ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 03

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಕೌಶಲ್ ಎಸ್ ಶೆಟ್ಟಿ  ಪ್ರಾಯ: 22 ತಂದೆ: ಶಶಿರಾಜ್ ಶೆಟ್ಟಿ ವಾಸ: ಶೆಟ್ಟಿ ಕಂಪೌಂಡ್, ಕುಕ್ಕಾಜೆ, ಮಂಚಿ ಗ್ರಾಮ , ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 20.11.2022ರಂದು ಪಿರ್ಯಾದುದಾರರು ಮೋಟಾರ್‌ ಸೈಕಲಿನಲ್ಲಿ ಮನೆಗೆ ಹೋಗುತ್ತಿರುವ ಸಮಯ ಸುಮಾರು ರಾತ್ರಿ 8.30 ಗಂಟೆಗೆ ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಸಾಲೆತ್ತೂರು   ಕಡೆಯಿಂದ ಅಟೋ ರಿಕ್ಷಾ ನಂಬ್ರ   KA-70-0619 ವೊಂದನ್ನು ಅದರ ಚಾಲಕನು  ದುಡುಕುತನ ಹಾಗೂ ನಿರ್ಲಕ್ಷ ತನದಿಂದ ಚಲಾಯಿಸಿಕೊಂಡು ಬಂದು ದೂರದಿಂದ ನೋಡಿದರೂ ನಿಧಾನಿಸದೆ ರಸ್ತೆ ದಾಟುತ್ತಿದ್ದ  ಪಾದಾಚಾರಿಗೆ ಡಿಕ್ಕಿ ಹೊಡೆಸಿದ್ದು ಪರಿಣಾಮ ಪಾದಾಚಾರಿ ಪ್ರಶಾಂತ್‌ ರೈ (49) ರಸ್ತೆಗೆ ಬಿದ್ದ ಪರಿಣಾಮ ಗಾಯನೋವುಗಳಾಗಿದ್ದು, ಪಿರ್ಯಾದುದಾರರು  ಕೂಡಲೇ  ಒಂದು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಬಂಟ್ವಾಳ  ಸರಕಾರಿ ಆಸ್ಪತ್ರೆಗೆ ದಾಖಲಿಸಿ  ವೈದ್ಯರಿಂದ ಪ್ರಥಮ ಚಿಕಿತ್ಸೆ   ಕೊಡಿಸಿ  ಹೆಚ್ಚಿನ  ಚಿಕಿತ್ಸೆಯ ಬಗ್ಗೆ ಮಂಗಳುರು ವೆನ್‌ ಲಾಕ್‌ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 146/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ರಾಜಣ್ಣ ಪ್ರಾಯ:59 ವರ್ಷ ತಂದೆ:ದಿ|| ಶಿವಣ್ಣ ವಾಸ: 26/296 8th ಕ್ರಾಸ್‌ ನಂದಿನಿ ಲೇಔಟ್‌ ಬೆಂಗಳೂರು ನಗರ ಎಂಬವರ ದೂರಿನಂತೆ ದಿನಾಂಕ:21.11.2022 ರಂದು ಧರ್ಮಸ್ಥಳ ದೇವಸ್ಥಾನಕ್ಕೆ ಪಿರ್ಯಾದಿ ಸಂಬಂಧಿಕರೊಂದಿಗೆ ಬೆಂಗಳೂರನಿಂದ ರೈಲಿನಲ್ಲಿ ಹೊರಟು ಸುಬ್ರಹ್ಮಣ್ಯದ ನೆಟ್ಟಣ ಎಂಬಲ್ಲಿ ಸಮಯ ಸುಮಾರು ಮಧ್ಯಾಹ್ನ 03.30 ಗಂಟೆಗೆ ಬಂದು ಅಲ್ಲಿಂದ ಧರ್ಮಸ್ಥಳಕ್ಕೆ ಕೆಎಸ್ಆರ್ಟಿಸಿ        ಕೆಎ 21 ಎಫ್ 0201 ಬಸ್ಸಿನಲ್ಲಿ ಧರ್ಮಸ್ಥಳ ಕಡೆ ಪ್ರಯಾಣಿಸುತ್ತಿರುವ ಸಮಯ ಸುಮಾರು ಸಂಜೆ 04.15 