ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದುರ್ಗಾಪ್ರಸಾದ್ ಕೆರ್ಮುಣ್ಣಾಯ, ಪ್ರಾಯ: 37 ವರ್ಷ, ತಂದೆ: ದಿ. ಶ್ರೀನಿವಾಸ ಕೆರ್ಮುಣ್ಣಾಯ ವಾಸ: ವಿಶ್ವೇಶಾನುಗ್ರಹ, ಬೆಳಾಲು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 21.09.2022 ರಂದು ಪ್ರಕರಣದ ಪಿರ್ಯಾದಿದಾರರು ಕೆಲಸದ ನಿಮಿತ್ತ ಮನೆಯಿಂದ ಮಂಗಳೂರಿಗೆ ತನ್ನ ಬಾಬ್ತು ಕಾರು ನಂಬ್ರ KA21P8320 ನೇದನ್ನು  ಚಲಾಯಿಸುತ್ತಾ ಬೆಳ್ತಂಗಡಿ-ಮಂಗಳೂರು ಮಾರ್ಗವಾಗಿ ಹೋಗುತ್ತಾ ಬೆಳಿಗ್ಗೆ ಸುಮಾರು 8.45 ಗಂಟೆಗೆ ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಎನ್.ಸಿ ರೋಡ್‌ ಎಂಬಲ್ಲಿಗೆ ತಲುಪುತ್ತಿದ್ದಂತೆ, ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಸ್ಕೂಟರ್‌  ನಂಬ್ರ  KA19HK3193ನೇದನ್ನು ಅದರ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ  ಸ್ಕೂಟರ್‌ ಸವಾರ ಮತ್ತು  ಸಹ ಸವಾರ ಸ್ಕೂಟರಿನೊಂದಿಗೆ ರಸ್ತೆಗೆ ಬಿದ್ದು ಗಾಯಗೊಂಡವರನ್ನು ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ್ದ ಜನರು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು,.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 68/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೊರಗಪ್ಪ ಪೂಜಾರಿ (58) ತಂದೆ:ಮೋನಪ್ಪ ಪೂಜಾರಿ ವಾಸ:ಗುರ್ಮೆ ಮನೆ, ಪುಣಚ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ಹೆಂಡತಿಯ ಅಕ್ಕ ಗೀತಾ ರವರು ದಿನಾಂಕ:20-09-2022 ರಂದು ಬಂಟ್ವಾಳ ತಾಲೂಕು ಪುಣಚಾ ಗ್ರಾಮದ ಪುಣಚ ಪೇಟೆಗೆ ಬಂದು ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸಿ ವಾಪಾಸು ಮನೆ ಕಡೆಗೆ ಹೋಗಲು ಬಲದಿಂದ ಎಡಕ್ಕೆ ಅಂದರೆ ಪುಣಚಾ ಬಸ್ಸು ನಿಲ್ದಾಣದ ಕಡೆಯಿಂದ ರಸ್ತೆಯನ್ನು ದಾಟುವಾಗ ಸಮಯ ಸುಮಾರು 12.15 ಗಂಟೆಯ ಸಮಯಕ್ಕೆ ಪುತ್ತೂರು ಕಡೆಯಿಂದ ಉಕ್ಕುಡ ಕಡೆಗೆ KA-19-V-987ನೇ ಮೋಟಾರ್‌ ಸೈಕಲ್‌ನ್ನು ಅದರ ಸವಾರ ಉಮೇಶ್‌ ನಾಯ್ಕರವರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಜಂಕ್ಷನ್‌ ದಾಟುತ್ತಿದ್ದ ಗೀತಾರವರಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಗೀತಾರವರು ರಸ್ತೆಗೆ ಬಿದ್ದ ಪರಿಣಾಮ ಎಡಕೋಲು ಕೈ ಮತ್ತು ಎಡ ಕೋಲು ಕಾಲಿಗೆ ಗುದ್ದಿದ ತರಹದ ಗಾಯವಾಗಿರುತ್ತದೆ. ಗಾಯಾಳು ಗೀತಾ ಚಿಕಿತ್ಸೆಯ ಬಗ್ಗೆ ಪುತ್ತೂರು ಹಿತಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ .ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 147/2022  ಕಲಂ: 279,337 ಬಾಧಂಸಂ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸುಕನ್ಯಾ ಪ್ರಾಯ: 50 ವರ್ಷ  ಗಂಡ: ಕೆ ರಾಜೇಂದ್ರ ಕುಮಾರ್ ವಾಸ: ಬಿಜೈ ಮ್ಯೂಸಿಯಂ ಬಳಿ ಅಂಚೆ ಬಿಜೈ ಮಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರವರು ಪುತ್ತೂರು ತಾಲೂಕು ಪಂಚಾಯತ್ ನಲ್ಲಿ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ:  20-09-2022 ರಂದು ಬೆಳಿಗ್ಗೆ ಎಂದಿನಂತೆ ಕಛೇರಿ ಕರ್ತವ್ಯಕ್ಕೆ ಮಂಗಳೂರಿನಿಂದ ಪುತ್ತೂರಿಗೆ ಮಹೇಶ್ ಬಸ್ ನಲ್ಲಿ ಬರುವರೇ ಬೆಳಿಗ್ಗೆ ಸುಮಾರು 10:15 ಗಂಟೆಗೆ ಪುತ್ತೂರು ಅಂಚೆ ಕಛೇರಿ ಬಳಿಯ ಬಸ್ ಸ್ಟಾಪ್ ನಲ್ಲಿ ಇಳಿಯುವ ಸಂದರ್ಭದಲ್ಲಿ ಪಿರ್ಯಾದಿದಾರರ ಬ್ಯಾಗ್ ನಿಂದ ಪರ್ಸ್ ಕಾಣೆಯಾದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದು, ಪಿರ್ಯಾದಿದಾರರ ಪರ್ಸ್ ಕಳವಾದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಮಹೇಶ್ ಬಸ್ ನಲ್ಲಿ ಅಳವಡಿಸಿದ ಸಿಸಿ ಕ್ಯಾಮರದಲ್ಲಿ ಸೆರೆಯಾದ ದೃಶ್ಯಗಳಲ್ಲಿ ಒಬ್ಬಳು ಮಹಿಳೆ ಪಿರ್ಯಾದಿದಾರರ ಬ್ಯಾಗ್ ನಿಂದ ಪರ್ಸನ್ನು ಕಳ್ಳತನ ಮಾಡುವ ದೃಶ್ಯಗಳು ಕಂಡು ಬಂದಿರುತ್ತದೆ, ಸದ್ರಿ ಪರ್ಸ್ ನಲ್ಲಿ ಸುಮಾರು ನಗದು ರೂ 8000/- , ಪೆನ್  ಡ್ರೈವ್ -2 (ಅಂದಾಜು ಮೌಲ್ಯ ರೂ 2000), ಪಾಸ್ ಪೋರ್ಟ್ ಸೈಜ್ ನ ಪೋಟೋ , ಆಧಾರ್ ಕಾರ್ಡ್ ಇತ್ಯಾದಿ ಇರುತ್ತದೆ , ಕಳವಾದ ಸ್ವತ್ತಿನ ಒಟ್ಟು ಮೌಲ್ಯ ರೂಪಾಯಿ 10,000/- ಆಗಬಹುದು.ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 79/2022  ಕಲಂ: 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ:20-09-2022 ರಂದು ಮುರಳಿಧರ ನಾಯ್ಕ,ಕೆ.ಜಿ, ಪ್ರೋಬೇಶನರಿ ಪಿ.ಎಸ್.ಐ, ಬೆಳ್ತಂಗಡಿ ಪೊಲೀಸ್ ಠಾಣೆ ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಮುಂಜಾನೆ 4-00 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಬರಮೇಲು ಎಂಬಲ್ಲಿ ಬೆಳ್ತಂಗಡಿ ಕಡೆಯಿಂದ ಲೈಲೆಂಡ್ ದೋಸ್ತ್ ವಾಹನ ಒಂದನ್ನು ಅದರ ಚಾಲಕ ಅನುಮಾನಸ್ಪದವಾಗಿ ಚಲಾಯಿಸಿಕೊಂಡು ಬರುತ್ತಿದ್ದುದ್ದನ್ನು