ಅಭಿಪ್ರಾಯ / ಸಲಹೆಗಳು

ಜೀವ ಬೆದರಿಕೆ ಪ್ರಕರಣ: 2

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಮೇಶ್ ಕೆ (36) ತಂದೆ:  ದಿ| ಅಣ್ಣಿ  ವಾಸ: ಶ್ರೀ ಲಕ್ಷ್ಮೀ ನಿವಾಸ ಗುಜ್ಜೊಟ್ಟು ಮನೆ, ಸಾವ್ಯ   ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 18-07-2022 ರಂದು ರಾತ್ರಿ ಸುಮಾರು 10-30 ಗಂಟೆಗೆ ಫಿರ್ಯಾದಿ ಮನೆಗೆ ಬಂದ ಸಮಯ ಮನೆಯಲ್ಲಿ ವಿದ್ಯುತ್‌ ದೀಪವನ್ನು ಆರಿಸಿದ ವಿಚಾರದಲ್ಲಿ ತನ್ನ ತಾಯಿಯಲ್ಲಿ ಫಿರ್ಯಾದಿಯು ವಿಚಾರಿಸಿದಾಗ ಆರೋಪಿತ ರಾಜೇಶನು ಏಕಾಏಕಿ ಕೋಪಗೊಂಡು ಫಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಸೋಫಾದ ಮೇಲೆ ದೂಡಿ ಹಾಕಿ ಫಿರ್ಯಾದಿಗೆ ಹಲ್ಲೆ ನಡೆಸಿದ್ದು, ಆತನ ಹಿಡಿತದಿಂದ ತಪ್ಪಿಸಿದಾಗ ಎರಡನೇ ಆಪಾದಿತರಾದ ಫಿರ್ಯಾದಿಯ ತಾಯಿ ಕತ್ತಿಯನ್ನು ಹಿಡಿದುಕೊಂಡು ಬಂದು ಕಡಿ ಎಂದು ಹೇಳಿ ರಾಜೇಶನಿಗೆ ನೀಡಿದಾಗ ರಾಜೇಶನು ಕತ್ತಿಯ ಹಿಡಿಯಿಂದ ಫಿರ್ಯಾದಿಯ ಬಾಯಿಗೆ ಬಲವಾಗಿ ಗುದ್ದಿ ಹಲ್ಲೆ ನಡೆಸಿ ಉರುಡಾಟ ಮಾಡಿ ಫಿರ್ಯಾದಿಗೆ ಕಚ್ಚಿ ಗಾಯೊಗೊಳಿಸಿ ಆರೋಪಿತರಿಬ್ಬರು ಸೇರಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿದ್ದು, ಆಪಾದಿತರ ಹಲ್ಲೆಯಿಂದ ಫಿರ್ಯಾದಿಯ ಎರಡು ಹಲ್ಲುಗಳು ತುಂಡಾಗಿದ್ದಲ್ಲದೇ ಎಡ ಕೈಗೆ ಕಚ್ಚಿದ ರಕ್ತ ಗಾಯ ಮತ್ತು ಮೈ ಕೈಗಳಿಗೆ ನೋವು ಗಾಯಗಳಾಗಿ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ:45-2022 ಕಲಂ:504,323,326,506,114ಜೊತೆಗೆ 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ  ಲೀಲಾ  (60),ಗಂಡ:ದಿ| ಅಣ್ಣಿ ವಾಸ: ಶ್ರೀ ಲಕ್ಷ್ಮೀ ನಿವಾಸ ಗುಜ್ಜೊಟ್ಟು ಮನೆ, ಸಾವ್ಯ   ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 18-07-2022 ರಂದು  ರಾತ್ರಿ  ಸುಮಾರು  10:30 ಗಂಟೆಗೆ   ಪಿರ್ಯಾದಿದಾರರು  ತನ್ನ ಮನೆಯಲ್ಲಿ  ಟಿ.ವಿ. ನೋಡುತ್ತಿರುವ ಸಮಯ  ಆಪಾದಿತ ರಮೇಶ ಪಿರ್ಯಾದಿದಾರರನ್ನು  ಉದ್ದೇಶಿಸಿ “ನಿಮಗೆ ಮಾನ ಮರ್ಯಾದೆ ಇಲ್ಲವಾ?, ಈ ಮನೆ ಹಾಗೂ  ಜಮೀನು  ನನ್ನ  ಹೆಸರಿನಲ್ಲಿದೆ. ನೀವು ಮನೆ ಬಿಟ್ಟು  ಹೋಗಬೇಕೆಂದು” ಹೇಳಿ  ಮಾತಿನ ಗಲಾಟೆ ನಡೆದ ಸಮಯ  ಪಿರ್ಯಾದಿದಾರರ  ಮಗ ರಾಜೇಶನು ಬಂದು  ನೀನು ಯಾಕೆ ತಾಯಿಯೊಂದಿಗೆ  ಗಲಾಟೆ ಮಾಡುತ್ತೀಯಾ? ಎಂದು  ಹೇಳಿದಾಗ ಅವರೊಳಗೆ  ಮಾತಿನ  ಗಲಾಟೆಯಾಗಿ  ಉರುಡಾಟ  ನಡೆದು   ರಾಜೇಶನ ಬಲ ಕೈಗೆ  ಕಚ್ಚಿ,  ತಲೆಗೆ ಮರದ ದೊಣ್ಣೆಯಿಂದ  ಹಲ್ಲೆ  ನಡೆಸಿ  ಗಲಾಟೆ  