ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ. ಜಯಂತಿ ಪ್ರಾಯ: 48 ವರ್ಷ, ಗಂಡ:ನಾರಾಯಣ ನಾಯ್ಕ್ , ವಾಸ: ಪಾರ್ವತಿ ನಿಲಯ ಮೊಟ್ಟೆತ್ತಡ್ಕ, ಕೆಮ್ಮೀಂಜೆ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಶ್ರೀಮತಿ. ಜಯಂತಿ ಪ್ರಾಯ: 48 ವರ್ಷ, ಗಂಡ:ನಾರಾಯಣ ನಾಯ್ಕ್ , ವಾಸ: ಪಾರ್ವತಿ ನಿಲಯ ಮೊಟ್ಟೆತ್ತಡ್ಕ, ಕೆಮ್ಮೀಂಜೆ ಗ್ರಾಮ, ಪುತ್ತೂರು ತಾಲೂಕುರವರು ದಿನಾಂಕ 19.04.2022 ರಂದು  ತನ್ನ  ಗಂಡ ನಾರಾಯಣ ನಾಯ್ಕ್ ರವರು ಸವಾರಿ ಮಾಡಿಕೊಂಡಿದ್ದ  ಕೆಎ21ಎಸ್ 1483 ನೇ ಸ್ಕೂಟರ್ ನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಸಂಪ್ಯ-ಸಂಪ್ಯದಮೂಲೆ ರಸ್ತೆಯಲ್ಲಿ ಸಂಪ್ಯ ಕಡೆಯಿಂದ ಸಂಪ್ಯದಮೂಲೆ ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 09:00 ಗಂಟೆಗೆ ಪುತ್ತೂರು ತಾಲೂಕು ಕುರಿಯ ಗ್ರಾಮದ ಸಂಪ್ಯದಮೂಲೆ ಎಂಬಲ್ಲಿಗೆ ತಲುಪಿದಾಗ ಸದ್ರಿಯವರ ಗಂಡ ನಾರಾಯಣ ನಾಯ್ಕರು ಸದ್ರಿ   ಸ್ಕೂಟರನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿದ ಪರಿಣಾಮ ಸ್ಕೂಟರ್ ಸ್ಕಿಡ್ಡಾಗಿ ಫಿರ್ಯಾದಿದಾರರು ಸ್ಕೂಟರಿನಿಂದ ರಸ್ತೆಗೆ ಎಸೆಯಲ್ಪಟ್ಟಿರುತ್ತಾರೆ, ಈ ಅಪಘಾತದಿಂದಾಗಿ  ಫಿರ್ಯಾದಿದಾರರ ಬಲ ಕಾಲಿನ ಮೊಣ ಗಂಟಿಗೆ ಗುದ್ದಿದ ರೀತಿಯ  ಗಾಯವಾಗಿದ್ದು, ಬಲ ಕೈಯ ಅಲ್ಲಲ್ಲಿ , ತರಚಿದ ರೀತಿಯ  ಗಾಯವಾಗಿದ್ದು,  ಬಳಿಕ ಕುದ್ಕುಳಿಯ ನಾರಾಯಣ ನಾಯ್ಕ ಮತ್ತು ಫಿರ್ಯಾದುದಾರರ ಗಂಡ ಸೇರಿಕೊಂಡು ಫಿರ್ಯಾದುದಾರರನ್ನು  ಚಿಕಿತ್ಸೆಯ ಬಗ್ಗೆ ಪುತ್ತೂರಿನ ಆದರ್ಶ  ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಫಿರ್ಯಾದುದಾರರನ್ನು  ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 51/2022  ಕಲo: 279, 337   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

 • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಮ್ಜಿನಾ ಪ್ರಾಯ 26 ವರ್ಷ ಗಂಡ: ಇಮ್ತಿಯಾಜ್ ವಾಸ: ರಿಚ್ ಮಂಡ್ ರಿವರ್ ಪ್ರಂಟ್ ಪ್ಲಾಟ್ ಬೋಳಾರ ಜಿಪ್ಪು ಮಂಗಳೂರು ಎಂಬವರ ದೂರಿನಂತೆ ದಿನಾಂಕ 19.04.2022 ರಂದು ಗಂಡ ಹಾಗೂ ಮಕ್ಕಳೊಂದಿಗೆ ತವರು ಮನೆಯಾದ ಬಂಟ್ವಾಳದ ಲೊರೊಟ್ಟೊ ಪದವಿನಲ್ಲಿರುವ ತಂದೆ-ತಾಯಿಯ ಮನೆಗೆ ಸ್ವಿಫ್ಟ್ ಕಾರು  ಕೆಎ 14 ಝಡ್ 8725 ರಲ್ಲಿ  ಮಂಗಳೂರಿನಿಂದ ಬರುವಾಗ  ಸಂಜೆ 6.30 ಗಂಟೆಗೆ ಬಿ ಮೂಡ ಗ್ರಾಮದ ಬಿ ಸಿ ರೋಡಿನ ಗಣೇಶ ಮೆಡಿಕಲ್ ಬಳಿ ತಲುಪಿದಾಗ ಓರ್ವ ಮೋಟಾರ ಸೈಕಲ್ ಸವಾರ ಪಿರ್ಯಾಧಿದಾರರ ಕಾರಿನ ಮುಂದೆ ಅವನ ಮೋಟಾರ ಸೈಕಲ್ ನ್ನು ನಿಲ್ಲಿಸಿ, ನಮ್ಮ ಕಾರನ್ನು ತಡೆದು ಏಕಾಏಕಿ ಸದ್ರಿ ಸವಾರನು ಮೋಟಾರ ಸೈಕಲ್ ನಿಂದ ಇಳಿದು ಹೆಲ್ಮೆಟನ್ನು ಕೈಯಲ್ಲಿ ಹಿಡಿದುಕೊಂಡು ಬಂದು ನಮ್ಮ ಕಾರಿನ ಬಲಬದಿ ಹಿಂಬದಿಯ ಕಿಟಕಿಯ ಗಾಜಿಗೆ ಬಲವಾಗಿ ಹೊಡೆದು ಜಖಂ ಮಾಡಿ ಅವಾಚ್ಯ ಶಬ್ದಗಳಿಂದ ಪಿರ್ಯಾಧಿದಾರರ ಗಂಡನಿಗೆ ಬೈದಿರುವುದಾಗಿದೆ. ಆಗ ಪಿರ್ಯಾಧಿದಾರರ ಗಂಡ ಹಾಗೂ ಮಕ್ಕಳಿಬ್ಬರು ಕಾರಿನಿಂದ ಇಳಿದು ಸದ್ರಿ ಮೋಟಾರ ಸೈಕಲ್ ಸವಾರನನ್ನು ವಿಚಾರಿಸಲು ಮುಂದಾದಾಗ ಮೋಟಾರ ಸೈಕಲ್ ಸವಾರ ಹೆಲ್ಮೆಟ್ ನಿಂದ ಕಾರಿಗೆ ಹೊಡೆಯಲು ಮುಂದಾದಾಗ  ಪಿರ್ಯಾಧಿದಾರರ ಗಂಡನು ತಡೆಯಲು ಹೋದಾಗ ಉರುಡಾಟ ನಡೆದಿರುತ್ತದೆ. ಆಗ ಪಿರ್ಯಾಧಿದಾರರು ತಡೆಯಲು ಹೋದಾಗ ಮೋಟಾರ ಸೈಕಲ್ ಸವಾರನ ಕೈಯಲ್ಲಿದ್ದ ಹೆಲ್ಮೆಟ್  ಉರುಡಾಟದ ವೇಳೆ ಪಿರ್ಯಾಧಿದಾರರ  ಹಿರಿಯ ಮಗಳ ಬಲಕೆನ್ನೆಗೂ ಹಾಗೂ ಸಣ್ಣ ಮಗಳ ಎಡಕೆನ್ನೆಗೆ ಹಾಗೂ ಮುಖಕ್ಕೆ ತಾಗಿ ನೋವಾಗಿರುತ್ತದೆ, ಹಾಗೂ ಪಿರ್ಯಾಧಿದಾರರಿಗೂ ಬಲಕೈಗೆ ನೋವು ಹಾಗೂ ತೆರಚಿದ ಗಾಯಗಳಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 40/2022  ಕಲಂ: 341, 427, 323. 504 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲಕ್ಷ್ಮೀ ನಾರಾಯಣ ಪ್ರಾಯ 54 ವರ್ಷ ತಂದೆ: ಮೋನಪ್ಪ ಮೂಲ್ಯ ವಾಸ; 6-108 ಜಕ್ರಿಬೆಟ್ಟು ಮನೆ ಬಿ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 19.04.2022 ರಂದು ಕೆಎ 19 ಇಎ 4401 ನೇದರ ಸ್ನೇಹಿತನ ಮೋಟಾರ ಸೈಕಲ್ನಲ್ಲಿ  ಮಂಗಳೂರಿನಿಂದ ಬಿಸಿ ರೋಡಿಗೆ ಬರುವಾಗ  ತುಂಬೆ ಹತ್ತಿರ ಪಿರ್ಯಾಧಿದಾರರ ಹಿಂದಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರಿನ ಚಾಲಕ ಅತೀ ವೇಗವಾಗಿ ಅಡ್ಡಾದಿಡ್ಡಿಯಾಗಿ  ಪಿರ್ಯಾಧಿದಾರರ ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ಚಲಾಯಿಸಿಕೊಂಡು ಬಿ ಸಿ ರೋಡಿಗೆ ಕಡೆಗೆ ಬಂದಿರುವುದಾಗಿದೆ. ಆಗ ಪಿರ್ಯಾಧಿದಾರರು ಕಾರಿನ ಹಿಂದೆ ಮೋಟಾರ ಸೈಕಲ್ ನ್ನು ಚಲಾಯಿಸಿಕೊಂಡು ಬರುತ್ತಾ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಸದ್ರಿ ಸ್ವಿಫ್ಟ್ ಕಾರು ಸರದಿಯಲ್ಲಿ ನಿಂತಿದನ್ನು ನೋಡಿ ಪಿರ್ಯಾಧಿದಾರರು ಕಾರಿನ ಚಾಲಕನಲ್ಲಿ ಯಾಕೆ ಅತೀ ವೇಗವಾಗಿ ಹೋಗುತ್ತಿದ್ದಿಯಾ ಎಂದು ಕೈಸನ್ನೆ ಮಾಡಿದೆನು, ಆಗ ಕಾರಿನ ಚಾಲಕನು ಪಿರ್ಯಾಧಿದಾರರನ್ನು ದಿಟ್ಟಿಸಿ ನೋಡಿ ಅಲ್ಲಿಂದ ಬಿ ಸಿ ರೋಡ ಕಡೆಗೆ ಬಂದಿರುತ್ತಾನೆ. ಪಿರ್ಯಾಧಿದಾರರು ಮೋಟಾರ ಸೈಕಲ್ ನಲ್ಲಿ ಬಿ ಸಿ ರೋಡ ಕಡೆಗೆ ಬರುವಾಗ  ಸಂಜೆ 6.40 ಗಂಟೆಗೆ ಬಿ ಮೂಡ ಗ್ರಾಮದ ಬಿ ಸಿ ರೋಡಿನ ಗಣೇಶ ಮೆಡಿಕಲ್ ಬಳಿ ತಲುಪಿದಾಗ ಸ್ವಿಫ್ಟ್ ಕಾರನ್ನು ಚಲಾಯಿಸಿಕೊಂಡ ಬಂದ ಚಾಲಕನು ಕಾರನ್ನು ರಸ್ತೆ ನಡುವಿನಲ್ಲಿ ನಿಲ್ಲಿಸಿ ಪಿರ್ಯಾಧಿದಾರರನ್ನು ನೋಡಿದ ಕೊಡಲೇ ಕಾರಿನ ಚಾಲಕ ಮತ್ತು ಇಬ್ಬರು ಗಂಡಸರು ಹಾಗೂ ಬುರ್ಖಾ ಹಾಕಿದ ಹೆಂಗಸು ಸೇರಿಕೊಂಡು ಪಿರ್ಯಾಧಿದಾರರನ್ನು ರಸ್ತೆಯಲ್ಲಿ ತೆಡೆದು ಏಕಾಏಕಿ ಮೇಲೆ ಮುಗಿಬಿದ್ದು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು ಕೈಯಿಂದ ಹೊಡೆಯುತ್ತಾ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು ಹಾಗೂ ಕಲ್ಲು ಸೋಡ ಬಾಟ್ಲಿಗಳನ್ನು ತಂದು ಹಲ್ಲೆ ಮಾಡಲು ಮುಂದಾದರು  ಅಷ್ಟರಲ್ಲಿ ಸಾರ್ವಜನಿಕರು ಸೇರಿ ರಕ್ಷಣೆ ಮಾಡಿರುತ್ತಾರೆ. ಹಲ್ಲೆಯಿಂದಾಗಿ ಪಿರ್ಯಾಧಿದಾರರ ಬಲಕೈಯ ಮಧ್ಯದ ಬೆರಳಿಗೆ ತರಚಿದ ಗಾಯ ಹಾಗೂ ತಲೆ, ಸೊಂಟ, ಕೈಕಾಲು ಗಳಿಗೆ ಗುದ್ದಿದ ನೋವುಗಳಾಗಿದ್ದು. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 41/2022  ಕಲಂ: 341,  323. 