ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಿಂಧೂರ್‌ ಎಸ್‌ ಘಟ್ನೂರು, ಪ್ರಾಯ 37 ವರ್ಷ, ತಂದೆ: ಸಂಗಪ್ಪ  ವಾಸ: ಘಟ್ನೂರು ಮನೆ, ರಡ್ಡೇರ್‌ ತಿಮ್ಮಪುರ್‌ ಗ್ರಾಮ, ಬಾದಾಮಿ ತಾಲೂಕು , ಬಾಗಲಕೋಟೆ ಎಂಬವರ ದೂರಿನಂತೆ ದಿನಾಂಕ 20-01-2023 ರಂದು 19:45 ಗಂಟೆಗೆ ಆರೋಪಿ ಟ್ಯಾಂಕರ್‌ ಲಾರಿ ಚಾಲಕ ರಶೀದ್‌ ಎ ಎಂಬವರು KA-11-A-9414ನೇ ನೋಂದಣಿ ನಂಬ್ರದ ಟ್ಯಾಂಕರ್‌ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಕರ್ವೆಲು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಸಿಂದೂರ್‌ ಎಸ್‌ ಘಟ್ನೂರು ರವರು ಚಾಲಕರಾಗಿ  ಅಮಾನುಲ್ಲಾ ರವರು ನಿರ್ವಾಹಕರಾಗಿ, ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕೆ.ಎಸ್‌.ಆರ್‌.ಟಿ.ಸಿ ಐರಾವತ ಬಸ್‌ ನೋಂದಣಿ ನಂಬ್ರ KA-01-F-9194ನೇದಕ್ಕೆ ಟ್ಯಾಂಕರ್‌ ಲಾರಿ ಅಪಘಾತವಾಗಿ, ಬಸ್ಸಿನ ಎರಡು ಭಾಗದ ಗ್ಲಾಸ್‌ ಗಳು ಹೋಗಿರುತ್ತವೆ, ಎಮರ್ಜೆನ್ಸಿ ಡೋರ್‌ ಬೆಂಡಾಗಿರುತ್ತದೆ ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರುವುದಿಲ್ಲ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 12/2023 ಕಲಂ: 279, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್ ಸಬೀರ್ ಅಲಿ (41) ವರ್ಷ.ಗಂಡ: ಉಂಞ ಬ್ಯಾರಿ ಯಾನೆ ಮೊಹಿಯುದ್ದೀನ್ ವಾಸ: #1-155 ಕೆಂಜಿಲಮನೆ, ಇರಾಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 20-01-2023 ರಂದು ಪಿರ್ಯಾಧಿದಾರರು ಗೋಳಿಪಡ್ಪು ಜಂಕ್ಷನ್ನಲ್ಲಿ ಇದ್ದ ಸಮಯ ಸುಮಾರು ಮಧ್ಯಾಹ್ನ 3:00 ಗಂಟೆಗೆ ಬಂಟ್ವಾಳ ತಾಲೂಕು ಸಜಿಪನಡು ಗ್ರಾಮದ ಗೋಳಿಪಡ್ಪು, ಮುಡಿಪು – ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೋಳಿಪಡ್ಪು ಕಡೆಯಿಂದ ಸಜಿಪನಡು ಕಡೆಗೆ  KA-19-HG-4612 ನೇ ಸ್ಕೂಟರನ್ನು ಮೊಹಮ್ಮದ್ ಇಮ್ತಿಯಾಜ್ ರವರು ಸಹ ಸವಾರ ಮೊವೀಝ್ ರವರನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಎಸೆಯಲ್ಪಟ್ಟು ಸ್ಕೂಟರ್ ಸವಾರ ಮತ್ತು ಸಹ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸ್ಕೂಟರ್ ಸಹ ಸವಾರ ಮೊವೀಝ್ ರವರಿಗೆ ಗಾಯ ನೋವುಗಳಾಗಿ ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ದಾಖಲಾಗಿರುವುದಾಗಿದೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 13/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವೇದಾವತಿ ಪ್ರಾಯ:37 ವರ್ಷ ಗಂಡ: ದಿ| ಲೋಕನಾಥ್ ಪೂಜಾರಿ ವಾಸ: ಶೇಡಿಗುರಿ ಮನೆ, ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ಪಿರ್ಯಾದಿದಾರರು ನರಿಕೊಂಬು ಗ್ರಾಮದಲ್ಲಿ ಸುರೇಶ್ ಕಾಂಪ್ಲೇಕ್ಸ್ ಎಂಬ ವಾಣಿಜ್ಯ ಸಂಕೀರ್ಣವನ್ನು ಹೊಂದಿದ್ದು, ಅದರಲ್ಲಿ ಆರೋಪಿತರಿಗೆ ಬಾಡಿಗೆಗೆ ಕಟ್ಟಡವನ್ನು ನೀಡಿದ್ದರು. ದಿನಾಂಕ:02-11-2021 ರಂದು ಬಾಡಿಗೆ ಅವಧಿಯು ಮುಗಿದಿದ್ದು, ಆನಂತರ ಅನೇಕ ಸಲ ಆರೋಪಿತನಿಗೆ ಅಂಗಡಿಯಲ್ಲಿದ್ದ ಸಾಮಾನುಗಳನ್ನು ತೆಗೆದುಕೊಂಡು ಹೋಗುವಂತೆ ವಿನಂತಿಸಿದ್ದು, ಅದರಂತೆ ದಿನಾಂಕ:26-09-2022 ರಂದು ಅಂಗಡಿ ಕೋಣೆಯಲ್ಲಿದ್ದ ಸಾಮಾನುಗಳನ್ನು ಹೊರಗೆ ಇಟ್ಟು ಅಂಗಡಿ ಕೋಣೆಯ ಸ್ವಾದೀನತೆಯನ್ನು ಬಿಟ್ಟುಕೊಟ್ಟಿರುತ್ತಾರೆ. ಸದ್ರಿ ಹೊರಗಿಟ್ಟಿರುವ ಸಾಮಾನುಗಳನ್ನು ಕೊಂಡು ಹೋಗುವಂತೆ ನೋಟೀಸ್ ಸಹ ನೀಡಿರುತ್ತಾರೆ. ಆ ಪ್ರಕಾರ ಆರೋಪಿಯು ಅವರಿಗೆ ಸೇರಿದ ಸೊತ್ತುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ದಿನಾಂಕ:28-09-2022 ರಂದು ಬೆಳಿಗ್ಗೆ 8 ಗಂಟೆಯ ಸಮಯಕ್ಕೆ ಆರೋಪಿಯು ಪಿರ್ಯಾದಿದಾರರ ಮನೆಗೆ ಬಂದು ಕಟ್ಟಡದಲ್ಲಿ 4 ಕೋಣೆಗಳನ್ನು ನನಗೆ ಕೊಡಬೇಕು ಎಂದು ಅವ್ಯಾಚ ಶಬ್ದಗಳಿಂದ ಬೈದು ಜೀವ  ಬೆದರಿಕೆಯೊಡ್ಡಿರುತ್ತಾರೆ. ಅಲ್ಲದೇ ಇಲ್ಲಸಲ್ಲದ ಆರೋಪ ಹೊರಿಸಿ ಪಿರ್ಯಾದಿದಾರರ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಅಲ್ಲದೇ ಪಿರ್ಯಾದಿದಾರರ ರುಜುವನ್ನು ತಾನೇ ಮಾಡಿ ಕೃತಕ ದಾಖಲೆಗಳನ್ನು ಸೃಷ್ಟಿಸಿ “ನಿನ್ನ ಎಲ್ಲಾ ಸ್ಥಿರಾಸ್ಥಿಯನ್ನು ನಾನು ಪಡೆಯದೇ ಇದ್ದಲ್ಲಿ ನಾನು ನನ್ನ ತಂದೆಗೆ ಹುಟ್ಟಿದವನೇ ಅಲ್ಲ” ಎಂದು ಹೇಳಿರುತ್ತಾನೆ.  