ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಶ್ರಫ್ ಅಲಿ ಕುಂಞ್ಞ (42) ತಮದೆ: ದಿ. ಅಲಿ ಕುಂಞ್ಞ ವಾಸ: ಆಶಿಕಾ ಮಂಜಿಲ್ ಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆ ಜೈನ್ ಪೇಟೆ ಬೆಳ್ತಂಗಡಿ ಕಸಬಾ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 19-07-2022 ರಂದು ಪಿ ಕೆ ಅಬ್ದುಲ್ ರಹಿಮಾನ್   ರವರು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ರಸ್ತೆ ದಾಟುತ್ತಿರುವ ಸಮಯ ಸುಮಾರು ಬೆಳಿಗ್ಗೆ 8:15 ಗಂಟೆಗೆ ಮಡಂತ್ಯಾರು ಕಡೆಯಿಂದ ಗುರುವಾಯನಕೆರೆ ಕಡೆಗೆ KA 70 M 0786 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿ ಕೆ ಅಬ್ದುಲ್ ರಹಿಮಾನ್ ರವರಿಗೆ ಢಿಕ್ಕಿ ಹೊಡೆದನು ಪರಿಣಾಮ ಪಿ ಕೆ ಅಬ್ದುಲ್ ರಹಿಮಾನ್ ರವರಿಗೆ ಎಡಕಾಲಿನ ಮೊಣಗಂಟಿನ ಕೆಳಗೆ ಗುದ್ದಿದ ಗಾಯ, ಬಲಕಾಲಿನ ಮೊಣಕಾಲಿಗೆ ತರಚಿದ ಗಾಯ, ಎಡಭುಜಕ್ಕೆ ಗುದ್ದಿದ ಗಾಯ ಹಾಗೂ ತಲೆಯ ಹಿಂಬಾಗ ಮತ್ತು ಮುಂಭಾಗಕ್ಕೆ ತರಚಿದ ರಕ್ತಗಾಯವಾಗಿದ್ದು ಗಾಯಾಳು ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ:  100/2022 ಕಲಂ: 279 337 ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಾನಿಫ್‌ ಹೆಚ್‌ ಪ್ರಾಯ 36 ವರ್ಷ, ತಂದೆ: ಇಬ್ರಾಹಿಂ ವಾಸ: ಸೆಂಟಿಯಾರು, ಆರ್ಯಾಪು ಅಂಚೆ ಮತ್ತು ಗ್ರಾಮ, ಪುತ್ತೂರು ಎಂಬವರ ದೂರಿನಂತೆ  ದಿನಾಂಕ 18-07-2022 ರಂದು 13-00 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಹಾಶಿಂ ಎಂಬವರು  KA-19-HJ-4314ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿನಲ್ಲಿ ಪಿರ್ಯಾದುದಾರರಾದ ಸಾನಿಫ್‌ ಹೆಚ್‌ ಎಂಬವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ತಾಲೂಕು ಬನ್ನೂರು ಗ್ರಾಮದ ಬನ್ನೂರು ಶಾಲಾ ಬಳಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಮೋಟಾರ್‌ ಸೈಕಲ್‌ ಸ್ಕಿಡ್ಡಾಗಿ ಪಿರ್ಯಾದುದಾರರಾದ ಸಾನಿಫ್‌ ಹೆಚ್‌ ರವರು ರಸ್ತೆಗೆ ಎಸೆಯಲ್ಪಟ್ಟು ಎಡಕಾಲಿನ ಮೊಣಗಂಟಿಗೆ ತಿವ್ರವಾದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಪರೀಕ್ಷಿಸಿದ ವೈದ್ಯರು ಎಕ್ಸರೆ ಮತ್ತು ಎಂಆರ್‌ಐ ರಿಪೋರ್ಟ ತೆಗೆಸಿ ಶಸ್ತ್ರ ಚಿಕಿತ್ಸೆಗೆ ಸೂಚಿಸಿರುತ್ತಾರೆ..ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  124/2022  ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆ ಯತ್ನ ಪ್ರಕರಣ: 1

