ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಜಯ.ಕೆ  ಪ್ರಾಯ 47, ತಂದೆ: ದಿ|| ತುಕ್ರ ಮುಗೇರ, ವಾಸ: ಕಬ್ಬಿನಹಿತ್ತಲು ಮನೆ, ಅಡ್ಯನಡ್ಕ ಅಂಚೆ, ಕೇಪು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 19-04-2022 ರಂದು ಅವರ ಬಾಬ್ತು KA-19-HB-0842 ನೇ ಸ್ಕೂಟರಿನಲ್ಲಿ LPC ವಿಶೇಷ ಕರ್ತವ್ಯದಲ್ಲಿ ಆರೋಪಿ ಪತ್ತೆಯ ಬಗ್ಗೆ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಎಂಬಲ್ಲಿಗೆ ಹೋಗಿ ಆರೋಪಿಯ ಬಗ್ಗೆ ವಿಚಾರಿಸಿದಲ್ಲಿ ವಿಳಾಸದಲ್ಲಿ ಹಾಜರಿರದೆ ಇದ್ದು ವಿಟ್ಲಕ್ಕೆ  ಹೋಗಿರುವುದಾಗಿ ತಿಳಿದ ಮಾಹಿತಿಯಂತೆ ವಿಟ್ಲಕ್ಕೆ ಹೋಗಿ ವಿಚಾರಿಸಿದಲ್ಲಿ ಆರೋಪಿಯು ಬಗ್ಗೆ ಮಾಹಿತಿ ದೊರೆಯದ ಕಾರಣ ರಾತ್ರಿ ವಿಟ್ಲದಲ್ಲಿ ಉಳಕೊಂಡು ಈ ದಿನಾಂಕ 20-04-2022 ರಂದು ಕರ್ತವ್ಯದ ಬಗ್ಗೆ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 09:30 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಗಣೇಶ ಕೋಡಿ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಬಂದ KA-05-MM-9705 ನೇ ಕಾರನ್ನು ಅದರ ಚಾಲಕ ಉಮೇಶ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಮೇತ ಎಸೆಯಲ್ಪಟ್ಟು ಬಿದ್ದು ಎಡಭುಜಕ್ಕೆ ಗುದ್ದಿದ ನೋವು, ಎಡ ಹಾಗೂ ಬಲಕೈಯ ಮೊಣಗಂಟಿನ ಬಳಿ ಗುದ್ದಿದ ಹಾಗೂ ತರಚಿದ ರಕ್ತಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 46/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭೀಮಪ್ಪ ಪ್ರಾಯ:30 ವರ್ಷ ತಂದೆ : ಹನುಮಪ್ಪ ವಾಸ: ಹೂವುಲಗೇರಿ ಗ್ರಾಮ ಕುಷ್ಟಗಿ ತಾಲೂಕು ಕೊಪ್ಪಳ ಜಿಲ್ಲೆ. ಎಂಬವರ ದೂರಿನಂತೆ ದಿನಾಂಕ: 19-04-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು  KA 25 EM 5435 ನೇ ದ್ವಿ ಚಕ್ರ ವಾಹನದಲ್ಲಿ  ಸಹೊದ್ಯೋಗಿ ಧರೆಯಪ್ಪ ರವರನ್ನು ಕುಳ್ಳಿರಿಸಿಕೊಂಡು ಧರ್ಮಸ್ಥಳ – ಉಜಿರೆ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ರಾತ್ರಿ 9:00 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ KA 18 C 0082 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ರಸ್ತೆಯ  ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಎಡಕಾಲಿನ ಪಾದ, ಎಡಕಾಲಿನ ಕೋಲು ಕಾಲಿಗೆ, ಬಲ ಕೈ ಅಂಗೈ ಮಣಿ ಗಂಟಿಗೆ, ಹಣೆಗೆ ಗುದ್ದಿದ ಗಾಯ ಮತ್ತು ಸಹಸವಾರ ಧರೇಯಪ್ಪ ರವರಿಗೆ ಬಲಕಾಲಿನ ಕೋಲು ಕಾಲಿಗೆ, ಬಲ ಕೈ ಗೆ ಗುದ್ದಿದ ಗಾಯವಾಗಿ ಗಾಯಾಳುಗಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆ ಎಸ್‌ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 60/2022 ಕಲಂ; 279,337 IPC  ಮತ್ತು R R Rules 7ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಣೇಶ್ (46) ತಂದೆ : ಪೆರ್ನು ವಾಸ: ಕೂಳೂರು ಮನೆ, ಕಡಿರುದ್ಯಾವರ ಮುಂಡಾಜೆ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 20-04-2022  ರಂದು ರಾತ್ರಿ ಸಮಯ ಸುಮಾರು 7:25 ಗಂಟೆಗೆ  ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಸೊಮಂತಡ್ಕ ಪೇಟೆಯಲ್ಲಿ  ಪಾದಚಾರಿ ಯೋಗಿಶ್‌ ಎಂಬುವರು ರಸ್ತೆ ದಾಟುತ್ತಿರುವಾಗ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ KA  19 F 3474 ನೇ KSRTC ಬಸ್ಸನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಾದಚಾರಿ ಯೋಗಿಶ್‌ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯೋಗಿಶ್‌ ರವರು  ರಸ್ತೆಗೆ ಬಿದ್ದು ತಲೆಗೆ ಗುದ್ದಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಉಜಿರೆ ಎಸ್‌ ಡಿ ಎಮ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 61/2022 ಕಲಂ; 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಯಪ್ರಕಾಶ, ಪ್ರಾಯ 33 ವರ್ಷ, ತಂದೆ: ಕೊರಗಪ್ಪ ಗೌಡ, ವಾಸ: ದೇವಸ್ಯ ಮನೆ, ಬೆಳ್ಳಿಪ್ಪಾಡಿ ಅಂಚೆ & ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 20-04-2022 ರಂದು 16-00 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ದಿವಾಕರ ಎಂಬವರು KA-53-Q-9851 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿನಲ್ಲಿ  ಗಿರಿಜ ಮತ್ತು ದಕ್ಷ್(3ವ)  ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೆಳ್ಳಿಪ್ಪಾಡಿ ಕ್ರಾಸ್- ಕೊಡಿಮರ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬೆಳ್ಳಿಪ್ಪಾಡಿ ಗ್ರಾಮದ ಕೋರ್ಯ ಎಂಬಲ್ಲಿ ಗಿರಿಧರ ಎಂಬವರ ಅಂಗಡಿಯ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಮೋಟಾರ್ ಸೈಕಲ್ನಲ್ಲಿ ಒಂದು ಬದಿಗೆ ಕಾಲು  ಹಾಕಿ ಕುಳಿತ್ತಿದ್ದ ಗಿರಿಜಾರವರು ಮಗುವಿನೊಂದಿಗೆ ರಸ್ತೆಗೆ  ಬಿದ್ದು, ಗಿರಿಜಾರವರಿಗೆ ಮುಖಕ್ಕೆ ಗುದ್ದಿದ ನೋವಾಗಿ, ಮೂಗಿನಲ್ಲಿ ರಕ್ತ ಬರುತ್ತಿದ್ದವರನ್ನು ಚಿಕಿತ್ಸೆ ಬಗ್ಗೆ ಒಂದು ಅಟೋರಿಕ್ಷಾದಲ್ಲಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆ ತಂದಾಗ ಮೃತಪಟ್ಟಿರುವುದಾಗಿ ತಿಳಿಸಿದ್ದು,.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  73/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಚಂದ್ರ.ಡಿ  ಪ್ರಾಯ: 60 ವರ್ಷ ತಂದೆ; ದಿ|| ದೂಮಣ್ಣ ಶೆಟ್ಟಿ ವಾಸ; ಬಿ.ಡಿ.ಡಿ ಚೌಲ್ ನಂ:81 ರೂಂ.