ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦2

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ನಾಗೇಶ್ ಪ್ರಾಯ: 40 ವರ್ಷ ತಂದೆ: ಗಿರಿಯಪ್ಪ ಮೂಲ್ಯ ವಾಸ: ಶಾರದ ನಗರ ಮನೆ ಸಜೀಪಮುನ್ನೂರು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 18-03-2023 ರಂದು ಪಿರ್ಯಾದುದಾರರ ಹೆಂಡತಿ ಗೀತಾರವರು ಮಾರ್ನಬೈಲು ಎಂಬಲ್ಲಿಗೆ ಕೆಲಸಕ್ಕೆ ಹೋಗಿ ಅಲ್ಲಿ ಕೆಲಸ ಮುಗಿಸಿ ವಾಪಾಸು ಮನೆ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ಸುಮಾರು 13:30 ಗಂಟೆಗೆ ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿ ಡಾಮಾರು ರಸ್ತೆಯಲ್ಲಿ ಮುಡಿಪು ಕಡೆಯಿಂದ ಮೆಲ್ಕಾರ್ ಕಡೆಗೆ KA-19-EQ-4648 ನೇ ಮೋಟಾರ್ ಸೈಕಲೊಂದನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಗೀತಾರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಪರಿಣಾಮ ನನ್ನ ಹೆಂಡತಿ ಗೀತಾ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಗಾಯ ನೋವುಗಳಾದವರನ್ನು ಸಾರ್ವಜನಿಕರು ಉಪಚರಿಸಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.  ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 45/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ನವೀನ ಎಂ ಪ್ರಾಯ 46 ವರ್ಷ, ತಂದೆ: ಶೆಷಪ್ಪ ಪೂಜಾರಿ, ವಾಸ: ಕುಡುಗುಡ್ಡೆ ಮನೆ, ಬಾರ್ಯ ಗ್ರಾಮ & ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 20-03-2023 ರಂದು 08:45 ಗಂಟೆಗೆ ಆರೋಪಿ ಓಮ್ನಿ ಕಾರು ಚಾಲಕ ಶ್ರೀಪತಿ ಎಂ ವಿ ಎಂಬವರು KA-21-M-6554 ನೇ ನೋಂದಣಿ ನಂಬ್ರದ ಓಮ್ನಿ ಕಾರಿನಲ್ಲಿ ಸಂಧ್ಯಾ ಎಂ ಎಸ್‌, ಸುಶ್ಮಿತ ಎಂ ಎಸ್‌ ರವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಹೋ ಗಿ, ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ  ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ನವೀನ ಎಂ ರವರು ಚಾಲಕರಾಗಿ, ವಾಮನ ಗೌಡ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಬಾರ್ಯ ಕಡೆಯಿಂದ ಉಪ್ಪಿನಂಗಡಿ ಕಡಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-C-3004ನೇ ನೋಂದಣಿ ನಂಬ್ರದ ಅಟೋರಿಕ್ಷಾಗೆ ಓಮ್ನಿ ಕಾರು ಅಪಘಾತವಾಗಿ, ನಂತರ ಓಮ್ನಿ ಕಾರು ಮುಂದುವರೆದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ KA-21-EB-3258ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಅಪಘಾತವಾಗಿರುತ್ತದೆ. ಅಪಘಾತದಿಂದ ಪಿರ್ಯಾದುದಾರರಾದ ನವೀನ ಎಂಬವರಿಗೆ ಮೂಗಿಗೆ, ಎಡ ಕೈಯ ಮಣಿಗಂಟಿನ ಬಳಿ, ಎಡಕಾಲಿನ ಮೊಣಗಂಟಿನ ಬಳಿ ಗುದ್ದಿದ ಹಾಗೂ ರಕ್ತಗಾಯ, ವಾಮನ ಗೌಡ ರವರಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆ ತಂದಿದ್ದು, ಪಿರ್ಯಾದುದಾರರು ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ, ವಾಮನ ಗೌಡ ರವರು ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಹೋಗಿರುತ್ತಾರೆ. ಆರೋಪಿ ಓಮ್ನಿ ಕಾರು ಚಾಲಕ ಶ್ರೀಪತಿ ಎಂ ವಿ ಮತ್ತು ಪ್ರಯಾಣಿಕರಾದ ಸಂಧ್ಯಾ ಎಂ ಎಸ್‌, ಸುಶ್ಮಿತ ಎಂ ಎಸ್‌ ರವರಿಗೂ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಹೋಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 47/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು  ಪ್ರಕರಣ: ೦1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗಣೇಶ್‌ ಕೆ (44) ತಂದೆ: ಧನಂಜಯ ವಾಸ: ಅನುಗ್ರಹ ನಿಲಯ ರೆಬೆಲ್ಲೋ ಕಾಂಪೌಂಡ್‌ ಹತ್ತಿರ ದರ್ಬೆ ಅಂಚೆ ಮರೀಲ್‌ ಕೆಮ್ಮಿಂಜೆ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ  ದಿನಾಂಕ 12.03.2023 ರಂದು ಬೆಳಿಗ್ಗೆ 11.30 ಗಂಟೆಗೆ ಮನೆಯಿಂದ ತನ್ನ ಬಾಬ್ತು ಮೋಟಾರು ಸೈಕಲ್  ನಂಬ್ರ ಕೆಎ 21 ಎಲ್‌ 6440 ನೇ ಹೀರೋ ಹೋಂಡಾ ಫ್ಯಾಶನ್ ಫ್ರೋ ದಲ್ಲಿ ಹೊರಟು ಪುತ್ತೂರು ಕಸಬಾ ಗ್ರಾಮ ಚಿಕ್ಕಪುತ್ತೂರು  ಬಳಿಯ ಮಡ್ಯಾಲ ಕಟ್ಟೆ ಎಂಬಲ್ಲಿ ಚಿದಂಭರ ಗೌಡ ಕುಟುಂಬದ ನೇಮೋತ್ಸವ ಕಾರ್ಯಕ್ರಮಕ್ಕೆ ಸಮಯ ಸುಮಾರು 12.15 ಗಂಟೆಗೆ ತಲುಪಿ ತನ್ನ ಬಾಬ್ತು ಮೋಟಾರು ಸೈಕಲ್‌ನ್ನು ಲಾಕ್ ಮಾಡಿ ನಿಲ್ಲಿಸಿ ಕಾರ್ಯಕ್ರಮಕ್ಕೆ ತೆರಳಿದ್ದು, ಅದೇ ದಿನ ಸುಮಾರು 13.30 ಗಂಟೆಗೆ ವಾಪಸು ಬಂದು ನೋಡಿದಾಗ ಸ್ಥಳದಲ್ಲಿ ನಿಲ್ಲಿಸಿದ್ದ ಮೋಟಾರು ಸೈಕಲ್‌ ಕಾಣಿಸದೇ ಇದ್ದು, ಸದ್ರಿ ಮೋಟಾರು ಸೈಕಲ್‌ನ್ನು ಹುಡುಕಾಡಲಾಗಿ ಪತ್ತೆಯಾಗದೇ ಇರುವುದರಿಂದ ದಿನಾಂಕ 12.03.2023 ರಂದು 12.15 ರಿಂದ 13.30 ಗಂಟೆಯ ಮಧ್ಯೆಯಲ್ಲಿ ಪುತ್ತೂರು ಕಸಬಾ ಗ್ರಾಮ ಚಿಕ್ಕಪುತ್ತೂರು  ಬಳಿಯ ಮಡ್ಯಾಲ ಕಟ್ಟೆ ಎಂಬಲ್ಲಿ ಕೆಎ 21 ಎಲ್‌ 6440 ನೇ ಹೀರೋ ಹೋಂಡಾ ಫ್ಯಾಶನ್ ಫ್ರೋ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಮೋಟಾರು ಸೈಕಲಿನ ಅಂದಾಜು ಮೌಲ್ಯ ರೂ 15,000/- ಆಗಬಹುದು. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 21/2023 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: ೦1