ದಿನನಿತ್ಯ ಆರೋಪಿಯು ಬಲತ್ಕಾರವಾಗಿ ಪಿರ್ಯಾದಿದಾರರ ಅಂಗಡಿ ಹಾಗೂ ಮನೆಯ ಹತ್ತಿರ ಬಂದು ಪಿರ್ಯಾದಿದಾರರಿಗೆ ಚಿತ್ರಹಿಂಸೆ ನೀಡುತ್ತಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ:02/2023 ಕಲಂ: 441, 442, 447, 504, 506, 509 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ:20-01-2023 ರಂದು ಸಮಯ 11:45 ಗಂಟೆಗೆ ದೇವಪ್ಪ ಎಮ್ ಕೆ ಎಎಸ್ಐ ಬೆಳ್ತಂಗಡಿ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ಕುವೆಟ್ಟು ಗ್ರಾಮದ ಅನಿಲ ಎಂಬಲ್ಲಿ ಅಬ್ದುಲ ರಹಿಮಾನ್ ಎಂಬವರ ಮನೆಯ ಹಿಂಬದಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ಖಚಿತ ವರ್ತಮಾನದಂತೆ ಸಿಬ್ಬಂದಿಗಳೊಂದಿಗೆ ಅಬ್ದುಲ ರಹಿಮಾನ್ ಎಂಬವರ ಮನೆಯ ಬಳಿ ತಲುಪಿ  ನೊಡಲಾಗಿ ಮನೆಯ ಹಿಂಬದಿ ಆರೋಪಿಗಳಾದ ಹಮೀದ್ ,ಇಸ್ಮಾಯಿಲ್ ,ಮತ್ತು ಹ್ಯಾರಿಸ್ ಎಂಬವರುಗಳು ದನದ ಮಾಂಸವನ್ನು ತುಂಡು ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ನಂತರ ಅಲ್ಲಿದ್ದ ಸೊತ್ತುಗಳನ್ನು ಪರಿಶೀಸಲಾಗಿ, ದನದ ಮಾಂಸ ತುಂಡು ಮಾಡಲು ಉಪಯೋಗಿಸುವ ಮರದ ಕಟ್ಟೆ-1, ಗೋಣಿ ಚೀಲ-1, ಹಾಗೂ ಗೋಣಿ ಚೀಲದಲ್ಲಿ ಹರಡಿದ ದನದ ಮಾಂಸ 30 ಕೆಜಿ ಯಾಗಿದ್ದು ಅದರ ಅಂದಾಜು ಮೌಲ್ಯ 7500ರೂ,ಹಾಗೇ  ಸ್ಟೀಲ್ ಬಕೇಟನಲ್ಲಿ  ಸುಮಾರು 13 ಕೆಜಿ ದನದ ಮಾಂಸವಿದ್ದು ಇದರ ಅಂದಾಜು ಮೌಲ್ಯ 3250 ರೂ,ಹಾಗೇ ಪ್ಲಾಸ್ಟೀಕ್ ಬಕೇಟ್ ನಲ್ಲಿ ಸುಮಾರು 12 ಕೆಜಿ ದನದ ಮಾಂಸವಿದ್ದು ಇದರ ಅಂದಾಜು ಮೌಲ್ಯ 3000ರೂ ಮತ್ತು ಮಾಂಸ ತುಂಡರಿಸುವ 2 ಮಂಡ ಕತ್ತಿಗಳು ಇದರ ಅಂದಾಜು ಮೌಲ್ಯ 400ರೂ ಅಲ್ಲದೇ 1 ಸ್ಟೀಲ್ ಚೂರಿ ಇದರ ಅಂದಾಜು ಮೌಲ್ಯ 50 ರೂ ಅಲ್ಲದೇ ಪ್ಲಾಸ್ಟಿಕ್ ಬಕೇಟನ ಅಂದಾಜು ಮಛಲ್ಯ 50ರೂ ಹಾಗೂ ಸ್ಟೀಲ್ ಬಕೇಟ್ ಅಂದಾಜು ಮೌಲ್ಯ 100ರೂ ಆಗಬಹುದು. ದನದನ ಮಾಂಸದ ಒಟ್ಟು ಮೌಲ್ಯ ರೂ 13750 ಹಾಗೂ ಇತರ ಸೋತ್ತುಗಳ ಮೌಲ್ಯ 600 ಇವುಗಳನ್ನು ಸ್ವಾದೀನ ಪಡೆದುಕೊಂಡಿರುವುದಾಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 02/2023  ಕಲಂ: 4,5,7,8,12 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-01-2023 12:09 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080