ಗಂಟೆಗೆ ಶ್ರೀ ಪಂಚಮಖಿ ಮುಖ್ಯಪ್ರಾಣ ದೇವಸ್ಥಾನದ ಎದುರು ತಿರುವು ರಸ್ತೆಯಲ್ಲಿ ಬಸ್ಸು ಚಲಿಸುತ್ತಿದ್ದಂತೆ ಪಿರ್ಯಾದಿಯ ಅತ್ತಿಗೆ ರತ್ನಮ್ಮ@ನಾಗರತ್ನಮ್ಮ ರವರು ಕುಳಿತ ಸ್ಥಳದಿಂದ ಹಿಂಬದಿಯ ಶೀಟಿನ ಬಳಿ ಇಟ್ಟಿರುವ ಬ್ಯಾಗ್ ನಿಂದ ಯಾವುದೋ ವಸ್ತುವನ್ನು ತೆಗೆಯುವಾಗ ಬಸ್ಸಿನಲ್ಲಿ ನಡೆದುಕೊಂಡು ಹೋಗುತ್ತಿದ್ದ  ಸಮಯ  ಆಯಾ ತಪ್ಪಿ ಬಸ್ಸಿನ ಹಿಂಬಂದಿ ಬಾಗಿಲಿನ ಮೂಲಕ ರಸ್ತೆಗೆ ಎಸೆಯಲ್ಪಟ್ಟು, ಪ್ರಯಾಣಿಕರ ಬೊಬ್ಬೆ ಹಾಕಿದಾಗ ಬಸ್ಸನು ನಿಲ್ಲಿಸಿ ನೋಡಿದಾಗ ರತ್ನಮ್ಮ@ನಾಗರತ್ನಮ್ಮರವರ ತಲೆಗೆ ಗಂಭೀರ ರಕ್ತ ಗಾಯವಾಗಿದ್ದು ಅಲ್ಲಿದ್ದವರು ಸೇರಿ ಉಪಚರಿಸಿ ಅವರನ್ನು ಚಿಕಿತ್ಸೆಯ ಬಗ್ಗೆ 108 ವಾಹನದಲ್ಲಿ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ರತ್ನಮ್ಮ@ನಾಗರತ್ನಮ್ಮ ರವರನ್ನು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ಧೃಡಪಡಿಸಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 102/2022 ಕಲಂ: ಕಲಂ:279. 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಪ್ರಾಯ 22ವರ್ಷ, ತಂದೆ : ದಿ. ಹರೀಶ, ವಾಸ : ಬೆಳ್ಳು ಮಾಡು ಮನೆ, ಮತ್ತು ಗ್ರಾಮ, ವಿರಾಜಪೇಟೆ ತಾಲೂಕು, ಕೊಡಗು ಜಿಲ್ಲೆ ಎಂಬವರ ದೂರಿನಂತೆ ದಿನಾಂಕ 20-11-2022 ರಂದು ನಿಂತಿಕಲ್ಲು ಕಡೆಯಿಂದ ಕಾಣಿಯೂರು ಕಡೆಗೆ ಮಹಮ್ಮದ್ ಶಾಹಿದ್ ಎಂಬುವರು ಸ್ಕೂಟರ್ ನಂ KA 21 EC 2621 ನೇ ದರಲ್ಲಿ  ಸಹ ಸವಾರರೋರ್ವರನ್ನು ಕುಳ್ಳಿರಿಸಿಕೊಂಡು ಅಜಾಗರುಕತೆ  ಹಾಗೂ ನಿರ್ಲಕ್ಷತನದಿಂದ  ಅಡ್ಡಾ ದಿಡ್ಡಿಯಾಗಿ ರಸ್ತೆಯ  ತೀರ ಎಡ ಬದಿ ಅಂದರೆ  ತಪ್ಪು ಬದಿಗೆ  ಸವಾರಿ ಮಾಡಿದ ಪರಿಣಾಮ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ರಸ್ತೆಯ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಅಲೆಕ್ಕಾಡಿ ಎಂಬಲ್ಲಿ ಈ ಪ್ರಕರಣದ ಫಿರ್ಯಾದಿ ದಾರರು ಸಮಹಾದಿ ಎಂಬಲ್ಲಿಂದ ನಿಂತಿಕಲ್ಲು ಕಡೆಗೆ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ನಂ KA 21 B 4650 