ಧರ್ಮಸ್ಥಳ ಪೊಲೀಸ್ ಠಾಣೆ : ಧರ್ಮಸ್ಥಳ ಪೊಲೀಸ್‌ ಠಾಣೆಯ ಪೋಲೀಸ್‌ ಉಪನಿರೀಕ್ಷಕರು ಠಾಣೆಯಲ್ಲಿರುವ ಸಮಯ ಬೆಳಾಲು ಗ್ರಾಮದ ಬೀಟ್‌ ಸಿಬ್ಬಂದಿ ರವರು ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಎರ್ಮಲ ಎಂಬಲ್ಲಿ ಶೇಂದಿ ಅಂಗಡಿಯನ್ನಿಟ್ಟುಕೊಂಡಿರುವ ಶ್ರೀಧರ ಪೂಜಾರಿ ಎಂಬವರ ಅಂಗಡಿಯಲ್ಲಿ ಯಾವುದೇ ದಾಖಲಾತಿ ಇಲ್ಲದೆ ಅಕ್ರಮವಾಗಿ ಅಮಲು ಪದಾರ್ಥ ವನ್ನು ಶೇಖರಿಸಿಟ್ಟು ವ್ಯಾಪಾರಮಾಡಲು ಪ್ರಯತ್ನಿಸುತ್ತಿರುವುದಾಗಿ ಮಾಹಿತಿಯನ್ನು ತಿಳಿಸಿದ್ದು, ಪಿರ್ಯಾದಿದಾರರು ಈ ಮಾಹಿತಿಯನ್ನು ಮೇಲಾಧಿಕಾರಿಯವರಿಗೆ ತಿಳಿಸಿ ಅವರ ಮೌಖಿಕ ಅನುಮತಿಯನ್ನು ಪಡೆದು ಬಳಿಕ ಸಿಬ್ಬಂದಿಗಳ ಜೊತೆ ಠಾಣೆಯಿಂದ ಹೊರಟು 15.30 ಗಂಟೆಯ ವೇಳೆಗೆ ಬೆಳಾಲು ಗ್ರಾಮದ ಎರ್ಮಲ ಎಂಬಲ್ಲಿರುವ ಶ್ರೀಧರರವರ ಅಂಗಡಿಯಿಂದ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಶ್ರೀದರ ಪೂಜಾರಿ ಎಂಬವರ ಅಂಗಡಿಯ ಬಳಿಗೆ ಹೋಗುತ್ತಿದ್ದಾಗ ಹಿಂಬದಿ ಬಾಗಿಲಿನ ಮುಖೇನ ಒರ್ವನು ಓಡಿಹೋಗಿದ್ದು ಕೂಡಲೇ  ಸಿಬ್ಬಂಧಿಯವರು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದ್ದು ಆದರೆ ಈ ವೇಳೆ ಈ ವ್ಯಕ್ತಿಯು ಹತ್ತಿರದಲ್ಲಿರುವ ರಬ್ಬರ್‌ ಮರದ ತೋಟದೊಳಗೆ ಹೋಗಿ ತಪ್ಪಿಸಿಕೊಂಡಿದ್ದು ಬಳಿಕ ಈ ಅಂಗಡಿಗೆ  15.35 ಗಂಟೆಗೆ ಧಾಳಿ ನಡೆಸಿದ ಪಿರ್ಯಾದಿದಾರರು ಸಿಬ್ಬಂಧಿಯವರು ಮತ್ತು  ಪಂಚರುಗಳು ಅಂಗಡಿಯೊಳಗೆ ಪರಿಶೀಲನೆ ನಡೆಸಿದಾಗ ಒಂದು ಪ್ಲಾಸ್ಟಿಕ್‌ ಚೀಲದಲ್ಲಿ ಅಮಲು ಪದಾರ್ಥದ ಸ್ಯಾಚೆಟ್‌ಗಳು  ಇರುವುದು ಕಂಡು ಬಂದಿದ್ದು ಪರಿಶೀಲಿಸಿದಾಗ ಇದರಲ್ಲಿ  180 ML MYSORE LANCER  ಎಂಬ ಹೆಸರಿರುವ ಒಟ್ಟು 30 ಸ್ಯಾಚೆಟ್‌ಗಳು ಕಂಡು ಬಂದಿದ್ದು ಇವುಗಳ ಒಟ್ಟು 5.4 ಲೀಟರ್‌ ಇದ್ದು ಒರ್ವ ವ್ಯಕ್ತಿಯು ತನ್ನ ಸ್ವಂತ ಉಪಯೋಗಕ್ಕೆ ತನ್ನ ವಶದಲ್ಲಿ ಇರತಕ್ಕ ಅಮಲುಪದಾರ್ಥದ ಅನುಪಾತಕ್ಕಿಂತ ಜಾಸ್ತಿಯಾಗಿ ಇಟ್ಟುಕೊಂಡಿದ್ದು ಇದರ ಮೌಲ್ಯವು ಸುಮಾರು 2,250/ ರೂಪಾಯಿ ಆಗಬಹುದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ CR NO 18/2023 ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: ೦2

