ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦2

ವೇಣೂರು ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮನೋಹರ ಗೌಡ (26) ತಂದೆ -ಮುತ್ತಪ್ಪ ಗೌಡ, ವಾಸ- ಪರಕೊಡಂಗೆ ಮನೆ, ವೇಣೂರು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 19.03.2022 ರಂದು ಬೆಳಿಗ್ಗೆ ಮನೆಯಿಂದ ವೇಣೂರಿಗೆ ಸಿದ್ದಕಟ್ಟೆ-ವೇಣೂರು ಸಾರ್ವಜನಿಕ ರಸ್ತೆಯಲ್ಲಿ ಅವರ ಬಾಬ್ತು  ಬೈಕ್‌ ನಲ್ಲಿ ಬರುತ್ತಾ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಕಾಮೆಟ್ಟು ಎಂಬಲ್ಲಿಗೆ ಬೆಳಿಗ್ಗೆ 8-30 ಗಂಟೆಗೆ ತಲುಪುವಾಗ್ಯೆ ಅವರ  ಎದುರಿನಿಂದ ಅಂದರೆ ವೇಣೂರು ಕಡೆಯಿಂದ KA.21.1700 ನೇ 407 ಗೂಡ್ಸ್‌ ವಾಹನವನ್ನು ಅದರ ಚಾಲಕ  ತಿರುವು ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಒಮ್ಮೇಲೆ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ  ಸ್ವಲ್ಪ ದೂರದಲ್ಲಿ ಅಂದರೆ ಸಿದ್ದಕಟ್ಟೆ ಕಡೆಯಿಂದ ಬರುತ್ತಿದ್ದ  KA.19.ES.4519   ಬೈಕ್‌ ಗೆ ರಭಸವಾಗಿ ಡಿಕ್ಕಿ ಹೊಡೆದಿದ್ದು ಪರಿಣಾಮ ವಾಹನಗಳು ಜಖಂಗೊಂಡಿದ್ದು, ಅಪಘಾತಕ್ಕೊಳಪಟ್ಟ ಬೈಕ್‌ ಸವಾರ ಪ್ರದೀಪ್ ಭಟ್ ರಿಗೆ  ಬಲಕಾಲಿನಲ್ಲಿ ಎರಡು ಕಡೆ ಮುರಿತದ ಗಾಯವಾಗಿದ್ದು, ಹಣೆಗೆ ರಕ್ತ ಗಾಯವಾಗಿದ್ದು  ಅವರನ್ನು ಅಂಬುಲೆನ್ಸ್‌ ಮೂಲಕ  ಮಂಗಳೂರು ಎ.ಜೆ. ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ.   ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 19-2022 ಕಲಂ 279,338 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಲೋಕೇಶ್ ಪ್ರಾಯ 30 ವರ್ಷ ತಂದೆ:ಪದ್ಮಯ್ಯ ಗೌಡ ವಾಸ:ಕಟ್ಟೆಮಜಲು ಮನೆ ಕೌಕ್ರಾಡಿ ಗ್ರಾಮ ನೆಲ್ಯಾಡಿ ಅಂಚೆ ಕಡಬ ತಾಲೂಕು ಎಂಬವರ ದೂರಿನಂತೆ ತನ್ನ ಮನೆಯಾದ ಕಟ್ಟೆಮಜಲು ಎಂಬಲ್ಲಿಗೆ ಜಯರಾಮ ಎಂಬವರ ಬಾಭ್ತು ಅಟೋ ರಿಕ್ಷಾ ನಂಬ್ರ ಕೆಎ 21 C-2062 ನೇದರಲ್ಲಿ ಸಂಜೆ 4.30 ಗಂಟೆಗೆ ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿಯ ಸ್ಟಾರ್ ಎಂಟರ್ ಪ್ರೈಸಸ್ ಎಲೆಕ್ಟ್ರಿಕಲ್ ಅಂಗಡಿಯ ಮುಂಭಾಗದಲ್ಲಿ ನಿಧಾನವಾಗಿ ಹೋಗುತ್ತಿರುವಾಗ ಅಲ್ಲೇ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಜೆ.ಸಿ.ಬಿ ನಂಬ್ರ ಕೆಎ 13 M-5670 ನೇದರ ಚಾಲಕನು ಯಾವುದೇ ಮುನ್ಸೂಚನೆ ಇಲ್ಲದೇ ತಕ್ಷಣ ಆತನ ಜೆ.ಸಿ.ಬಿಯನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಷ್ಟ್ರೀಯ ಹೆದ್ದಾರಿಯ ರಸ್ತೆಗೆ ಚಲಾಯಿಸಿದಾಗ ಪಿರ್ಯಾದಿದಾರರು ಹೋಗುತ್ತಿದ್ದ ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾ ಪಲ್ಟಿಯಾಗಿ ರಿಕ್ಷಾದ ಅಡಿಯಲ್ಲಿ ಸಿಲುಕಿ ಪಿರ್ಯಾದಿದಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಟೋ ರಿಕ್ಷಾ ಚಾಲಕರಿಗೆ ತಲೆಗೆ ಹೆಚ್ಚಿನ ಗಾಯಗಳಾಗಿರುತ್ತದೆ. ಅಟೋ ರಿಕ್ಷಾ ಚಾಲಕರನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿದ್ದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಹೊರರೋಗಿಯಾಗಿ ಚಿಕಿತ್ಸೆ ನೀಡಿ ಅಟೋ ರಿಕ್ಷಾ ಚಾಲಕರನ್ನು ಪರಿಕ್ಷೀಸಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅದರಂತೆ  ಅಟೋ ರಿಕ್ಷಾ ಚಾಲಕರನ್ನು ಒಂದು ಅಂಬ್ಯುಲೆನ್ಸ್‌ ನಲ್ಲಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುತ್ತಾರೆ.  ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 40/2022 ಕಲಂ:279 337 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-03-2022 12:09 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080