ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಿ,ಎಮ್ ಇಸ್ಮಾಯಿಲ್ ಪ್ರಾಯ: 52 ವರ್ಷ ತಂದೆ: ದಿ|| ಕೆ.ಎಸ್ ಮೊಹಮ್ಮದ್ ವಾಸ: ಮರ್ಶಿದ್ ಮಹಲ್ ಮನೆ, ಕಿನ್ಯಾ ಗ್ರಾಮ ಮತ್ತು ಅಂಚೆ ಮಂಗಳೂರು ಎಂಬವರ ದೂರಿನಂತೆ ದಿನಾಂಕ 18-12-2022 ರಂದು KA-19-Y-0832 ನೇ ಮೋಟಾರ್ ಸೈಕಲ್ ನಲ್ಲಿ ಸತ್ಯೆಂದ್ರ ರೈ ಸವಾರನಾಗಿ ಹಾಗೂ ಸೂರಜ್ ಸಹಸವಾರನಾಗಿ ಅಗತ್ಯ ಕೆಲಸದ ನಿಮಿತ್ತ ಮಂಚಿಗೆ ಹೋಗಿ ವಾಪಾಸು ಫಿರ್ಯಾದಿದಾರರ ಫ್ಯಾಕ್ಟರಿ ಕಡೆಗೆ ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 03:30 ಗಂಟೆಗೆ ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಮೊಂತಿಮಾರ್ ಎಂಬಲ್ಲಿ ಮೋಟಾರ್ ಸೈಕಲ್ ನ್ನು ಸವಾರ ಸತ್ಯೆಂದ್ರ ರೈ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಗುಂಡಿಗೆ ಬಿದ್ದು ಮೋಟಾರ್ ಸೈಕಲ್ ಸವಾರ ಸತ್ಯೆಂದ್ರ ರೈ ರವರಿಗೆ  ಮೈ,ಕೈಗೆ ಗುದ್ದಿದ ಗಾಯ ನೋವು ಹಾಗೂ ಸಹಸವಾರ ಸೂರಜ್ ರವರಿಗೆ ತಲೆಯ ಹಿಂಬದಿ, ತಲೆಯ ಮುಂಬದಿಗೆ ರಕ್ತಗಾಯ ಹಾಗೂ ಬಲಬಾಗ ಭುಜಕ್ಕೆ ಗುದ್ದಿದ ಗಾಯವಾಗಿದ್ದು  ಚಿಕಿತ್ಸೆಗೆ ದೇರಳಕಟ್ಟೆ ಯೆನಪೊಯ  ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವುದಾಗಿದೆ, ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 156/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶೈಲೇಶ್‌ (25) ತಂದೆ: ಚೆನ್ನಪ್ಪ, ಮೂಲ್ಯ, ವಾಸ: ಅಗರ್ದ್‌ ಬೈಲು ಮನೆ, ಬಂಬಿಲ, ಕಾಡಬೆಟ್ಟು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 20-12-2022 ರಂದು ಕೆಎ 19 ಇಕೆ 4029 ನೇ ಮೋಟಾರು ಸೈಕಲ್‌ ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಸವಾರನಾಗಿ ವಿಜಯ್‌ರವರು ಮೋಟಾರು ಸೈಕಲ್‌ನ್ನು ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಸುಮಾರು ಸಂಜೆ 6.15 ಗಂಟೆಗೆ ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಕಕ್ಕೇನಾ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ಧಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಉಜಿರೆ ಕಡೆಗೆ ಕೆಎ 63 F 0128 ನೇ KSRTC ಬಸ್‌ನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರ ಮತ್ತು ಸಹಸವಾರ ಮೋಟಾರು ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದು ಸಹಸವಾರ ಪಿರ್ಯಾದಿದಾರರಿಗೆ ಬಲಕಾಲಿನ ತೊಡೆಗೆ ಗುದ್ದಿದ ಗಾಯವಾಗಿದ್ದು