ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶೃತಿ (28) ಗಂಡ: ಚಂದ್ರಹಾಸ ವಾಸ:ಬದಿಗುಡ್ಡೆ ಮನೆ ,ಶಿಶಿಲಾ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 18-12-2022 ರಂದು ಕೆಎ 70 J 2625 ನೇ ಮೋಟಾರು ಸೈಕಲ್‌  ನಲ್ಲಿ ಸಹಸವಾರಳಾಗಿ ಕುಳಿತುಕೊಂಡು ಬದಿಗುಡ್ಡೆ ಯಿಂದ ಅರಿಸಿನಮಕ್ಕಿ ರಸ್ತೆಯಲ್ಲಿ ಹೋಗುತ್ತಿರುವ ಸಮಯ ಸುಮಾರು 2:30 ಗಂಟೆಗೆ ಬೆಳ್ತಂಗಡಿ ತಾಲೂಕು ಶಿಶಿಲಾ ಗ್ರಾಮದ ಅಡ್ಡಹಳ್ಳ ಬಸ್ಸು ನಿಲ್ದಾಣದ ಹತ್ತಿರ ತಲುಪುತ್ತಿದ್ದಂತೆ ಮೋಟಾರು ಸೈಕಲ್‌ ಸವಾರ  ದುಡುಕುತನದಿಂದ ಚಲಾಯಿಸಿಕೊಂಡು ಮೋಟಾರು ಸೈಕಲ್‌ ನಿಯಂತ್ರಣ ತಪ್ಪಿದ್ದು ಅದರ  ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದಿದಾರರಿಗೆ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ರಕ್ತಗಾಯ,ಬಲಕೈಯ ಮೊಣಗಂಟಿಗೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 164/2022 ಕಲಂ; 279, 337, 338, ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರತೀಕ್‌ ರಾಜ್‌ ಪ್ರಾಯ 19 ವರ್ಷ, ತಂದೆ: ಬಾಲಕೃಷ್ಣ ಗೌಡ, ವಾಸ: ಪುಚ್ಚೇರಿ ಮನೆ, ನೆಲ್ಯಾಡಿ ಅಂಚೆ & ಗ್ರಾಮ, ಕಡಬ ತಾಲೂಕು.ಎಂಬವರ ದೂರಿನಂತೆ ದಿನಾಂಕ 19-12-2022 ರಂದು 08:45 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಆದಿತ್ಯ ಹೆಚ್‌.ವಿ ಎಂಬವರು  KA-03-JC-8291ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿನಲ್ಲಿ ಸಂಜನಾ ಎಂಬವರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ನೆಹರೂನಗರ-ಬನ್ನೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬನ್ನೂರು ಕಡೆಯಿಂದ ನೆಹರೂನಗರ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ವಿವೇಕಾನಂದ ಕಾಲೇಜ್‌ ಗೇಟ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆಯನ್ನು ನೀಡದೆ ರಸ್ತೆಯ ಬಲಬದಿಯಲ್ಲಿರುವ ಕಾಲೇಜ್‌ ಗೇಟ್‌ ಕಡೆಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಪ್ರತೀಕ್‌ ರಾಜ್ ರವರು ನೆಲ್ಯಾಡಿ ಕಡೆಯಿಂದ ಪುತ್ತೂರಿನ ಸಮ್ಮಿ ಪಿಜಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-50-ED-7578ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರು, ಆರೋಪಿ ಮೋಟಾರ್‌ ಸೈಕಲ್‌ ಸವಾರ ಮತ್ತು ಸಹಸವಾರೆ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಎಡ ಕೈಯ ಅಂಗೈ ಹಾಗೂ ಬೆರಳುಗಳಿಗೆ, ಬಲಕಾಲಿನ ಮೊಣಗಂಟಿಗೆ, ಬಲ ಕಾಲಿನ ಪಾದದ ಬಳಿ ಗುದ್ದಿದ ಹಾಗೂ ತರಚಿದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆರೋಪಿ ಮೋಟಾರ್‌ ಸೈಕಲ್‌ ಸವಾರ ಮತ್ತು ಸಹಸವಾರೆಯವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 189/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೆಲಿನ್, ಪ್ರಾಯ: 42 ವರ್ಷ, ಗಂಡ:   ಜೋಕಿಮ್ ಡಿಸೋಜಾ, ವಾಸ:ಪಂಜ ಮನೆ, ಐವತ್ತೊಕ್ಲು ಗ್ರಾಮ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:18-12-2022 ರಂದು ಸಂಜೆ ಪಂಜದಿಂದ ರೀಟಾ ಗುಂಡಡ್ಕ, ಅಶೋಕ್ ಡಿ’ಸೋಜಾ, ಲಿಲ್ಲಿ ಡಿ’ಸೋಜಾ, ಅರ್ಲಿನ್ ಗ್ರೇಸ್ ಡಿ’ಸೋಜಾ, ಅರ್ವಿನ್ ಗ್ರೇಸ್ ಡಿ’ಸೋಜಾ ಮತ್ತು ಇತರರ ಜೊತೆ ಪಂಜದಿಂದ ಕ್ರಿಸ್ ಮಸ್ ಕ್ಯಾರಲ್ಸ್ ಆಚರಣೆ ಬಗ್ಗೆ ಸುಬ್ರಹ್ಮಣ್ಯಕ್ಕೆ ಬಂದು ಆಚರಣೆ ಮುಗಿದ ಬಳಿಕ ಸುಬ್ರಹ್ಮಣ್ಯದ ಅನಿಲ್ ಡಿ’ಸೋಜಾ ರವರ ಬಾಬ್ತು ವಾಹನದಲ್ಲಿ ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಪಂಜದ ಪಲ್ಲೋಡಿ ಎಂಬಲ್ಲಿಗೆ ಸುಮಾರು ರಾತ್ರಿ 9:30 ಗಂಟೆಗೆ ತಲುಪಿ ಅರ್ಲಿನ್ ಗ್ರೇಸ್ ಡಿ’ಸೋಜಾ ಮತ್ತು ಆಕೆಯ ಅಣ್ಣ ಅರ್ವಿನ್ ಗ್ರೇಸ್ ಡಿ’ಸೋಜಾ ರವರು ವಾಹನದಿಂದ ಇಳಿದು ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಪಂಜ ಕಡೆಯಿಂದ ದ್ವಿಚಕ್ರವಾಹನವೊಂದನ್ನು ಅದರ ಸವಾರನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಅರ್ಲಿನ್ ಗ್ರೇಸ್ ಡಿಸೋಜಾ ಎಂಬ ಬಾಲಕಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ರಸ್ತೆಗೆ ಬಿದ್ದು, ಬೆನ್ನಿನ ಹಿಂಭಾಗಕ್ಕೆ ,ತಲೆಗೆ ಗುದ್ದಿದ ನಮೂನೆಯ ತೀವ್ರತರದ ಗಾಯವಾಗಿದ್ದು, ಕೂಡಲೇ ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಕಡಬ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಪುತ್ತೂರು ಸಿಟಿ ಆಸ್ಪತ್ರೆಗೆ ಹೋಗಿದ್ದು, ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಬಾಲಕಿಗೆ ಡಿಕ್ಕಿ ಹೊಡೆದ ಬಳಿಕ ಬೈಕ್ ಸವಾರನು ಬೈಕ್ ನ್ನು ನಿಲ್ಲಿಸದೇ ಯಾವುದೇ ಮಾಹಿತಿಯನ್ನು ನೀಡದೇ ಅಲ್ಲಿಂದ ಹೋಗಿರುತ್ತಾನೆ. ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ  ಅ.ಕ್ರ ನಂಬ್ರ  : 112/2022 ಕಲಂ 279, 338 ಐಪಿಸಿ  ಮತ್ತು ಕಲಂ: 134(ಎ ಮತ್ತು ಬಿ) ಐಎಮ್ ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯಾದವ ಸಲ್ಯಾನ್ ಪ್ರಾಯ 35ವರ್ಷ ತಂದೆ: ಡೊಂಬಯ್ಯ ಪಂಡಿತ ವಾಸ: ಏಮಾಜೆ ಮನೆ ನೇರಳಕಟ್ಟೆ ಅಂಚೆ ನೆಟ್ಲಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿರವರಿಗೂ ನೆರೆಯ ರಾಮಣ್ಣ ಗೌಡರಿಗೂ  ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮ  ಏಮಾಜೆ ಎಂಬಲ್ಲಿ ರಸ್ತೆಯ ವಿಚಾರದಲ್ಲಿ  ತಕರಾರು ಇದ್ದು ವಿಚಾರಣೆಯಾಗಿ ವ್ಯಾಜ್ಯ ಇರುವ ರಸ್ತೆಯನ್ನು ರಾಮಣ್ಣಗೌಡ ಹಾಗೂ ಅವರ ಸಂಬಂಧ ಪಟ್ಟವರು  ರಸ್ತೆಗೆ ಪ್ರವೇಶಿಸದಂತೆ ಹಾಗೂ ರಸ್ತೆಯನ್ನು ಶಾಶ್ವತವಾಗಿ ಮುಚ್ಚುವಂತೆ ಅದೇಶವಾಗಿರುತ್ತದೆ. ಗ್ರಾಮ ಪಂಚಾಯತ್‌ ಅಧಿಕಾರಿಯವರು ಸ್ಥಳಕ್ಕೆ ಬಂದು ನ್ಯಾಯಾಲಯದ ಅದೇಶವನ್ನು  ಪರಿಶೀಲನೆ ನಡೆಸಿ ಅದೇಶದಂತೆ ಬೇಲಿ ಹಾಕಿದ್ದು ಯಾವುದೇ ಕಾರಣಕ್ಕೂ ತೆರವು ಗೊಳಿಸದಂತೆ ರಾಮಣ್ಣ ಗೌಡ ಹಾಗೂ ಅವರ ಕಡೆಯವರಿಗೆ ಸೂಚಿಸಿದ್ದರೂ  ದಿನಾಂಕ : 16-12-2022 ರಂದು  ರಾತ್ರಿ 12.00 ಗಂಟೆಗೆ   ಬೇಲಿ ಹಾಕಿದ ರಸ್ತೆಯ ಬಳಿ  ಶಬ್ದ ಕೇಳಿ  ಪಿರ್ಯಾದಿದಾರರು  ನನ್ನ ಪತ್ನಿ ಸುಜಾತ, ಹಾಗೂ ನೆರೆಯ ಲಕ್ಷ್ಮಣ  ಮತ್ತು ಅವರ ಪತ್ನಿ ಭವಾನಿ,ಯೊಂದಿಗೆ ರಸ್ತೆಗೆ ಹೋದಾಗ  ರಾಮಣ್ಣಗೌಡ, ರಾಜೇಶ್‌, ಪ್ರಶಾಂತ್, ಚಂದ್ರಹಾಸ, ಪ್ರವೀಣ ಮತ್ತು  ನಂದ ಕಿಶೋರ ಜಗಧೀಶ್ ರವರು ಮಾನ್ಯ ನ್ಯಾಯಾಲಯದ ಅದೇಶವಿರುವುದನ್ನು ತಿಳಿದೂ ಪಿರ್ಯಾದಿದಾರರ ಜಾಗಕ್ಕೆ ಹಾಕಿದ ಬೇಲಿಯನ್ನು ಕಿತ್ತೆಸೆದು ಅತಿಕ್ರಮವಾಗಿ ಪಿರ್ಯಾದುದಾರರ ಜಾಗದೊಳಗೆ ಪ್ರವೇಶಿಸಿದ್ದು  ವಿಚಾರಿಸಿದಾಗ  ಪಿರ್ಯಾದುದಾರರನ್ನು ಉದ್ದೇಶಿಸಿ ಅವ್ಯಾಚವಾಗಿ ಬೈದು ಇನ್ನೂ ಮುಂದಕ್ಕೆ ಈ ರಸ್ತೆಯನ್ನು   ಮುಚ್ಚಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ  ಹಾಕಿ ಸುಮಾರು 5000/- ರೂ ನಷ್ಠವುಂಟು ಮಾಡಿದ್ದು.