ಅಭಿಪ್ರಾಯ / ಸಲಹೆಗಳು

ಜೀವ ಬೆದರಿಕೆ ಪ್ರಕರಣ: 1

 • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲಕ್ಷ್ಮಣ ಗೌಡ ಡಿ ಕೆ ಪ್ರಾಯ 47 ವರ್ಷ, ತಂದೆ: ದಿ|| ಹರಿಯಪ್ಪ ಗೌಡ ವಾಸ: ದೇವಶ್ಯ ಮನೆ,ಗುತ್ತಿಗಾರು ಗ್ರಾಮ,ಸುಳ್ಯ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ದೇವಸ್ಯ ಮನೆ ಎಂಬಲ್ಲಿ ವಾಸವಾಗಿದ್ದು ದಿನಾಂಕ 20.10.2022 ರಂದು ಸಂಜೆ ಸುಮಾರು 04:45 ಗಂಟೆಗೆ ಛತ್ರಪ್ಪಾಡಿ ಪದ್ಮನಾಭ ಎಂಬವರು ಫಿರ್ಯಾದಿಯ ಅಣ್ಣನ ಜಾಗದ ವ್ಯಾಜ್ಯದ ಬಗ್ಗೆ ವಾದ ನಡೆಸಿ ಫಿರ್ಯಾದಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ನಂತರ ಫಿರ್ಯಾದಿಯವರು ಅವರ ದನಗಳನ್ನು ಮೇಯಿಸಿಕೊಂಡಿದ್ದಲ್ಲಿಂದ  ಹಟ್ಟಿಗೆ ಹೊಡೆದುಕೊಂಡು ಬರುತ್ತಿರುವಾಗ, ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿನ ಮುಖ್ಯ ರಸ್ತೆಯಲ್ಲಿ ಒಂದು ಲಾರಿ ಬರುವಾಗ ಫಿರ್ಯಾದಿಯ ದನಗಳು ಸುಮಾರು ದೂರ ಓಡಿ ಹೋಗಿದ್ದು ಆ ದನಗಳನ್ನು ಮರಳಿ ಹಟ್ಟಿಗೆ ಓಡಿಸಿಕೊಂಡು ಬರುವರೇ ಫಿರ್ಯಾದಿಯವರ ಬೈಕ್ ನಲ್ಲಿ ತೆರಳಿದಾಗ ಆರೋಪಿ ಪದ್ಮನಾಭ ಛತ್ರಪ್ಪಾಡಿ  ತಡೆದು ನಿಲ್ಲಿಸಿ ಆಸ್ತಿ ವಿವಾದದ ಬಗ್ಗೆ ನಾಳೆ ನ್ಯಾಯಾಲಯದ ವಾಯಿದೆ ಇರುವುದರಿಂದ ಸದ್ರಿ ಕೇಸನ್ನು ಹಿಂಪಡೆದುಕೊಳ್ಳುವಂತೆ ತಗಾದೆ ತೆಗೆದು ಅದಕ್ಕೆ  ಫಿರ್ಯಾದಿಯು ಒಪ್ಪದೆ ಇದ್ದ ಸಮಯದಲ್ಲಿ ನನ್ನ ಬೈಕನ್ನು ಕೆಳಗೆ ಕೆಡವಿ ನಿನಗೆ ಜೀವ ಬೇಕಾ ? ಜಾಗ ಬೇಕಾ ? ಆಯ್ಕೆ ಮಾಡಿಕೋ ಎಂದು ಹೇಳಿ ಫಿರ್ಯಾದಿಯ ಕೈ ಗಳನ್ನು ಕುತ್ತಿಗೆ ಸಮೇತ ಮಡಚಿ ಹಿಡಿದು ಮುಖ ಕೆಳಗಾಗುವಂತೆ ಕೆಡವಿ ಡಾಮಾರು ರಸ್ತೆಯಲ್ಲಿ ಅದುಮಿಕೊಂಡು ಆರೋಪಿಯ ಹೆಂಡತಿ ಫಿರ್ಯಾದಿಯ ಎಡಕಾಲಿನ ತೊಡೆಯ ಹಿಂಭಾಗ ಕಚ್ಚಿ ರಕ್ತಗಾಯ ಮಾಡಿರುವುದಾಗಿದೆ. ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣಾ ಅ.ಕ್ರ  ನಂಬ್ರ  97-2022 ಕಲಂ  341,506,324 r/w  34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ಕಡಬ ಪೊಲೀಸ್ ಠಾಣೆ : ದಿನಾಂಕ : 20.10.2022 ರಂದು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 88/2022 ಕಲಂ :448,354 ಜೊತೆಗೆ 34 IPC ಮತ್ತು ಕಲಂ:3(2)(va) SC And ST Amendment Act-2015ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಬ್ರಮಣ್ಯ ಪೊಲೀಸ್ ಠಾಣೆ : ದಿನಾಂಕ: 20.10.2022 ರಂದು ಸಂಜೆ ಸುಮಾರು 04:45 ಗಂಟೆಗೆ ಸುಳ್ಯ ತಾಲೂಕು ನಿವಾಸಿಯಾಗಿರುವ ಆರೋಪಿ ಲಕ್ಷ್ಮಣ ಗೌಡ ಎಂಬವರ ದನಗಳು  ಪಿರ್ಯಾದಿಯ ಜಾಗದಲ್ಲಿ ನೆಟ್ಟಿರುವ ತರಕಾರಿ,ಹೂವಿನ ಗಿಡ,ತೆಂಗಿನ ಸಸಿಗಳನ್ನು ತಿನ್ನುತ್ತಿದ್ದು ಇದನ್ನು ನೋಡಿದ ಪಿರ್ಯಾದಿಯವರು ಅವರ ಅಂಗಡಿಯಿಂದ ಹೊರಗೆ ಬಂದು ದನಗಳನ್ನು ಓಡಿಸುವಾಗ, ಎದ್ರಿ ಲಕ್ಷ್ಮಣಗೌಡ ಬೈಕ್ ನಲ್ಲಿ ಬಂದು ಏಕಾಏಕಿ ಪಿರ್ಯಾದಿಯ ಬಳಿ ಬಂದು ನನ್ನ ದನವನ್ನು ನೀನು ಯಾಕೆ ಓಡಿಸುವುದು ಎಂದು ಜೋರುಮಾಡಿ ಪಿರ್ಯಾದಿಯವರ ಬಳಿ ಬಂದಿರುತ್ತಾರೆ. ಆಗ ಎದ್ರಿಯವರಿಗೆ ಅಣ್ಣ ನಿಮ್ಮ ದನಗಳನ್ನು ನಮ್ಮ ಜಮೀನಿಗೆ ನೀವು ಯಾಕೆ ಬಿಡುವುದು ಎಂದು ಕೇಳಿದಾಗ ಎದ್ರಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಯ ಜೊತೆ ಅನುಚಿತವಾಗಿ ವರ್ತಿಸಿದ್ದು. ಪಿರ್ಯಾದಿಯವರು ಜೋರಾಗಿ ಬೊಬ್ಬೆ ಹೊಡೆದಾಗ ಪಿರ್ಯಾದಿಯವರ ಗಂಡ ಅಂಗಡಿಯಿಂದ ಹೊರಗೆ ಬಂದಾಗ ಎದ್ರಿಯು ಪಿರ್ಯಾದಿಯವರನ್ನು ಜೋರಾಗಿ ತಳ್ಳಿದ್ದು ಕೆಳಗೆ ಬಿದ್ದು ಮಂಡಿಗೆ ಗಾಯವಾಗಿರುತ್ತದೆ. ತಕ್ಷಣ ಎದ್ರಿಯು ಬೈಕ್ ಸ್ಟಾಟ್ ಮಾಡಿ ಪಿರ್ಯಾದಿಯ ಗಂಡನ ಕಾಲಿನ ಮೇಲೆ ಬೈಕ್ ಹತ್ತಿಸಿ ಗಾಯಗೊಳಿಸಿ ನನ್ನ ತಂಟೆಗೆ ಬಂದ ಯಾರನ್ನು ಸುಮ್ಮನ್ನೆ ಬಿಡುವುದಿಲ್ಲ, ನೀವು ಜೀವಂತವಾಗಿ ಹೇಗೆ ಇರುತ್ತೀರಿ? ಎಂದು ಜೀವ ಬೆದರಿಕೆ ಹಾಕಿ  ಅವಾಚ್ಯ ಶಬ್ದಗಳಿಂದ ಬೈದು ಹೋಗಿರುತ್ತಾರೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣಾ ಕಲಂ 354,504,506,323 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಚರುಂಬೆ, ಪ್ರಾಯ: 58 ವರ್ಷ,  ಗಂಡ: ದಿ: ಸಗುಣ, ವಾಸ: ನೇರೋಳ್ದ ಪಲ್ಕೆ ಮನೆ, ಬಂದಾರು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ಮಗ ಬಾಬು(34) ಎಂಬವರು ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು, ಪಿರ್ಯಾದಿದಾರರು ಹಾಗೂ ಅವರ ಮಗ ಬಾಬುರವರು ಪಿರ್ಯಾದಿದಾರರ ಅಕ್ಕನ ಮನೆಯಾದ  ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ  ಮಂಜು ಬೆಟ್ಟು ಎಂಬಲ್ಲಿಗೆ ಬಂದಿದ್ದು, ದಿನಾಂಕ:20-10-2022 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರ ಮಗ ಬಾಬು ಎಂಬವರು ದೊಡ್ಡಮ್ಮನ  ಮನೆಯಲ್ಲಿ ಬಾವಿಯಿಂದ ನೀರು ಸೇದುವ ಸಂದರ್ಭ ಫಿಟ್ಸ್ ಖಾಯಿಲೆ ಬಂದು  ಆಕಸ್ಮಿಕವಾಗಿ ಕಾಲು ಜಾರಿ ಬಾವಿ ನೀರಿಗೆ ಬಿದ್ದು, ಮೃತಪಟ್ಟಿದ್ದು. ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 45/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-10-2022 09:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080