ಅಪಘಾತ ಪ್ರಕರಣ: ೦2
ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ ರಹಿಮಾನ್ (68) ತಂದೆ: ಕೆ,ಎಂ ಕುಂಞ ಆಹಮ್ಮದ್ ವಾಸ: ಕೊಡುಂಗೊಣಿ ಮನೆ, ತಿಂಗಳಾಡಿ ಅಂಚೆ, ಕೆದಂಬಾಡಿ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 19.06.2022 ರಂದು ತಮ್ಮ ಬಾಬ್ತು ಕಾರು ನಂಬ್ರ: ಕೆಎ 45 ಎಂ 5206 ನೇದರಲ್ಲಿ ತನ್ನ ಸಹೋದರನ ಮಗಳ ನಿಶ್ಚಿತಾರ್ಥದ ನಿಮಿತ್ತ ಕುಟುಂಬ ಸಮೇತ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕಕ್ಕೆ ಹೋಗುತ್ತಿರುವರೇ ಸಮಯ ಸುಮಾರು 11:00 ಗಂಟೆಗೆ ಸುಳ್ಯ ತಾಲೂಕು ಕನಕಮಜಲು ಗ್ರಾಮದ ಸುಣ್ಣಮೂಲೆ (ಮಾಣಿ- ಮೈಸುರು ಹೆದ್ದಾರಿ) ಎಂಬಲ್ಲಿ ತಪುತ್ತಿದ್ದಂತೆ ಎದುರಿನಿಂದ ಬಂದ ಕಾರು ನಂಬ್ರ: ಕೆಎ19 ಎಂ 8053 ನೇದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿನ ಮುಂಭಾಗ ಎಡಬದಿಗೆ ಡಿಕ್ಕಿಹೊಡೆದ ಪರಿಣಾಮ ಎರಡು ಕಾರುಗಳು ಜಖಂ ಆಗಿದ್ದು,ಪಿರ್ಯಾದುದಾರರ ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿರದೇ, ಆಪಾಧಿತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂರು ಜನರಿಗೆ ಗಾಯವಾಗಿದ್ದವರನ್ನು ಅಲೇ ಇದ್ದ ಸ್ಥಳಿಯರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 72/2022 ಕಲಂ: 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಣೇಶ ಎ ಎಸ್ , ಪ್ರಾಯ: 31 ವರ್ಷ, ತಂದೆ: ಸಂಕಪ್ಪ, ಗುಡ್ಡೆಗದ್ದೆ ಮನೆ, ಸಂಪಾಜೆ ಗ್ರಾಮ, ಮಡಿಕೇರಿ ತಾಲೂಕು ರವರು ದಿನಾಂಕ 19-06-2022 ರಂದು ಮಗು ಯದ್ವಿಗೆ ಅರೋಗ್ಯ ಸರಿ ಇಲ್ಲದ ಕಾರಣ ಚಿಕಿತ್ಸೆ ನೀಡುವ ಸಲುವಾಗಿ ತನ್ನ ಬಾಬ್ತು ಮೋಟಾರು ಸೈಕಲ್ ನಂ KA12L-6469 ನೇಯದ್ದರಲ್ಲಿ ಪತ್ನಿ ಮಗುವಿನ ಜೊತೆ ಸಹ ಸವಾರಳಾಗಿ ಪೆರುವಾಜೆ ಮಾಸ್ತಿಕಟ್ಟೆ ಯಿಂದ ಬೆಳ್ಳಾರೆ ಮಾರ್ಗವಾಗಿ ಪಂಜ ಕಡೆಗೆ ಹೋಗುತ್ತಾ 10-35 ಗಂಟೆಗೆ ಬೆಳ್ಳಾರೆ ಗ್ರಾಮದ ಬೆಳ್ಳಾರೆ ಬಸ್ಸು ತಂಗುದಾಣದ ಬಳಿ ತಲಪಿದಾಗ ಹಿಂದಿನಿಂದ ಮೋಟಾರು ಸೈಕಲ್ ಒಂದನ್ನು ಅದರ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಹಿಂದಿನಿಂದ ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದನು. ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ ಹತೋಟಿ ತಪ್ಪಿ ರಸ್ತೆಯಲ್ಲಿ ಬಿದ್ದು, ಪಿರ್ಯಾದಿದಾರರಿಗೆ ಬಲ ಕಾಲಿಗೆ, ಬಲ ಕೈಗೆ, ಹಾಗೂ ತಲೆಗೆ ತರಚಿದ ಗಾಯ, ಪತ್ನಿ ವೆಂಕಟ ಲಕ್ಷ್ಮಿಗೆ ಬಲ ಕೈ ಹಾಗೂ ಬಲ ಕಾಲಿನಲ್ಲಿ ತರಚಿದ ಗಾಯ, ಮಗು ಯದ್ವಿಗೆ ಬಲ ಬದಿ ಹಣೆಗೆ ಹಾಗೂ ಬಲ ಕೈಗೆ ತರಚಿದ ಗಾಯ ಉಂಟಾಗಿರುತ್ತದೆ. ಅಪಘಾತಪಡಿಸಿದ ಮೋಟಾರು ಸೈಕಲ್ ನಂಬ್ರ KA21S-1555 ಆಗಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ,ಕ್ರ 51/2022 ಕಲಂ 279,337 ಐಪಿಸಿ ಮತ್ತು ಕಲಂ: 134(ಎ)&(ಬಿ) ಐಎಂವಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕೊಲೆ ಯತ್ನ ಪ್ರಕರಣ: ೦2
ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಹಾಸ ಪ್ರಾಯ 27 ವರ್ಷ ತಂದೆ:ಆನಂದ ಬೆಳ್ಚಾಡ ವಾಸ:ಕರಿಂಬಿನಾಡಿ ಮನೆ, ಕನ್ಯಾನ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:19-06-2022 ರಂದು ಸಂಜೆ 5.30 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಸಾಲೆತ್ತೂರು-ಅಗರಿ ನಾಗೇಶರವರ ಮನೆಯ ಅಂಗಳದಲ್ಲಿ ಆರೋಪಿಗಳಾದ ಪ್ರಶಾಂತ, ತೇಜಸ್, ಗೀರಿಶ ,ಗಣೇಶ್, ಶರತ್, ಧನು, ಮುನ್ನಾ, ಚೇತನ, ವಿನಿತ, ದಿನೇಶ್,ಶಶಿಕುಮಾರ ಹಾಗೂ ಇತರ ಇಬ್ಬರು ಅಕ್ರಮಕೂಟ ಸೇರಿಕೊಂಡು ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದು ಪಿರ್ಯಾಧಿದಾರರನ್ನು ಉದ್ದೇಶಿಸಿ ಆಪಾದಿತ ಪ್ರಶಾಂತನು ತುಳು ಭಾಷೆಯಲ್ಲಿ ಬಯ್ಯುತ್ತಾ ಕೊಲೆ ಮಾಡುವ ಉದ್ದೇಶದಿಂದ ಆತನ ಕೈಯಲ್ಲಿದ್ದ ತಲವಾರಿನಿಂದ ಪಿರ್ಯಾಧಿಯ ತಲೆಯ ಭಾಗಕ್ಕೆ ಕಡಿದಿದ್ದು, ಆಗ ಆತನೊಂದಿಗಿದ್ದ ಇತರರು ತುಳು ಭಾಷೆಯಲ್ಲಿ “ಚಂದ್ರಹಾಸನ್ ಕೆರ್” ಎಂಬುದಾಗಿ ತುಳು ಬಾಷೆಯಲ್ಲಿ ಹೇಳಿದಾಗ ಆರೋಪಿ ತೇಜಸ್‌ನು ಪುನಃ ಆತನ ಕೈಯಲ್ಲಿದ್ದ ತಲವಾರಿನಿಂದ ಪಿರ್ಯಾಧಿಯ ತಲೆಯ ಭಾಗಕ್ಕೆ ಕಡೆದುದಲ್ಲದೇ ಗಿರೀಶನು ಆತನ ಕೈಯಲ್ಲಿದ್ದ ಚೂರಿಯಿಂದ ಚುಚ್ಚಿದನು, ಉಳಿದವರೆಲ್ಲರೂ ಸೇರಿಕೊಂಡು ಪಿರ್ಯಾಧಿದಾರರಿಗೆ ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದಿರುತ್ತಾರೆ. ಆ ಸಮಯಕ್ಕೆ ನಾಗೇಶನ ಮನೆಯವರು ಬೊಬ್ಬೆ ಹೊಡೆದು ಪೊಲೀಸ್‌ರಿಗೆ ಪೋನ್ ಮಾಡಿದಾಗ ಆರೋಪಿಗಳೆಲ್ಲರೂ ಪಿರ್ಯಾಧಿಯನ್ನುದ್ದೇಶಿಸಿ ಜೀವ ಬೆದರಿಕೆ ಒಡ್ಡಿ ಆಪಾದಿತರುಗಳು ಬಂದಿದ್ದ ಕಾರು ಹಾಗೂ ಮೋಟಾರು ಸೈಕಲ್‌ಗಳಲ್ಲಿ ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 101/2022 ಕಲಂ: 143,147,148,323,324,307,506 ಜೊತೆಗೆ 149 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಶಾಂತ @ಪಚ್ಚು ಪ್ರಾಯ 30 ವರ್ಷ ತಂದೆ:ಕೃಷ್ಣ ಭಂಡಾರಿ ವಾಸ:ಕೃಷ್ಣಾಪುರ ಮನೆ ,ಸೂರತ್ಕಲ ,ಇಡ್ಯ ಗ್ರಾಮ ಮಂಗಳೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:19-06-2022 ರಂದು ಸಂಜೆ 5.30 ಗಂಟೆಗೆ ತಮ್ಮ ಹುಡುಗರ ಮದ್ಯೆ ಇದ್ದ ವೈಮನಸ್ಸಿನ ಬಗ್ಗೆ ಮಾತನಾಡಲು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ನಾಗೇಶ್‌ರವರ ಮನೆಯ ಬಳಿ ಹೋಗಿ ನಾಗೇಶ್, ಚಂದ್ರಹಾಸ, ದೇವದಾಸರವರೊಂದಿಗೆ ಮಾತನಾಡುತ್ತಿರುವಾಗ ಮಾತಿಗೆ ಮಾತು ಬೆಳೆದು ಆ ಸಮಯ ಪಿರ್ಯಾಧಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ದೇವದಾಸ ಹಿಂದಿನಿಂದ ಬಿಗಿಯಾಗಿ ಹಿಡಿದುಕೊಂಡ ಸಮಯ ನಾಗೇಶನು ಪ್ರಶಾಂತನನ್ನು ಕೊಲೆ ಮಾಡು ಎಂದು ಚಂದ್ರಹಾಸನಿಗೆ ಚಾಕು ಕೊಟ್ಟಿದ್ದು, ಚಂದ್ರಹಾಸನು ಅದೇ ಚಾಕುವಿನಿಂದ ಪಿರ್ಯಾಧಿದಾರರ ಹೊಟ್ಟೆಯ ಭಾಗಕ್ಕೆ ಮತ್ತು ಕುತ್ತಿಗೆಗೆ ಚುಚ್ಚಿರುತ್ತಾನೆ, ಆ ಸಮಯ ಯಾರೋ ಮತ್ತೊಬ್ಬ ಚಾಕುವಿನಿಂದ ಪಿರ್ಯಾಧಿದಾರರ ಬೆನ್ನಿಗೆ ಚುಚ್ಚಿರುತ್ತಾನೆ, ಉಳಿದ ಇಬ್ಬರು ಪಿರ್ಯಾಧಿದಾರರಿಗೆ ಕೈಯಿಂದ ಹೊಡೆದು ದೂಡಿ ಹಾಕಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಜೀವ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಪಿರ್ಯಾಧಿದಾರರನ್ನು ಅಪರಿಚಿತ ವ್ಯಕ್ತಿ ಚಿಕಿತ್ಸೆಯ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷೀಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 102/2022 ಕಲಂ: 143,144, 147,148,323 307,506 ಜೊತೆಗೆ 149 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ
ಜೀವ ಬೆದರಿಕೆ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬೂಚಗೌಡ ಪ್ರಾಯ:52 ವರ್ಷ,ತಂದೆ:ರಾಮಣ್ಣಗೌಡ, ವಾಸ:ಎಲಿಮಾರು ಮನೆ.ಕಳೆಂಜ ಗ್ರಾಮ,ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 18.06.2022 ರಂದು ಸಮಯ ಸುಮಾರು ಸಂಜೆ 5.30 ಗಂಟೆಗೆ ಬೆಳ್ತಂಗಡಿ ತಾಲೂಕು ಕಳಂಜ ಗ್ರಾಮದ ಕಾಯರ್ತ್ತಡ್ಕ ಎಂಬಲ್ಲಿ ಚಾ ಕುಡಿಯಲು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ಆಪಾದಿತನು ತನ್ನ ಬಾಬ್ತು ಜೀಪಿನಲ್ಲಿ ಬಂದು ಜೀಪನ್ನು ನಿಲ್ಲಿಸಿ ಪಿರ್ಯಾದಿದಾರರ ಬಳಿ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಆತನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲು ಬಂದಾಗ ಪಿರ್ಯಾದಿದಾರರು ಕೈಯಿಂದ ತಡೆದಾಗ ಎಡ ಅಂಗೈಯ ಮೇಲ್ಬಾಗಕ್ಕೆ ಗಾಯವುಂಟಾಗಿದ್ದು, ಪಿರ್ಯಾದಿದಾರರು ನೋವಿನಿಂದ ಬೊಬ್ಬೆ ಹೊಡೆದಾಗ ಪಿರ್ಯಾದಿದಾರರ ಪರಿಚಯದ ಜಾರ್ಜ್ ಮತ್ತು ಕಮಲಾಕ್ಷ ರವರು ಬರುವುದನ್ನು ನೋಡಿ ಇವಾಗ ಬದುಕಿದ್ದೀಯಾ, ಮುಂದಕ್ಕೆ ಸಿಕ್ಕರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾನೆ. ಈ ಹಲ್ಲೆಯಿಂದ ಪಿರ್ಯಾದಿದಾರರ ಎಡಕೈಯ ಅಂಗೈಗೆ ನೋವುಂಟಾಗಿದ್ದು, ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ 45/2022 ಕಲಂ: 341, 324,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಧರ ಗೌಡ (54) ತಂದೆ:ದಿ|| ಬೊಮ್ಮಣ್ಣ ಗೌಡ, ವಾಸ: ಶ್ರೀಕೃಪಾ ನಾಗರಾಜ್ ಕಂಪೌಂಡು ಮನೆ ಉಜಿರೆ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ಫಿರ್ಯಾದಿದಾರರ ಮನೆಯ ಹತ್ತಿರದ ನಿವಾಸಿ ಶಂಕರ ಶೆಟ್ಟಿ ರವರ ಮನೆಯ ಬಾವಿಯ ನೀರಿಗೆ ದಿನಾಂಕ:12-06-2022 ರಂದು ರಾತ್ರಿ 23.00 ಗಂಟೆಯಿಂದ ದಿನಾಂಕ:13-06-2022 ರಂದು ಮುಂಜಾನೆ 06-00 ಗಂಟೆಯ ಮಧ್ಯ ಸಮಯದಲ್ಲಿ ಸುಮಾರು 35-45 ವರ್ಷ ಪ್ರಾಯದ ಅಪರಿಚಿತ ಗಂಡಸು ಯಾವುದೋ ಕಾರಣದಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರಬಹುದಾಗಿದೆ ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂ: 26/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.