ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚೈತನ್ಯ   (60) ತಂದೆ: ಕೃಷ್ಣಾನಂದ  ವಾಸ: ವಸುಂದರೆ ಮನೆ, ಕೊಕ್ರಾಡಿ  ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 20-02-2023 ರಂದು ಬೆಳಿಗ್ಗೆ  ಸುಮಾರು 7:00  ಗಂಟೆಗೆ ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ ದೋಲ್ದೊಟ್ಟು ಎಂಬಲ್ಲಿ ನಾರಾವಿ-ವೇಣೂರು  ಸಾರ್ವಜನಿಕ ರಸ್ತೆಯಲ್ಲಿ ವೇಣೂರು  ಕಡೆಯಿಂದ  ಪಿಕ್  ಅಪ್  ವಾಹನ  ನಂ: ಕೆ ಎ 70 2763ನೇ ದನ್ನು ಅದರ ಚಾಲಕ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು  ಎದುರಿನಿಂದ  ಅಂದರೆ ನಾರಾವಿ  ಕಡೆಯಿಂದ  ಬರುತ್ತಿದ್ದ   ಬೈಕ್ ನಂ: ಕೆ ಎ 21 ಕೆ 2404 ನೇ ದಕ್ಕೆ  ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ   ವಾಹನಗಳು  ಜಖಂಗೊಂಡು ದ್ವಿಚಕ್ರ ವಾಹನ ಸವಾರ  ಉಜ್ವಲ್ ಹೆಗ್ಡೆ ಎಂಬಾತನು  ಬೈಕ್  ನೊಂದಿಗೆ  ರಸ್ತೆಗೆ  ರಟ್ಟಿ ರಸ್ತೆಗೆ ಬಿದ್ದು  ತಲೆಗೆ, ಮುಖಕ್ಕೆ, ಗಂಭೀರ  ಗಾಯಗಳಾಗಿ  ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 08/2023 ಕಲಂ: 279, 304(A) IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ತೀರ್ಥರಾಜ್‌. ಕೆ ಪ್ರಾಯ 22 ವರ್ಷ ತಂದೆ: ಜನಾರ್ಧನ ಗೌಡ ವಾಸ: ಕಡೆಂಬಿಕಲ್ಲು ಮನೆ, ಕೊಯಿಲ ಗ್ರಾಮ ಮತ್ತು ಅಂಚೆ, ಕಡಬ ತಾಲೂಕು ರವರು ಬನೀಡಿದ ದೂರಿನಂತೆ ದಿನಾಂಕ 20-02-2023 ರಂದು 11:30 ಗಂಟೆಗೆ ಆರೋಪಿ ಬೊಲೆರೋ ಜೀಪು ಚಾಲಕ ಕೃಷ್ಣಪ್ಪ ನಾಯ್ಕ  ಎಂಬವರು KA-03-MW-0544 ನೇ ನೋಂದಣಿ ನಂಬ್ರದ ಬೊಲೆರೋ ಜೀಪನ್ನು ಉಪ್ಪಿನಂಗಡಿ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿ, ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ, ಬೊಲೆರೋ ಜೀಪು ಸ್ಕಿಡ್ ಆಗಿ ಪಲ್ಟಿಯಾಗಿ, ಪಿರ್ಯಾದುದಾರರ ಚಿಕ್ಕಪ್ಪ ಕೊರಗಪ್ಪ ಗೌಡ ಕೆ ರವರು ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-L-7527 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿನ ಮೇಲೆ ಬೊಲೆರೋ ಜೀಪು