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಇಬ್ರಾಹಿಂ ಶಾನಿಫ್‌  ಪ್ರಾಯ 24 ವರ್ಷ, ತಂದೆ: ಹನೀಫ್‌ ಕಳಂಜ, ವಾಸ: ಪೆಲತ್ತಡ್ಕ ಮನೆ, ಪೆರುವಾಜೆ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಕಾಸರಗೋಡು ತಾಲೂಕು ಮೊಗ್ರಾಲ್‌ ವಾಸಿ ಮಸೂದ್‌ ಎಂಬಾತನು ಸುಮಾರು 1 ತಿಂಗಳ ಹಿಂದೆ ಸುಳ್ಯ ತಾಲೂಕು ಕಳಂಜ ಗ್ರಾಮದ ಕಳಂಜದಲ್ಲಿರುವ ಅಜ್ಜ ಅಬ್ಬು ಮುಕ್ರಿ ಎಂಬವರ ಮನೆಗೆ ಬಂದವನು ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 19.07.2022 ರಂದು ಫಿರ್ಯಾದಿದಾರರು ತನ್ನ ಅಜ್ಜಿ ಮನೆಯಾದ ಕಳಂಜದಲ್ಲಿರುವ ಸಮಯ ವಿಷ್ಣು ನಗರ ಬಸ್ಸು ನಿಲ್ದಾಣದ ಬಳಿ ಜನ ಗುಂಪು ಸೇರಿರುವುದನ್ನು ಕಂಡು ರಸ್ತೆಗೆ ಬಂದಾಗ ಅಲ್ಲಿ ಪರಿಚಯದ  ಅಭಿಲಾಶ್‌, ಸುನೀಲ್‌,  ಸುಧೀರ್‌,  ಶಿವ, ರಂಜಿತ್, ಸದಾಶಿವ, ಜಿಮ್‌ ರಂಜಿತ್‌ ಮತ್ತು  ಭಾಸ್ಕರ ರವರು ಇದ್ದು, ಅವರು ಫಿರ್ಯಾದಿದಾರರನ್ನು  ಕರೆದು ಸಂಜೆಯ ವೇಳೆ ಸುಧೀರನಿಗೆ ಮಸೂದನು ಅಂಗಡಿಯ ಬಳಿ ತಾಗಿದ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಂಡು ಬಳಿಕ ಮಸೂದನು ಸುಧೀರನಿಗೆ ಬಾಟಲ್‌ ತೋರಿಸಿ ಬೆದರಿಕೆ ಹಾಕಿರುವುದಾಗಿ ಹೇಳಿ ನೀನು ಮಸೂದನನ್ನು ಕರೆದುಕೊಂಡು ಬಾ, ನಾವು ಮಾತನಾಡಿ ಮುಗಿಸುವ ಎಂದು ಹೇಳಿದ್ದು, ಅದರಂತೆ ಫಿರ್ಯಾದಿದಾರರು  ಮಸೂದ್‌ ನ ಅಜ್ಜಿ ಮನೆಗೆ ಹೋಗಿ ಆತನನ್ನು ವಿಷ್ಣು ನಗರಕ್ಕೆ ಕರೆದುಕೊಂಡು  ಬಂದಾಗ ಸಮಯ ಸುಮಾರು ರಾತ್ರಿ 11-00 ಗಂಟೆಗೆ ಆರೋಪಿತರು ಒಟ್ಟು ಸೇರಿ ಏಕಾ ಎಕಿ ಮಸೂದನಿಗೆ ಕೈಯಿಂದ ಹಲ್ಲೆ ಮಾಡಲು ಪ್ರಾರಂಭಿಸಿದ್ದು ಆಗ ಫಿರ್ಯಾದಿದಾರರು ಹೊಡೆಯಬೇಡಿ ಎಂದು ಹೇಳಿ ಮಸೂದನನ್ನು ಗಟ್ಟಿಯಾಗಿ ತಬ್ಬಿಕೊಂಡಾಗ ದೂಡಾಟವಾಗಿ ಫಿರ್ಯಾದಿದಾರರು ಮತ್ತು ಮಸೂದನು ನೆಲಕ್ಕೆ ಬಿದ್ದಿದ್ದು ಬಿದ್ದಲ್ಲಿಗೆ ಅವರೆಲ್ಲರೂ ಕಾಲಿನಿಂದ ತುಳಿದು ಅವರ ಪೈಕಿ ಅಭಿಲಾಶನು ಅಲ್ಲಿ ಬಿದ್ದುಕೊಂಡಿದ್ದ ಖಾಲಿ ಜ್ಯೂಸ್‌ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದನು. ಆಗ ಫಿರ್ಯಾದಿದಾರರು ಮಸೂದನಲ್ಲಿ ಓಡಿ ತಪ್ಪಿಸಿಕೊಳ್ಳಲು ಹೇಳಿದಂತೆ ಮಸೂದನು ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಫಿರ್ಯಾದಿದಾರರು ಮತ್ತು ಅವರ ಕಡೆಯವರು ಮಸೂದನನ್ನು ಹುಡುಕುತ್ತಿರುವ ಸಮಯ ದಿನಾಂಕ 20.07.2022 ರಂದು ರಾತ್ರಿ 1-30 ಗಂಟೆಗೆ ಅಲ್ಲಿಯೇ ಅಬೂಬಕ್ಕರ್‌ ಎಂಬವರ ಬಾವಿಯ ಬಳಿ ಮಸೂದನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು, ಅವನನ್ನು