ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಂದ್ರಶೇಖರ ರೈ, ಪ್ರಾಯ 41 ವರ್ಷ, ತಂದೆ: ದಿ|| ನಾರಾಯಣ ರೈ, ವಾಸ: ಜಿಡೆಕಲ್ಲು ಮನೆ, ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 20-04-2022 ರಂದು 21-20 ಗಂಟೆಗೆ ಆರೋಪಿ ಕಾರು ಚಾಲಕ ಶಿವಾನಂದ ಹೆಗ್ಡೆ ಎಂಬವರು KA-21-N-7596 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಶಿವನ ಮೂರ್ತಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಪಾರ್ಕ್‌ ಮಾಡಿರುವುದನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ, ಸಾರ್ವಜನಿಕ ಸ್ಥಳದಲ್ಲಿ ಮಲಗಿದ್ದ ಅಪರಿಚಿತ ವ್ಯಕ್ತಿಯ ಮೇಲೆ ಕಾರು ಹಾದು ಹೋಗಿ ಗಂಭೀರ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  74/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಘವೇಂದ್ರ ಕೋಟ್ಯಾನ್ ಪ್ರಾಯ 49 ವರ್ಷ, ತಂದೆ: ಕೆ.ಬಿ ಕೋಟ್ಯಾನ್, ವಾಸ: #230/1, 1ನೇ ಮೈನ್, 2ನೇ ಕ್ರಾಸ್, ಕೆ.ಇ.ಬಿ ಲೇಔಟ್, ಸಂಜಯನಗರ, ಬೆಂಗಳೂರು ಎಂಬವರ ದೂರಿನಂತೆ ದಿನಾಂಕ 20-04-2022 ರಂದು 20-30 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಮನೋಹರ ಎಂಬವರು  KA-02-JR-6930 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಪುಷ್ಪರಾಜ್ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು   ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ಎಂಬಲ್ಲಿ ರಾಜಧಾನಿ ಟವರ್ಸ್ ಒಳಗಡೆಯಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಹನಗಳನ್ನು ಗಮನಿಸದೇ ಏಕಾಏಕಿಯಾಗಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಗೆ ಸ್ಕೂಟರನ್ನು ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ರಾಘವೇಂದ್ರ ಕೋಟ್ಯಾನ್ ಎಂಬವರು ಬೆಂಗಳೂರು ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ   KA-05-MG-6866 ನೇ ನೋಂದಣಿ ನಂಬ್ರದ ಇನ್ನೋವಾ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು, ಬೋನೆಟ್ ಮೇಲೆ ಬಿದ್ದು, ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡ ಸವಾರ ಮತ್ತು ಸಹಸವಾರನನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  76/2022 ಕಲಂ: 279, 337, 338  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೋಹನ ಕುಲಾಲ್‌, ಪ್ರಾಯ 60 ವರ್ಷ, ತಂದೆ: ದಿ|| ವೆಂಕಪ್ಪ ಕುಲಾಲ್‌, ವಾಸ: ಮಾಣಿ ಉದ್ದ ಮನೆ, ಮಾಣಿ ಅಂಚೆ & ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 21-04-2022 ರಂದು 08-15 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ವಸಂತ ಎಂಬವರು  KA-19-EC-8884 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿನಲ್ಲಿ ಮೋಹನ ಕುಲಾಲ್‌ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕರಿಮಜಲು-ಕುಕ್ಕರಬೆಟ್ಟು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ,  ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕರಿಮಜಲು ಎಂಬಲ್ಲಿ ತಿರುವು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಹತೋಟಿ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದು, ಪಿರ್ಯಾದುದಾರರ ಬಲಭುಜಕ್ಕೆ ಗುದ್ದಿದ ಒಳನೋವಿನ ಗಾಯ, ಬಲಕಾಲಿನ ಪಾದಕ್ಕೆ ರಕ್ತಗಾಯ ಮತ್ತು ವಸಂತರವರಿಗೆ ಬಲಭುಜಕ್ಕೆ ಗುದ್ದಿದ ಗಾಯ ಹಾಗೂ ಬಲಕೈ ಬೆರಳಿಗೆ ಮತ್ತು ತಟ್ಟೆಗೆ ತರಚಿದ ಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  77/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅರಸ ಕುಮಾರ, ಪ್ರಾಯ: 26 ವರ್ಷ, ತಂದೆ: ಎ. ಮಹಾದೇವ ಸ್ವಾಮಿ, ವಾಸ: ಡೋರ್‌, ನಂಬ್ರ 25, EWS CITB, 10 ನೇ ಅಡ್ಡರಸ್ತೆ, 1ನೇ ಹಂತ, ರಾಜೀವ ನಗರ, ಮೈಸೂರು ಎಂಬವರ ದೂರಿನಂತೆ ಪಿರ್ಯಾದಿದಾರರು ತನ್ನ ಬಾಬ್ತು ಕಾರು ನಂಬ್ರ  KA09MC3023 ನೇದರಲ್ಲಿ ಮೈಸೂರಿನಿಂದ ಮಂಜುನಾಥ ಡಿ ಎಂಬವರ ಬಾಡಿಗೆ ಬಗ್ಗೆ ಪುತ್ತೂರಿಗೆ ಬಂದಿದ್ದು ಈ ದಿನ ದಿನಾಂಕ 21-4-2022 ರಂದು ಮಂಜುನಾಥರವರೊಂದಿಗೆ ಪುತ್ತೂರಿನಿಂದ ಮೈಸೂರಿಗೆಂದು  ತನ್ನ ಬಾಬ್ತು ಕಾರಿನಲ್ಲಿ ಹೊರಟು ಮಾಣಿ ಮೈಸೂರು ಹೆದ್ದಾರಿಯಲ್ಲಿ ಬರುತ್ತಾ ಸಮಯ ಸುಮಾರು 15-15 ಗಂಟೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಪೆಲತ್ತಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಕಾರಿನ ಚಾಲಕ ತನ್ನ ಬಾಬ್ತು ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಾಬ್ತು ಕಾರಿಗೆ ಹಿಂದಿನಿಂದ ಡಿಕ್ಕಿಯುಂಟು ಮಾಡಿದ ಪರಿಣಾಮ ಕಾರಿನಲ್ಲಿದ್ದ ಮಂಜುನಾಥರವರಿಗೆ ತಲೆಯ ಹಿಂಬದಿಗೆ ಗುದ್ದಿದ ನೋವುಂಟಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಸುಳ್ಯಕ್ಕೆ ಕಳುಹಿಸಿಕೊಟ್ಟಿದ್ದು, ಅಪಘಾತದಿಂದ  ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡಿರುತ್ತದೆ. ಡಿಕ್ಕಿಯುಂಟು ಮಾಡಿದ ಕಾರಿನ ನಂಬ್ರ ನೋಡಲಾಗಿ KA04MH2998  ಆಗಿದ್ದು, ಚಾಲಕನ ಹೆಸರು ದಿನೇಶ ಎಂಬುದಾಗಿದ್ದು, ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 