ಬಿದ್ದು, ಕೊರಗಪ್ಪ ಗೌಡರವರಿಗೆ ಎಡಕಾಲಿನ ಕೋಲು ಕಾಲಿಗೆ, ಮುಖಕ್ಕೆ, ಎದೆಗೆ ಗುದ್ದಿದ ಹಾಗೂ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಗಂಭೀರ ಗಾಯಗೊಂಡ ಕೊರಗಪ್ಪ ಗೌಡರವರು 13:20 ಗಂಟೆಗೆ ಮೃತಪಟ್ಟಿರುವುದಾಗಿದೆ. ಮೃತದೇಹವು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ. ಆರೋಪಿ ಚಾಲಕ ಮತ್ತು ಅದರಲ್ಲಿದ್ದ ಪ್ರಯಾಣಿಕ ಶೇಖರ ನಾಯ್ಕ ರವರಿಗೂ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಹೋಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 34/2023 ಕಲಂ: 279, 337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೊಸಪ್ಪ ಗೌಡ. ಜಿ ಪ್ರಾಯ 52 (ವರ್ಷ) ತಂದೆ: ದಿ|| ಶಂಕು ಗೌಡ ವಾಸ ಮಡ್ಯಾಳ ಮನೆ,ಅಳಿಕೆ ಗ್ರಾಮ, ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ರವರು ಆಟೋ ರಿಕ್ಷಾ ನಂಬ್ರ KA 70 2065 ನೇಯದನ್ನು ಹೊಂದಿ ಅದರಲ್ಲಿ ಚಾಲಕರಾಗಿ ಬಾಡಿಗೆ ಹೋಗುತ್ತಿರುವುದಾಗಿದ್ದು, ಅದರಂತೆ ದಿನಾಂಕ: 19.02,2023 ರಂದು ಪಿರ್ಯಾದಿದಾರರ ಪರಿಚಯದ ಸುಬ್ರಹ್ಮಣ್ಯ ಪರ್ವತಮುಖಿ ನಿವಾಸಿ ವಸಂತ ರವರು ದೂರವಾಣಿ ಮುಖಾಂತರ ಕರೆ ಮಾಡಿ ಮಗಳು ಅಖಿಲಾಳಿಗೆ ಹುಷಾರಿಲ್ಲ. ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬರುವಂತೆ ಕೇಳಿಕೊಂಡ ಮೇರೆಗೆ ಪಿರ್ಯಾದಿದಾರರು ವಸಂತ ರವರ ಮನೆಗೆ ತೆರಳಿ ಅಲ್ಲಿಂದ ವಸಂತ ಅವರ ಪತ್ನಿ ಸರಸ್ವತಿ ಮತ್ತು ಮಕ್ಕಳಾದ ಅಖಿಲಾ ಹಾಗೂ ಅಕ್ಷಯ್ ರವರನ್ನು ಆಟೋ ರಿಕ್ಷಾದಲ್ಲಿ ಕೂರಿಸಿಕೊಂಡು ಸುಬ್ರಹ್ಮಣ್ಯದಿಂದ ಪುತ್ತೂರು ಕಡೆಗೆ ಪಂಜ, ನಿಂತಿಕಲ್ಲು, ಕಾಣಿಯೂರು ಮಾರ್ಗವಾಗಿ ಬರುತ್ತಿರುವ ಸಮಯ ಸುಮಾರು 19:30 ಗಂಟೆಗೆ ಮುರುಳ್ಯ್ , ಗ್ರಾಮದ ಸಮಹಾದಿ ಎಂಬಲ್ಲಿಗೆ ತಲುಪಿದಾಗ ಎದುರು ಕಡೆಯಿಂದ ಅಂದರೆ ಪುತ್ತೂರು ಕಡೆಯಿಂದ KA 01 MN 9155 ನಂಬರಿನ ಬೋರ್ವೆಲ್ ಲಾರಿಯೊಂದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾವು ಜಖಂಗೊಂಡು ಆಟೋರಿಕ್ಷಾದಲ್ಲಿದ್ದ ಪಿರ್ಯಾದಿದಾರರಿಗೆ ಎಡಕ್ಕೆ ಬೆರಳುಗಳಿಗೆ ರಕ್ತಗಾಯ ಹಾಗೂ ಎಡಗಾಲಿನ ಮೊಣಗಂಟಿಗೆ ಗುದ್ದಿದ ಗಾಯ, ಅಟೋ ರಿಕ್ಷಾದಲ್ಲಿದ್ದ ಸಹ ಪ್ರಯಾಣಿಕರಾದ ವಸಂತ ಎಂಬುವರಿಗೆ ದೇಹದ ಭಾಗಕ್ಕೆ ಗುದ್ದಿದ ನೋವುಂಟಾಗಿರುತ್ತದೆ. ಹಾಗೂ ಸರಸ್ವತಿ ಎಂಬುವರ ಬಲಕ್ಕೆ ಬೆರಳುಗಳಿಗೆ ರಕ್ತಗಾಯವಾಗಿದ್ದು, ಅಖಿಲಾ ಎಂಬುವಳಿಗೆ ತಲೆಗೆ ಗುದ್ದಿದ ನೋವಾಗಿರುತ್ತದೆ, ಸದ್ರಿ ಗಾಯದ ಚಿಕಿತ್ಸೆಯ ಬಗ್ಗೆ ಅಲ್ಲಿ ಸೇರಿದ ಸ್ಥಳೀಯರು, ಸ್ಥಳಿಯ ಅಂಬುಲೆನ್ಸ್ ಒಂದರಲ್ಲಿ ನಮ್ಮನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಪಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲಿಸಿಕೊಂಡು, ವಸಂತ, ಸರಸ್ವತಿ, ಹಾಗೂ ಅಖಿಲಾ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಹೋಗುವಂತೆ ಸೂಚಿಸಿದ ಮೇರೆಗೆ ಅವರುಗಳನ್ನು ಮಂಗಳೂರು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅಪರಾಧ ಕ್ರಮಾಂಕ: 05/2023 ಕಾನೂನಿನ ಕಲಂ:ಕಲಂ 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಝಬೈದಾ ಪ್ರಾಯ 39 ವರ್ಷ ಗಂಡ ಶರೀಪ್ ಕೆ.ಪಿ ವಾಸ ಕುದ್ದುಪದವು ಮನೆ ಕೇಪು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 19-02-2023ರಂದು ರಾತ್ರಿ 20.00 ಗಂಟೆಯಿಂದ 24.00 ಗಂಟೆಯ ಮಧ್ಯದ ಸಮಯದಲ್ಲಿ ಪಿರ್ಯಾದಿದಾರರ ಬಾಬ್ತು ಬಂಟ್ವಾಳ ತಾಲೂಕು ಅಳಿಕೆ ಗ್ರಾಮ ಕುದ್ದುಪದವು ಎಂಬಲ್ಲಿನ ವಾಸದ ಮನೆಗೆ ಯಾರೋ ಕಳ್ಳರು ಮನೆಯ ಆರ್ ಸಿ ಸಿ ಮೇಲೆ ಹೋಗಲು ಇರುವ ಬಾಗಿಲಿನ್ನು ಯಾವುದೋ ಆಯುಧದಿಂದ ಮೀಟಿ ಒಳಗೆ ಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಗಾಡ್ರೇಜ್ ಬೀಗ ಮುರಿದು ಗಾದ್ರೇಜ್‌ನಲ್ಲಿದ್ದ 08 ಗ್ರಾಂ ತೂಕದ ಮಗುವಿನ ಕೈ ಚೈನ್-01,ಸುಮಾರು ತಲಾ 8 ಗ್ರಾಂ ತೂಕದ ಮಗುವಿನ ಕಾಲು ಚೈನ್-2 ,ಸುಮಾರು 12 ಗ್ರಾಂ ತೂಕದ ಕುತ್ತಿಗೆಯ ಸರ-1, ಸುಮಾರು 12 ಪವನ್ ತೂಕದ ಕೈ ಬಳೆ-1 ಕಳ್ಳತನವಾಗಿರುವ ಒಟ್ಟು ಚಿನ್ನಾಭರಣಗಳ 48 ಗ್ರಾಂ ಆಗಿದ್ದು ಅಂದಾಜು ಮೌಲ್ಯ ರೂಪಾಯಿ 96000/-ಆಗಬಹುದು. ಹಾಗೂ ಗಾಡ್ರೇಜ್ ನಲ್ಲಿದ್ದ 15000 ನಗದು ಕಳ್ಳತನವಾಗಿರುತ್ತದೆ, ಕಳ್ಳತನವಾಗಿರುವ ಒಟ್ಟು ನಗದು ಮತ್ತು ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ-1,11.000/-ರೂ ಆಗಬಹುದು ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 24/2023  ಕಲಂ: 457,380 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ 20-02-2023 ರಂದು  ಮದ್ಯಾಹ್ನ 2-00 ಗಂಟೆ  ಸಮಯಕ್ಕೆ  ಕಡಬ  ತಾಲೂಕು  ಕೌಕ್ರಾಡಿ ಗ್ರಾಮದ ನೆಲ್ಯಾಡಿ ಎಂಬಲ್ಲಿರುವ  ಕ್ಲಾಸಿಕ್  ಬಾರ್  ಮತ್ತು  ರೆಸ್ಟೋರೆಂಟ್  ನ  ಹಿಂಬಾಗದ  ಕಂಪೌಂಡು ಒಳಗಡೆ  ಇಟ್ಟಿದ್ದ ಹಸಿರು  ಬಣ್ಣದ  03 ರಬ್ಬರ್  ಮ್ಯಾಟನ್ನು  ಬೈಕ್  ಪಿಟ್ಟರ್  ಆದ  ಸಿದ್ದೀಕ್   ಮತ್ತು  ಆಟೋರಿಕ್ಷಾ  ಚಾಲಕ ಸುನಿಲ್ ಎಂಬವರುಗಳು  ಕಳ್ಳತನ ಮಾಡುವ   ಬಗ್ಗೆ  ಮಾರುತಿ ಓಮ್ನಿ ಕಾರು ಕೆಎ: 01- ಎಂಜೆ-3818 ರಲ್ಲಿ 03  ಮ್ಯಾಟನ್ನು  ತುಂಬಿಸಿ ಇಟ್ಟಾಗ  ಅದನ್ನು  ಫಿರ್ಯಾಧಿದಾರರಾದ ಎ.ಸಿ ಮನೋಜ್ ಕುಮಾರ್ ತಂದೆ:ದಿ|| ಕಿ.ವಿ ಚಾಕೋ ವಾಸ:ಆಕೋಟೆಜಾಲು ಮನೆ ಶಿಬಾಜೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ರವರು  ನೋಡಿ ಆಪಾದಿತ ಸಿದ್ದಿಕ್ ನ್ನು ಹಿಡಿದುಕೊಂಡಾಗ ಇನ್ನೊರ್ವ ಅಪಾದಿತ ಸುನಿಲ್ ಎಂಬಾತನು ಓಡಿ ಪರಾರಿಯಾಗಿರುತ್ತಾನೆ, ನಂತರ  ಈ  ವಿಚಾರವನ್ನು  ನೆಲ್ಯಾಡಿ  ಹೊರಠಾಣೆಯ ಠಾಣಾಧಿಕಾರಿಯವರಿಗೆ ತಿಳಿಸಿ  ವಾಹನ ಸಮೇತ  ಒಪ್ಪಿಸಿರುವುದಾಗಿದೆ, ಕಳ್ಳತನ ಮಾಡಿದ  03 ರಬ್ಬರ್ ಮ್ಯಾಟ್ ನ  ಅಂದಾಜು ಮೌಲ್ಯ ರೂ:10,000/-ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 16/2023 ಕಲಂ: 379 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ

 

 

ಇತರೆ ಪ್ರಕರಣ: 2

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಾಜೇಶ್ ಆಳ್ವ ಎನ್   ಪ್ರಾಯ: 42 ವರ್ಷ, ತಂದೆ: ವೆಂಕಪ್ಪ ಆಳ್ವ ಎನ್ ವಾಸ: 2-131 ನಡ್ಚಾಲು ಮನೆ, ವೀರಕಂಭ ಗ್ರಾಮ ಮತ್ತು ಪೋಸ್ಟ್ ,ಬಂಟ್ವಾಳ ತಾಲೂಕು.ದ.ಕ ಜಿಲ್ಲೆ ರವರು ಬೆಂಗಳೂರಿನ HYATECH PROPER SOLUTIONS  ಕಂಪೆನಿಯಲ್ಲಿ ಕೆಲಸವನ್ನು  work from home ಆಗಿ ಮಾಡುತ್ತಿರುವುದಾಗಿದೆ ಪ್ರಸ್ತುತ ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿ ಕಡಿಮೆ ವೇತನ ನೀಡುತ್ತಿರುವುದರಿಂದ   ಫೇಸ್ಬುಕ್ ನಲ್ಲಿ ಬಂದಿರುವ ಜಾಹೀರಾತುನಲ್ಲಿ ಇದ್ದ    KEEPUPPUSHING LMTD(KFC JOBS NOW HIRING 2023/2024) ಬಗ್ಗೆ   ಪಿರ್ಯಾದಿದಾರರು  ವಾಟ್ಸಾಫ್ ನಂಬರಿನ ಮುಖಾಂತರ ಅಪರಿಚಿತ ವ್ಯಕ್ತಿಯ ನಂಬರಿಗೆ ದಿನಾಂಕ:18-12-2022 ರಂದು ಸಂಪರ್ಕ ಮಾಡಿ  ಜಾಬ್ ಬಗ್ಗೆ ವಿಚಾರಿಸಿದಾಗ ಜಾಬ್ ಆಪ್ಲೀಕೇಶನ್  ಫಾರ್ಮ್ ಕಳುಹಿಸಿದ್ದು ಅದರಲ್ಲಿ ಬಯೋಡೇಟಾ ಹಾಕಿ ಕಳುಹಿಸಿದಾಗ, ಅದರಲ್ಲಿ ಬೇರೆ ಬೇರೆ ಜಾಬ್ನ ಬಗ್ಗೆ ಮಾಹಿತಿ ನೀಡಿದಂತೆ ಪಿರ್ಯಾದಿದಾರರು Admin related ಕೆಲಸ ಕೇಳಿರುವುದಕ್ಕೆ ಈಗ ಅದು ಜಾಬ್ ಇಲ್ಲ ಈಗ Food packer ಆಗಿ ಸೇರಿಕೊಳ್ಳಿ ನಂತರ ಮೇನೆಜ್ಮೆಂಟ್(Admin)ಗೆ ಸಂಬಂಧಿಸಿದ ಜಾಬ್ಗೆ ಸೇರಿಕೊಳ್ಳಬಹುದು ಎಂದು ಅಪರಿಚಿತ ವ್ಯಕ್ತಿಗಳು ತಿಳಿಸಿದಕ್ಕೆ  Offering letter ಕಳುಹಿಸಿ 4000/- ಡಾಲರ್  ವೇತನ ಮತ್ತು ವಾರಕ್ಕೆ 300 ಡಾಲರ್ ಚಾರ್ಜಸ್ ಹಾಗೂ ವೀಸಾವನ್ನು ನೀಡುವುದಾಗಿ ಪಿರ್ಯಾದಿದಾರರು ಒಪ್ಪಿ . ಆಧಾರ್ಕಾರ್ಡ್, ಪಾಸ್ಪೋರ್ಟ್ ಪ್ರತಿಗಳನ್ನು ಕಳುಹಿಸಿರುವುಧಾಗಿದೆ. ನಂತರ ವೀಸಾವನ್ನು ರೆಡಿ ಮಾಡುವ  ಬಗ್ಗೆ ದಿನಾಂಕ;07-01-2023 ರಂದು  ರೂ. 10000/-, ಮತ್ತು 09-01-2023- 10000/- ರಂದು ವೀಸಾ ಪ್ರೊಸೆಸಿಂಗ್ ಬಗ್ಗೆ ನಂತರ ದಿನಾಂಕ:14-01-2023ರಂದು ವೀಸಾ Approval ಬಗ್ಗೆ  ರೂ.33,000/- ಕಳುಹಿಸಲು ತಿಳಿಸಿದ್ದಕ್ಕೆ ಪಿರ್ಯಾದಿದಾರರ ಬ್ಯಾಂಕ್ ಆಫ್ ಬರೋಡಾ ಖಾತೆ ನಂ:71250100010650 ನೇದರಿಂದ ಮತ್ತು ಕರ್ನಾಟಕ ಬ್ಯಾಂಕ್ ಖಾತೆ ನಂ: 9122500100349101 ನೇದರಿಂದ ವಿತ್ಡ್ರಾ ಮಾಡಿ  ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವೀಸಾ ಪ್ರೊಸೆಸಿಂಗ್ ಚಾರ್ಜಸ್,  , ಕಸ್ಟಮ್ ಕ್ಲಿಯರೆನ್ಸ್ , ಹಾಗೂ ವಿವಿಧ ಚಾರ್ಜಸ್ಗಳಿಗಾಗಿ ಹಣವನ್ನು ಅವರು ಕೇಳಿದಂತೆ ಹಂತ ಹಂತವಾಗಿ   ಎಟಿಎಮ್ Cash deposit machine ಮುಖಾಂತರ ಪೋನ್ ಪೇ ಮತ್ತು ಪೇಟಿಮ್ ಮುಖಾಂತರ   ಅಪರಿಚಿತರ ನೀಡಿರುವ ಬ್ಯಾಂಕ್ ಖಾತೆಗಳಿಗೆ   ಕಳುಹಿಸಿದ್ದು, ಹೀಗೆ ಒಟ್ಟು ರೂ. 9,79,000/- ಹಣವನ್ನು  ಪಡೆದು ವಂಚಿಸಿದ್ದು ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸು ಠಾಣೆ ದ.ಕ.ಜಿಲ್ಲೆ ಮಂಗಳೂರು ಅ.ಕ್ರ.06/2023 ಕಲಂ : 66 (D) IT Act  & 419, 420 IPC                                                                                       ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ದ.ಕ ಮಹಿಳಾ ಪೊಲೀಸ್ ಠಾಣೆ : ದೂರುದಾರರಾದ ಸಂತ್ರಸ್ಥ ಯುವತಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ನಿರ್ವಾಹಕಳಾಗಿದ್ದು ದಿನಾಂಕ : 20.02.2023  ರಂದು  ಸಂಜೆ   ಕರ್ತವ್ಯದಲ್ಲಿದ್ದಾಗ ಪುತ್ತೂರು ಬಸ್‌ ನಿಲ್ದಾಣದಿಂದ ಹೊರಟು, ಬಸ್ ಮಾರ್ಕೆಟ್‌ ಬಳಿಯ ತಂಗುದಾಣಕ್ಕೆ ತಲುಪಿದಾಗ ಅಲ್ಲಿಂದ ಅಂಗವಿಕಲರೊಬ್ಬರು ಮತ್ತು ವೃದ್ಧರೊಬ್ಬರು ಬಸ್ಸಿಗೆ ಹತ್ತಿದ್ದು,  ಬಸ್ಸಿನ ಹಿಂಭಾಗದ ಮೂರನೇ ಸೀಟಿನಲ್ಲಿ ಕುಳಿತಿದ್ದ ಯುವಕನಲ್ಲಿ ಪಿರ್ಯಾದಿದಾರರು ಅಂಗವಿಕಲರಿಗೆ ಸೀಟು ಬಿಟ್ಟುಕೊಡುವಂತೆ ಹೇಳಿದಾಗ ಯುವಕನು ಅವ್ಯಾಚವಾಗಿ ಬೈದು, ಸಂತ್ರಸ್ತ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಲ್ಲದೆ  ಹಲ್ಲೆ ನಡೆಸಿರುತ್ತಾನೆ. ಈ ವೇಳೆಗೆ ಸದರಿ ಯುವತಿ ಬೊಬ್ಬೆ ಹೊಡೆದಾಗ ಅರೋಪಿ ಯುವಕನು ಬಸ್ಸಿನಿಂದ ಇಳಿದು ಓಡಿ ಹೋಗಿದ್ದು, ಪಿರ್ಯಾದಿದಾರರು ಇತರ ಪ್ರಯಾಣಿಕರಲ್ಲಿ ವಿಚಾರಿಸಲಾಗಿ ಆತನು ಹಸನ್‌ ಮುರ ಎಂದು ತಿಳಿದಿರುತ್ತದೆ. ಬಳಿಕ ಪಿರ್ಯಾದಿದಾರರು ವಿಚಾರವನ್ನು ಮೇಲಾಧಿಕಾರಿಯವರಿಗೆ ತಿಳಿಸಿ ಬದಲಿ ಬಸ್ಸು ಬಂದ ಬಳಿಕ ಚಿಕಿತ್ಸೆಗೆ ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ದ.ಕ ಮಹಿಳಾ ಪೊಲೀಸ್‌ ಠಾಣೆಯಲ್ಲಿ  ಕಲಂ: 504, 323, 353, 354 ಐಪಿಸಿ‌ ಯಂತೆ‌ ಪ್ರಕರಣ ದಾಖಲಿಸಲಾಗಿದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುರೇಶ ರೈ ಪ್ರಾಯ :47 ವರ್ಷ ತಂದೆ: ವಿಠಲ ರೈ ವಾಸ: ನೈಲಾ ಮನೆ ರೆಂಜಿಲಾಡಿ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ: 20.02.2023 ರಂದು  ಬೆಳಗಿನ ಜಾವ 06.30 ಗಂಟೆಗೆ ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಆನೆ ದಾಳಿ ಮಾಡಿರುವ ಬಗ್ಗೆ ವಿಷಯ ತಿಳಿದು ತಕ್ಷಣ ಪಿರ್ಯಾದುದಾರರು ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿಗೆ ಬಂದು ನೋಡಲಾಗಿ ನೈಲ-ಕರ್ಮೆಣ-ಪೇರಡ್ಕ ಸಂಪರ್ಕಿಸುವ ಗ್ರಾಮ ಪಂಚಾಯತ್ ರಸ್ತೆಯ ಪಕ್ಕದಲ್ಲಿ ಆನೆ ದಾಳಿಯಿಂದ ಕಾಡು ಪೊದೆಯಲ್ಲಿ ಮೃತಪಟ್ಟವರ ಮೃತದೇಹಗಳು ಬಿದ್ದುಕೊಂಡಿರುತ್ತದೆ ಪಿರ್ಯಾದುದಾರರು ಸದ್ರಿ ಮೃತ ದೇಹಗಳನ್ನು ನೋಡಲಾಗಿ ರೆಂಜಿಲಾಡಿ ಗ್ರಾಮದ ರಮೇಶ್‌ ರೈ ನೈಲ ಎಂಬವರದ್ದಾಗಿದ್ದು ಸದ್ರಿ ಮೃತರ ಮೇಲೆ ಆನೆ ದಾಳಿ ಮಾಡಿ ಮೃತದೇಹದ ಭಾಗಗಳು ಬೇರ್ಪಟ್ಟು ಮೃತಪಟ್ಟಿರುವುದಾಗಿರುತ್ತದೆ. ಸ್ಥಳದಲ್ಲಿಯೇ ಮತ್ತೊಂದು ಮೃತ ದೇಹವು ಬಿದ್ದುಕೊಂಡಿದ್ದು  ನೋಡಲಾಗಿ ಕುಮಾರಿ ರಂಜಿತ  ರೈ ಎಂಬವರದ್ದಾಗಿದ್ದು ಸದ್ರಿ ಮೃತರ ಮೇಲೆ ಸಹ ಆನೆ ದಾಳಿ ಮಾಡಿದ್ದು ಮೃತರ ತಲೆ ಮುತ್ತು ಮುಖಕ್ಕೆ ಗಂಭೀರ ಗಾಯವಾಗಿ ಮೃತಪಟ್ಟಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 06/2023 ಕಲಂ:174  ಸಿ ಆರ್‌ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಾಜೇಶ್ ಎ ಪ್ರಾಯ 34 ವರ್ಷ, ತಂದೆ: ದಿ: ಪ್ರಭಾಕರ ನಾಯಕ್, ವಾಸ: ಪಂಜಿಗಾರು ಮನೆ, ಬಾಳಿಲ ಗ್ರಾಮ, ಸುಳ್ಯ ತಾಲೂಕು, ದ.ಕ. ಜಿಲ್ಲೆ. ರವರು ಸುಳ್ಯ ತಾಲೂಕು ಬಾಳಿಲ ಗ್ರಾಮದ ಪಂಜಿಗಾರು ನಿವಾಸಿಯಾಗಿದ್ದು, ದಿನಾಂಕ 20.02.2023 ರಂದು ಸಂಜೆ 4-00 ಗಂಟೆ ಬೆಳ್ಳಾರೆ ಪೇಟೆಗೆ ಹಾಲಿನ ಸೊಸೈಟಿಗೆ ಕೆಲಸಕ್ಕೆ ಹೋದವರು ಮರಳಿ ವಾಪಾಸ್ ರಾತ್ರಿ 7-30 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿದ್ದ ತಾಯಿ ಶ್ರೀಲತಾ ರವರು ಕಾಣದೇ ಇದ್ದು, ಸುತ್ತ ಮುತ್ತ ಹುಡುಕಾಡಿದಾಗ ಫಿರ್ಯಾದಿದಾರರ ತಾಯಿ ಶ್ರೀಲತಾ ರವರು ಅಡಿಕೆ ಹೆಕ್ಕಲೆಂದು ತೋಟಕ್ಕೆ ಹೋದವರು ಆಕಸ್ಮಿಕವಾಗಿ ಕಾಲು ಜಾರಿ ತೋಟದಲ್ಲಿದ್ದ ಆವರಣವಿಲ್ಲದ ಕೆರೆಗೆ ಬಿದ್ದು, ನೀರಿನಲ್ಲಿ ಮುಳುಗಿ ಈಜು ಬಾರದೇ ಮೃತಪಟ್ಟಿರುವುದೇ ಈ ಬಗ್ಗೆ  ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್  04/2023 ಕಲಂ 174 ಸಿ.ಆರ್.ಪಿ.ಸಿ.. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-02-2023 12:40 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080