ಅಪಘಾತ ಪ್ರಕರಣ: ೦2
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಮಾಧವ ಗಾಣಿಗ (23), ತಂದೆ: ಗಣೇಶ ಗಾಣಿಗ, ವಾಸ: ಮಂಜುನಾಥ ನಿಲಯ ಮನೆ, ಹಕ್ಲಾಡಿ ಗ್ರಾಮ, ಕುಂದಾಪುರ ತಾಲೂಕು ಎಂಬವರ ದೂರಿನಂತೆ ದಿನಾಂಕ: 20-01-2023ರಂದು ಬೆಳಿಗ್ಗಿನ ಜಾವ 02-30ಗಂಟೆಗೆ ಪಿರ್ಯಾದಿದಾರರು ತನ್ನ ಸಂಬಂದಿಕರಾದ ಸಾಧು, ಜಗದೀಶ್, ಲೀಲಾವತಿ, ಸಂತೋಷ್, ಶಿವಕುಮಾರ್ ಹಾಗೂ ಶ್ರೇಯಸ್ ರವರೊಂದಿಗೆ ಕೆಎ20ಎಬಿ1913 ನೇ ಇಕೋ ವಾಹನದಲ್ಲಿ ಹೊರಟು ಇಕೋ ವಾಹನವನ್ನು ನಾಗರಾಜ್ ಎಂಬವರು ಕೆರ್ಗಲ್ ನಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 05-10 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನೀರಚಿಲುಮೆ ಪಜಿರಡ್ಕ ಕ್ರಾಸ್ ಎಂಬಲ್ಲಿಗೆ ತಲುಪಿದಾಗ ಇಕೋ ವಾಹನವನ್ನು ಅದರ ಸವಾರ ದುಡುಕುತನದಿಂದ ಚಲಾಯಿಸಿದ ಪರಿಣಾಮ ವಾಹನವು ರಸ್ತೆಯ ಎಡಬದಿಯಲ್ಲಿರುವ ಹೊಂಡಕ್ಕೆ ಬಿದ್ದ ಪರಿಣಾಮ ವಾಹನದಲ್ಲಿದ್ದ ಪಿರ್ಯಾದಿದಾರರ ಬಲಕೋಲು ಮತ್ತು ಎಡಕೋಲು ಕಾಲಿಗೆ ತರಚಿದ ಗಾಯ, ಶ್ರೇಯಸ್ ರವರಿಗೆ ಗಲ್ಲ ಹಾಗೂ ಎಡತೊಡೆಗೆ ಗುದ್ದಿದ ಗಾಯ, ಶಿವಕುಮಾರ್ ರವರಿಗೆ ಗಲ್ಲಕ್ಕೆ ಗುದ್ದಿದ ಗಾಯ ಸಂತೋಷ್ ನರಸಿಂಹ ಗಾಣಿಗ ರವರಿಗೆ ಎಡಕಾಲಿನ ಮಂಡಿ ಹಾಗೂ ಬಲಕೋಲು ಕಾಲಿಗೆ ಗುದ್ದಿದ ಗಾಯ ಲೀಲಾವತಿ ಯವರಿಗೆ ಎದೆಯ ಬಲಭಾಗ ಹಾಗೂ ಎಡಕಾಲಿನ ಪಾದಕ್ಕೆ ಗುದ್ದಿದ ಗಾಯ, ಸಾದು ಎಂಬವರಿಗೆ ಎಡಕಣ್ಣಿನ ಮೇಲ್ಬಾಗ ಎದೆಯ ಬಲಭಾಗ,ಎಡಕಾಲಿನ ಹಿಮ್ಮಡಿಗೆ ಗುದ್ದಿದ ಗಾಯ, ಜಗದೀಶ್ ಗಾಣಿಗ ರವರಿಗೆ ಎಡಕಣ್ಣಿನ ಮೇಲ್ಬಾಗ ಎದೆಯ ಬಲಭಾಗ ಹಾಗೂ ಎಡಕಾಲಿನ ಮಂಡಿಗೆ ಗುದ್ದಿದ ಗಾಯವಾಗಿದ್ದು ಚಾಲಕ ನಾಗೇಂದ್ರ ರವರ ಬೆನ್ನು ಮತ್ತು ಬಲಕಾಲಿನ ಪಾದಕ್ಕೆ ಗುದ್ದಿದ ಗಾಯವಾಗಿರುತ್ತದೆ ಅಲ್ಲದೆ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಗಾಯಾಳುಗಳೆಲ್ಲರೂ ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 05/2023 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಸಿದ್ದಿಕ್ ಕೆ.