45/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅರ್ಥರ ರಾಜೇಶ ರೋಡ್ರಿಗಸ್ ಪ್ರಾಯ 42 ವರ್ಷ ತಂದೆ: ಅಲ್ಬರ್ಟ್ ವಿ ರೋಡ್ರಿಗಸ್ ವಾಸ: ಪೊನ್ನಂಗಿಲ್ ಮನೆ ಬಂಟ್ವಾಳ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ಸಹೋದರ ಮಾಲಿಕತ್ವದಲ್ಲಿರುವ ಲೆವಿನ್ ಎಲೆಕ್ಟ್ರಿಕಲ್ಸ್ & ಇಂಜಿನಿಯರಿಂಗ್ಸ್  ಇದರ ಕಛೇರಿ ಹಾಗೂ ದಾಸ್ತಾನ ಸ್ಥಳವು ಬೈಪಾಸ್ ರಸ್ತೆ ಅಜೆಕಲ್ ದಲ್ಲಿ ಇದ್ದು ಸದ್ರಿ ಜಾಗದಲ್ಲಿ  ಹೆಚ್ಚಿನ ಬೆಲೆ ಬಾಳುವ ಎಲೆಕ್ಟ್ರೀಕಲ್ ಸಾಮಾಗ್ರಿಗಳನ್ನು ದಾಸ್ತಾನ ಇಟ್ಟಿರುವುದಾಗಿದೆ. ಪಿರ್ಯಾಧಿದಾರರು ಕೆಲವು ದಿನಗಳ ಹಿಂದೆ ಸದ್ರಿ ಜಾಗದಲ್ಲಿರುವ ಎಲೆಕ್ಟ್ರೀಕಲ್ ಸಾಮಾಗ್ರಿ ವಾರ್ಷಿಕ ಲೆಕ್ಕ ಪತ್ರ ಮಾಡುವಾಗ  ಸುಮಾರು 10,40,000/-  ಹತ್ತು ಲಕ್ಷದ ನಲವತ್ತು ಸಾವಿರ ರೂ ಮೌಲ್ಯದ ಅಂದಾಜು 8 ಟನ್ ಹಳೆಯ ACSR ಅಲ್ಯೂಮಿನಿಯಂ ವಾಹಕ ವೈರಗಳು ನಾಪತ್ತೆಯಾದ ಬಗ್ಗೆ ಸಂಶಯಗೊಂಡ ಪಿರ್ಯಾಧಿದಾರರು ಸದ್ರಿ ಜಾಗದ ಸಿಸಿಟಿವಿ ಕ್ಯಾಮೇರ ದಿನಾಂಕ 20-03-2022 ರಂದು ಪರಿಶೀಲಿಸಿದಾಗ ದಿನಾಂಕ 29-01-2022 ರಂದು ರಾತ್ರಿ 2.00 ಗಂಟೆಗೆ ಹಾಗು ದಿನಾಂಕ 03-02-2022 ರಂದು ರಾತ್ರಿ 1.45 ಗಂಟೆಗೆ ಆನಂದ ಏಣಿ ಮೂಲಕ ಸದ್ರಿ ಜಾಗಕ್ಕೆ ಒಳಪ್ರವೇಶಿಸಿ 3 ಜನ ಸೇರಿಕೊಂಡು ರಿಕ್ಷಾ ಹಾಗೂ ಪಿಕ್ಅಪ್ ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 42/2022  ಕಲಂ: 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಶೇಖರ, ಪ್ರಾಯ: 38 ವರ್ಷ, ತಂದೆ: ವಾಸಪ್ಪ ಕುಂಬಾರ, ವಾಸ:  ಹಂಕರಜಾಲು ಮನೆ,  ಕಾಯರ್ದಡ್ಕ, ಕಳಂಜ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ:11-04-2022 ರಂದು ಬೆಳಿಗ್ಗೆ  08-45 ಗಂಟೆಗೆ  ಅವರ ಬಾಬ್ತು ಮೋಟಾರ್ ಸೈಕಲ್ ಕೆಎ 21 ಕೆ 7974 ನೇದ್ದನ್ನು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಾಪೀಡೆ ಹೊಟೇಲ್ ನ ಕಟ್ಟಡದ ಹಿಂಬದಿ ಯಲ್ಲಿ ಪಾರ್ಕ್ ಮಾಡಿ  ಹೋಗಿದ್ದು, 10-20 ಗಂಟೆಗೆ ವಾಪಾಸು ಬಂದು ನೋಡಿದಾಗ  ಪಾರ್ಕ್ ಮಾಡಿದಲ್ಲಿ ಬೈಕ್ ಇಲ್ಲದೇ ಇದ್ದು, ಯಾರೋ ಕಳ್ಳರು ಬೈಕನ್ನು ಕಳವು ಮಾಡಿ ಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್ ಸೈಕಲ್ ನ ಮೌಲ್ಯ ರೂ 10,000/- ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 27/2022 ಕಲಂ: 379 ಐ.ಪಿ,ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 2

  • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ : ದಿನಾಂಕ: 21-04-2022 ರಂದು ಪುತ್ತೂರು ಗ್ರಾಮಾಂತರ  ಠಾಣೆಯಲ್ಲಿ ಅಕ್ರ: 53/2022  ಕಲo: 353, 377, 506,  ಐಪಿಸಿ,ಕಲಂ.4 ಪೋಕ್ಸೋ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 21-04-2022 ರಂದು ಬೆಳ್ತಂಗಡಿ ಠಾಣಾ ಅ.ಕ್ರ 28/2022 ಕಲಂ: 143,147,148,323,324,504,354,354(ಬಿ),506, ಜೊತೆಗೆ 149 ಐ.ಪಿ,ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಶ್ರಫ್ (41) ವರ್ಷ ಮಾರಿಪಳ್ಳ  ಮನೆ, ಪುದು ಗ್ರಾಮ ಗ್ರಾಮ  ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು  ಮಾರಿಪಳ್ಳದ ಮಸೀದಿಯ  ಬಳಿ ಅಂಗಡಿಯನ್ನಿಂಟು ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ತಂದೆ  ಮನೆಯಲ್ಲಿಯೇ ಇರುವುದಾಗಿದೆ.  ದಿನಾಂಕ 20.04.2022 ರಂದು ಸಾಯಂಕಾಲ  ಪಿರ್ಯಾದಿದಾರರ  ತಂದೆ ರಂಜಾನ್ ಹಬ್ಬದ ಪ್ರಯುಕ್ತ  ಬಟ್ಟೆ ಹೋಲಿಸುವರೇ ಪರಂಗಿ ಪೇಟೆಗೆ  ಹೋಗಿದ್ದು  ಪರಂಗಿಪೇಟೆ ಪಂಚಾಯತ್ ಕಛೇರಿಯ ಬಳಿ ರಿಲಾ  ಪೂಟ್ ವೇರ್ ಬದಿಯಲ್ಲಿ  ಮೆಟ್ಟಿನಿನಲ್ಲಿ  ನಡೆದುಕೊಂಡು ಹೋದ ಸಮಯ ಆಯ  ತಪ್ಪಿ  ಬಿದ್ದಿದ್ದು ಈ ಬಗ್ಗೆ   ಪಿರ್ಯದಿದಾರರಿಗೆ ನಿಜಾಮ್ ಎಂಬುವವರು ಪೊನ್ ಮಾಡಿ ತುಂಬೆ  ಪಾದರ್ ಮುಲ್ಲರ್ ಆಸ್ಪತ್ರೆಗೆ  ಕರೆದುಕೊಂಡು  ಹೋದಲ್ಲಿಂದ ಪಿರ್ಯಾದಿದಾರರು ಪಡಿಲ್ ನ ಪಸ್ಟ್ ನ್ಯೂರೋ ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ಚಿಕಿತ್ಸೆ ಕೊಡಿಸಿದ್ದು  ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ 20.04.2022 ರಂದು ಸಂಜೆ  07.20 ಗಂಟೆಗೆ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ 20-2022 ಕಲಂ 174 ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಾಯ 19 ವರ್ಷ ತಂದೆ; ಕೆ ಲಕ್ಷ್ಮಣ್ ಸಾಗರ್ ವಾಸ: ಮಾರ್ನೆಮಿ ಗುಡ್ಡೆ ವಿಟ್ಲಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಫಿರ್ಯಾದುದಾರರು ಮಂಗಳೂರಿನ ಶ್ರೀಧೇವಿ ಕಾಲೇಜಿನಲ್ಲಿ ಬಿಎಸ್ ಸಿ ನರ್ಸಿಂಗ್ ವಿಧ್ಯಾಬ್ಯಾಸ  ಮಾಡಿಕೊಂಡಿದ್ದು ತನ್ನ ತಂದೆ ಕೆ. ಲಕ್ಷ್ಮಣ್ ಸಾಗರ್ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಸಾಗರ್ ಟೈಲರ್ ವಿಟ್ಲ ಎಂಬ ಅಂಗಡಿಯಲ್ಲಿ ಸುಮಾರು 30 ವರ್ಷಗಳಿಂದ ಟೈಲರ್ ಕೆಲಸ ಮಾಡಿಕೊಂಡಿದ್ದು ಸುಮಾರು 20 ವರ್ಷದಿಂದ ಅಮಲು ಪದಾರ್ಥವನ್ನು ಸೇವಿಸುತ್ತಿದ್ದರು.  ಈಗ ಸುಮಾರು ಎರಡು ವರ್ಷಗಳ ಹಿಂದೆ ಅವರಿಗೆ ರಕ್ತದೊತ್ತಡ, ಮತ್ತು ಕಾಲು ನೋವು ಇದ್ದು ಅವರು ಅದಕ್ಕೆ ಪೆರ್ಲದ ಉಕ್ಕಿನಡ್ಕ ಎಂಬಲ್ಲಿಂದ ಔಷಧಿ ಮಾಡಿಕೊಂಡಿದ್ದರು. ಆದರೆ ಅವರು ಅದೇ ಚಿಂತೆಯಿಂದ ಬೆಳಗ್ಗಿನಿಂದ ಅಮಲು ಪದಾರ್ಥ ಸೇವಿಸುತ್ತಿದ್ದು  ಔಷಧಿ ಮಾಡಿದರೂ ರಕ್ತದೊತ್ತಡ ಹಾಗೂ ಕಾಲು ನೋವು ಇದ್ದ ಕಾರಣ ಅವರು ಅದೇ ಚಿಂತೆಯಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 21-04-2022 ರಂದು ಬೆಳಗ್ಗೆ 7-30 ಗಂಟೆಗೆ ಮನೆಯಿಂದ ವಿಟ್ಲ ಚರ್ಚ್ ಬಳಿಯ ಸಾಗರ್ ಟೈಲರ್ ಅಂಗಡಿಗೆ ಬಂದು  ನೈಲಾನ್ ಹಗ್ಗವನ್ನು ಅಂಗಡಿಯ ಅಡ್ಡಕ್ಕೆ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದವರನ್ನು  ತಾಯಿ  ಮೋಲಿ ಡಯಾನ ಲೋಬೋ ರವರು 15-30 ಗಂಟೆಗೆ ಫಿರ್ಯಾದುದಾರರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದಂತೆ ಸ್ಥಳಕ್ಕೆ  ಬಂದು ನೋಡಲಾಗಿ ಕೆ. ಲಕ್ಷ್ಮಣ್ ಸಾಗರ್‌ರವರು ಸಾಗರ್ ಟೈಲರ್ ಅಂಗಡಿಯ ಅಡ್ಡಕ್ಕೆ  ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅವರು ಮೃತಪಟ್ಟಿದ್ದರು.ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 12/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಂಜಿತ್‌ ಪೂಜಾರಿ ಪ್ರಾಯ: 32 ವರ್ಷ, ತಂದೆ: ರವೀಂದ್ರ ಪೂಜಾರಿ, ವಾಸ: ಪರಿವಾರಕಾನ ಗ್ರಾಮ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು. ಎಂಬವರ ದೂರಿನಂತೆ ಪಿರ್ಯಾದಿದಾರರು ಎಂದಿನಂತೆ ದಿನಾಂಕ: 20.04.2022 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಮಸೀದಿ ಬಳಿ ಇರುವ ತನ್ನ ಬಾಬ್ತು ಬೇಕರಿಯಲ್ಲಿ ವ್ಯಾಪಾರ ನಡೆಸಿಕೊಂಡು ಇದ್ದ ಸಮಯ ಓರ್ವ ವ್ಯಕ್ತಿಯು ಅಂಗಡಿಯ ಎದುರು ಇರುವ ಮಾಣಿ – ಮೈಸೂರು ಹೆದ್ದಾರಿಯಲ್ಲಿ ಬೆಳಗ್ಗಿನಿಂದ ರಸ್ತೆಯಲ್ಲಿ ಮೇಲೆ ಕೆಳಗೆ ಓಡಾಡುತ್ತಿದ್ದು, ಮಾನಸಿಕ ಅಸ್ವಸ್ಥನಂತೆ ಕಂಡು ಬರುತ್ತಿದ್ದು, ರಸ್ತೆಯಲ್ಲಿ ದೊಡ್ಡ ವಾಹನ ಬರುವಾಗ ನೋಡುತ್ತಿದ್ದನು. ಸದ್ರಿ ವ್ಯಕ್ತಿಯು ಸಮಯ ಸುಮಾರು 16:15 ಗಂಟೆ ಸಮಯಕ್ಕೆ ಗಾಂಧಿನಗರ ಕಡೆಯಿಂದ ಲಾರಿ ಬರುವುದನ್ನು ನೋಡಿ ಒಮ್ಮೆಲೆ ಅದರ ಎದುರಿಗೆ ಹಾರಿದ್ದನ್ನು ನೋಡಿ ಲಾರಿಯ ಚಾಲಕ ಬ್ರೇಕ್‌ ಹಾಕಿದರೂ ಲಾರಿಯು ಸದ್ರಿ ವ್ಯಕ್ತಿಯ ಬಲಕೈ ಮೇಲೆ ಹರಿದು ಸ್ವಲ್ಪ ಮುಂದಕ್ಕೆ ಹೋಗಿ ನಿಂತಿದ್ದು, ಆತನ ಬಲಕೈ ಹುಡಿಯಾಗಿರುತ್ತದೆ. ಕೂಡಲೇ ಪಿರ್ಯಾದಿದಾರರು ಹಾಗೂ ಇತರರು ಆತನನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಒಳರೋಗಿಯಗಿ ದಾಖಲಿಸಿದ್ದು  ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ: 21.04.2022 ರಂದು 6:24 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿದಿದ್ದು, ಆತನ ಹೆಸರು ಮಂಜುನಾಥ ಎಂಬುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಸುಳ್ಯ ಠಾಣಾ ಪೊಲೀಸ್‌ ಠಾಣಾ ಯುಡಿಆರ್‌ ನಂಬ್ರ 17/2022 ಕಲಂ: 174  CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-04-2022 10:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080