ಉಪಚರಿಸಿ ಕಾರಿನಲ್ಲಿ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಹೋಗುವಂತೆ ಸೂಚಿಸಿದಂತೆ ಮಂಗಳೂರಿನ ಫಸ್ಟ್‌ ನ್ಯೊರೋ ಅಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಮಸೂದನಿಗೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 60/2022 ಕಲಂ 143, 147 323, 324, 307 ಜೊತೆಗೆ 149  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಜಾನಕಿ ಪ್ರಾಯ 65 ಗಂಡ ಲೇ|| ಲೋಕಯ್ಯ ನಾಯ್ಕ ವಾಸ ಕೋಡಿ ಮನೆ ಮಣಿನಾಲ್ಕೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದುದಾರರು ಮನೆಯಲ್ಲಿ ಮಗ ಸದಾನಂದ, ಮೋನಪ್ಪ ,ಮಗಳು ದಿವ್ಯ ಮತ್ತು ಸೊಸೆ ಪ್ರೇಮಾಳೊಂದಿಗೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದು  ಮಗ ಮೋನಪ್ಪನು ಕೂಡ ಕೂಲಿ ಕೆಲಸ ಮಾಡಿಕೊಂಡು ಬರುತ್ತಿದ್ದು ವಿಪರೀತ ಮಧ್ಯಸೇವನೆ ಮಾಡಿಕೊಂಡಿದ್ದು ಕೆಲವು ದಿನಗಳಲ್ಲಿ  ಕೂಲಿ ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು ದಿನಾಂಕ 19.07.2022 ರಂದು ಸಂಜೆ ಸುಮಾರು 07.00 ಗಂಟೆಗೆ ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಶಬ್ದದಿಂದ ಬೈದು ಪಿರ್ಯಾದುದಾರರ ತಲೆಯನ್ನು ಹಿಡಿದು ಗೋಡೆಗೆ ಜಜ್ಜಿದಾಗ ಪಿರ್ಯಾದುದಾರರು ಹೊಡಿಬೇಡ ಎಂದು ಬೊಬ್ಬೆ ಹೊಡೆದಾಗ ಆಗ ಬೊಬ್ಬೆ ಹೊಡೆತೀಯಾ ಎಂದು ಬೈದು ಮನೆಯ ಒಳಗಿನಿಂದ ಅಡುಗೆ ಮಾಡುತ್ತಿದ್ದ ಪಾತ್ರೆಯನ್ನು ತಂದು ಪಿರ್ಯಾದುದಾರರ ತಲೆಗೆ ಮುಖಕ್ಕೆ ಹೊಡೆದು ರಕ್ತಗಾಯ ಗೊಳಿಸಿದ್ದು ಅಲ್ಲದೇ ಪಿರ್ಯಾದುದಾರರನ್ನು ಮನೆಯ ಹೊರಗೆ ದೂಡಿ ಹಾಕಿ  ಎಡ ಕೈ ಕೋಲು ಕೈಗೆ ರಕ್ತ ಬರುವ ಗಾಯ ಮಾಡಿದ್ದು ,ಆ ಸಮಯ ಪಿರ್ಯಾದುದಾರರ ಮಗಳು ಮತ್ತು ಸೊಸೆ ಜೋರಾಗಿ ಬೊಬ್ಬೆ ಹೊಡೆದು ಮೋನಪ್ಪನನ್ನು ದೂಡಿಕೊಂಡು ಹೋದಾಗ ಮೋನಪ್ಪನು ಪಿರ್ಯಾದುದಾರರನ್ನು ಉದ್ದೇಶಿಸಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು ಪಿರ್ಯಾದುದಾರರ ಮನೆಯ ಪಕ್ಕದಲ್ಲಿರುವ ವಾಸವಾಗಿರುವ ಪಿರ್ಯಾದುದಾರರ ಮಗಳು ನಳಿನಿಗೆ ದಿವ್ಯಾಳಿಂದ ವಿಷಯ ತಿಳಿದು ಗಾಯಗೊಂಡ ಪಿರ್ಯಾದುದಾರರನ್ನು ಬಂಟ್ವಾಳ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 53-2022 ಕಲಂ 323,324,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-07-2022 12:08 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080