ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 04

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಶಿವರಾಮ (39), ತಂದೆ: ನೋಣಯ್ಯ ಪೂಜಾರಿ, ವಾಸ: ನಂ: 2-88 ಡಿ, ಜನತಾ ಗ್ರಹ ಮನೆ, ಮಾಣಿ ಗ್ರಾಮ, ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ದಿನಾಂಕ: 19-12-2022 ರಂದು ಕೆಎ 70 J 2343 ನೇ ದ್ವಿಚಕ್ರ ವಾಹನದಲ್ಲಿ ಸಹಸವಾರನಾಗಿ ಕುಳಿತುಕೊಂಡು ದ್ವಿಚಕ್ರ ವಾಹನವನ್ನು ನವೀನ ಎಂಬವರು ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಬರುತ್ತಾ ಸಮಯ ಸುಮಾರು ರಾತ್ರಿ 10.30 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ ತಲುಪುತ್ತಿದ್ದಂತೆ ವಿರುದ್ದ ಧಿಕ್ಕಿನಿಂದ ಅಂದರೆ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಕೆಎ 70 M 3559 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸವಾರ ನವೀನರವರು ದ್ವಿಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಹಾಗೂ ನವೀನರವರಿಗೆ ಮೂಳೆ ಮುರಿತದ ರಕ್ತ ಗಾಯ, ಮುಖಕ್ಕೆ ತರಚಿದ ರಕ್ತಗಾಯವಾಗಿದ್ದು ಗಾಯಾಳುಗಳು ಚಿಕಿತ್ಸೆ ಬಗ್ಗೆ ಉಜಿರೆ ಎಸ್‌ಡಿಎಮ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 143/2022 ಕಲಂ; 279,337 ಐಪಿಸಿ ಮತ್ತು & RR Rules 7 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮಿಥುನ್‌ ಕುಮಾರ್ ಪ್ರಾಯ:32ವರ್ಷ. ತಂದೆ: ರಮಾನಂದ ಶೆಟ್ಟಿ.ವಾಸ: ಕೊಡಂಗೆಮಾರು ಮನೆ,ನೆಟ್ಲ ಮುಡ್ನೂರು, ಗ್ರಾಮ,  ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:20.11.2022 ರಂದು ಸಂಜೆ ತನ್ನ ಬಾಬ್ತು ಕೆಎ-21-ಎಕ್ಸ್-3886ನೇ ಮೋಟಾರು ಸೈಕಲ್‌ ನಲ್ಲಿ ಮಾಣಿಯಿಂದ ಪಾರ್ಪಜೆಗೆ ಹೋಗುತ್ತಿದ್ದ ಸಮಯ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಬೊಳ್ಳುಕಲ್ಲು ಎಂಬಲ್ಲಿಗೆ ತಲುಪಿದಾಗ ಸುಮಾರು ಸಂಜೆ 4:45 ಗಂಟೆಗೆ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಿಂದ ಕಚ್ಚಾ ರಸ್ತೆಯಲ್ಲಿ ಪಿರ್ಯಾಧಿಯ ಪರಿಚಯದ ಶುಭಕರ ಕೊಂಡೆ (68) ಎಂಬವರು ಮಾಣಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದು ಆ ಸಮಯ ಉಪ್ಪಿನಂಗಡಿ ಕಡೆಯಿಂದ ಕೆಎ-19-ಇಡಿ-3994ನೇ ಮೋಟಾರು ಸೈಕಲ್‌ನ್ನು ಅದರ  ಸವಾರನು ಅಜಾಗರೂಕತೆ ಮತ್ತು ದುಡುಕುತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಶುಭಕರ ಕೊಂಡೆ ರವರ ಹಿಂಭಾಗದಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು. ಅಪಘಾತ ಕಂಡು ಪಿರ್ಯಾಧಿ ಕೂಡಲೇ ತನ್ನ ಮೋಟಾರು ಸೈಕಲನ್ನು ನಿಲ್ಲಿಸಿ ಅಲ್ಲಿ ಸೇರಿದವರೊಂದಿಗೆ ಹತ್ತಿರ ಹೋಗಿ, ಅವರನ್ನು ಎತ್ತಿ ಉಪಚರಿಸಿ ನೋಡಲಾಗಿ ಶುಭಕರ ಕೊಂಡೆರವರಿಗೆ ತಲೆಗೆ ಹಾಗೂ ಮೈಕೈಗೆ ರಕ್ತಗಾಯ ಅಗಿರುತ್ತದೆ. ಶುಭಕರ ಕೊಂಡೆರವರನ್ನು ಕಂಕನಾಡಿ ಫಾದರ್‌ ಮುಲ್ಲರ್‌ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಶುಭಕರ ಕೊಂಡೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 179/2022  ಕಲಂ:279,304ಎ, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗುರು ಆರ್‌ ಪ್ರಸಾದ್‌ ಪ್ರಾಯ 40 ವರ್ಷ, ತಂದೆ: ದಿ. ನಾರಾಯಣ ನೂರಿತ್ತಾಯ, ವಾಸ: ವಿಷ್ಣುಕುಮಾರ ನಿಲಯ, ಬಾರ್ಯ ಅಂಚೆ & ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 19-11-2022 ರಂದು 13-30 ಗಂಟೆಗೆ ಮೋಟಾರ್‌ ಸೈಕಲ್‌ ಸವಾರ ತನಿಯಪ್ಪ ಗೌಡ ಎಂಬವರು KA-21-L-0708ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಯಾವುದೇ ಸೂಚನೆಯನ್ನು ನಿಡದೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೇ ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಗುರು ಆರ್‌ ಪ್ರಸಾದ್‌ ರವರು ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಬಾರ್ಯ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Y-4248ನೇ ನೋಂದಣಿ ನಂಬ್ರದ  ಮೋಟಾರ್‌ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರು  ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಎಡಕಾಲಿನ ಕೋಲು ಕಾಲಿಗೆ, ಎಡ ಕೈಯ ಕಿರು ಬೆರಳಿಗೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ  ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದು. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 178/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಾಗರಾಜು ಕೆ ಬಿ ಪ್ರಾಯ39 ವರ್ಷ ತಂದೆ:ಭರ್ಮಪ್ಪ ಕೆ ಆರ್ ವಾಸ: ಕೊರಲಿಕೊಪ್ಪ ಮನೆ ಕೊರಲಿಕೊಪ್ಪ ಗ್ರಾಮ ಆಚಾವುರು ಪೋಸ್ಟ್‌ ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ:18.11.2022 ರಂದು ಕೊರಲಿಕೊಪ್ಪ ದಿಂದ ದೇವರ ದರ್ಶನಕ್ಕಾಗಿ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗುವಾಗ ತನ್ನ ತಂದೆಯ ಬಾಬ್ತು ಕೆ ಎ 15 ಎಮ್‌ 3121 ನೇಯ ಮಾರುತಿ ಆಲ್ಟೋ ಕಾರಿನಲ್ಲಿ ತನ್ನ ತಾಯಿ ನೀಲಮ್ಮ, ಹೆಂಡತಿ ಶಾಲಿನಿ, ಹಾಗೂ ಮಕ್ಕಳೊಂದಿಗೆ ದೇವರ ದರ್ಶನ ಪಡೆದು ಸುಬ್ರಹ್ಮಣ್ಯದಿಂದ ಉಡುಪಿಗೆ ಹೋಗುತ್ತೀರುವಾಗ ಕಡಬ ತಾಲೂಕು ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿಗೆ ಸಮಯ ಸುಮಾರು ಸಂಜೆ 05.45 ಗಂಟೆಗೆ ತಲುಪಿದಾಗ ಪಿರ್ಯಾದಿಯು ಚಲಾಯಿಸುತ್ತಿದ್ದ ಕಾರಿಗೆ ಧರ್ಮಸ್ಥಳ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಕೆಎ 04 ಎಮ್‌ ಎಲ್‌ 0162 ಕಾರು ಚಾಲಕನು ಅಜಾಗರೂಕತೆಯಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಆತನ ತೀರಾ ಬಲಬದಿಗೆ ಬಂದು ಪಿರ್ಯಾದಿಯು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಎರಡು ಕಾರುಗಳು ಜಖಂ ಆಗಿದ್ದು, ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 101/2022 ಕಲಂ: ಕಲಂ:279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 01

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಂಜುನಾಥ (29) ತಂದೆ: ಮೈಲಾರಪ್ಪ ವಾಸ: ವಂದಳ್ಳಿ ಮೂಕಾಪುರ ಲಿಂಗಸೂರು ರಾಯಚೂರು ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದುದಾರರ ಭಾವ ಸಂತೋಷ್‌ (48)ರವರು ಅರಳ ಗ್ರಾಮದ ಕುಟ್ಟಿಕಳ ಕೆ.ಎಸ್‌ ಹಸನಬ್ಬ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದವರಿಗೆ ದಿನಾಂಕ 19.11.2022 ರಂದು ಸ್ವಲ್ಪ ಅಸೌಖ್ಯ ದಿಂದ ಇದ್ದವರಿಗೆ  ಸಿದ್ದಕಟ್ಟೆ ಪ್ರಭಾ ಕ್ಲಿನಿಕ್‌ ನಲ್ಲಿ ಪರೀಕ್ಷಿಸಿ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದು ಸ್ವಲ್ಪ ಆರೋಗ್ಯದಿಂದ ಇದ್ದವರಿಗೆ ದಿನಾಂಕ 20.11.2022 ರಂದು ಬೆಳಿಗ್ಗೆ ತಲೆಸುತ್ತು ಬರುತ್ತದೆ ತುಂಬಾ ಸುಸ್ತಾಗುತ್ತಿದೆ ಎಂದು ಹೇಳಿದಾಗ ಅವರನ್ನು ಕೂಡಲೇ ಚಿಕಿತ್ಸೆ ಗಾಗಿ ಅಂಬುಲೆನ್ಸ್‌ ಬರಮಾಡಿಸಿದ್ದು ಅಂಬುಲೆನ್ಸ್‌ ನವರು ಬಂದು ಮಧ್ಯಾಹ್ನ 12.45 ಗಂಟೆ ಸಮಯಕ್ಕೆ ಪರೀಕ್ಷಿಸಿ ಸಂತೋಷ್‌ (42)ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ  62/2022  ಕಲಂ 174  ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-11-2022 01:28 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080