ಉಜಿರೆ ಎಸ್‌ಡಿಎಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ,  ಸವಾರ ವಿಜಯರವರಿಗೆ ತಲೆಗೆ, ಮುಖಕ್ಕೆ, ತೀವ್ರ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗಲೇ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ, ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 165/2022 ಕಲಂ; 279,  337,304 (A) ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪುಷ್ಪರಾಜ್‌ ಗೌಡ, ಪ್ರಾಯ 24 ವರ್ಷ, ತಂದೆ: ಸಂಜೀವ ಗೌಡ, ವಾಸ: ಅರಂಗಲ ಮನೆ, ಅನಂತಾಡಿ ಅಂಚೆ & ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 20-12-2022 ರಂದು 06:15 ಗಂಟೆಗೆ ಆರೋಪಿ ಓಮ್ನಿ ಕಾರು ಚಾಲಕ ಗೋಪಾಲಕೃಷ್ಣ ಭಟ್‌ ಕೆ ಎಂಬವರು  KA-20-7421 ನೇ ನೋಂದಣಿ ನಂಬ್ರದ ಓಮ್ನಿ ಕಾರನ್ನು ಪುತ್ತೂರು ಕಡೆಯಿಂದ ಮಾಣಿ ಕಡೆಗೆ  ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ನೆಹರೂನಗರ ಜಂಕ್ಷನ್‌ ನಲ್ಲಿ ಹೆದ್ದಾರಿಯ ಎಡಬದಿಯಲ್ಲಿರುವ ವಿವೇಕಾನಂದ ಕಾಲೇಜ್‌ ಕಡೆಗೆ ಹೋಗುವ ರಸ್ತೆಗೆ ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಪುಷ್ಪರಾಜ್‌ ಗೌಡ ರವರು  ಮಾಣಿ ಕಡೆಯಿಂದ  ಪುತ್ತೂರು ಕಡೆಗೆ ಚಲಾಯಿಸಿಕೊಂಡು  ಹೋಗುತ್ತಿದ್ದ KA-19-en-3108 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಓಮ್ನಿ ಕಾರು ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು,  ಬಲಕಾಲಿನ ಪಾದಕ್ಕೆ, ಬಲಕಾಲಿನ ಮೊಣಗಂಟಿಗೆ, ಸೊಂಟಕ್ಕೆ, ಬಲಪಕ್ಕೆಲುಬಿಗೆ, ಬಲಕೆನ್ನೆಗೆ ಗುದ್ದಿದ ಹಾಗೂ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 190/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪೈಜಲ್‌, ಪ್ರಾಯ 24 ವರ್ಷ, ತಂದೆ: ಅಬ್ದುಲ್‌ ಸಮದ್‌, ವಾಸ: ಭಗವಂತಕೋಡಿ ಮನೆ, ನೇರಳಕಟ್ಟೆ ಅಂಚೆ, ನೆಟ್ಲಮುಡ್ನೂರು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 20-12-2022 ರಂದು 10:10 ಗಂಟೆಗೆ ಆರೋಪಿ ಬೊಲೆರೋ ವಾಹನ ಚಾಲಕ ವಿವೇಕ್‌ ಶೆಟ್ಟಿ ಎಂಬವರು  KA-21-P-3537 ನೇ ನೋಂದಣಿ ನಂಬ್ರದ ಬೊಲೆರೋ ವಾಹನವನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಮಾಣಿ ಕಡೆಯಿಂದ ಪುತ್ತೂರು ಕಡೆಗೆ  ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಎಂಬಲ್ಲಿ ಸುದಾನ ಶಾಲೆಯ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಫೈಜಲ್‌ ರವರು ಚಾಲಕರಾಗಿ, ನೂರ್‌ಜಾನ್‌, ಉಮ್ಮುಕುಲ್ಸು, ಅಲೀಮಾ ಮತ್ತು ರಹಮತ್‌ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ  ಮಾಣಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-mD-6712 ನೇ ನೋಂದಣಿ ನಂಬ್ರದ ಬೊಲೆರೋ ವಾಹನಕ್ಕೆ ಅಪಘಾತವಾಗಿ, ಪಿರ್ಯಾದುದಾರರಿಗೆ ಕುತ್ತಿಗೆಗೆ, ಬಲಕೈಗೆ, ಭುಜಕ್ಕೆ ಗುದ್ದಿದ ಗಾಯ, ನೂರ್‌ಜಾನ್‌ ರವರಿಗೆ ಎದೆಗೆ, ತಲೆಗೆ, ಹಣೆಗೆ, ಎರಡೂ ಕೈಯ ಮೊಣಕೈಗೆ, ಸೊಂಟಕ್ಕೆ ಗುದ್ದಿದ ಗಾಯ, ಉಮ್ಮುಕುಲ್ಸು ರವರಿಗೆ ಬಲಕೈ ಬೆರಳುಗಳಿಗೆ  ಸೊಂಟಕ್ಕೆ, ಎದೆಗೆ ಗುದ್ದಿದ ಗಾಯ, ಅಲೀಮಾರವರಿಗೆ ಎದೆಗೆ ಗುದ್ದಿದ ಗಾಯಗಳಾಗಿ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಹಮತ್‌ರವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಆರೋಪಿ ಸವಾರ ಮತ್ತು ಅದರಲ್ಲಿದ್ದ ಜೀವನ್‌ ಮತ್ತು ರಾಮ ಪ್ರಸಾದ್‌ರವರಿಗೂ ಗಾಯಗಳಾಗಿರುತ್ತದೆ. ಈ ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 191/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: 2

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೀತಾರಾಮ ಅಚಾರ್ಯ (60) ತಂದೆ: ಸುಬ್ರಾಯ ಆಚಾರ್ಯ ವಾಸ: ಕೊರ್ಲೆತ್ತಿಮಾರ್‌ ಮನೆ ನೆಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿರವರಿಗೆ ಸಂಬಂದಿಸಿ ಜಮೀನು ದ್ಯಾನೋ ರವರ ಸ್ವಾದೀನದಲ್ಲಿದ್ದು ಸದ್ರಿ ಜಮೀನಿನಲ್ಲಿ ದ್ಯಾನೋರವರು ದಿನಾಂಕ: 09.12.2022 ರಂದು 12.00 ಗಂಟೆಗೆ ಜೆ ಸಿ ಬಿ ತಂದು ಸಮತಟ್ಟು ಮಾಡುತ್ತಿರುವುದನ್ನು ಪಿರ್ಯಾದಿದಾರರು ಆಕ್ಷೇಪಿಸಿದಾಗ ದ್ಯಾನೋ ರವರು ಅವಾಚ್ಯ ಶಬ್ದಗಳಿಂದ ಬೈದು ಕೆಲಸವನ್ನು ಮುಂದುವರೆಸಿದಾಗ ಪಿರ್ಯಾದಿದಾರರು ಠಾಣೆಗೆ ಬಂದು ದೂರು ಅರ್ಜಿಯನ್ನು ನೀಡಿ ಪಿರ್ಯಾದಿದಾರರ ಬೈಕಿನಲ್ಲಿ ಅವರ ಮನೆಯ ಕಡೆಗೆ ಹೋಗುತ್ತಾ ಸಮಯ ಸುಮಾರು ಸಂಜೆ 4.00 ಗಂಟೆಗೆ ಜಯರಾಮ್‌ ಎಂಬವರ ಕಟ್ಟಡದ ಬಳಿಯಲ್ಲಿ ದ್ಯಾನೋ ಬಿಳಿ ಬಣ್ಣದ ಕಾರೊಂದನ್ನು ಹಿಂಬದಿಯಿಂದ ಚಲಾಯಿಸಿಕೊಂಡು ಬಂದು ಬೈಕನ್ನು ಒವರ್‌ ಟೇಕ್‌ ಮಾಡಿ ಪಿರ್ಯಾದಿದಾರರನ್ನು ಮುಂದಕ್ಕೆ ಹೋಗದಂತೆ ತಡೆದು ಕಾರಿನಿಂದ ಇಳಿದು ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ಬಾರಿ ಕಂಪ್ಲೇಟ್‌ ಕೊಡುತ್ತೀಯಾ ಎಂದು ಹೇಳಿ ಬೈಕ್‌ ನಿಂದ ಎಳೆದು ಹಾಕಿ ಕೈಯಿಂದ ಪಿರ್ಯಾದಿದಾರರ ಕುತ್ತಿಗೆ ಮತ್ತು ತಲೆಗೆ ಹೊಡೆದು ದೂಡಿ ಹಾಕಿ ಕಾಲಿನಿಂದ ಹೊಟ್ಟೆಗೆ ಮತ್ತು ಸೊಂಟದ ಭಾಗಕ್ಕೆ ತುಳಿದು ಈ ದಿನ ಬದುಕುಳಿದಿ ಮುಂದಕ್ಕೆ ನಿನ್ನನ್ನು ಕೊಂದು ಹಾಕುತ್ತೇನೆ ಎಂಬುದಾಗಿ ಹೆದರಿಕೆ ಹಾಕಿರುತ್ತಾನೆ.