ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗಿರೀಶ್ ಟಿ. ಎಮ್  ಪ್ರಾಯ:34 ವರ್ಷ ತಂದೆ: ದಿ|| ಟಿ ಎಮ್ ಮಂಜುನಾಥಯ್ಯ ವಾಸ: ನಂಬ್ರ 1438 7ಎ ಮೈನ್ RPC ಲೇಔಟ್ ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು ರವರ ಬಾಬ್ತು KA-05- MV-0445 ನೇ ಕಾರಿನಲ್ಲಿ ದಿನಾಂಕ 21.10.2022 ರಂದು ಬೆಂಗಳೂರಿನಿಂದ ಮಂಗಳೂರಿಗೆ ಕಡೂರು ಬಿ.ಸಿ ರೋಡು ರಸ್ತೆಯಲ್ಲಿ ಬರುತ್ತಾ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಚಂಡ್ತಿಮಾರು ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KA-21-N-0583 ಕಾರಿಗೆ ಬಿ ಸಿ ರೋಡ್ ಕಡಯಿಂದ KA-19 F-3140 ನೇ KSRTC ಬಸ್ಸನ್ನು ಅದರ ಚಾಲಕ ಚಂದ್ರಕಾಂತ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ರಭಸವಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಅಪಘಾತಕ್ಕೊಳಗಾದ ಕಾರು ರಭಸವಾಗಿ ಹಿಂದೆ ಬಂದು ಹಿಂಬದಿ ಇದ್ದ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದ ಕಾರಿನಲ್ಲಿದ್ದ ಚಾಲಕ ಪ್ರವೀಣ ಜೋಶಿ ರವರ ತಲೆಗೆ ಮುಖಕ್ಕೆ, ಕೈಗಳಿಗೆ ಹಾಗೂ ಎದೆಗೆ ಗುದ್ದಿದ ರಕ್ತ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೊದಲ್ಲಿ ವೈದ್ಯರು ಪರಿಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 121/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನಾರಾಯಣ ಶೆಟ್ಟಿ ಪ್ರಾಯ:58 ವರ್ಷ ತಂದೆ: ಮಂಜಪ್ಪಶೆಟ್ಟಿ ವಾಸ: ದೇವಸ್ಯ ಮನೆ, ಬೊಂಡಾಲ ಪಾಣೆಮಂಗಳೂರು ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 21.10.2022 ರಂದು ಪಿರ್ಯಾದಿದಾರರ ಬಾಬ್ತು KA-19-EX-3051 ನೇ ಸ್ಕೂಟರ್ ನಲ್ಲಿ ಕೆಳಗಿನ ಪೇಟೆ ಬಸ್ಸ್ ನಿಲ್ದಾಣದಿಂದ ಮನೆ ಕಡೆಗೆ ಹೊಗುತ್ತಾ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕ ಕೆಳಗಿನ ಪೇಟೆ ಎಂಬಲ್ಲಿ ತಲುಪುತ್ತಿದ್ದಂತೆ ವಿಟ್ಲ ಕಡೆಯಿಂದ KA-21-EA-7340 ಮೊಟಾರ್ ಸೈಕಲ್ ನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಕಾಲಿನ ಕೋಲುಕಾಲಿಗೆ ಗುದ್ದಿದ ಗಾಯವಾಗಿರುತ್ತದೆ ಹಾಗೂ ಮೊಟಾರ್ ಸೈಕಲ್ ಸವಾರನಿಗೆ  ಬಲಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 122/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಾಜೇಶ್ (44), ತಂದೆ: ಕೆಂಪಯ್ಯ ಗೌಡ, ವಾಸ: ಕಂದ್ರಾಡಿ ಬೈಲು ಮನೆ, ಉಜಿರೆ ಗ್ರಾಮ, ಬೆಳ್ತಂಗಡಿ ತಾಲೂಕು  ರವರು ನೀಡಿದ ದೂರಿನಂತೆ ದಿನಾಂಕ: 21-10-2022 ರಂದು ತನ್ನ ಬಾಬ್ತು ಕೆಎ 21ಎ 7592 ನೇ ಆಟೋ ರಿಕ್ಷಾದಲ್ಲಿ ಸಹಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಸುರ್ಯದಿಂದ ಮಂಜೋಟ್ಟಿ ನ್ಯಾಯಾಬೆಲೆ ಅಂಗಡಿಗೆ ಹೊರಟು ಆಟೋ ರಿಕ್ಷಾವನ್ನು ಇಂದಬೆಟ್ಟು –ಲಾಯಿಲಾ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 11.30 ಗಂಟೆಗೆ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಕೆಲ್ತಾಜೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ಧಿಕ್ಕಿನಿಂದ ಅಂದರೆ ಲಾಯಿಲಾ ಕಡೆಯಿಂದ ಇಂದಬೆಟ್ಟು ಕಡೆಗೆ ಕೆಎ 70 ಎಮ್‌ 2748 ನೇ ಇಕೋ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದನು ಪರಿಣಾಮ ಎರಡು ವಾಹನಗಳು ಜಖಂಗೊಂಡು ಆಟೋ ರಿಕ್ಷಾದಲ್ಲಿದ್ದ ಸಹಪ್ರಯಾಣಿಕರಾದ ಗೀತಾರವರಿಗೆ  ಬಲಕಾಲಿನ ಪಾದದ ಗಂಟಿಗೆ ಗುದ್ದಿದ ಗಾಯವಾಗಿರುತ್ತದೆ, ಗಾಯಳು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 127/2022 ಕಲಂ; 279,  337 ಭಾದಂಸಂ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸಿಜು ಟಿ.ಪಿ(33), ತಂದೆ: ಟಿ.ಪಿ ಪೌಲೋಸ್, ವಾಸ: ತುಂಭಾತ್ತಾಜೆ ಮನೆ, ಶಿಬಾಜೆ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 21-10-2022 ರಂದು ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕೊಕ್ಕಡ ಗ್ರಾಮ ಪಂಚಾಯತ್‌ ಬಳಿ ಪಾದಚಾರಿ ಚಿಂಗು ಎಂಬವರು ರಸ್ತೆ ದಾಟುತ್ತಿರುವಾಗ ಕೊಕ್ಕಡ ಕಡೆಯಿಂದ ಪಟ್ರಮೆ ಕಡೆಗೆ ಕೆಎ 28 ಎಮ್‌ 0488 ನೇ ಜೀಪ್‌ನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಚಿಂಗುರವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಅಲ್ಲಿಯೇ ರಸ್ತೆಗೆ ಬಿದ್ದು ಬಲಕಾಲಿನ ಪಾದದ ಹೆಬ್ಬೆರಳಿಗೆ ರಕ್ತ ಗಾಯಗೊಂಡು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 128/2022 ಕಲಂ; 279,  337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಟೀನಾ ಪಿಂಟೋ (41) ಗಂಡ: ಪಾವುಲ್ ಪ್ರಕಾಶ್ ಲೋಬೋ ವಾಸ: ಅಗ್ರಾರ್ ಚರ್ಚ್ ಬಳಿ ಮನೆ, ಬಿ ಕಸಬಾ ಗ್ರಾಮ ಬಂಟ್ವಾಳ ತಾಲೂಕು ರವರು ಶಿಕ್ಷಕಿಯಾಗಿದ್ದು ,ಗಂಡ ವಿದೇಶದಲ್ಲಿದ್ದು, ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ಇರುವುದಾಗಿದೆ. ದಿನಾಂಕ:19-10-2022 ರಂದು ಬೆಳಿಗ್ಗೆ 8.30 ಗಂಟೆಗೆ ಪಿರ್ಯಾದಿದಾರರು ಮಕ್ಕಳೊಂದಿಗೆ ಶಾಲೆಗೆ ಹೋಗಿದ್ದು, ಆ ಸಮಯವನ್ನು ನೋಡಿಕೊಂಡು ಪಿರ್ಯಾದಿದಾರರ ಪರಿಚಯದ ಪ್ರವೀಣ್ ಲೋಬೋ ಎಂಬವರು ಇತರ ನಾಲ್ಕು ಜನರನ್ನು ಸೇರಿಸಿಕೊಂಡು ಕೆಎ 19 ಎಂಸಿ 2757 ಬೊಲೇರೋ ಮತ್ತು ಕೆಎ 19 ಡಿ 5609 ನಂಬ್ರದ ಮಹೀಂದ್ರ ಪಿಕಪ್ ವಾಹನದಲ್ಲಿ ಪಿರ್ಯಾದಿದಾರರ ಬಿ ಕಸಬಾ ಗ್ರಾಮದ ಅಗ್ರಾರ್ ಚರ್ಚ್ ಬಳಿಯಿರುವ ಮನೆಯ ನೆಲ ಮಹಡಿಯಲ್ಲಿಟ್ಟಿದ್ದ ಸುಮಾರು 400 ತೆಂಗಿನ ಕಾಯಿ ಮತ್ತು 13 ತೆಂಗಿನ ಮರಕ್ಕೆ ಹತ್ತಿ ಸುಮಾರು 750 ಕ್ಕೂ ಹೆಚ್ಚು ತೆಂಗಿನ ಕಾಯಿಯನ್ನು ಮತ್ತು ಹಳೇ ಮನೆಯ ಮೇಲು ಮಹಡಿಯಲ್ಲಿ ಇಟ್ಟಿದ್ದ ಮೌಲ್ಯಯುತ ಮರ ಮುಟ್ಟುಗಳನ್ನು ಹಾಗೂ ನೀರಿನ ಪೈಪುಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ಕಳವಾದ ವಸ್ತುಗಳ ಒಟ್ಟು ಮೌಲ್ಯ ರೂ.4,75,000/- ಆಗಿರುತ್ತದೆ. ಈ ವಿಚಾರವನ್ನು ಪಿರ್ಯಾದಿದಾರರಿಗೆ ಸಂಜೆ 4.30 ಗಂಟೆಗೆ ಮನೆಗೆ ಬಂದಾಗ ಬಾಡಿಗೆ ಮನೆಯವರು ತಿಳಿಸಿದ್ದು, ಬಳಿಕ ಸಿಸಿ ಕ್ಯಾಮರಾವನ್ನು ಪರಿಶೀಲಿಸಿರುವುದಾಗಿದೆ. ಅದಲ್ಲದೇ ಎದ್ರಿದಾರರು ಪಿರ್ಯಾದಿದಾರರಿಗೆ ಫೋನ್ ಕರೆ ಮಾಡಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ:96/2022 ಕಲಂ: 447, 379, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಭಾಸ್ಕರ (42) ತಂದೆ: ದಿ. ಗುರುವಪ್ಪ ಪೂಜಾರಿ ವಾಸ: ವರಕೋಡಿ ಮನೆ, ಕಮ್ಮಾಜೆ, ತೆಂಕಬೆಳ್ಳೂರು ಗ್ರಾಮ, ಬಂಟ್ವಾಳ ತಾಲೂಕು ರವರು ಕುಟುಂಬದೊಂದಿಗೆ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ  ಶ್ರೀಮತಿ ಮೀನಾಕ್ಷಿ (64) ರವರು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ : 07.10.2022 ರಂದು ತಾಯಿಯವರು ಕಮ್ಮಾಜೆಯ ಮಹಾಬಲ ಆಳ್ವರವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ 01.00 ಗಂಟೆ ಸಮಯಕ್ಕೆ ಕೆಲಸಬಿಟ್ಟು ಮಹಾಬಲ ಆಳ್ವರವರ ಜಮೀನಿನ ದಾರಿಯಲ್ಲಿ ನಡೆದುಕೊಂಡು ಬರುವಾಗ ದಾರಿಬದಿಯಲ್ಲಿ ಇದ್ದ ಕಟ್ಟಿಗೆಯೊಂದನ್ನು ಎಳೆದಾಗ ಅಲ್ಲಿಯೇ ಇದ್ದ ಕಣಜದ ಹುಳು ಕಚ್ಚಿದ್ದು ಅಲ್ಲಿಂದ ಬೊಬ್ಬೆ ಹಾಕಿಕೊಂಡು ಮಹಾಬಲ ಆಳ್ವ ರವರ ಮನೆಗೆ ಓಡಿಹೋದವರನ್ನು ಕೂಡಲೇ ಅವರು ಕರೆದುಕೊಂಡು ಹೋಗಿ ದೇರಳಕಟ್ಟೆ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡುತ್ತಿದ್ದರು. ಹಾಗೆ ಚಿಕಿತ್ಸೆಯಲ್ಲಿದ್ದ ತಾಯಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 21.10.2022 ರಂದು ಬೆಳಗ್ಗೆ 10.00 ಗಂಟೆಗೆ ಮೃತಪಟ್ಟಿರುತ್ತಾರೆ.  ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 55-2022  ಕಲಂ 174  ಸಿ ಆರ್ ಪಿಸಿ  . ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶಿವಾನಂದ ನಾಯಕ್‌ (52 ವರ್ಷ) ತಂದೆ: ದಿ. ನಾರಾಯಣ ನಾಯಕ್, ವಾಸ: ಸಮೃದ್ದಿ ಫಾರ್ಮ್ಸ್ ಕೆಮ್ಮಾಯಿ ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ತಾಲೂಕು ರವರು ಸುಮಾರು 10 ವರ್ಷಗಳಿಂದ ಚಿಕ್ಕಮುಡ್ನೂರು ಗ್ರಾಮದ ಸಿದ್ಯಾಳ ವಾಸಿ ಸಮರ್ಥ ಭಂಡಾರಿರವರ ಮಾಲಿಕತ್ವದ ಅಡಿಕೆ ತೋಟವನ್ನು ಗುತ್ತಿಗೆಗೆ ಪಡೆದು ಕೃಷಿ ಕೆಲಸವನ್ನು ಮಾಡಿಸುತ್ತಿದ್ದು, ಪ್ರಸ್ತುತ ಸದ್ರಿ ಜಮೀನಿನಲ್ಲಿ ಕಾಡು ಗಿಡಗಂಟಿ ಬೆಳೆದ ಕಾರಣ ಪಿರ್ಯಾದಿದಾರರು ಕೆಲಸದವರಿಂದ ಗಿಡಗಂಟಿಗಳನ್ನು ಯಂತ್ರದ ಮೂಲಕ ಕಡಿಸುತ್ತಿದ್ದರು. ದಿನಾಂಕ 21.10.2022 ರಂದು ಸಂಜೆ ಸುಮಾರು 3.30 ಗಂಟೆಗೆ ಕೆಲಸದವರು ಗಿಡಗಂಟಿಗಳನ್ನು ಕಡಿಯುತ್ತಿರುವ ಸಮಯ ಒಂದು ತೆಂಗಿನ ಮರದ ಗಿಡದ ಬುಡದಲ್ಲಿ ಮಾನವನ ಮೂಳೆಗಳಂತೆ ತೋರುವ ಮೂಳೆಗಳು ಮತ್ತು ತಲೆಬುರುಡೆ  ಹಾಗೂ  ಎರಡು ಚಪ್ಪಲಿಗಳು ಕಂಡು ಬರುತ್ತಿದ್ದು, ಇದನ್ನು ಗಮನಿಸುವಾಗ ಯಾರೋ ಅಪರಿಚಿತ ವ್ಯಕ್ತಿ ಯಾವುದೋ ಕಾರಣದಿಂದ ಇಲ್ಲಿಗೆ ಬಂದು ಸುಮಾರು 06 ತಿಂಗಳ ಹಿಂದೆ ಮೃತಪಟ್ಟಂತೆ ಕಂಡು ಬರುತ್ತದೆ ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ: 29/2022 ಕಲಂ: 174 (3)(iv) ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಂದ್ರಾವತಿ ಕೆ, (50) ಗಂಡ: ದಿ, ಮೊನಪ್ಪ ಪೂಜಾರಿ ವಾಸ: ಕೊಂಬರಡ್ಕ ಮನೆ, ಅಜ್ಜಾವರ ಗ್ರಾಮ, ಸುಳ್ಯ ತಾಲೂಕು ರವರ ಮಗ ಸುಶೀಲ್ ಕುಮಾರ್ (30) ಎಂಬಾತನು ಮಾನಸಿಕ ಸ್ಥಿಮೀತ ಕಳೆದುಕೊಂಡಂತೆ ವರ್ತಿಸುತ್ತಿದ್ದು, ದಿನಾಂಕ 21.10.2022 ರಂದು ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕೊಂಬರಡ್ಕ ಎಂಬಲ್ಲಿರುವ ಪಿರ್ಯಾದುದಾರರ ಮನೆಯ ಆಡುಗೆ ಕೋಣೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಬೆಳಿಗ್ಗೆ 08:30 ಗಂಟೆಯಿಂದ 10:00 ಗಂಟೆಯ ಮದ್ಯೆ ಮನೆಯ ಮಾಡಿನ ಅಡ್ಡಕ್ಕೂ ಹಾಗೂ ಆತನ ಕುತ್ತಿಗೆಗೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಸುಶೀಲ್ ಕುಮಾರನು ಆತನ ಯಾವುದೋ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುತ್ತಾನೆ ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂ: 44/2022  ಕಲಂ: 174 ಸಿಆರ್ ಪಿಸಿ  ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 22-10-2022 12:23 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080