ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಅಂಕಿತ್‌ ಎಸ್‌ ಬಂಗೇರ ಪ್ರಾಯ:29 ವರ್ಷ ತಂದೆ:ಸಂಜೀವ ಮೂಲ್ಯ ವಾಸ:ವರಕಬೆ ಮನೆ ಕುವೆಟ್ಟು-ಓಡಿಲ್ನಾಳ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು  ಸಚಿನ್‌ ರವರೊಂದಿಗೆ ಗೋಳಿತ್ತೊಟ್ಟುವಿನಲ್ಲಿರುವ  ವರ್ಗೀಸ್‌ರವರ ರಬ್ಬರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 19-10-2021 ರಂದು ಫಿರ್ಯಾದಿದಾರರು ಸಚಿನ್‌ ರವರ ಬಾಬ್ತು ಕೆಎ 19-ಹೆಚ್‌.ಜಿ-9026ನೇಯದರಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಅಗತ್ಯ ಕೆಲಸದ ನಿಮಿತ್ತ ರಬ್ಬರ್‌ ಫ್ಯಾಕ್ಟರಿಯಿಂದ ಹೊರಟು ಉಪ್ಪಿನಂಗಡಿ-ನೆಲ್ಯಾಡಿ ರಾಷ್ಟೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ಹೋಗುತ್ತಿರುವ ಸಮಯ ಸುಮಾರು 11-00 ಗಂಟೆಗೆ ಪುತ್ತೂರು ತಾಲೂಕು ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿ ಎಂಬಲ್ಲಿಗೆ ತಲುಪಿದಾಗ ನೆಲ್ಯಾಡಿ ಕಡೆಯಿಂದ ಕೆಎ-19-ಎಡಿ-2991ನೇ ಅಶೋಕ ಲೈಲ್ಯಾಡ್‌ ಟೆಂಪೋ ವಾಹನವನ್ನು ಆರೋಪಿ ಚಾಲಕ ಮಹಮ್ಮದ್‌ ಯಾಸೀನ್‌ ರವರು ಅಜಾಗರೂಕತೆ ಮತ್ತು ನಿಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿ ಸಚಿನ್‌ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಢಿಕ್ಕಿಯನ್ನುಂಟು ಮಾಡಿದ ಪರಿಣಾಮ ಫಿರ್ಯಾದಿದಾರರ ಎಡ ಕೆನ್ನೆಗೆ ಎಡ ಕಣ್ಣಿನ ಬಳಿ ರಕ್ತಗಾಯ, ಎರಡೂ ಕಾಲುಗಳಿಗೆ ತರಚಿದ ಗಾಯ, ಹಾಗೂ ಮೈ ಕೈಗೆ ಗುದ್ದಿದ ನೋವಾಗಿದ್ದು, ಸಚಿನ್‌ರವರ ತಲೆಗೆ ತೀವ್ರ ರಕ್ತಗಾಯವಾಗಿದ್ದವರನ್ನು ನವಾಝ್‌ ರವರು ಅಂಬುಲೆನ್ಸ್‌ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಸಚಿನ್‌ ರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಫಿರ್ಯಾದಿದಾರರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  127/2021 ಕಲಂ: 279, 337,304(A)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 ಕಡಬ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಲಿಂಗಪ್ಪ ಗೌಡ ಪ್ರಾಯ 50 ವರ್ಷ ತಂದೆ ; ದಿ. ಮೋನಪ್ಪ ಗೌಡ ವಾಸ ; ಅಲಂಗೂರು ಮನೆ ಕಡಬ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ  ದಿನಾಂಕ 18-102021 ರಂದು ಬೆಳಿಗ್ಗೆ ಪಿರ್ಯಾದುದಾರರು ಮಗಳ ಮದುವೆಯ ಅಮಂತ್ರಣ ಪತ್ರವನ್ನು ವಿತರಣೆ ಮಾಡಲು ಕೊಂಬಾರಿಗೆ ತೆರಳಿ ವಾಪಸ್ಸು  ಸಂಬಂದಿಯಾದ ರಮೇಶ್ ಎಂಬುವರ ಮೋಟಾರ್  ಸೈಕಲ್  KA-21-EA-7780 ನೇದರಲ್ಲಿ ಸಹಸವಾರ ನಾಗಿ ಕುಳಿತುಕೊಂಡು ಮನೆಗೆ ಬರುವರೇ   