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ದ.ಕ ಮಹಿಳಾ ಪೊಲೀಸ್ ಠಾಣೆ : ದಿನಾಂಕ 17-04-2022  ರಂದು ದ.ಕ ಮಹಿಳಾ ಪೊಲೀಸ್‌ ಠಾಣೆ. ಅ.ಕ್ರ 19/2022 ಕಲಂ:   498(A), 323,324,504,506,307,342,R/W 34  IPC  & ಕಲಂ 4  DP Act  1961ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಜ್ವಲ್‌ ಪಿ ಪ್ರಾಯ 26 ತಂದೆ:ಜನಾರ್ಧನ ಮೂಲ್ಯ ಪಿ ವಾಸ:ಸೂರಿಕುಮೇರು,ಪಡ್ಪುಮನೆ ಮಾಣಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ತಂದೆ ಜನಾರ್ಧನ ಮೂಲ್ಯ (54) ರವರು 30 ವರ್ಷಗಳಿಂದ ಕೆಎಸ್‌ಆರ್‌ಟಿಸಿ ನಿರ್ವಾಹಕ ಕೆಲಸ ಮಾಡಿ ಸುಮಾರು 1.5 ತಿಂಗಳ ಹಿಂದೆ ಭಡ್ತಿ ಹೊಂದಿ ಮಂಗಳೂರು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಟಿಸಿಯಾಗಿ ಕೆಲಸ ಮಾಡಿಕೊಂಡಿದ್ದರು ದಿನಾಂಕ:17-04-2022 ರಂದು ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದವರು ದಿನಾಂಕ:18-04-2022 ರಂದು ಕೆಲಸಕ್ಕೆ ಹೋಗದೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಪಡ್ಪು ಎಂಬಲ್ಲಿರುವ ಮನೆಯಲ್ಲಿದ್ದವರು ಮದ್ಯಾಹ್ನ ಸುಮಾರು 2.00 ಗಂಟೆಯ ಸಮಯಕ್ಕೆ ಯಾವುದೋ ವಿಷ ಪದಾರ್ಥ ಸೇವಿಸಿ ಮನೆ ಹತ್ತಿರದ ಬಾವಿಗೆ ಹಾರಿದ್ದು ಅದನ್ನು ಗಮನಿಸಿದ ಪತ್ನಿ ರೇಣುಕಾರವರು ತಂದೆಯ ರಕ್ಷಣೆಗೆ  ಬಾವಿಗೆ ಇಳಿದಿದ್ದು. ಪಿರ್ಯಾಧಿದಾರರು ಮಾಹಿತಿ ತಿಳಿದು ಬಂದು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ತನ್ನ ತಂದೆ-ತಾಯಿಯವರು ನೀರಿನಲ್ಲಿ ಮುಳಗದಂತೆ ನೋಡಿಕೊಂಡಿದ್ದು. ನಂತರ ನೆರೆ ಮನೆಯ ಸಂಬಂಧಿಕರು ರಕ್ಷಿಸಿ ಪಾದರ್‌ ಮುಲ್ಲರ್‌ ಆಸ್ಪತ್ರೆ ತುಂಬೆಗೆ ಚಿಕಿತ್ಸೆಗೆ ದಾಖಲಿಸಿದ್ದು. ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆಎಂಸಿ ಅತ್ತಾವರ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿದ್ದವರು ಪಿರ್ಯಾಧಿದಾರರ ತಂದೆ ಜನಾರ್ಧನ ಮೂಲ್ಯ ರವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:19-04-2022 