ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಂದ್ರಹಾಸ (43) ತಂದೆ: ಅಂತಪ್ಪ ವಾಸ: ಕಲ್ಲೇರಿ ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 19-06-2022 ರಂದು ಪಿರ್ಯಾದಿದಾರರು KA 21 ಎಸ್ 9603 ನೇ ಮೋಟಾರು ಸೈಕಲ್‌ ನಲ್ಲಿ  ಸಹ ಸವಾರನನ್ನಾಗಿ ಶಶಿಧರ್ ಭಂಡಾರಿ ರವರನ್ನು ಕುಳ್ಳಿರಿಸಿಕೊಂಡು ಉಜಿರೆ- ಧರ್ಮಸ್ಥಳ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 10.00 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ  ಕನ್ಯಾಡಿ ಶಾಲೆಯ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಮುಂದಿನಿಂದ  ಅಂದರೆ ಉಜಿರೆ ಕಡೆಯಿಂದ ಧರ್ಮಸ್ಥಳದ ಕಡೆಗೆ ಕೆ ಎ 16 ಎನ್ 1375 ನೇ ಬೊಲೆರೋ ಜೀಪನ್ನುಅದರ ಚಾಲಕ ಯಾವುದೇ ಸೂಚನೆ ನೀಡದೇ ಒಮ್ಮೆಲೇ ರಸ್ತೆಯ ಬಲಬದಿಗೆ ಅಂದರೆ ಅತ್ರಾಯ ಲಾಡ್ಜ್ ಕಡೆಗೆ ದುಡುಕುತನದಿಂದ  ಚಲಾಯಿಸಿ ಪಿರ್ಯಾದಿದಾರರ ಮೊಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ಮತ್ತು ಸಹ ಸವಾರ ಮೋಟಾರು ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು ಪಿರ್ಯಾಧಿದಾರರಿಗೆ ಎಡಕಣ್ಣಿನ ಮೇಲ್ಭಾಗಕ್ಕೆ, ಎಡಕೈ ಬೆರಳುಗಳಿಗೆ  ಗುದ್ದಿದ ರಕ್ತಗಾಯ ಹಾಗೂ ಶಶಿಧರ್  ಭಂಡಾರಿ ರವರಿಗೆ ಎಡಬದಿಯ ಎದೆಗೆ ಗುದ್ದಿದಗಾಯಗೊಂಡು ಚಿಕಿತ್ಸೆಯ ಬಗ್ಗೆಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 87/2022 ಕಲಂ: 279, 337 ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನವಾಜ್ ಪ್ರಾಯ :23 ತಂದೆ: ಮುಸ್ತಫಾ ವಾಸ: ಗಾಂಧಿ ನಗರ ಮನೆ ಚಾರ್ಮಾಡಿ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 18-06-2022 ರಂದು ಪಿರ್ಯಾದಿದಾರರು KA 70 H 0320 ನೇ ಮೋಟಾರು ಸೈಕಲ್‌ ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಮೋಟಾರು ಸೈಕಲ್ ನ್ನು ಸವಾರ ಮಹಮ್ಮದ್‌ ಸಮೀರುದ್ದಿನ್‌ ರವರು ಸವಾರಿ ಮಾಡಿಕೊಂಡು ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಬರುತ್ತಾ ಸಮಯ ಸುಮಾರು ಬೆಳಿಗ್ಗೆ 10:45 ಗಂಟೆಗೆ ಬೆಳ್ತಂಗಡಿ ತಾಲೂಕು ಚಿಬಿದ್ರೆ ಗ್ರಾಮದ ಆಲಾಜೆ ಕ್ರಾಸ್‌ ಎಂಬಲ್ಲಿ ಮೋಟಾರು ಸೈಕಲ್‌ ನ್ನು ದುಡುಕುತನದಿಂದ ಸವಾರಿ ಮಾಡಿ ಸವಾರನ ಚಾಲನಾ ಹತೋಟಿ ತಪ್ಪಿ ಪಿರ್ಯಾದಿದಾರರು ಮತ್ತು ಸವಾರ ಸಮೀರುದ್ದಿನ್‌ ರವರು ಮೋಟಾರು ಸೈಕಲ್‌ ನೊಂದಿಗೆ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲ ಕೈಯ ಮಣಿಗಂಟಿನ ಬಳಿ ಹಾಗೂ ಬಲ ಕೈಯ ಬೆರಳುಗಳಿಗೆ ಗುದ್ದಿದ ಗಾಯಗೊಂಡು ಉಜಿರೆ ಎಸ್‌ ಡಿ ಎಮ್‌ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 88/2022 ಕಲಂ: 279, 337 ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಾಯಾ ಪ್ರಸಾದ್, ಪ್ರಾಯ: 23 ವರ್ಷ, ತಂದೆ: ಗೋಪಾಲಕೃಷ್ಣ, ವಾಸ: ಆದಿ ಮಾಯೆ ನಿಲಯ, ಬಲ್ಯ, ಕನ್ನೀರು ತೋಟ, ಕೊಲ್ಯ ಮಂಗಳೂರು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಮಾಯಾ ಪ್ರಸಾದ್, ಪ್ರಾಯ: 23 ವರ್ಷ, ತಂದೆ: ಗೋಪಾಲಕೃಷ್ಣ, ವಾಸ: ಆದಿ ಮಾಯೆ ನಿಲಯ, ಬಲ್ಯ, ಕನ್ನೀರು ತೋಟ, ಕೊಲ್ಯ ಮಂಗಳೂರುರವರು ದಿನಾಂಕ 19.06.2022 ರಂದು ಅವರ ಗೆಳೆಯರೊಂದಿಗೆ ನಿಂತಿಕಲ್ಲಿನಿಂದ ಮಂಗಳೂರಿಗೆ ಮೋಟಾರು ಸೈಕಲಿನಲ್ಲಿ ಹೋಗುವುದಾಗಿ ತೀರ್ಮಾನಿಸಿ ಬೆಳಿಗ್ಗೆ 08.30 ಗಂಟೆಗೆ ಸುಳ್ಯ ತಾಲೂಕಿನ ನಿಂತಿಕಲ್ಲಿನಿಂದ ಫಿರ್ಯಾದಿದಾರರು ಕೆಎ-19-ಹೆಚ್ ಕೆ-0033 ನೇ ಮೋಟಾರು ಸೈಕಲಿನಲ್ಲಿ ಪವನ್ ನನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು, ಕೆಎ—19-ಹೆಚ್ ಬಿ-7850 ನೇ ಮೋಟಾರು ಸೈಕಲಿನಲ್ಲಿ ಮನೀಷ್ ರವರು ಮೌನೀಶ್ ರವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಗೆ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಮನೀಶ್ ರವರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲಿಗಿಂತ ಸ್ವಲ್ಪ ಮುಂದೆ ಇದ್ದು ಬೆಳಿಗ್ಗೆ 09.00 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಂಪ್ಯದ ಬಳಿ ಕಮ್ಮಾಡಿ ಎಂಬಲ್ಲಿಗೆ ತಲುಪಿದಾಗ ಫಿರ್ಯಾದಿದಾರರ ಹಿಂದಿನಿಂದ ಅಂದರೆ ಸುಳ್ಯದ ಕಡೆಯಿಂದ ಮಂಗಳೂರು ಕಡೆಗೆ ಕೆಂಪು ಬಣ್ಣದ ಕೆಎಲ್-60-ಟಿ-5343 ನೇ ಸ್ವಿಫ್ಟ್ ಕಾರನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಿ ರಸ್ತೆಯ ಎಡ ಭಾಗದಲ್ಲಿ ಮನೀಶ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ—19-ಹೆಚ್ ಬಿ-7850 ನೇ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದಿದ್ದು ಪರಿಣಾಮವಾಗಿ ಮೋಟಾರು ಸೈಕಲ್ ರಸ್ತೆಯ ಬದಿಗೆ ಮಗುಚಿ ಬಿದ್ದಾಗ ಸ್ವಿಫ್ಟ್ ಕಾರಿನ ಚಾಲಕನು ಕಾರನ್ನು ಒಮ್ಮೆ ನಿಲ್ಲಿಸಿ ನೋಡಿ ಕಾರನ್ನು ಮಂಗಳೂರಿನ ಕಡೆಗೆ ಚಲಾಯಿಸಿಕೊಂಡು ಹೋಗಿದ್ದು, ಬಳಿಕ ಫಿರ್ಯಾದಿದಾರರು, ಪವನ್ ಮತ್ತು ಇತರರು ಕೆಳಗೆ ಬಿದ್ದಿದ್ದ ಮೋಟಾರು ಸೈಕಲ್ ಸವಾರ ಮನೀಶ್ ಮತ್ತು ಸಹ ಸವಾರ ಮೌನೀಶ್ ನನ್ನು ನೋಡಿದಾಗ ಮನೀಶ್ ರವರ ತಲೆಗೆ ತೀವ್ರ ರೀತಿಯ ಗಾಯವಾಗಿ ಮಾತನಾಡದೇ ಇದ್ದು, ಮೌನೀಶ್ ರವರ ಮುಖಕ್ಕೆ, ಕೈ ಕಾಲುಗಳಿಗೆ ಗಾಯವಾಗಿ ರಕ್ತ ಬರುತ್ತಿದ್ದು, ಕೂಡಲೇ ಗಾಯಾಳುಗಳನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಮನೀಶ್ ನನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿ, ಮೌನೀಶ್ ರವರಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಿದ್ದು, ಬಳಿಕ ಆಂಬುಲೆನ್ಸ್ ನಲ್ಲಿ ಮನೀಶ್ ರವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ : 72/2022  ಕಲo:279,337,338  ಐಪಿಸಿ, ಕಲಂ 134(A&B) IMV ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಬ್ರಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕುಮಾರಸ್ವಾಮಿ ಹೆಚ್ ಪ್ರಾಯ:33 ವರ್ಷ, ತಂದೆ:ಹೊನ್ನಪ್ಪ , ವಾಸ:ವಿಜಯನಗರ, ವಾರ್ಡ ನಂ 02, ರಾಮದೇವರ ಬೆಟ್ಟ ,ರಾಮನಗರ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 19.06.2022 ರಂದು ರಾಮನಗರ ಜಿಲ್ಲೆ ಚನ್ನಪಟ್ಟಣದ ಕೊಡಂಬಳ್ಳಿ ಎಂಬಲ್ಲಿಂದ ಪಿರ್ಯಾದುದಾರರ  ಬಾಬ್ತು ಕೆಎ 05 ಎಂ ಎಫ್ 8496 ನೇ ದರಲ್ಲಿ ಪಿರ್ಯಾದುದಾರರ  ಪತ್ನಿ ಮಹಾಲಕ್ಮಿ (24),ಅತ್ತೆ ಲಲಿತಮ್ಮ (48),ಪತ್ನಿಯ ತಂಗಿ ರಮ್ಯ(19) ಮತ್ತು ಪತ್ನಿಯ ಅಜ್ಜಿ ಗಾಯತ್ರಿ (70) ರವರು ಧರ್ಮಸ್ಥಳಕ್ಕೆ ಹೊರಟು ದೇವರ ದರ್ಶನ ಮುಗಿಸಿಕೊಂಡು ಈ ದಿನ ದಿನಾಂಕ: 20.06.2022 ರಂದು  ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕಾಗಿ ಸಂಜೆ 04:30 ಗಂಟಗೆ ಹೊರಟು  ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ  ಎಂಬಲ್ಲಿ ಸಂಜೆ ಸುಮಾರು 05:45 ಗಂಟೆಗೆ ತಲುಪಿದಾಗ ಎದುರಗಡೆಯಿಂದ ಅಂದರೆ ಸುಬ್ರಹ್ಮಣ್ಯ ಕಡೆಯಿಂದ ಒಂದು ಚೆವರ್ ಲೆಟ್ ವಾಹನವನ್ನು ಅದರ ಚಾಲಕನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷತನದಿಂದ ತಿರುವು ರಸ್ತೆಯಲ್ಲಿ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಲಲಿತಮ್ಮರವರಿಗೆ ಹಣೆಗೆ ಮತ್ತು ಕೈಗೆ, ಗಾಯತ್ರಿಯವರಿಗೆ ಕಾಲಿಗೆ ಮತ್ತು ಚವರ್ ಲೈಟ್  ವಾಹನದಲ್ಲಿದ್ದ ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಸ್ಥಳೀಯರು ಬಂದು ಗಾಯಗೊಂಡವರನ್ನು ಉಪಚರಿಸಿ ಆಂಬ್ಯುಲೆನ್ಸ್ ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ, ಈ ಬಗ್ಗೆ ಸುಬ್ರಮಣ್ಯ ಪೊಲೀಸ್‌ ಠಾಣೆಯಲ್ಲಿ ಅ.ಕ್ರ   ನಂಬ್ರ  : 64/2022  ಕಲಂ 279,337,338 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-06-2022 11:44 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080