ಬಿಡಿಸಲು  ಬಂದ ಪಿರ್ಯಾದಿದಾರನ್ನು ದೂಡಿ  ಹಾಕಿ ಅವ್ಯಾಚವಾಗಿ ಬೈದು   ನೀವು ಬೇಗ ಮನೆ ಬಿಟ್ಟು  ಹೋಗ ಬೇಕು ಇಲ್ಲದಿದ್ದರೆ  ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ   ಒಡ್ಡಿರುತ್ತಾರೆ. ಆರೋಪಿತನ   ಹಲ್ಲೆಯಿಂದ   ಪಿರ್ಯಾದಿಗೆ ಎದೆಗೆ   ಬಲ ಭುಜಕ್ಕೆ     ಗಾಯ ಮತ್ತು  ರಾಜೇಶ್   ಬಲ ಕೈಗೆ   ಹಾಗೂ  ತಲೆಗೆ ರಕ್ತ ಗಾಯವಾಗಿ ಬೆಳ್ತಂಗಡಿ  ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ:44-2022 ಕಲಂ:504,323, ,324 506, IPC ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಾಡ್ಯಪ್ಪ ಗೌಡ(65)  ತಂದೆ: ಬಾಬು ಗೌಡ  ವಾಸ: ಗುಂಡಿಮಜಲು  ಮನೆ ಬಿಳಿನೆಲೆ  ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು  ತನ್ನ ಪತ್ನಿ ಹೊನ್ನಮ್ಮ ಹಾಗೂ ಮಕ್ಕಳಾದ ಲೊಕೇಶ್‌ ಮೋಹನ್‌ ಹಾಗೂ ಮಗಳು ಲತಾ ರವರೊಂದಿಗೆ ವಾಸವಾಗಿದ್ದು ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ.  ಪಿರ್ಯಾದುದಾರರ ಮಗ ಮೋಹನ್‌  KFD ಸುಬ್ರಹ್ಮಣ್ಯದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಪ್ರತಿದಿನ ಕೆಲಸಕ್ಕೆ ಹೋಗಿ ಮನೆಗೆ ಬರುವುದಾಗಿರುತ್ತದೆ  ದಿನಾಂಕ:18.07.2022 ರಂದು ಮೋಹನ್ ರಾತ್ರಿ ಮನೆಗೆ ಬಂದಿದ್ದು ಈ ದಿನ ದಿನಾಂಕ;19.07.2022 ರಂದು ಬೆಳಗ್ಗೆ 10.00 ಗಂಟೆಗೆ ಎದ್ದಿರುತ್ತಾನೆ.ಪಿರ್ಯಾದುದಾರರು ಎಂದಿನಂತೆ ತೋಟದಲ್ಲಿ ಕೆಲಸಕ್ಕೆ ಹೋಗಿರುತ್ತಾರೆ  ಪಿರ್ಯಾದುದಾರರ ಮಗ ಮೋಹನ್‌ ಬೆಳಗ್ಗೆ ಮನೆಯಿಂದ ಹೊರಗೆ ಬಂದು ನಂತರ ಕಾಣದೆ ಇದ್ದಾಗ ಮನೆಯಲ್ಲಿ ಪಿರ್ಯಾದುದಾರರ ಪತ್ನಿ ಮಗ ಮೋಹನನನ್ನು ಹುಡುಕಾಟ ಮಾಡುವಾಗ ಮೋಹನ್‌ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಯ ಕಬ್ಬಿಣದ ಪಕ್ಕಾಸು ಪೈಪ್‌ಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡಿರುತ್ತಾನೆ ಇದನ್ನು ನೋಡಿದ ಪಿರ್ಯಾದಿ ಪತ್ನಿ ಜೊರಾಗಿ ಬೊಬ್ಬೆ ಹಾಕಿ ಕರೆದಾಗ ಪಿರ್ಯಾದುದಾರರು ಬಂದು ನೋಡಲಾಗಿ ಮಗ ನೇತಾಡುವ ಸ್ಥಿತಿಯಲ್ಲಿ ಕಂಡು ಜೀವಂತ ಇರಬಹುದೆಂದು ಹಗ್ಗವನ್ನು ತುಂಡರಿಸಿ ಕೆಳಗೆ ಮಲಗಿಸಿ ನೋಡಲಾಗಿ ಮೋಹನ್‌ ಮೃತಪಟ್ಟಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 23/2022 ಕಲಂ:174  ಸಿ ಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-07-2022 10:22 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080