ರಂದು ಬೆಳಿಗ್ಗೆ 05.10 ಗಂಟೆಗೆ ಮೃತಪಟ್ಟಿರುತ್ತಾರೆ. ಪಿರ್ಯಾಧಿದಾರರ ತಾಯಿ ರೇಣುಕಾರವರು ಬಾವಿಗೆ ಇಳಿದಾಗ ಬಲ ಕೈಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 11/2022  ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸುಂದರಿ ಪ್ರಾಯ:58 ವರ್ಷ ಗಂಡ: ಬಾಬು ಮಲೆಕುಡಿಯಾ ವಾಸ; ಹೇರಾಳ ಮನೆ ನೆರಿಯಾ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರ  ಗಂಡ: ಬಾಬು ಮಲೆಕುಡಿಯಾ (64) ಎಂಬವರು  ಅಮಲು ಪದಾರ್ಥ ಸೇವಿಸುವ  ಚಟವನ್ನು ಹೊಂದಿದ್ದು ದಿನಾಂಕ:18-04-2022 ರಂದು  ಮದ್ಯಾಹ್ನ ಅಣಿಯೂರು ಪೇಟೆಗೆ ಹೋಗಿ ಬರುವಾಗ ಅಮಲು ಪದಾರ್ಥ ಹಿಡಿದುಕೊಂಡು ಬಂದಿದ್ದು ಅದರಲ್ಲಿ ಅರ್ಧ ಕುಡಿದು ಉಳಿದ ಮದ್ಯವನ್ನು ಮನೆಯ ಪಕ್ಕದಲ್ಲಿ  ಇರುವ ಒಂದು ಬಾಕ್ಸ್ ನಲ್ಲಿ ಇಟ್ಟಿದ್ದು ಅದರ ಪಕ್ಕದಲ್ಲಿ ರಬ್ಬರ್ ಶೀಟಗೆ  ಹಾಕುವ  ಆಸಿಡ್  ಕೂಡಾ ಇದ್ದಿದ್ದು ಸಂಜೆ 7.30 ಗಂಟೆಗೆ ಕುಡಿದು ಉಳಿದ ಮಧ್ಯವನ್ನು ಕುಡಿಯಲು ಹೋದವರು ಮದ್ಯಪಾನವೆಂದು ಭಾವಿಸಿ ಪಕ್ಕದಲ್ಲೆ ಇದ್ದ ಆಸಿಡ್ ಕೈತಪ್ಪಿನಿಂದಾಗಿ ಕುಡಿದಿರುತ್ತಾನೆ ಎಂದು  ಪಿರ್ಯಾದುದಾರರಲ್ಲಿ ಗಂಡ ಬಾಬು ಮಲೆಕುಡಿಯಾ ರವರು  ತಿಳಿಸಿದಾಗ ಪಿರ್ಯಾದುದಾರರು ಕೂಡಲೇ ಮಕ್ಕಳಲ್ಲಿ ಹಾಗೂ ಸೊಸೆಯಲ್ಲಿ ಈ ವಿಷಯವನ್ನು  ತಿಳಿಸಿ ಆಸಿಡ್ ಸೇವಿಸಿ ಬೊಬ್ಬೆಹೊಡೆಯುತ್ತಿದ್ದ ಗಂಡ ಬಾಬು ರವರನ್ನು ಉಪಚರಿಸಿ ಖಾಸಗಿ ವಾಹನವೊಂದಲ್ಲಿ ಚಿಕಿತ್ಸೆಯ ಬಗ್ಗೆ ಉಜಿರೆ ಎಸ್ ಡಿ ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್  ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿರುತ್ತಾರೆ. ಚಿಕಿತ್ಸೆಯಲ್ಲಿ ಇದ್ದವರು  ದಿನಾಂಕ:19-04-2022 ರಂದು  ರಾತ್ರಿ 12.04 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ   ಯು ಡಿ ಆರ್ 24/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-04-2022 10:37 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080