ಸುಬ್ರಹ್ಮಣ್ಯ – ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಮರ್ಧಾಳ ಮಾರ್ಗವಾಗಿ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಹಳೇ ಸ್ಟೇಷನ್ ಕಲ್ಲುಗುಡ್ಡೆ ಕ್ರಾಸ್ ಹತ್ತಿರ  ಬೆಳಿಗ್ಗೆ 10-30 ಗಂಟೆಗೆ ತಲುಪಿದಾಗ ಪಿರ್ಯಾದುದಾರರ ಎಡಬದಿಯಿಂದ ಡಾಮಾರು ರಸ್ತೆಗೆ ಸೇರುವ  ಮಣ್ಣು ರಸ್ತೆಯಿಂದ  ಒಂದು ಕಾರನ್ನು ಅದರ ಚಾಲಕ  ಡಾಮಾರು ರಸ್ತೆಗೆ ಏಕಾಏಕಿ ಅಡ್ಡವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ  ಡಿಕ್ಕಿ ಹೋಡೆದ ಪರಿಣಾಮ ಪಿರ್ಯಾದುದಾರರು ಹಾಗೂ ಮೋಟಾರ್ ಸೈಕಲ್  ಸವಾರ ರಮೇಶ್ ರವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಯಿಂದ ಚರಂಡಿಗೆ ಎಸೆಯಲ್ಪಟ್ಟಿದ್ದು  ಅಷ್ಟರಲ್ಲಿ ಅಲ್ಲೆ ಇದ್ದ ಸಾರ್ವಜನಿಕರು ಪಿರ್ಯಾದುದಾರರನ್ನು ಉಪಚಾರಿಸಿ ನೋಡಲಾಗಿ ಪಿರ್ಯಾದುದಾರರಿಗೆ ಎಡಮೊಣಗಂಟಿಗೆ  ರಕ್ತಗಾಯ. ಎಡ ಕೈ ಬೆರಳಿಗೆ ತರಚಿದ ಗಾಯ.  ಹಾಗೂ ಎಡ ಕಾಲಿನ ತೊಡೆಗೆ  ಗುದ್ದಿದ ನೋವು ಉಂಟಾಗಿದ್ದು.  ಅಲ್ಲದೇ ಮೋಟಾರ್ ಸೈಕಲ್ ಸವಾರ ರಮೇಶ್ ಎಂಬುವರಿಗೂ ಬಲಕಾಣ್ಣಿನ ಬದಿಗೆ ರಕ್ತ ಗಾಯ ವಾಗಿದ್ದು ಕಾರಿನಲ್ಲಿ ಇರುವ ಪ್ರಯಾಣಿಕರಿಗೂ ಸಣ್ಣ -ಪುಟ್ಟ ಗಾಯಗಳಾಗಿದ್ದು   ಈ ಸಮಯ ಅಲ್ಲೆ ಇದ್ದ ಪಿರ್ಯಾದುದಾರರ ಅಣ್ಣ ಅನಂದ ಗೌಡ ಹಾಗೂ ಪರಿಚಾಯದ ಸೀತರಾಮ ಗೌಡ ಎಂಬುವರ  ಮೂಲಕ ಅಪಘಾತ ಉಂಟು ಮಾಡಿದ ಕಾರು ನಂಬ್ರ KL-14-P-355  ಚಾಲಕ ಮಹಮ್ಮದ್ ಕುಂಞ ಎಂಬುದಾಗಿ ತಿಳಿದಿದ್ದು. ಅಪಘಾತದಲ್ಲಿ ಗಾಯಗೊಂಡವರನ್ನು ಒಂದು ಖಾಸಗಿ ವಾಹನದಲ್ಲಿ ಕಡಬ ಸರಕಾರಿ ಆಸ್ವತ್ರೆ ಗೆ ಕರೆತಂದು  ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ವತ್ರೆಗೆ ಒಳಾರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ರಮೇಶ್ ಎಂಬುವವರನ್ನು ಮಂಗಳುರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ನಂತರ ಪಿರ್ಯಾದುದಾರರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಹಿತಾ ಆಸ್ವತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 87/2021 ಕಲಂ. 279.337 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಶ್ರೀಮತಿ ವಸುದಾ ವಿ ಕಾರಂತ್‌ (43) ಗಂಡ:ಕೆ ಪಿ ಜಗದೀಶ್‌ ವಾಸ:ಶ್ರೀ ಹಾಸನಾಂಬ ಕೃಪಾ,  ಕುದ್ರೆಬೆಟ್ಟು ,ಬಾಳ್ತಿಲ ಗ್ರಾಮ ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ದಿನಾಂಕ:18-10-2021 ರಂದು ಪಿರ್ಯಾಧಿದಾರರು ಮತ್ತು ಆಶಾ ಕಾರ್ಯಕರ್ತೆ ಗಾಯಿತ್ರಿರವರು ಮಾಣಿ ಪ್ರಾಥಮಿಕ ಆರೋಗ್ಯೆ ಕೇಂದ್ರದಿಂದ ಕೊವಿಡ್‌-19 ಸಂಭಂಧಿಸಿದ ಕರ್ತವ್ಯದ ಬಗ್ಗೆ ಇಡ್ಕಿದು ಗ್ರಾಮದ ಅಳಿಕೆ ಮಜಲು ಎಂಬಲ್ಲಿಗೆ ಹೋಗಿ ಕರ್ತವ್ಯ ಮುಗಿಸಿ ವಾಪಾಸು ಮಾಣಿ ಕಡೆಗೆ ಹೋಗುವರೆ ಮಾರುತಿ ಕಾರು ನಂಬ್ರ KA-05-MP-9448ನೇದರಲ್ಲಿ ಚಾಲಕ ಮುಕ್ತಾರ್ ಎಂಬವರು ಚಲಾಯಿಸಿಕೊಂಡು ಹೋಗುತ್ತಾ ಮದ್ಯಾಹ್ನ ಸುಮಾರು 13.45 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕುವೆತ್ತಲ ಎಂಬಲ್ಲಿಗೆ ತಲುಪಿದಾಗ ಮಾಣಿ ಕಡೆಯಿಂದ ಪುತ್ತೂರು ಕಡೆಗೆ KA-09-ME-8360ನೇ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾಧಿಯ ತಲೆ ಭಾಗಕ್ಕೆ,ಎಡ ಕಾಲಿಗೆ, ಸೊಂಟಕ್ಕೆ,ಬಲದ ಕೈ ಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ. ಗಾಯಿತ್ರಿರವರ ಕುತ್ತಿಗೆಗೆ,ಎಡಕಾಲಿಗೆ ಗುದ್ದಿದ ತರಹದ ನೋವಾಗಿರುತ್ತದೆ ಅಲ್ಲದೇ ಕಾರು ಚಾಲಕ ಮುಕ್ತಾರ್‌ರವರ ಮೂಗಿನ ಬಾಗಕ್ಕೆ ರಕ್ತಗಾಯವಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 134/2021  ಕಲಂ: 279,337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹೆಚ್.ಎಂ. ಶಿವ ಕುಮಾರ್ ಪ್ರಾಯ 45 ವರ್ಷ,  ತಂದೆ: ದಿ: ಹೆಚ್.ಎಂ ಮಹಾದೇವ ಪ್ರಸಾದ್ವೀರಭದ್ರೇಶ್ವರ ದೇವಸ್ಥಾನ ರಸ್ತೆ, ಹಲಗೂರು,  ಮಳವಳ್ಳಿ ತಾಲೂಕು, ಮಂಡ್ಯ ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿದಾರರ ತಾಯಿ ಜಲಜಾಕ್ಷಿ, ಪ್ರಾಯ: 65 ವರ್ಷ ಎಂಬವರು ದಿನಾಂಕ 17-10-2021 ರಂದು ಸಂಜೆ 05-30 ಗಂಟೆ ಸಮಯಕ್ಕೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದು, ದಿನಾಂಕ 18-10-2021 ರಂದು ಸಂಜೆ 05-00 ಗಂಟೆಗೆ ಪಿರ್ಯಾದಿ ತಮ್ಮ ಹೇಮಂತ್ ದೂರವಾಣಿ ಕರೆ ಮಾಡಿದಾಗ ದೇವಸ್ತಾನದಲ್ಲಿ ಇರುವುದಾಗಿಯೂ ನಾಳೆ ಬರುವುದಾಗಿ ತಿಳಿಸಿದ ಮೇರೆಗೆ ಬರಬಹುದೆಂದು ತಿಳಿದಿದ್ದು. ದಿನಾಂಕ 19-10-2021 ರಂದು ಮದ್ಯಾಹ್ನ 01-35 ಗಂಟೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಿಂದ ತಾಯಿಯ ಬಳಿ ಇದ್ದ ಸಣ್ಣ ಪುಸ್ತಕದಲ್ಲಿ ನಮೂದಿಸಿದ್ದ ದೂರವಾಣಿ  ನಂಬರ್ ಗೆ  ಕರೆ ಮಾಡಿ ಕುಮಾರಧಾರ ಹೊಳೆಯಲ್ಲಿ ಮೃತ ದೇಹ ಪತ್ತೆಯಾಗಿರುವುದಾಗಿ ತಿಳಿಸಿದ್ದು, ನಂತರ ವಾಟ್ಸಾಪ್ ಮೂಲಕ ಕಳುಹಿಸಿದ ಫೊಟೋ ನೋಡಿ ತಾಯಿಯ ಮೃತ ದೇಹವೆಂದು ಖಚಿತ ಪಡಿಸಿಕೊಂಡು ಪಿರ್ಯಾದಿದಾರರು , ಅವರ ತಮ್ಮ ಹಾಗೂ ಸಂಬಂದಿಕರು ಸುಬ್ರಹ್ಮಣ್ಯಕ್ಕೆ ಹೊರಟು ಬಂದಿದ್ದು, ಮೃತ ದೇಹವು ತಾಯಿ ಜಲಜಾಕ್ಷಿಯವರದ್ದು ಆಗಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ: 17-2021 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-10-2021 11:24 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080