ನೇ ಯದಕ್ಕೆ 18-15 ಗಂಟೆಗೆ ಅಪಘಾತ ಉಂಟಾಗಿ ಎರಡೂ ವಾಹನಗಳು ರಸ್ತೆಯಲ್ಲಿ ಬಿದ್ದು, ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಫಿರ್ಯಾದಿದಾರರಿಗೆ, ಅವರ ದೊಡ್ಡಪ್ಪ ಅಂಗಾರ, ತೀರ್ಥಶ್, ಮತ್ತು ಆಟೋ ಚಾಲಕ ರವಿ ರವರಿಗೆ ಮತ್ತು ಆರೋಪಿ ಸ್ಕೂಟರ್ ಸವಾರ ಮಹಮ್ಮದ್ ಶಾಹೀದ್ ಮತ್ತು ಸಹ ಸವಾರರಿಗೆ ಗಾಯಗಳಾಗಿದ್ದು, ಗಾಯಾಳು ಫಿರ್ಯಾದಿ ದಾರರು  ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ, ತೀರ್ಥಶ್ ಮತ್ತು ಆಟೋ ಚಾಲಕ ರವಿಯವರು, ಸ್ಕೂಟರ್ ನಲ್ಲಿದ್ದ ಸಹ ಸವಾರ ಹರೀಶ್ ರವರು  ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಯಲ್ಲಿದ್ದು, ಸ್ಕೂಟರ್ ಸವಾರ  ಮಹಮ್ಮದ್  ಶಾಹಿದ್ ಮತ್ತು ಆಟೋ ಪ್ರಯಾಣಿಕ ಅಂಗಾರ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ:91/2022: ಕಲಂ 279,337,338 ಐ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 01

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿಜಯ ಶಂಕರ ಆಳ್ವ (36) ತಂದೆ:ನಾರಾಯಣ ಆಳ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗೋಳ್ತಮಜಲು ಗ್ರಾಮ ಪಂಚಾಯತ್ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ, ಗೋಳ್ತಮಜಲು ಗ್ರಾಮದ ಕುಂಟಿಪಾಪು ಎಂಬಲ್ಲಿ ಪದ್ಮನಾಭ ರೈ ಎಂಬವರು ಕೋಳಿ ಫಾರಂ ನಡೆಸುತ್ತಿದ್ದು, ಇದರಿಂದ ಸ್ಥಳೀಯವರಿಗೆ ಆರೋಗ್ಯ ಸಮಸ್ಯೆಯಾಗುವ ಬಗ್ಗೆ ಆರೋಗ್ಯಾಧಿಕಾರಿಯವರು ದಿನಾಂಕ:18-10-2021 ರಂದು ವರದಿ ನೀಡಿದ್ದು, ಈ ಬಗ್ಗೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಕೋಳಿಫಾರಂ ನಿಲ್ಲಿಸುವಂತೆ ದಿನಾಂಕ:29-07-2022 ರಂದು ನೋಟೀಸ್ ನೀಡಲಾಗಿತ್ತು. ಈ ನೋಟೀಸಿನ ವಿರುದ್ಧ ಪದ್ಮನಾಭ ರೈರವರು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸದ್ರಿ ಮೇಲ್ಮನವಿಯು ದಿನಾಂಕ:30-09-2022 ರಂದು ತಿರಸ್ಕ್ರತಗೊಂಡಿರುವ ಆದೇಶ ಬಂದಿರುತ್ತದೆ. ಸದ್ರಿ ಆದೇಶ ಪ್ರತಿಯೊಂದಿಗೆ ಪದ್ಮನಾಭ ರೈರವರಿಗೆ ಮತ್ತೊಮ್ಮೆ ನೋಟೀಸ್ ನೀಡಿ ಕೋಳಿ ಫಾರಂ ನಿಲ್ಲಿಸುವಂತೆ ಸೂಚಿಸಲಾಗಿದೆ. ಹೀಗಿದ್ದರೂ ಪದ್ಮನಾಭ ರೈರವರು ಕೋಳಿ ಫಾರಂ ಕೆಲಸ ಮುಂದುವರಿಸಿದ್ದು, ಹೊಸದಾಗಿ ಫಾರಂಗೆ ಕೋಳಿ ಮರಿಗಳನ್ನು ಹಾಕಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 111/2022 ಕಲಂ: 269 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 01

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಲೀಲಾ ಪ್ರಾಯ 60 ವರ್ಷ ಗಂಡ: ಮಾಧವ ವಾಸ; ಜಟ್ಟಿಪಳ್ಳ ಮನೆ ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಮಗಳು ಗೀತಾ 31 ವರ್ಷ ಎಂಬವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಸಿಸೇರಿಯನ್ ಹೆರಿಗೆ ಆಗಿದ್ದು, ಹೆರಿಗೆಯ ನಂತರ ಮಕ್ಕಳಾಗದಂತೆ ಅಪರೇಷನ್ ಮಾಡಿಸಿದ್ದು, ಆಸ್ಪತ್ರೆಯಲ್ಲಿ 5 ದಿನಗಳ ಆರೈಕೆಯಲ್ಲಿದ್ದು ಬಳಿಕ ಪಿರ್ಯಾದಿದಾರರ ಮನೆಗೆ ಕರೆದುಕೊಂಡು ಬಂದಿರುವುದಾಗಿದೆ. ಪಿರ್ಯಾದಿದಾರರ ಮಗಳು ಗೀತಾಳಿಗೆ ಈ ಹಿಂದೆ ಶೀತ, ಕೆಮ್ಮು, ಜ್ವರ ಉಸಿರಾಟದಲ್ಲಿ ತೊಂದರೆ  ಸಾಮಾನ್ಯವಾಗಿ ಇದ್ದು, ಹೆರಿಗೆಯ ನಂತರ ಆಸ್ಪತ್ರೆಯಿಂದ ಬಂದ ನಂತರ ಕೂಡಾ ಕೆಮ್ಮು ಶೀತ, ಜ್ವರ ಬಂದಾಗ ಆಸ್ಪತ್ರೆಯಿಂದ ನೀಡಿದ ಜೌಷಧಿಯನ್ನು ತೆಗೆದುಕೊಳ್ಳುತ್ತಿದ್ದು, ದಿನಾಂಕ 20.11.2022 ರಂದು ಸಂಜೆ ಸುಮಾರು 5.30 ಗಂಟೆಗೆ ಮನೆಯಲ್ಲಿದ್ದ ಸಮಯ ಗೀತಾಳಿಗೆ ಜೋರಾಗಿ ಕೆಮ್ಮು ಬರಲು ಶುರುವಾಗಿ ಗೀತಾಳು ಆಸ್ವಸ್ಥಗೊಂಡಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಅಟೋರಿಕ್ಷಾದಲ್ಲಿ ರಾತ್ರಿ 7.00 ಗಂಟೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ  ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಯುಡಿಅರ್ ನಂಬ್ರ 49/2022 ಕಲಂ 174 ಸಿಅರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-11-2022 01:58 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080