ಪಿ, ಪ್ರಾಯ 45 ವರ್ಷ, ತಂದೆ: ಕುಂಞಿ ಅಹಮ್ಮದ್, ವಾಸ: ಜೋಡುಕಟ್ಟೆ, ಬನ್ನೂರು ಅಂಚೆ & ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 19-01-2023 ರಂದು 16:30 ಗಂಟೆಗೆ ಆರೋಪಿ ಲಾರಿ ಚಾಲಕ ನಿತಿನ್ ಕುಮಾರ್ ಎಂಬವರು KA-21-C-3032 ನೇ ನೋಂದಣಿ ನಂಬ್ರದ ಲಾರಿಯನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಕಲ್ಲೇಗ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಹೆದ್ದಾರಿಯನ್ನು ದಾಟುತ್ತಿದ್ದ ಪಿರ್ಯಾದುದಾರರ ಮಗ ಮಹಮ್ಮದ್ ಶಿನಾದ್ (10ವರ್ಷ) ರವರಿಗೆ ಲಾರಿ ಅಪಘಾತವಾಗಿ, ಮಹಮ್ಮದ್ ಶಿನಾದ್ ರವರಿಗೆ ಬಲ ಕೋಲು ಕಾಲಿಗೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 11/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦2
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಅಶ್ರಫ್ (28) ಬಡಕಬೈಲು ಮನೆ, ಕರಿಯಂಗಳ ಗ್ರಾಮ , ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಿಗೆ ಆರೋಪಿಯು ದಿನಾಂಕ 17.01.2023 ರಂದು ಬೆಳಿಗ್ಗೆ ಸುಮಾರು 10.00 ಗಂಟೆಗೆ ಪೋನ್ ಮಾಡಿ ಪಿರ್ಯಾದಿದಾರರಿಗೆ ಹಾಗೂ ಅವರ ತಂದೆಗೆ ಅವಾಚ್ಯ ಶಬ್ದಗಳಿಂದ ಎಂದು ಬೈದು ನೀನು ದೈರ್ಯ ಇದ್ದರೆ ಮಾರಿಪಳ್ಳ 10 ನೇ ಮೈಲಿಕಲ್ಲಿನ ಹತ್ತಿರ ಮೈದಾನಕ್ಕೆ ಬಾ ಎಂದು ಬೈದಿದ್ದು ಪಿರ್ಯಾದಿದಾರರು ಸಂಜೆ ಸುಮಾರು 05.00 ಗಂಟೆಗೆ 10 ನೇ ಮೈಲು ಕಲ್ಲಿನ ಬಳಿ ಹೋದಾಗ ಅವಾಚ್ಯ ಶಬ್ದಗಳಿಂದ ಬೈದು ತಲೆಗೆ ಕೆನ್ನೆಗೆ ಕೈ ಯಿಂದ ಹೊಡೆದಿರುವುದಲ್ಲದೇ ಬಲ ಕೆನ್ನೆಗೆ ಕಚ್ಚಿ ಗಾಯಗೊಳಿಸಿ ನೆಲಕ್ಕೆ ದೂಡಿಹಾಕಿರುವುದಾಗಿದೆ. ಪಿರ್ಯಾದಿದಾರರಿಗೆ ದಿನಾಂಕ 19.01.2023 ರಂದು ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು ಮಂಗಳೂರು ಎ ಜೆ ಆಸ್ಪತ್ರೆಗೆ ಹೋದಾಗ ವೈದ್ಯರು ಪರೀಕ್ಷಿಸಿ ಹೊಟ್ಟೆಯಲ್ಲಿ ರಕ್ತಸ್ರ್ತಾವ ಆಗುತ್ತಿರುವುದಾಗಿ ಹೇಳಿ ಚಿಕಿತ್ಸೆ ಗೆ ದಾಖಲಿಸಿಕೊಂಡಿದ್ದು ಪಿರ್ಯಾದಿದಾರರ ಕೆನ್ನೆಗೆ ಗಾಯವಾಗಿರುವುದಲ್ಲದೇ ದೂಡಿ ಹಾಕಿರುವುದರಿಂದ ಹೊಟ್ಟೆಯಲ್ಲಿ ರಕ್ತಸ್ರ್ತಾವ ಗಾಯವುಂಟಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 05/2023 ಕಲಂ 323,325 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನಿಜಾಮುದ್ದೀನ್, ಪ್ರಾಯ: 26 ವರ್ಷ, ತಂದೆ: ಅಬ್ದುಲ್ ರಫೀಕ್, ವಾಸ: ಜನತಾ ಕಾಲೊನಿ, ಕೆ.ಸಿ ಫಾರ್ಮ್ ಬಳಿ ಮನೆ, ಕೊಯಿಲ ಗ್ರಾಮ ಮತ್ತು ಅಂಚೆ, ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿ ನಿಜಾಮುದ್ದೀನ್ ರವರು ದಿನಾಂಕ 19.01.2023 ರಂದು ಬೆಳಗ್ಗೆ ಇಳಂತಿಲ ಜೋಗಿಬೆಟ್ಟು ಎಂಬಲ್ಲಿಗೆ ಕೆಲಸಕ್ಕೆಂದು ಉಪ್ಪಿನಂಗಡಿಗೆ ಬಂದಾಗ ಸಮಯ ಸುಮಾರು 10.45 ಗಂಟೆಗೆ ಪಿರ್ಯಾದಿದಾರರ ಪರಿಚಯದ ಸಿದ್ದೀಕ್ ಜೆಸಿಬಿ ಕರುವೇಲು ಎಂಬವರು ಫೋನ್ ಮಾಡಿ “ ಕೆಲಸವಿದೆ ನೀನು ಗಾಂಧೀಪಾರ್ಕ್‌ಗೆ ಬಾ ಎಂದಾಗ ಪಿರ್ಯಾದಿದಾರರು ಉಪ್ಪಿನಂಗಡಿ ಗಾಂಧೀಪಾರ್ಕ್ ಗೆ ಹೋಗಿದ್ದು, ಅಲ್ಲಿ ಪರಿಚಯದ ಅನ್ಸಾರ್ ಕೆಮ್ಮಾರ ಎಂಬವರ ಆಲ್ಟೋ ಕಾರಿನಲ್ಲಿ ಸಿದ್ದೀಕ್ ಜೆಸಿಬಿ ಕರುವೇಲು, ಇರ್ಷಾದ್ ಮಠ ಮತ್ತು ಶಾಫಿ ಗಡಿಯಾರ ಎಂಬವರು ಇದ್ದು. ಪೆರ್ನೆ ಕಡೆ ಕೆಲಸಕ್ಕೆ ಹೋಗುವ ಎಂದು ಹೇಳಿ ಪಿರ್ಯಾದಿದಾರರನ್ನು ಕಾರಿನಲ್ಲಿ ಕುಳ್ಳರಸಿ ಅನ್ಸಾರ್ ಕೆಮ್ಮಾರ ರವರು ಕಾರು ಚಲಾಯಿಸುತ್ತಾ ಬಂಟ್ವಾಳ ಕಡೆಗೆ ಹೋಗುತ್ತಿರುವಾಗ ದಾರಿ ಮಧ್ಯೆ ಪರಿಚಯವಿಲ್ಲದ ವ್ಯಕ್ತಿಯೊಬ್ಬನು ಸ್ಕೂಟರನಲ್ಲಿ ಬಂದು ಕಾರಿಗೆ ಹತ್ತಿ ಕಾರಿನಲ್ಲಿದ್ದ ಶಾಪಿ ಗಡಿಯಾರ ಕಾರಿನಿಂದ ಇಳಿದು ಹಿಂದಿನಿಂದ ಸ್ಕೂಟರಿನಲ್ಲಿ ಬರುತ್ತಿದ್ದನು. ಬಳಿಕ ಕಾರಿನಲ್ಲಿ ಮಲ್ಲೂರು ಎಂಬಲ್ಲಿಗೆ ಹೋಗಿ ಅಲ್ಲಿದ್ದ ಮನೆಯೊಂದರ ಎದುರು ಕಾರನ್ನು ನಿಲ್ಲಿಸಿ ಆ ಮನೆಗೆ ಪಿರ್ಯಾದಿದಾರರನ್ನು ಕರೆದುಕೊಂಡು ಹೋದಾಗ ಅಲ್ಲಿ ಪಿರ್ಯಾದಿದಾರರಿಗೆ ಪರಿಚಯವಿಲ್ಲದ ಕೆಲವು ಜನರಿದ್ದು ಸಿದ್ದೀಕ್ ಮತ್ತು ಇತರರು “ ವಿದೇಶದಿಂದ ಬಂದ ನಿನ್ನ ತಮ್ಮ ಶಾರೂಕ್ ಎಲ್ಲಿದ್ದಾನೆ? “ ಎಂದು ಪಿರ್ಯಾದಿದಾರರಲ್ಲಿ ಕೇಳಿ ಅಲ್ಲಿದ್ದವರ ಪೈಕಿ ಒಬ್ಬನು ದೊಣ್ಣೆಯಿಂದ ಪಿರ್ಯಾದಿದಾರರ ಬಲ ಕೈಗೆ ಹಾಗೂ ಎಡ ಕಾಲಿಗೆ ಹೊಡೆದು. ಮತ್ತೊಬ್ಬನು ಕಾಲಿಗೆ ತುಳಿದು. ಸಿದ್ದೀಕ್ ಜೆಸಿಬಿ ಕರುವೇಲು ಮತ್ತು ಇರ್ಷಾದ್ ಮಠರವರು ಕೈಯಿಂದ ಹೊಡೆದು ಕುತ್ತಿಗೆಯನ್ನು ಹಿಡಿದು ಗೋಡೆಗೆ ಒರಗಿಸಿ ವಿದೇಶದಿಂದ ಬಂದ ನಿನ್ನ ತಮ್ಮ ಶಾರೂಕ್ ಎಲ್ಲಿ ಎಂದು ಕೇಳಿ ಹಲ್ಲೆ ನಡೆಸಿರುತ್ತಾರೆ. ನಂತರ ಪಿರ್ಯಾದಿದಾರರ ಮೊಬೈಲ್ ಫೋನ್ ತೆಗೆದು ಪಿರ್ಯಾದಿ ತಮ್ಮ ಶಾರೂಕ್‌ನಿಗೆ ಫೋನ್ ಮಾಡಿ ಕಡಂಬು ಎಂಬಲ್ಲಿಗೆ ಬರ ಹೇಳಿ. ಪಿರ್ಯಾದಿದಾರರನ್ನು ಕಾರಿನಲ್ಲಿ ಕರೆದುಕೊಂಡು ಕಡಂಬು ಎಂಬಲ್ಲಿಗೆ ಬಂದು ಅಲ್ಲಿಗೆ ಬಂದಿದ್ದ ತಮ್ಮ ಶಾರೂಕ್ ಮತ್ತು ಜೊತೆಯಲ್ಲಿದ್ದ ಫೈಝಲ್ ಎಂಬವನನ್ನು ಕಾರಿನಲ್ಲಿ ಕುಳ್ಳಿರಿಸಿ ವಾಪಾಸು ಮಲ್ಲೂರಿಗೆ ಕರೆದುಕೊಂಡು ಹೋಗಿ ಅದೇ ಮನೆಯಲ್ಲಿ ಪಿರ್ಯಾದಿದಾರರಿಗೆ ಮತ್ತು ತಮ್ಮ ಶಾರೂಕ್‌ನಿಗೆ ಹಲ್ಲೆ ನಡೆಸಿರುತ್ತಾರೆ. ಬಳಿಕ ಶಾರೂಕ್‌ನನ್ನು ಅಲ್ಲಿಯೇ ಇರಿಸಿಕೊಂಡು ಪಿರ್ಯಾದಿದಾರರಲ್ಲಿ ನೀನು ಮನೆಗೆ ಹೋಗಿ 04 ಲಕ್ಷ ರೂಪಾಯಿ ಹಣ ತರಬೇಕೆಂದು ತಿಳಿಸಿ ನೀನು ಹಣ ತರುವವರೆಗೆ ನಿನ್ನ ತಮ್ಮನನ್ನು ಬಿಡುವುದಿಲ್ಲ ಎಂದು ಹೇಳಿ, ಪಿರ್ಯಾದಿದಾರರ ಮೊಬೈಲ್ ಫೋನನ್ನು ಅವರೇ ಇರಿಸಿಕೊಂಡು ಅನ್ಸಾರ್ ಕೆಮ್ಮಾರ ಎಂಬವನ ಕಾರಿನಲ್ಲಿ ಪಿರ್ಯಾದಿ ಮತ್ತು ಫೈಝಲ್‌ನನ್ನು ರಾತ್ರಿ 8.30 ಗಂಟೆಗೆ ಕಳುಹಿಸಿಕೊಟ್ಟಿದ್ದು, ಪಿರ್ಯಾದಿದಾರರ ತಮ್ಮ ಶಾರೂಕ್‌ನನ್ನು ಒತ್ತೆ ಇರಿಸಿಕೊಂಡು ಪಿರ್ಯಾದಿದಾರರಲ್ಲಿ 4 ಲಕ್ಷ ರೂಪಾಯಿ ಹಣ ತರುವಂತೆ ಹೇಳಿ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 07/2023 ಕಲಂ: 323,324,364 (ಎ) ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಯಂತಿ, ಪ್ರಾಯ: 52 ವರ್ಷಗಂಡ: ಚಂದ್ರಶೇಖರ ನಾಯ್ಕ ವಾಸ: ಓಣಿತ್ತಾರು ಮನೆ, ಕೊಕ್ಕಡ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಚಂದ್ರಶೇಖರ ಪ್ರಾಯ:60 ವರ್ಷ ಎಂಬವರು ದಿನಾಂಕ: 20.01.2023 ರಂದು 11.30 ಗಂಟೆಗೆ ಮನೆಯಲ್ಲಿದ್ದವರು ಅಡಿಕೆ ಕೊಯ್ಯಲು ಮನೆಯಿಂದ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿಗೆ ಬಿದಿರಿನ ಹಿಂಡಿಲಿನಿಂದ ಬಿದಿರಿನ ಗಳೆಯನ್ನು (ದೋಂಟಿ) ಮಾಡಿಕೊಂಡು ಬರುತ್ತೇನೆಂದು ಮನೆಯಲ್ಲಿ ಪಿರ್ಯಾದಿದಾರರಲ್ಲಿ ಹೇಳಿ ಹೋಗಿದ್ದವರು. ಬಳಿಕ ಸಮಯ ಸುಮಾರು 12.45 ಗಂಟೆಗೆ ಪಿರ್ಯಾದಿದಾರರ ಗಂಡನ ಅಣ್ಣ ಗಣಪಯ್ಯ ನಾಯ್ಕ ರವರ ಮಗ ಮಧು ಎಂಬವರು ದೂರವಾಣಿ ಕರೆ ಮಾಡಿ ಚಿಕ್ಕಪ್ಪನವರು ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಅಸ್ವಸ್ಥರಾಗಿ ಬಿದ್ದುಕೊಂಡಿರುವುದಾಗಿ ತಿಳಿಸಿದ್ದು ಚಿಕಿತ್ಸೆ ಬಗ್ಗೆ ಕೊಕ್ಕಡ ಪಂಚಮಿ ಆರ್ಯುವೇದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರ ಗಂಡ ಮೃತಪಟ್ಟಿರುವುದಾಗಿ ಎಂಬುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯುಡಿಆರ್ ನಂ: 05/2023 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.