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಜಯಶ್ರೀ  ಪ್ರಾಯ(30) ಗಂಡ ಶ್ರೀನಿವಾಸ ,ಕಲ್ಲಾಜೆ ಮನೆ ಮನೆ, ಉಜಿರೆ ಗ್ರಾಮ ಬೆಳ್ತಂಗಡಿ ಗ್ರಾಮ  ತಾಲೂಕು ಎಂಬವರ ದೂರಿನಂತೆ  ತನ್ನ  ಗಂಡ, ಮಕ್ಕಳಾದ  ನಿಧಿಶ್ರೀ ಮತ್ತು ಕಾವ್ಯಶ್ರೀ ಳೊಂದಿಗೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರರ  ಗಂಡ ಶ್ರೀನಿವಾಸ ರವರು ಬಂಟ್ವಾಳ ತಾಲೂಕು ರಾಯಿ ಗ್ರಾಮದ ಹೋರಾಂಗಳ ಎಂಬಲ್ಲಿ ತೋಟದ ಕೂಲಿ ಕೆಲಸ ಮಾಡಿಕೊಂಡಿದ್ದು, ಅವರು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು. ಅಂತೆಯೇ ಸುಮಾರು 1 ½ ತಿಂಗಳ ಹಿಂದೆ ಕೂಲಿ ಕೆಲಸಕ್ಕೆ  ಹೋದವರು ವಾಪಾಸು ಬಂದಿರುವುದಿಲ್ಲ. ದಿನಾಂಕ 19-03-2023 ರಂದು ರಾತ್ರಿ 10.30 ಗಂಟೆಗೆ ಮನೆಗೆ ಮಕ್ಕಳ ಜೊತೆ ಮೊಬೈಲ್‌ ನಲ್ಲಿ ಮಾತಾಡಿದ್ದು  ದಿನಾಂಕ 20-03-2023 ರಂದು ಮದ್ಯಾಹ್ನ 2.30 ಗಂಟೆಗೆ ತೋಟವನ್ನು ನೋಡಿಕೊಂಡಿದ್ದ ನೋಯಿ ಕೆ.ಪಿ ರವರು ಪಿರ್ಯಾದುದಾರರಿಗೆ ಪೋನು ಮಾಡಿ ನಿನ್ನ ಗಂಡ ಶ್ರೀನಿವಾಸರವರು  ಹೋರಾಂಗಳ ತೆಂಗಿನ ಮರದ ತೋಟದಲ್ಲಿರುವ ನೀರಿನ ಟ್ಯಾಂಕಿಗೆ ಬಿದ್ದು ಮೃತ ಪಟ್ಟಿರುತ್ತಾರೆ ಎಂದು ತಿಳಿಸಿದ್ದು ಪಿರ್ಯಾದಿ  ಮತ್ತು ಗಂಡನ  ಅಣ್ಣ ಹಾಗೂ ಸಂಬಂದಿಕರು ಹೋಗಿ  ನೋಡಿದಾಗ  ಪಿರ್ಯಾದುದಾರರ ಗಂಡ ಶ್ರೀನಿವಾಸರವರು  ತೋಟದ ಮದ್ಯದಲ್ಲಿರುವ ಆಳವಾದ ನೀರಿನ ಟ್ಯಾಂಕಿಗೆ ಬಿದ್ದಿರುವುದು  ಕಂಡು ಬಂದಿರುತ್ತದೆ. ಪಿರ್ಯಾದುದಾರರ ಗಂಡ ತೆಂಗಿನ ತೋಟದಲ್ಲಿರುವ ನೀರಿನ ಟ್ಯಾಂಕಿಗೆ ಬೋರ್‌ ವೆಲ್‌ ನಿಂದ ನೀರು ತುಂಬಿಸುತ್ತಿದ್ದು ನೀರು ಟ್ಯಾಂಕಿನಲ್ಲಿ ತುಂಬಿದೇಯೆ ಎಂದು ಇಣುಕಿ ನೋಡಿದ ಸಮಯ ಆಕಸ್ಮಿಕವಾಗಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ  ಯುಡಿ ಆರ್ ಸಂಖ್ಯೆ :14/2023 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪ್ರಕಾಶ ಪ್ರಾಯ 27 ವರ್ಷ  ತಂದೆ:ಸಂಜೀವ ಗೌಡ ವಾಸ:ಪಂಚಲಾಜೆ ಮನೆ  ಬಾರ್ಯ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ಸಂಜೀವ ಗೌಡ (57) ಎಂಬುವರು  ವಿಪರೀತ ಮದ್ಯ ಸೇವಿಸುವ ಅಭ್ಯಾಸರವರಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದವರು ದಿನಾಂಕ:20.03.2023ರಂದು 10.30 ಗಂಟೆಯಿಂದ 12.30 ಗಂಟೆ ಮದ್ಯದ  ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಪಂಚಲಾಜೆ ಎಂಬಲ್ಲಿ ಮನೆಯ ಸಮೀಪ ಶಾಮಿಯಾನ ಸೊತ್ತುಗಳನ್ನು ಇರಿಸುವ ಗೋಡೌನ್ ನಲ್ಲಿ ಮದ್ಯದ ಜೊತೆಯಲ್ಲಿ ಕಿಟನಾಶಕವನ್ನು ಬೆರೆಸಿ ಕುಡಿದು ಅಸ್ವಸ್ಥ್ವಗೊಂಡವರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಮದ್ಯಾಹ್ನ 2.20 ಗಂಟೆಯ ವೇಳೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ    19 /2023 ಕಲಂ:174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-03-2023 12:31 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080