ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನವೀನ್ ಕುಮಾರ್ (34) ವರ್ಷ.ತಂದೆ: ನಾರಾಯಣ ಪೂಜಾರಿ.ವಾಸ: ಬೆಳ್ಳಿಪಾಡಿ ಮನೆ, ದೆಲಂಪಾಡಿ ಗ್ರಾಮ. ಪಂಜಿಕಲ್ಲು ಅಂಚೆ, ಕಾಸರಗೋಡು ಎಂಬವರ ದೂರಿನಂತೆ ದಿನಾಂಕ 22-01-2023 ರಂದು ಪಿರ್ಯಾಧಿದಾರರು KA-21-P-5954 ನೇ ಇಕೋ ಕಾರಿನಲ್ಲಿ ಚಾಲಕನಾಗಿ ಸ್ನೇಹಿತರಾದ ಭಾಸ್ಕರ, ರಾಧಕೃಷ್ಣರವರು ಸಹ ಪ್ರಯಾಣಿಕರಾಗಿ ಪಣೋಲಿಬೈಲು ದೇವಸ್ಥಾನಕ್ಕೆ ಬಂದು ಅಲ್ಲಿಂದ ಮಂಗಳೂರು ತೊಕ್ಕೊಟ್ಟು ಕಡೆಗೆ,  ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಾ ಸಮಯ ಸುಮಾರು ಸಂಜೆ 4:00 ಗಂಟೆಗೆ ಬಂಟ್ವಾಳ ತಾಲೂಕು ಚೇಳೂರು ಗ್ರಾಮದ ಚೇಳೂರು ಎಂಬಲ್ಲಿಗೆ ತಲುಪುತ್ತಿದಂತೆ ಪಿರ್ಯಾಧಿದಾರರ ಹಿಂದಿನಿಂದ ಅಂದರೆ ಮೆಲ್ಕಾರ್ ಕಡೆಯಿಂದ KA-19-EP-2332 ನೇ ಮೋಟಾರ್ ಸೈಕಲೊಂದನ್ನು ಅದರ ಸವಾರ ರವಿಚಂದ್ರ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ಹೋಗಿ ಪಿರ್ಯಾಧಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಇಕೋ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಮುಖಕ್ಕೆ ಗುದ್ದಿದ ಮತ್ತು ತರಚಿದ ರಕ್ತ ಗಾಯ, ತಲೆಗೆ ಗುದ್ದಿದ ರಕ್ತ ಗಾಯವಾದವರನ್ನು ಪಿರ್ಯಾಧಿದಾರರು ಮತ್ತು ಅವರ ಸಹಪಾಠಿಗಳು ಗಾಯಾಳುವನ್ನು ಅಪಘಾತಕ್ಕೊಳಗಾದ ಇಕೋ ಕಾರಿನಲ್ಲಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 14/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಂಕರ ಭಟ್ (73) ತಂದೆ: ದಿ. ಮಹಾಬಲ ಭಟ್ ವಾಸ: ಗಾಳಿಗುತ್ತು ಮನೆ ವಿಟ್ಲ ಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:21-01-2023 ರಂದು ವಿಟ್ಲ ಪೇಟೆಯಲ್ಲಿರುವ ಹಾಲು ಡಿಫೊದಿಂದ ಹಾಲು ಖರೀದಿಸಿ ವಾಪಾಸು ಮನೆಗೆ ಹೋಗುವರೇ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ನಾಲ್ಕು ಮಾರ್ಗ ಜಂಕ್ಷನ್ನಲ್ಲಿ ಬೆಳಿಗ್ಗೆ 07.00 ಗಂಟೆಯ ಸಮಯಕ್ಕೆ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದು. ಉಕ್ಕುಡ ಕಡೆಯಿಂದ ಮಂಗಳೂರು ಕಡೆಗೆ ಕೆಎ-19-ಎಂಎನ್-0239ನೇ ಇಕೋ ಕಾರನ್ನು ಚಾಲಕ ರೋಯಲ್ ಡಿಸೋಜ್ ಚಲಾಯಿಸಿಕೊಂಡು ಬಂದು ಒಮ್ಮೇಲೆ ನಿಲ್ಲಿಸಿ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಹಿಂದಕ್ಕೆ ಚಲಾಯಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾಧಿಗೆ ಅಪಘಾತಪಡಿಸಿದ ಪರಿಣಾಮ ಪಿರ್ಯಾಧಿ ನೆಲಕ್ಕೆ ಬಿದ್ದು ಎಡಕೈ ಮೊಣಗಂಟಿಗೆ ತರಚಿದ ಗಾಯ, ಎಡ ಕಾಲಿನ ತೊಡೆಯ ಭಾಗಕ್ಕೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುವನ್ನು ಅಲ್ಲಿ ಸೇರಿದವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 10/2023  ಕಲಂ: 279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜನಾರ್ಧನ ಕೆ ಪ್ರಾಯ 46 ವರ್ಷ ತಂದೆ: ಅಪ್ಪು ನಾಯ್ಕ್ ವಾಸ: ಕನ್ಯಾನ ಮನೆ, ಮಂಡೆಕೋಲು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಜನಾರ್ಧನರವರ ಮನೆಯ ಹಿಂಬದಿ ಒಡ್ಡಿನಡ್ಕ –ಮಂಡೆಕೋಲು ರಸ್ತೆಯು ಹಾದು ಹೋಗುತ್ತಿದ್ದು,  ದಿನಾಂಕ 21.01.2023 ರಂದು ಪಿರ್ಯಾದಿದಾರರು ತನ್ನ ಮನೆಯಾದ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಕನ್ಯಾನ ಎಂಬಲ್ಲಿ ತನ್ನ ಮನೆಯ ಹಿಂಬದಿ ರಸ್ತೆಯಲ್ಲಿ ನಿಂತುಕೊಂಡಿರುವ ಸಂಜೆ ಸಮಯ ಸುಮಾರು 5.40 ಗಂಟೆಗೆ ಒಡ್ಡಿನಡ್ಕ ಕಡೆಯಿಂದ ಮಂಡೆಕೋಲು ಕಡೆಗೆ ಸುರೇಶ್ ಎಂಬವರ ಬಾಬ್ತು ಅಟೋರಿಕ್ಷಾ ನಂಬ್ರ ಕೆಎ-21-ಬಿ-4796 ನೇದನ್ನು ಅಶ್ರಫ್ ಎಂ ಎ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಒಡ್ಡಿನಡ್ಕ ಕಡೆಯಿಂದ ಮಂಡೆಕೋಲು ಕಡೆಗೆ ಹೋಗುತ್ತಿದ್ದ ಅಟೋರಿಕ್ಷಾ ನಂಬ್ರ ಕೆಎ-21-ಎ-9856 ನೇದಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಅಟೋರಿಕ್ಷಾವು ರಸ್ತೆಯ ಬದಿಯಲ್ಲಿರುವ ಕಂಪೌಂಡ್‌ ಗೆ ಡಿಕ್ಕಿ ಹೊಡೆದಿದ್ದು, ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಅಟೋರಿಕ್ಷಾ ಚಾಲಕ ಪಿರ್ಯಾದಿದಾರರ ಪರಿಚಯದ ರಾಜೇಶ್ ಎಂಬವರು ಆಗಿದ್ದು ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞೆ ಇಲ್ಲದೇ ಇದ್ದು,  ಪಿರ್ಯಾದಿದಾರು ಮತ್ತು ಅಶ್ರಫ್ ಎಂ ಎ ಹಾಗೂ ಸ್ಥಳಕ್ಕೆ ಬಂದು ರಾಧಾಕೃಷ್ಣ ಎಂಬವರು ರಾಜೇಶ್ ರವರನ್ನು ಉಪಚರಿಸಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ  ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗುವಂತೆ ಸೂಚಿಸಿದಂತೆ ಪಿರ್ಯಾದಿದಾರರು ಮತ್ತು ರಾಜೇಶರವರ ಮನೆಯವರು ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು  ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 09/2023 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಳಪ್ಪ ನಾಯ್ಕ ಪ್ರಾಯ: 50 ವರ್ಷ ತಂದೆ: ದಿಂ| ಜನಿಯಾ ನಾಯ್ಕ ವಾಸ:ಏಣಿತ್ತಡ್ಕ ಮನೆ ಕೊಯಿಲಾ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರಾದ ಬಾಳಪ್ಪ ನಾಯ್ಕ ರವರು ಅವರ ಹೆಂಡತಿ ಶ್ರೀಮತಿ ಗೀತಾ ಪ್ರಾಯ: 46 ವರ್ಷ ಹಾಗೂ 03 ಜನ ಮಕ್ಕಳೊಂದಿಗೆ ವಾಸವಾಗಿದ್ದು ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಶ್ರೀಮತಿ ಗೀತಾರವರು ಈ ದಿನ ದಿನಾಂಕ:22.01.2023 ರಂದು ಸಮಯ 09.00 ಗಂಟೆಗೆ ನೆರೆಕೆರೆಯ ನಿವಾಸಿಗಳಾದ ಸುನಂದ ಮತ್ತು ವಿದ್ಯಾಲಕ್ಷ್ಮೀರವರೊಂದಿಗೆ ಎಂದಿನಂತೆ ಹಸುಗಳಿಗೆ ಹುಲ್ಲು ತರುವರೇ ಸ್ವಲ್ಪದೂರವಿರುವ ಕುಮಾರಧಾರ ನದಿಯಿಂದ ಆಚೆ ಇರುವ ಆರೆಲ್ತಡಿ ಎಂಬಲ್ಲಿಗೆ ತೆಪ್ಪದಲ್ಲಿ ನದಿ ದಾಟಿ ಹೋಗಿ ಹುಲ್ಲು ಕೊಯ್ದು ವಾಪಾಸ್ಸು ಹುಲ್ಲಿನೊಂದಿಗೆ 03 ಜನರು ತೆಪ್ಪದಲ್ಲಿ ವಾಪಾಸ್ಸು ಮನೆಗೆ ಬರುವರೇ ಹೊಳೆಯನ್ನು ದಾಟುತ್ತಿರುವ ಸಮಯ ನದಿಯ ಮಧ್ಯದಲ್ಲಿ ಸಮಯ ಸುಮಾರು 10.30 ಗಂಟೆಗೆ ಜೋರಾಗಿ ಗಾಳಿ ಬಂದು ತೆಪ್ಪವು ತಿರುಗಿ ಮಗುಚಿ ಬಿದ್ದ ಪರಿಣಾಮ ತೆಪ್ಪದಲ್ಲಿದ್ದ ಶ್ರೀಮತಿ ಗೀತಾ,ಸುನಂದಾ ಮತ್ತು ವಿದ್ಯಾಲಕ್ಷ್ಮೀ ರವರು ಹುಲ್ಲು ಸಮೇತ ನೀರಿಗೆ ಬಿದ್ದಿದ್ದು ಅವರ ಪೈಕಿ ಸುನಂದಾ ಹಾಗೂ ವಿದ್ಯಾಲಕ್ಷ್ಮೀ ಹುಲ್ಲು ಕಟ್ಟಿನ ಸಹಯಾದಿಂದ ದಡಕ್ಕೆ ಬಂದಿದ್ದು ಗೀತಾರವರಿಗೆ ಈಜು ಬಾರದೆ ಇದ್ದುದರಿಂದ ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತ ಪಟ್ಟಿದ್ದು.ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 02/2023 ಕಲಂ:174  ಸಿ ಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪುಷ್ಪಾವತಿ, ಪ್ರಾಯ:40 ವರ್ಷ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸುಬ್ರಹ್ಮಣ್ಯ, ಕಡಬ ಎಂಬವರ ದೂರಿನಂತೆ ದಿನಾಂಕ:22-01-2023 ರಂದು ಮೊದಲನೇ ಪಾಳೆಯದಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಗಳ ಉಸ್ತುವಾರಿ ಕರ್ತವ್ಯದಲ್ಲಿದ್ದ ಹರೀಶ್ಚಂದ್ರ, ಪ್ರಭಾರ ಘಟಕಾಧಿಕಾರಿ, ಗೃಹ ರಕ್ಷಕ ದಳ, ಸುಬ್ರಹ್ಮಣ್ಯ ಘಟಕ ರವರಿಗೆ ಟ್ರಾಫಿಕ್‌ ಕರ್ತವ್ಯದಲ್ಲಿದ್ದ ರಾಕೇಶ್‌ ಹೆಚ್‌ ಜಿಎಸ್‌ 11 ರವರು ಸುಮಾರು ಬೆಳಿಗ್ಗೆ 7:00 ರ ಸುಮಾರಿಗೆ ಕರೆಮಾಡಿದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಶ್ರೀಕುಕ್ಕೆ ಸುಬ್ರಹ್ಮಣ್ಯದ ದೇವಳಕ್ಕೆ ಒಳಪಟ್ಟ ಅರಣ್ಯ ಇಲಾಖೆಯ ಹಳೆಯ ವಸತಿ ಗೃಹ ಕಟ್ಟಡದ ಸವಾರಿಮಂಟಪ ಬಳಿ ಇರುವ ಪಾರ್ಕಿಂಗ್‌ ಸ್ಥಳದಲ್ಲಿ ಮರವೊಂದರ ಕೊಂಬೆಗೆ ಸುಮಾರು 55 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು.ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯುಡಿಆರ್: 04/2023 ಕಲಂ: 174‌ ಸಿಆರ್‌ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 23-01-2023 12:25 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080