಿದ್ದ ಮೋಟಾರ್‌ ಸೈಕಲ್‌ ಸವಾರನಾದ ಆರೋಪಿತನಿಗೆ ಎಡಕಾಲು ತೊಡೆಗೆ ಗಾಯವಾಗಿದ್ದು ಹಾಗೂ ಸಹ ಸವಾರನಾದ  ವಿಜಯರಾಜ ಎಂಬಾತನಿಗೆ ತಲೆಗೆ ಮತ್ತು ಎಡಕಾಲು ಮೊಣಗಂಟಿಗೆ ಎಡಕೈ ಕಿರುಬೆರಳಿಗೆ ಗಾಯವಾಗಿರುತ್ತದೆ ಸಹ ಸವಾರನು ಸಹ ಸ್ಮೃತಿ ಕಳೆದುಕೊಂಡಿರುತ್ತಾನೆ ಕೂಡಲೇ ಗಾಯಾಳುಗಳನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಪಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ಕಳುಹಿಸಿಕೊಟ್ಟಿರುತ್ತಾರೆ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 16/2023 ಕಲಂ:279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಧಾಕೃಷ್ಣ ಬಿ,ಅರ್ ಪ್ರಾಯ 41 ವರ್ಷ ತಂದೆ: ದಿ|\ ರುಕ್ಮಯ್ಯ ಪೂಜಾರಿ ವಾಸ: ವಿಜಯನಗರ 2 ನೇ ಸ್ಟೇಜ್ ವಿರಾಜಪೇಟೆ ತಾಲೂಕು ಕೊಡಗು ಎಂಬವರ ದೂರಿನಂತೆ ಪಿರ್ಯಾದಿದಾರರಾದ ರಾಧಾಕೃಷ್ಣ ರವರು ದಿನಾಂಕ 19.02.2023 ರಂದು ತಮ್ಮ ಬಾಬ್ತು ಕೆಎ-41-ಎಂ-9769 ನೇ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ತಾಯಿ ರೇವತಿ, ಅಣ್ಣ ಅನಿಲ್ ಕುಮಾರ್, ಅತ್ತಿಗೆ ರಂಜಿನಿ ಹಾಗೂ ಅಣ್ಣನ ಮಕ್ಕಳಾದ ಅನಿಯಾ ಮತ್ತು ಸೋತ್ರಿಯಾ ಎಂಬವರನ್ನು ಸಹ ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಪುತ್ತೂರಿನಲ್ಲಿ ನಡೆದ ಅವರ ಚಿಕ್ಕಪ್ಪರವರ ಮಗ ಕಿರಣ್‌ರವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳಿ ವಾಪಾಸು ಮಡಿಕೇರಿಗೆ ಹೋಗುತ್ತಿದ್ದ ಸಮಯ ಸುಮಾರು ಮಧ್ಯಾಹ್ನ 2.50 ಗಂಟೆಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಪಾಲಡ್ಕ (ಮಾಣಿ ಮೈಸೂರು ಹೆದ್ದಾರಿಯಲ್ಲಿ) ಎಂಬಲ್ಲಿಗೆ ತಲುಪಿದಾಗ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಕೆಎ-19-ಎಂಜಿ-4548 ನೇ ಕಾರನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಲ್ಯತನದಿಂದ ಒಂದು ಕಾರನ್ನು ಓವರ್ ಟೇಕ್ ಮಾಡಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಎದುರಿನ ಬಲಭಾಗಕ್ಕೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಎರಡೂ ಕಾರುಗಳು ಸಂಪೂರ್ಣ ಜಖಂಗೊಂಡಿದ್ದಲ್ಲದೇ ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಎರಡೂ ಕಾಲುಗಳ ಮಂಡಿಗೆ ಮುಖಕ್ಕೆ ರಕ್ತಗಾಯ ಹಾಗೂ ಎಡಕೈಗೆ ಗುದ್ದಿದ ಗಾಯ, ಪಿರ್ಯಾದಿದಾರರ ತಾಯಿ ರೇವತಿಯವರಿಗೆ ಮುಖಕ್ಕೆ ಕುತ್ತಿಗೆಗೆ ರಕ್ತಗಾಯ, ಅಣ್ಣ ಅನಿಲ್ ಕುಮಾರ್‌ಗೆ ಎಡಕೈಗೆ, ಹಣೆಗೆ ರಕ್ತಗಾಯ ಮತ್ತು ಹೊಟ್ಟೆಗೆ ಗುದ್ದಿದ ಗಾಯ, ಅತ್ತಿಗೆ ರಂಜಿನಿ, ಅಣ್ಣನ ಮಕ್ಕಳಾದ ಅನಿಯಾ ಮತ್ತು ಸೋತ್ರಿಯಾರವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅಲ್ಲಿಎ ಸೇರಿದ ಜನರು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದು, ಪಿರ್ಯಾದಿದಾರರ ರೇವತಿ ರವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಪಘಾತಪಡಿಸಿದ ಕಾರಿನ ಚಾಲಕನ ದೇವಿಪ್ರಸಾದ್ ಹಾಗೂ ಸಹ ಪ್ರಯಾಣಿಕ ಜಯಶ್ರೀ ಎಂದು ತಿಳಿದು ಬಂದಿದ್ದು,  ಅವರಿಗೂ ಗಾಯವಾಗಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 15/2023 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ತಂಗವೇಲು ,ಕೆ (61) ತಂದೆ: ಕರುಪ್ಪಯ್ಯ ವಾಸ: ಕುದ್ಕುಳಿ ಮನೆ, ಆಲೆಟ್ಟಿ ಅಂಚೆ, ಮತ್ತು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 17.02.2023 ರಂದು ಸಮಯ ಸುಮಾರು 20:30 ಗಂಟೆಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ  ನಾಗಪಟ್ಟಣದ ಕಾಲೋನಿಗೆ ಹೋಗುವ ತಿರುವು ರಸ್ತೆ ಮೋರಿಯ ಮೇಲೆ ಕಾರ್ತಿಕ್ ಜೊತೆ ಕುಳಿತುಕೊಂಡಿರುವ ಸಮಯ ಪಿರ್ಯಾದುದಾರರ ತಮ್ಮ ಮೈಲುವಾಹನಂ (55) ಎಂಬವರು ಸುಳ್ಯ ಕಡೆಯಿಂದ ಆಟೋರಿಕ್ಷಾವೊಂದರಲ್ಲಿ ಬಂದು ನಾಗಪಟ್ಟಣ ಜಂಕ್ಷನ್ ಬಳಿ ಇಳಿದು ರಸ್ತೆದಾಟಿ ಪಿರ್ಯಾದುದಾರರ ಕಡೆಗೆ ರಸ್ತೆ ಅಂಚಿಗೆ ಬರುತ್ತಿರುವಾಗ ನಾರ್ಕೋಡು ಕಡೆಯಿಂದ ಸುಳ್ಯ ಕಡೆಗೆ ಕೆಎ 21 ಡಬ್ಲ್ಯೂ  5847 ನೇದರ ಸ್ಕೂಟರ್ ಸವಾರ ವಿಜಯ್ ಕುಮಾರ್ ಎಂಬಾತನು ಸಹ ಸವಾರ ಶಶಿಕುಮಾರ್ ಎಂಬವರನ್ನು ಕುಳ್ಳಿರಿಸಿಕೊಂಡು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರ ತಮ್ಮ ಮೈಲುವಾಹನಂ ಎಂಬಾತನಿಗೆ ಡಿಕ್ಕಿವುಂಟುಮಾಡಿದ ಪರಿಣಾಮ ಮೈಲುವಾಹನಂ ರಸ್ತೆಯ ಮೇಲೆ ಬಿದ್ದು, ಎಡಕಾಲು, ಸೊಂಟ, ಮುಖ, ಕೈಗಳಿಗೆ ರಕ್ತಗಾಯವಾಗಿದ್ದು, ಸ್ಕೂಟರ್ ಸವಾರನಿಗೆ ಯಾವುದೇ ಗಾಯವಾಗಿರದೇ, ಸಹಸವಾರನಾದ ಶಶಿಕುಮಾರ್ ಗೆ ಮುಖಕ್ಕೆ, ತಲೆಗೆ, ಮತ್ತು  ಕೈಗಳಿಗೆ ರಕ್ತಗಾಯವಾಗಿರುತ್ತದೆ. ನಂತರ ಪಿರ್ಯಾದುದಾರರು ಮತ್ತು ಅಲ್ಲೇ ಇದ್ದ ಕಾರ್ತಿಕ್ ರವರು ಗಾಯಾಳುಗಳನ್ನು ಉಪಚರಿಸಿ ಮೈಲುವಾಹನಂ ನನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ದೂರು ನೀಡಿರುವುದಾಗಿ, ಸ್ಕೂಟರ್ ಸಹಸವಾರ ಶಶಿಕುಮಾರ್ ಎಂಬಾತನು ಕೆ,ವಿ,ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್‌    ಠಾಣಾ ಅ,ಕ್ರ   ನಂ: 16/2023 ಕಲಂ: 279,337   IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 ಅಸ್ವಾಭಾವಿಕ ಮರಣ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಕೃಷ್ಣ  ಪ್ರಾಯ 37 ವರ್ಷ, ತಂದೆ: ಗುರುವಪ್ಪ ಪೂಜಾರಿ, ವಾಸ: ಏಣೀರು ಪಳಿಕೆಮನೆ,  ಗುರಿಪಳ್ಳ, ಬರಾಯ ಕನ್ಯಾಡಿ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರು ಧರ್ಮಸ್ಥಳ ಕ್ಷೇತ್ರದಲ್ಲಿ ಕಾವಲು ಕೆಲಸ ಮಾಡಿಕೊಂಡಿದ್ದು  ಈ ದಿನ ದಿನಾಂಕ: 19.02.2023 ರಂದು ಬೆಳಿಗ್ಗೆ ಸುಮಾರು 10.45 ಗಂಟೆಯ ಸಮಯಕ್ಕೆ ಪಿರ್ಯಾದುದಾರರು  ಧರ್ಮಸ್ಥಳ ಕ್ಷೇತ್ರದ ಎದುರುಗಡೆ ಇರುವ ಗಡಿಯಾರ ಗೋಪುರದ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆಯಲ್ಲಿ  ಯಾರೋ ಒಬ್ಬರು ಪಿರ್ಯಾದುದಾರರ  ಬಳಿ ಬಂದು ಯಾರೋ ಒಬ್ಬ ವ್ಯಕ್ತಿ ನೇತ್ರಾವತಿ ಅತಿಥಿ ಗೃಹದ ಹತ್ತಿರ ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿರುವುದಾಗಿ ತಿಳಿಸಿದ ಮೇರೆಗೆ ಈ  ಮಾಹಿತಿಯನ್ನು ತನ್ನ  ಮೇಲ್ವಿಚಾರಕರಾದ ಶೀನಪ್ಪ ರವರಿಗೆ ತಿಳಿಸಿ ಬಳಿಕ ಪಿರ್ಯಾದುದಾರರು ಕೂಡಲೇ ವ್ಯಕ್ತಿ ಬಿದ್ದಿದ್ದಲ್ಲಿಗೆ ತೆರಳಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಒಂದು ಆಟೋರಿಕ್ಷಾದಲ್ಲಿ ಹಾಕಿಕೊಂಡು ಧರ್ಮಸ್ಥಳದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡು ಹೋಗಿ ವೈದ್ಯರಿಗೆ ತೋರಿಸಿದಲ್ಲಿ  ವೈದ್ಯರು ಪರೀಕ್ಷಿಸಿ ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ 15/2023 ಕಲಂ: 174 ಸಿ ಆರ್‌ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-02-2023 10:29 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080