ಈ ಬಗ್ಗೆ ವಿಟ್ಲ ಠಾಣಾ ಅಕ್ರ  ನಂಬ್ರ 201/2022 ಕಲಂ 341,504,323, 506 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಶಾಂತ್ ಎ (28) ತಂದೆ: ರಾಮಣ್ಣ ಗೌಡ  ವಾಸ :ಏಮಾಜೆ ಮನೆ ನೇರಳಕಟ್ಟೆ ಅಂಚೆ ನೆಟ್ಲಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:  20.12.2022 ರಂದು ಬೆಳಗ್ಗೆ ಸುಮಾರು 10.30 ಗಂಟೆಗೆ ತನ್ನ ಮನೆಯಾದ ಏಮಾಜೆಯಿಂದ ಪಂಚಾಯಿತ್ ರಸ್ತೆಯಲ್ಲಿ ಬರುತ್ತಿರುವಾಗ ಆರೋಪಿತರು KA-21-Z-1600 ನಂಬ್ರದ ಜೆ ಸಿ ಬಿ ಯಂತ್ರವನ್ನು ತಂದು ರಸ್ತೆಯನ್ನು ಅಗೆದು ಕಣಿಯನ್ನು ತೋಡಿ ಅಡ್ಡವಾಗಿ ಮರವನ್ನು ಕಡಿದು ಉರುಳಿಸಿದ್ದು ಈ ಬಗ್ಗೆ ಪಿರ್ಯಾದಿದಾರರು ವಿಚಾರಿಸಲು ಹೋದಾಗ ತುಳು ಬಾಷೆಯಲ್ಲಿ ಅವ್ಯಾಚವಾಗಿ ಬೈದು 1 ರಿಂದ 3 ನೇ ಆರೋಪಿಗಳು ಕೈಯಲ್ಲಿ ಕತ್ತಿಯನ್ನು ಹಿಡಿದು ಜೀವ ಬೆದರಿಕೆ ಒಡ್ಡಿದ್ದು ನಂತರ 4 ರಿಂದ 10 ನೇಯವರು ಪಿರ್ಯಾದಿದಾರರ ಅಂಗಿಯನ್ನು ಎಳೆದು ಕೈ ಯಿಂದ ಹಲ್ಲೆ ನೆಡೆಸಿ ಕಾಲಿನಿಂದ ತುಳಿದು ತುಳು ಭಾಷೆಯಲ್ಲಿ ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 202/2022 ಕಲಂ:143.147.148,323,504,506 ಜೊತೆಗೆ 149  ಬಾಧಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಮಾಲತಾ(40) ಗಂಡ ಉಮನಾಥ ಶಿವಾಜಿ ನಗರ ಮನೆ, ಬೆಂಜನಪದವು, ಅಮ್ಮುಂಜೆ ಗ್ರಾಮ ಎಂಬವರ ದೂರಿನಂತೆ ಪಿರ್ಯಾದಿದಾರರಿಗೆ ಸುಮಾರು 11 ವರ್ಷಗಳ ಹಿಂದೆ  ಉಮಾನಾಥರವರೊಂದಿಗೆ ಮದುವೆಯಾಗಿದ್ದು ಮಕ್ಕಳಾಗಿರುವುದಿಲ್ಲ. ಪಿರ್ಯಾದಿದಾರರ ಗಂಡ ಮೇಸ್ರಿ ಕೆಲಸ ಮಾಡಿಕೊಂಡಿದ್ದು  ಸುಮಾರು  7 ತಿಂಗಳ ಹಿಂದೆ  ರಸ್ತೆ ಅಪಘಾತ ಉಂಟಾಗಿ  ತಲೆಗೆ ಪೆಟ್ಟಾಗಿದ್ದು  ಅದರ ಬಳಿಕ ಯಾರೊಂದಿಗೂ  ಹೆಚ್ಚಾಗಿ ಸೇರದೇ  ಮನೆಯಲ್ಲಿಯೇ  ಖಿನ್ನತೆಯಿಂದ ಇರುತ್ತಿದ್ದವರು  ದಿನಾಂಕ  20.12.2022 ರಂದು ಮದ್ಯಾಹ್ನ 12.00 ಯಿಂದ ಸಂಜೆ 6.30 ಗಂಟೆಯ  ಮದ್ಯದ ಅವದಿಯಲ್ಲಿ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಅಕೇಶಿಯ  ಮರದ ಗೆಲ್ಲಿಗೆ ನೈಲಾನ್  ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು  ಆತ್ಯಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ  67/2022  ಕಲಂ 174  ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-12-2022 11:12 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080