ನಂ;61 ಭಾಗೋಜಿ ವಗ್ಮಾರೆ ರೋಡ್ ಮಹೀಂದ್ರ ಟೌವರ್ ಹತ್ತಿರ ವರ್ಲಿ ಮುಂಬೈ, ಮಹರಾಷ್ಟ್ರ ಎಂಬವರ ದೂರಿನಂತೆ ಪಿಯಾದುದಾರರು ದಿನಾಂಕ; 18.04.2022 ರಂದು ಶ್ರೀ ದೇವರ ದರ್ಶನ ಪಡೆಯುವರೇ ಪತ್ನಿ ಸರಸ್ವತಿ ಹಾಗು ಮಗಳು ವಿದ್ಯಾಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಹೋಗಿ ದರ್ಶನ ಮುಗಿಸಿಕೊಂಡು ನಂತರ ಅಲ್ಲಿಂದ ಹೊರಟು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಶ್ರೀ ಸೌತ್ತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಮಧ್ಯಾಹ್ನ 02;00 ಗಂಟೆಗೆ ತಲುಪಿದ್ದು ಶ್ರಿ ದೇವರ ಸೇವೆ ಹಾಗು ದರ್ಶನ ಪಡೆದು ತೀರ್ಥಾ ಪ್ರಸಾದ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದು ಆ ಸಮಯ ಪಿರ್ಯಾದಿದಾರರ ಪತ್ನಿಯು ಕೈಯಲ್ಲಿ ಚಿನ್ನಾಭರಣಗಳಿದ್ದ ಹ್ಯಾಂಡ್ ಬ್ಯಾಗ್ ಹಿಡಿದುಕೊಂಡು ಸಾಲಿನಲ್ಲಿ ನಿಂತುಕೊಂಡಿದ್ದು ತೀರ್ಥ ಪ್ರಸಾದ ತೆಗೆದುಕೊಂಡು ನಂತರ ಕಾರಿನಲ್ಲಿ ಪ್ರಯಾಣಿಸುತ್ತಿರುವ ಸಮಯ ಮಧ್ಯಾಹ್ನ 3;00 ಗಂಟೆಗೆ ಬ್ಯಾಗನ್ನು ಪರಿಶೀಲಿಸಿದಾಗ ಬ್ಯಾಗ್ ನ ಜಿಪನ್ನು ತೆರೆದಿರುವುದು ಪಿರ್ಯಾದಿದಾರರ ಪತ್ನಿಯ ಗಮನಕ್ಕೆ ಬಂದಿರುತ್ತದೆ. ನಂತರ ಪಿರ್ಯಾದಿದಾರರು ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಬ್ಯಾಗ್ ನ ಒಳಗಡೆ ಪರ್ಸ್ ಕಾಣದೇ ಇದ್ದು ಅದರೊಳಗಡೆ ಇದ್ದ 1) ಸುಮಾರು 18 ಗ್ರಾಂ 196 ಮಿಲಿ ಗ್ರಾಂ ತೂಕದ ಡೈಮಂಡ್ ನೆಕ್ಲೇಸ್-01,  ಅಂದಾಜು ಮೌಲ್ಯ ರೂ 1,56.000/- 2) ಸುಮಾರು 10 ಗ್ರಾಂ ತೂಕದ ಜುಮುಕಿ ಒಂದು ಜೊತೆ  ಅಂದಾಜು ಮೌಲ್ಯ ರೂ 30,000/- ಹಾಗು 3) ಸುಮಾರು 10 ಗ್ರಾಂ ತೂಕದ ಉಂಗುರಗಳು -2  ಅಂದಾಜು ಮೌಲ್ಯ ರೂ 30,000/-  ಅಗಿದ್ದು. ಸದ್ರಿ ಚಿನ್ನಾಭರಣಗಳನ್ನು ಯಾರೋ ಕಳ್ಳರು ಶ್ರೀ ಸೌತ್ತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ತೀರ್ಥಾ ಪ್ರಸಾದ ತೆಗೆದುಕೊಳ್ಳುವ ಸಮಯ ಪರ್ಸ್ ಸಮೇತ ಚಿನ್ನಾಭರಣವನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ ರೂ 2,16,000/-ಆಗಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 30/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಭಿಷೇಕ  ಎಸ್ ಪ್ರಾಯ 25 ತಂದೆ: ಸವೀನ ಕುಮಾರ್ ಶೆಟ್ಟಿ ವಾಸ:ನೆಟ್ಲ್ ಚನಿಲ ಮನೆ ಗೋಳ್ತಮಜಲು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಾರರು ಈ ದಿನ ದಿನಾಂಕ 20-04-2022 ರಂದು ಮಧ್ಯಾಹ್ನ ಊಟ ಮಾಡುವರೇ ಗೋಳ್ತಮಜಲು ಗ್ರಾಮದ ಕಲ್ಲಡ್ಕದ  ಶ್ರೀ ಲಕ್ಷ್ಮೀ ಗಣೇಶ ಹೊಟೇಲ್ ಗೆ ಹೋಗುತ್ತಿರುವ ಸಮಯ ಪಾದರಕ್ಷೆ ವ್ಯಾಪಾರಿಯಾದ ವಸಂತಿಯವರು ಇಲ್ಲಿ ಅಪರಿಚಿತನೊಬ್ಬ ಬಿದ್ದು ಸತ್ತಿದಾನೆ ಎಂದು ತಿಳಿಸಿದಂತೆ ಮಧ್ಯಾಹ್ನ 2.15 ಗಂಟೆಗೆ ಸದ್ರಿ ಅಪರಿಚಿತ ವ್ಯಕ್ತಿಯ ಮೃತದೇಹವನ್ನು ನೋಡಿದಲ್ಲಿ ಈತನಿಗೆ ಸುಮಾರು 50 ರಿಂದ 55 ವರ್ಷ ಪ್ರಾಯವಾಗಬಹುದು,.ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 16-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-04-2022 11:02 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080