ಅಪಘಾತ ಪ್ರಕರಣ: ೦2
ಸುಬ್ರಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭಾಸ್ಕರ, ಪ್ರಾಯ: 60 ವರ್ಷ, ತಂದೆ:ಐತ್ತ ಮುಗೇರ, ವಾಸ: ದಾಸನಕಜ ಮನೆ, ನೆಲ್ಲೂರು ಕೆಮ್ರಾಜೆ ಗ್ರಾಮ, ದೇವಚಳ್ಳ ಸುಳ್ಯ ಎಂಬವರ ದೂರಿನಂತೆ ದಿನಾಂಕ 21-02-2021 ರಂದು ಪಿರ್ಯಾದಿದಾರರು ತಂಗಿಯ ಮಗನ ಮದುವೆ ಕಾರ್ಯಕ್ರಮದ ನಿಮಿತ್ತ ತನ್ನ ಹೆಂಡತಿ ವಿಷ್ಣುಮೂರ್ತಿ ಸಭಾ ಭವನಕ್ಕೆ ಹೋಗಿ ವಾಪಸ್ಸು ಸಂಬಂದಿಕರಾದ ರವಿ ಎಂಬಾತನ ಅಟೋ ರಿಕ್ಷಾ ಕೆಎ 21 ಬಿ 8673 ನೇದರಲ್ಲಿ ಪಿರ್ಯಾದಿದಾರರ ಮನೆಯಾದ ದಾಸನ ಕಜೆ ಕಡೆಗೆ ಹೋಗುತ್ತಿರುವಾಗ ಮದ್ಯಾಹ್ನ ಸುಮಾರು 02-00 ಗಂಟೆ ಸಮಯಕ್ಕೆ ದೇವಚಳ್ಳ ಗ್ರಾಮದ ತಳೂರು ಬಸ್ಸ್ ಸ್ಟಾಂಡ್ ಹತ್ತಿರ ತಲುಪುವಾಗ ರಿಕ್ಷಾ ಚಾಲಕ ರವಿ ಎಂಬಾತನು ನಿರ್ಲಕ್ಷತನ ಹಾಗೂ ಅಜಾಗರೂಕತೆ ಚಲಾಯಿಸಿಕೊಂಡು ಹೋಗಿ ಆತನ ನಿಯಂತ್ರಣ ತಪ್ಪಿ ಎಡಗಡೆಗೆ ಮಗುಚಿ ಬಿದ್ದ ಪರಿಣಾಮ ಪಿರ್ಯಾಧಿದಾರರ ಎಡಕಾಲು ಮತ್ತು ಎಡ ಕೈಗೆ ಮುರಿತದ ಗಾಯ ಹಾಗೂ ಪಾರ್ವತಿ ರವರಿಗೆ ಕೈಗೆ ಮತ್ತು ಕಾಲುಗಳಿಗೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ತೆರಳಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಹೋದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ : 08-2021 ,ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಉಮ್ಮರ್ ಎಸ್ ಎಂ (32) ತಂದೆ: ಮಹಮ್ಮದ್ ಎಸ್ ಕೆ ವಾಸ: ಸಂಪಾಜೆ ಗ್ರಾಮ, ಗಡಿಕಲ್ಲು ಮನೆ, ಸುಳ್ಯತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 21.02.2021 ರಂದು ತಮ್ಮ ಬಾಬ್ತು ಸ್ಕೂಟರ್ ನಂಬ್ರ ಕೆಎ 21 ಇಎ 9712 ನೇದರಲ್ಲಿ ಸಹ ಸವಾರನಾಗಿ ರಷೀದ್ ಎಂಬುವವರನ್ನು ಕುಳ್ಳಿರಿಸಿಕೊಂಡು ಕಲ್ಲುಗುಂಡಿಯಿಂದ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗಡಿಕಲ್ಲು ಎಂಬಲ್ಲಿಗೆ ಹೋಗುತ್ತಿರುವರೇ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಚರ್ಚ್ ಸ್ಮಶಾನ ಬಳಿ ಸಮಯ ಸುಮಾರು 21:00 ಗಂಟೆಗೆ ತಲುಪುತ್ತಿದ್ದಂತೆ ಹಿಂಬದಿಯಿಂದ ಬಂದ ಕೆಎ 12 ಎಂಎ 4338 ನೇದರ ಕಾರು ಚಾಲಕ ಸುನೀಲ್ ಎಂಬವನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಕಾರನ್ನು ಚಾಲಾಯಿಸಿಕೊಂಡು ಬಂದು ಸ್ಕೂಟರ್ ಗೆ ಡಿಕ್ಕಿವುಂಡು ಮಾಡಿದ ಪರಿಣಾಮ ಸ್ಕೂಟಿ ಸಮೇತ ಪಿರ್ಯಾದುದಾರರು ಮತ್ತು ಸಹಸವಾರ ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದುದಾರಿಗೆ ಬೆನ್ನಿಗೆ ಹಾಗೂ ಕಾಲಿಗೆ ತರಚಿದ ಗಾಯವಾಗಿದ್ದು, ಸಹ ಸವಾರನಾದ ರಷೀದ್ ಗೆ ತಲೆಗೆ ರಕ್ತಗಾಯವಾಗಿದ್ದವರು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸಹಸವಾರವಾದ ರಷೀದ್ ರವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 16/2021 ಕಲಂ 279 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕೊಲೆ ಬೆದರಿಕೆ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮ್ಯಾಥ್ಯು ಎನ್ ಟಿ ಪ್ರಾಯ:63 ವರ್ಷ ತಂದೆ: ದಿ/ ತೋಮಸ್ ವಾಸ: ನಡುತೊಟ್ಟಿಲ್ ಮನೆ ಗಂಡಿಬಾಗಿಲು ಅಂಚೆ ನೆರಿಯಾ ಕಾಡು ನೆರಿಯಾ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:21-02-2021 ರಂದು ರಾತ್ರಿ ಸುಮಾರು 8.30 ಗಂಟೆ ಸಮಯಕ್ಕೆ ಫಿರ್ಯಾದುದಾರರಾದ ಮ್ಯಾಥ್ಯು ಎನ್.ಟಿ ಹಾಗೂ ಅವರ ಮಗ ಮಿಥುನ್ ರವರುಗಳು ಮನೆ ಕಡೆಯಿಂದ ಬರುತ್ತಿರುವಾಗ ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ನೆರಿಯ ಕಾಡು ಎಂಬಲ್ಲಿ ಅವರ ಪರಿಚಯದ ಸೋಜೋ ಹಾಗೂ ಆತನ ತಮ್ಮ ಜೋಬಿನ್ನು ಮೋಟಾರ್ ಸೈಕಲ್ನಲ್ಲಿ ಬಂದು ಫಿರ್ಯಾದಿ ಹಾಗೂ ಮಿಥುನ್ರವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಮಿಥುನ್ಗೆ ಚೂರಿಯಿಂದ ತಿವಿಯಲು ಹೋದಾಗ ಫಿರ್ಯಾದಿದಾರರು ತಡೆದಿದ್ದು ಆ ಸಮಯ ಜೋಬಿನ್ನು ಪಿರ್ಯಾದುದಾರರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಸೋಜೋ ನು ಚೂರಿಯಿಂದ ಫಿರ್ಯಾದುದಾರರ ಎಡ ಕೆನ್ನೆಗೆ, ಎಡಕಿವಿಗೆ, ಎಡ ಕಿವಿಯ ಹಿಂಭಾಗ, ಎಡ ಕುತ್ತಿಗೆಗೆ ಮತ್ತು ಹೊಟ್ಟೆಗೆ ತಿವಿದಿದ್ದು, ಜೋಬಿನ್ನು ಕೈಯಿಂದ ಪಿರ್ಯಾದುದಾರರ ಬೆನ್ನಿಗೆ ಗುದ್ದಿರುತ್ತಾನೆ. ಫಿರ್ಯಾದುದಾರರ ಹಾಗೂ ಅವರ ಮಗನ ಬೊಬ್ಬೆ ಕೇಳಿದ ನೆರೆಯ ಬಿನೀಶ್ ಎಂಬವರು ಬರುತ್ತಿರುವುದನ್ನು ನೋಡಿದ ಸೋಜೋ ಹಾಗೂ ಜೋಬಿನ್ನು ನಮ್ಮ ವಿಚಾರಕ್ಕೆ ಬಂದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಅವರು ಬಂದಿದ್ದ ಮೋಟಾರ್ ಸೈಕಲ್ ನಲ್ಲಿ ಹೋಗಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 13-2021 ಕಲಂ:341,504,323,324,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲಕ್ಷ್ಮಿ, ಗಂಡ: ಪಿ ಕೃಷ್ಣನ್, ವಾಸ: ಶ್ರೀ ನಿಲಯಂ, ದೇವನ್ ರೋಡ್, ಕಾಂಞಂಗಾಡು ಅಂಚೆ,ಹೊಸದುರ್ಗ ತಾಲೂಕು, ಕಾಸರಗೋಡು, ಎಂಬವರ ದೂರಿನಂತೆ ದಿನಾಂಕ 15-02-2021 ರಂದು 08-45 ಗಂಟೆಗೆ ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಸಿ.ಟಿ.ಗುಡ್ಡೆ ಎಂಬಲ್ಲಿ ಮಂಜಲ್ಪಡ್ಪು-ಸಿಟಿಗುಡ್ಡೆ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ನಿಲ್ಲಿಸಿರುವ ಲಾರಿಯಲ್ಲಿ ಕುಳಿತ್ತಿದ್ದ ಹೆಸರು ತಿಳಿದು ಬಾರದ ಆರೋಪಿಯು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವವರನ್ನು ಗಮನಿಸದೇ, ಲಾರಿಯ ಬಾಗಿಲನ್ನು ಒಮ್ಮೆಲೇ ನಿರ್ಲಕ್ಷ್ಯತನದಿಂದ ತೆಗೆದಾಗ, ಲಾರಿಯ ಬಾಗಿಲು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರ ಮಗಳು ಅಪರ್ಣಾ(17 ವರ್ಷ) ರವರ ಮುಖಕ್ಕೆ ಬಲವಾಗಿ ತಾಗಿ ಗಾಯವುಂಟಾಗಿದ್ದು, ಘಟನೆಯ ಬಳಿಕ ಆರೋಪಿಯು ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಿಲ್ಲ ಹಾಗೂ ಪೊಲೀಸ್ ಠಾಣೆಗೂ ಮಾಹಿತಿ ನೀಡಿರುವುದಿಲ್ಲ. ಪಿರ್ಯಾದುದಾರರು ಗಾಯಾಳುವಿನ ಆರೈಕೆಯಲ್ಲಿದ್ದು, ತಡವಾಗಿ ದೂರು ನೀಡುತ್ತಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 38/2021 ಕಲಂ: 336, 337 ಐಪಿಸಿ & u/s 134(A)&(B) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸುಮನ, ಗಂಡ: ಜನಾರ್ಧನ.ಎನ್, ವಾಸ: ಉರ್ಲಾಂಡಿ-ನಾಯರಡ್ಕ ಮನೆ,ಬೊಳುವಾರು, ಪುತ್ತೂರು ಕಸಬಾ ಗ್ರಾಮ,ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಸುಮಾರು 9 ತಿಂಗಳಿನಿಂದ ಉಪ್ಪಿನಂಗಡಿ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡಿಕೊಂಡಿದ್ದು, ಈಗ ಸುಮಾರು 9 ತಿಂಗಳಿನಿಂದ ಉಪ್ಪಿನಂಗಡಿ ಕೆಂಪಿಮಜಲು ಎಂಬಲ್ಲಿರುವ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ತನ್ನ ಹೆಂಡತಿ ಮತ್ತು ಮಗಳೊಂದಿಗೆ ವಾಸ ಮಾಡಿಕೊಂಡಿದ್ದು, ಈಗ ಸುಮಾರು 22 ದಿನಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು, ತುಂಬಾ ಬೇಸರದಲ್ಲಿದ್ದವರು ಯಾವುದೋ ವೈಯಕ್ತಿಕ ವಿಚಾರದಲ್ಲಿ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 21.02.2021 ರಂದು ರಾತ್ರಿ 10.45 ಗಂಟೆಯಿಂದ ದಿನಾಂಕ 22.02.2021 ರಂದು ಬೆಳಗ್ಗೆ ಸಮಯ ಸುಮಾರು 6.00 ಗಂಟೆಯ ಮದ್ಯೆ ವಸತಿಗೃಹದಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯು.ಡಿ.ಆರ್ ನಂಬ್ರ : 09/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.