ಕಂಡು ಸಿಬ್ಬಂದಿ ಗಳ ಸಹಾಯದಿಂದ ನಿಲ್ಲಿಸಿದಾಗ ಚಾಲಕನ ಪಕ್ಕ ಕುಳಿತಿದ್ದ ವ್ಯಕ್ತಿಯು ಒಮ್ಮೇಲೆ ಡೋರ್ ತೆರೆದು ಸ್ಥಳದಿಂದ ಓಡಿ ತಪ್ಪಿಸಿಕೊಂಡಿದ್ದು, ಚಾಲಕನನ್ನು ವಿಚಾರಿಸಲಾಗಿ ಆರೋಪಿ ಗಳು ಕೆಎ 70 1074 ನೇ ಲೈಲೇಂಡ್ ದೋಸ್ತ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಹಿಂಸಾತ್ಮಕ ರೀತಿಯಲ್ಲಿ ಜಾನುವಾರನ್ನು ಸಾಗಿಸುವುದು ಕಂಡು ಬಂದಿದ್ದು, ಸ್ಥಳದಿಂದ 2 ದನ 1 ಗಂಡು ಕರುವನ್ನು ಹಾಗೂ ಅದನ್ನು ಸಾಗಿಸಲು ಉಪಯೋಗಿಸಿದ ಲೈಲೆಂಡ್ ದೋಸ್ತ್ ವಾಹನವನ್ನು ಹಾಗೂ ಒಬ್ಬ ಆರೋಪಿ ಶರೀಫ್ ನನ್ನು ವಶಕ್ಕೆ ಪಡೆದು ಕೊಂಡಿದ್ದು, ಸ್ವಾಧೀನ ಪಡಿಸಿ ಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 5,35,500/- ಆಗಬಹುದು. ಈ ಬಗ್ಗೆ   ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 58/2022  ಕಲಂ: 4,5,7,8,12 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನವೀನ ಪ್ರಾಯ: 23 ವರ್ಷ, ತಂದೆ: ಕೊರಗಪ್ಪ ಬಿ. ಕೆ., ವಾಸ: ಪರಿವಾರಕಾನ ಮನೆ, ಅರಂಬೂರು ಅಂಚೆ, ಆಲೆಟ್ಟಿ ಗ್ರಾಮ, ಸುಳ್ಯ ಎಂಬವರ ದೂರಿನಂತೆ ದಿನಾಂಕ 21.09.2022 ರಂದು ಸುಮಾರು 14:00 ಗಂಟೆಗೆ ಪಿರ್ಯಾದಿದಾರರ ಬಾಡಿಗೆ ಮನೆಯ ಮಾಲ್ಹಕರಾದ ಅಬ್ದುಲ್‌ ಅಝೀಜ್‌ರವರು ಪಿರ್ಯಾದಿದಾರರಿಗೆ ಫೋನ್‌ ಮಾಡಿ ತಂದೆಯವರು ಬಾಡಿಗೆ ಮನೆಯಲ್ಲಿನ ಸೋಪಾದಲ್ಲಿ ಕುಳಿತಲ್ಲಿಯೇ ಮೃತಪಟ್ಟಂತೆ ಕಂಡು ಬರುತ್ತಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಪುತ್ತೂರಿನಿಂದ ಬಂದು ಪಕ್ಕದ ರೂಮಿನಲ್ಲಿರುವ ಮಲ್ಲ ಎಂಬವರನ್ನು ವಿಚಾರಿಸಿದಾಗ ಪಿರ್ಯಾದಿದಾರರು ತಂದೆಯವರು ವಿಪರೀತ ಮದ್ಯಪಾನ ಮಾಡಿಕೊಂಡು ಬಂದು ರಾತ್ರಿ ಸಮಯದಲ್ಲಿಒಬ್ಬರೇ ಬೊಬ್ಬೆ ಹಾಕಿಕೊಂಡು ಇದ್ದವರು ಬೆಳಿಗ್ಗೆ 3:00 ಗಂಟೆಯವರೆಗೆ ಬೊಬ್ಬೆ ಹೊಡೆದುಕೊಂಡು ಇದ್ದರು ಎಂಬುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ತಂದೆಯವರು ದಿನಾಂಕ: 21.09.2022 ರಂದು 3:00 ಗಂಟೆಯಿಂದ 14:00 ಗಂಟೆಯ ನಡುವೆ ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೂ ಮೃತಪಟ್ಟಿವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಆರ್‌ ನಂಬ್ರ 42/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-09-2022 11:00 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080