ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹರೀಶ್‌ ಟಿ, ಪ್ರಾಯ 45 ವರ್ಷ, ಗಂಡ: ತಿಮ್ಮಪ್ಪ ಪೂಜಾರಿ, ವಾಸ: ಅನುಗೃಗ ಶೇವಿರೆ ಮನೆ, ನೆಹರೂನಗರ ಅಂಚೆ, ಕಬಕ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 20-09-2022 ರಂದು 10:45 ಗಂಟೆಗೆ ಆರೋಪಿ ಕಾರು ಚಾಲಕ ರಾಮಕೃಷ್ಣ ಎಸ್‌ ಭಟ್‌ ಎಂಬವರು  KA-25-MB-2550 ನೇ ನೋಂದಣಿ ನಂಬ್ರದ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಕಬಕ ಗ್ರಾಮದ ಕೂವೆತ್ತಿಲ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಚಾಲಕರಾಗಿ, ಅವಿನಾಶ್‌ರವನ್ನು ಪ್ರಯಾಣಿಕನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ ಬಿ.ಸಿ.ರೋಡ್‌ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ kA-21-P-7932 ನೇ  ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ, ಬಳಿಕ ಪಿರ್ಯಾದುದಾರರ ಹಿಂದಿನಿಂದ ಅವಿನಾಶ್‌ ಕುಮಾರ್‌ ಕೆ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-21-EA-0613 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಆರೋಪಿ ಕಾರು ಅಪಘಾತವಾಗಿ  ಸ್ಕೂಟರ್‌ ಸವಾರ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಅವರ ಬಲಕೈಯ ಮೊಣಗಂಟಿಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ147/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಶಿಧರ ಪ್ರಾಯ 46 ವರ್ಷ ತಂದೆ:ದಿ|| ಮುತ್ತಪ್ಪ ಗೌಡ ವಾಸ:ಕಡ್ತಡ್ಕ ಮನೆ ಇಚ್ಲಂಪಾಡಿ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:17.09.2022ರಂದು ಪಿರ್ಯಾದಿದಾರರು ಎಂಜಿರದಲ್ಲಿರುವ ಹಾಲಿನ ಡೈರಿಗೆ ದನದ ಹಾಲನ್ನು ನೀಡಿ ಬೆಳಿಗ್ಗೆ 06.45 ಗಂಟೆಗೆ ಕಡಬ ತಾಲೂಕು ಇಚಲಂಪಾಡಿ ಗ್ರಾಮದ ಲಾವತ್ತಡ್ಕ್ ಎಂಬಲ್ಲಿರುವ ಜಾರ್ಜ ಎಂಬುವರ ಹೋಟೆಲ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರ ಹಿಂಬದಿಯಿಂದ ಒಂದು ಕಾರನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಸದ್ರಿ ಕಾರಿನ ಎಡಬದಿಯಲ್ಲಿದ್ದ ಸೈಡ್ ಮಿರರ್  ಡಿಕ್ಕಿ ಹೊಡೆದು ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ . ಪಿರ್ಯಾದಿದಾರರಿಗೆ ಎಡಕಾಲಿನ ಮೊಣಗಂಟಿಗೆ ಗುದ್ದಿದ ನಮೂನೆ ಗಾಯವಾಗಿದ್ದು.  ಪಿರ್ಯಾದಿದಾರರಿಗೆ ಡಿಕ್ಕಿಯಾದ ಕಾರನ್ನು ಅದರ  ಚಾಲಕನು ಕಾರನ್ನು ನಿಲ್ಲಿಸದೇ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿದ್ದು.  ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಕಾರನ್ನು ಶಿಬಾಜೆಯ ಮಾಧವ ಗೌಡ ಎಂಬುವರು ನೋಡಿ ಗುರುತಿಸಿದ್ದು, ಸದ್ರಿ ಕಾರಿನ ನಂಬ್ರ ಕೆಎ.02.ಎಹೆಚ್.5027 ಎಂಬುದಾಗಿ ಆಗಿರುತ್ತದೆ.  ನಂತರ ಪಿರ್ಯಾದಿದಾರರು  ಚಿಕಿತ್ಸೆಯ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ವಾಪಸ್ಸು ಮನೆಗೆ ಬಂದವರು ದಿನಾಂಕ:19.09.2022ರಂದು ಕಾಲಿಗೆ ಆದ ನೋವು ಉಲ್ಬಣಗೊಂಡು ಪುತ್ತೂರು  ಮಹಾವೀರ ಆಸ್ಪತ್ರೆಗೆ ತೆರಳಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದು ತಡವಾಗಿ  ದೂರು ನೀಡುತ್ತೀರುವಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ  ಅ.ಕ್ರ 99/2022 ಕಲಂ:279,337  ಐಪಿಸಿ ಮತ್ತು ಕಲಂ:134 (ಎ&ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಸಂತಗೌಡ ಪ್ರಾಯ:42 ತಂದೆ:ಮೋನಪ್ಪ ಗೌಡ ವಾಸ:ಸರ್ವಲ್ತಾಡಿ ಬುಡೇರಿಯಾ ಮನೆ ಆಲಂಕಾರು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರಾದ ವಸಂತಗೌಡ ಪ್ರಾಯ:50 ವರ್ಷ,ತಂದೆ: ಮೋನಪ್ಪಗೌಡ ವಾಸ: ಸರ್ವಲ್ತಾಡಿ ಬುಡೇರಿಯ ಮನೆ,ಆಲಂಕಾರು ಗ್ರಾಮ ,ಕಡಬ ತಾಲೂಕು ಎಂಬವರು ದಿನಾಂಕ:20.09.2022 ರಂದು ನಾನು ನನ್ನ ಮೊಟಾರ್‌ ಸೈಕಲ್‌ನಲ್ಲಿ ಮನೆಯಿಂದ ಆಲಂಕಾರು ಕಡೆಗೆ ಹೋಗುತಿದ್ದಾಗ ಸಮಯ ಬೆಳಗ್ಗೆ 10.30 ಗಂಟೆಗೆ ಕಡಬ ತಾಲೂಕು ಆಲಂಕಾರು ಗ್ರಾಮದ ಬುಡೇರಿಯಾ ಕ್ರಾಸ್‌  ಬಳಿ  ತಲುಪಿದಾಗ    ಎದುರು ತನ್ನ  ತಮ್ಮನ ಪತ್ನಿಯಾದ ತೀರ್ಥಕುಮಾರಿ ಎಂಬವರು KA-21 EC-2767ನೇ ಸ್ಕೂಟರ್‌ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದು ಅವರು ಬುಡೇರಿಯಾ ಕ್ರಾಸ್‌ ಬಳಿ ಆಲಂಕಾರು ಕಡೆಗೆ ತನ್ನ ಸ್ಕೂಟರ್ ವಾಹನದ ಬಲಬದಿಯ ಇಂಡಿಕೇಟರ್‌ ಹಾಕಿ ವಾಹನವನ್ನು ತಿರುಗಿಸುತ್ತಿರುವಾಗ ಅದೇ ಸಮಯಕ್ಕೆ KA-21 A-9264 ನೇ ಓಮಿನಿ ಕಾರು ವಾಹನವನ್ನು ಆರೋಪಿತನು ಆಲಂಕಾರು ಕಡೆಯಿಂದ ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಸ್ಕೂಟರ್‌ ವಾಹನದ ಸವಾರೆಯಾದ ತೀರ್ಥಕುಮಾರಿಯವರು ಸ್ಕೂಟರ್‌ ಸಮೇತಾ ರಸ್ತೆಗೆ ಬಿದ್ದಿರುತ್ತಾರೆ  ತಕ್ಷಣ ಅಲ್ಲಿಯೇ ಹೋಗುತ್ತಿದ್ದ ಪಿರ್ಯಾದುದಾರರು  ಮತ್ತು ಸಾರ್ವಜನಿಕರು ಉಪಚರಿಸಿ ನೋಡಲಾಗಿ ತೀರ್ಥಕುಮಾರಿಯವರಿಗೆ ಬಲದ ಕೈಗೆ ರಕ್ತ ಗಾಯವಾಗಿರುತ್ತದೆ ನಂತರ ಅವರನ್ನು ಖಾಸಗಿ ಜೀಪು ವಾಹನದಲ್ಲಿ  ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 82/2022 ಕಲಂ: ಕಲಂ:279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೆ.ಎಂ ಹುಸೈನಾರ್ ಪ್ರಾಯ 49 ವರ್ಷ ತಂದೆ: ದಿ|| ಮಹಮ್ಮದ್ ವಾಸ: ಕೊಳಂಜಿಕೋಡಿ ಮನೆ, ದುಗ್ಗಲಡ್ಕ ಅಂಚೆ ಸುಳ್ಯ ಕಸಬಾ ಗ್ರಾಮ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಕೆ.,ಎಂ ಹುಸೈನಾರ್‌ ರವರು ಈ ದಿನ ದಿನಾಂಕ 20.09.2022 ರಂದು ಬೆಳಿಗ್ಗೆ 11.55 ಗಂಟೆ ಸಮಯಕ್ಕೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಸೋಣಂಗೇರಿ ಜಂಕ್ಷನ್ ಬಳಿ ನಿಂತುಕೊಂಡಿರುವ ಸಮಯ ಬೆಳ್ಳಾರೆ ಕಡೆಯಿಂದ ಕೆಎ-19-ಎಫ್-3022 ನೇ ಕೆಎಸ್‌ಅರ್‌ಟಿಸಿ ಬಸ್ ಬಂದು ನಿಂತುಕೊಂಡಿದ್ದು, ಆ ಬಸ್ಸಿನಿಂದ ಒರ್ವ ಮಹಿಳೆ ಇಳಿಯುತ್ತಿದ್ದಂತೆ ಬಸ್ಸನ್ನು ಅದರ ಚಾಲಕ ಏಕಾಏಕಿಯಾಗಿ ಯಾವುದೇ ಸೂಚನೆ ನೀಡದೇ ಚಲಾಯಿಸಿದ ಪರಿಣಾಮ ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆಯು ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಾಗ ಬಸ್ಸಿನ ಎಡಭಾಗದ ಹಿಂಬದಿ ಚಕ್ರವು ಮಹಿಳೆಯ ಬಲಕಾಲಿನ ಮೇಲೆ ಹತ್ತಿದ್ದರಿಂದ ರಕ್ತಗಾಯವಾಗಿದ್ದು, ಕೂಡಲೇ ಪಿರ್ಯಾದಿದಾರರು ಮತ್ತು ಇತರರು ಕೂಡಲೇ ಹೋಗಿ ನೋಡಿದಾಗ ಗಾಯಗೊಂಡು ಮಹಿಳೆ ಪಿರ್ಯಾದಿದಾರರ ಅಣ್ಣನ ಹೆಂಡತಿ ಮೈಮೂನ ಆಗಿದ್ದು, ಒಂದು ಜೀಪಿನಲ್ಲಿ ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದು.ಈ ಬಗ್ಗೆ ಸುಳ್ಯ ಪೊಲಿಸು ಠಾಣಾ ಅ.ಕ್ರ 104/2022 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಗದೀಶ ಗೌಡ,  ಪ್ರಾಯ: 37 ವರ್ಷ, ತಂದೆ: ಲಕ್ಷ್ಮಣ ಗೌಡ, ವಾಸ: ಮಡ್ಡಲ್ ಮಾರ್ ಮನೆ, ಸವಣಾಲು ಗ್ರಾಮ & ಅಂಚೆ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಬೆಳ್ತಂಗಡಿ ಪೇಟೆಯ ಗೌಡ ಕಂಪೌಂಡಿನಲ್ಲಿ ಶ್ರೀ ದುರ್ಗಾ ಸುಪಾರಿ ಟ್ರೇಡರ್ಸ್ ಎಂಬ ಅಂಗಡಿಯನ್ನು ಇಟ್ಟುಕೊಂಡು ಅಡಿಕೆ ವ್ಯಾಪಾರ ಮಾಡಿಕೊಂಡು  ಬರುತ್ತಿದ್ದು, ಎಂದಿನಂತೆ ದಿನಾಂಕ :17-09-2022 ರಂದು 19-00 ಗಂಟೆಗೆ ಅಂಗಡಿಗೆ ಭೀಗ ಭದ್ರತೆಯನ್ನು ಮಾಡಿಕೊಂಡು ಹೋಗಿದ್ದು, ಮರು ದಿನ ಭಾನುವಾರ ಆಗಿದ್ದುದ್ದರಿಂದ ಅಂಗಡಿಗೆ ಬಾರದೇ ಇದ್ದು, ದಿನಾಂಕ 19-09-2022 ರಂದು ಎಂದಿನಂತೆ ಬೆಳಿಗ್ಗೆ 08-30 ಗಂಟೆಗೆ ಅಂಗಡಿಯ ಬಾಗಿಲು ತೆರೆದು ನೋಡ ಲಾಗಿ ಅಂಗಡಿಯೊಳಗಿದ್ದ ಅಡಿಕೆ ಚೀಲಗಳು ಅಸ್ತವ್ಯಸ್ತವಾಗಿದ್ದು , ಕೂಲಂಕೂಷವಾಗಿ ನೋಡಲಾಗಿ  ಅಂಗಡಿಯ ಮೇಲಿನ ಸಿಮೆಂಟ್ ಶೀಟ್ ನ ನೆಟ್ ಬೊಲ್ಟನ್ನು ತೆಗೆದು , ಶೀಟ್ ತೆರೆದು ಯಾರೋ ಕಳ್ಳರು ಅಂಗಡಿಯ ಒಳಗೆ ಪ್ರವೇಶಿಸಿ  ದಾಸ್ತಾನು ಇರಿಸಿದ್ದ ಅಡಿಕೆಯ ಚೀಲಗಳಿಂದ ಸುಮಾರು 70,000/- ರೂ ಮೌಲ್ಯದ 150 ಕೆ.ಜಿ ಅಡಿಕೆ ಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 57/2022, ಕಲಂ: 454,457,380  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-09-2022 12:53 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080