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 200/2022  ಕಲಂ: 143.147.447.427.504,506 ಜೊತೆಗೆ 149  ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನೀರಜಾಕ್ಷಿ.ಎಂ, ಪ್ರಾಯ 55 ವರ್ಷ, ಗಂಡ: ಮಾಧವ ಗೌಡ, ವಾಸ: ಧರ್ಮಶ್ರೀ ನಿಲಯ, ಕಾವಿನಮೂಲೆ ಮನೆ, ಬೆಳ್ಳಾರೆ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿ ಶ್ರೀಮತಿ ನೀರಜಾಕ್ಷಿಯವರ ಮಗ ನವೀನ್ ಹಾಗೂ ಆತನ ಪತ್ನಿ ಸ್ಪಂದನಳ ಮಧ್ಯೆ ಸುಮಾರು 3 ತಿಂಗಳಿನಿಂದ ಸಂಸಾರದಲ್ಲಿ ವೈಮನಸ್ಸು ಉಂಟಾಗಿ ಸ್ಪಂದನಳು ತವರು ಮನೆಗೆ ಹೋಗಿದ್ದು, ದಿನಾಂಕ 18-12-2022 ರಂದು ಸೊಸೆ ಸ್ಪಂದನ, ಆಕೆಯ ಹೆತ್ತವರಾದ ಪರಶುರಾಮ, ದಿವ್ಯಪ್ರಭಾ,  ತಮ್ಮ ಸ್ಪರ್ಶಿತ್ ಹಾಗೂ ಸಂಬಂಧಿಕರು ಬಂದು ಮಾತುಕತೆ ಮಾಡಿದ್ದು, ಆ ವೇಳೆ ನವೀನ್  ಪತ್ನಿ ಸ್ಪಂದನಳು ಬೇಡ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ದಿನಾಂಕ 19-12-2022 ರಂದು ಪಿರ್ಯಾದಿದಾರರ ಗಂಡ ಮಾಧವ ಗೌಡ, ಸೊಸೆ ಸ್ಪಂದನ, ಸೊಸೆಯ ತಾಯಿ ದಿವ್ಯಪ್ರಭಾ, ತಂದೆ ಪರಶುರಾಮ, ತಮ್ಮ ಸ್ಪರ್ಶಿತ್, ನವೀನ್ ರೈ ತಂಬಿನಮಕ್ಕಿ ಎಂಬವರು ನವೀನ್ ನನ್ನು ಅಪಹರಿಸುವ ಉದ್ದೇಶದಿಂದ ಒಟ್ಟು ಸೇರಿ 12-30 ಗಂಟೆಗೆ ಬೆಳ್ಳಾರೆ ಗ್ರಾಮದ ಕಾವಿನಮೂಲೆ ಎಂಬಲ್ಲಿನ ಮನೆ ಬಳಿ ಕೈ ಕಾಲು ಕಟ್ಟಿ ಆಂಬುಲೆನ್ಸ್ ವಾಹನದಲ್ಲಿ ಎಲ್ಲಿಗೋ ಅಪಹರಿಸಿಕೊಂಡು ಹೋಗಿದ್ದು, ಆ ವೇಳೆ ತಡೆಯಲು ಹೋದ ಪಿರ್ಯಾದಿದಾರರನ್ನು ಮತ್ತು ಅವರ ಹಿರಿಯ ಸೊಸೆ ಪ್ರಜ್ಞಾ ಪಿ.ಎಸ್ ರವರನ್ನು ಆರೋಪಿಗಳು ಅಂಗಳದಲ್ಲಿ ಎಳೆದಾಡಿ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ನೋವು ಉಂಟುಮಾಡಿದ್ದು ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅಕ್ರ 100/2022 US  323, 363 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-12-2022 11:24 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080