Feedback / Suggestions

ಕಳವು ಪ್ರಕರಣ: ೦1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀ ಜಯಂತ  ಪ್ರಾಯ:43 ವರ್ಷ ತಂದೆ;ಕುಂಡ ಭಂಡಾರಿ  ವಾಸ; ಕೋರಿಗದ್ದೆ ಮನೆ, ಕೊಕ್ಕಡ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು  ದ ಕ ಜಿಲ್ಲೆ ಎಂಬವರ ದೂರಿನಂತೆ ತಾನು ಶ್ರೀಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಸಂಚಾರ ನಿಯಂತ್ರಣದ ಸಿಬ್ಬಂದಿಯಾಗಿದ್ದು ದಿನಾಂಕ:20-05-2022 ರಂದು ರಾತ್ರಿ, ಸಮಯ ಕರ್ತವ್ಯ ಮುಗಿಸಿ ಧರ್ಮಸ್ಥಳದ ನಡುಗುಡ್ಡೆ ಎಂಬಲ್ಲಿರುವ ಪಿರ್ಯಾದಿದಾರರು ಅಕ್ಕನ ಮನೆಗೆ ಹೋಗಿ ಬಂದು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನರ್ಮದಾ ವಸತಿ ಗೃಹದ ಮುಂಭಾಗದಲ್ಲಿ ಸಮಯ  22:00  ಗಂಟೆಗೆ  ತನ್ನ ಮೋಟಾರ್‌ ಸೈಕಲ್‌ ಸಂಖ್ಯೆ ಕೆ ಎ -19 ಇ ಟಿ-4881 ಬಜಾಜ್‌ ಸಿ ಟಿ 100 ನೇದನ್ನು  ಕೀ ಹಾಕಿ ನಿಲ್ಲಿಸಿದ್ದು ದಿನಾಂಕ: 21-05-2022 ರಂದು ಬೆಳಿಗ್ಗೆ 5:00 ಗಂಟೆಗೆ ಎದ್ದು  ನೋಡಿದಾಗ ಪಿರ್ಯಾದುದಾರರು ನಿಲ್ಲಿಸಿದ ಮೋಟಾರ್‌ ಸೈಕಲ್‌ ಕಾಣೆಯಾಗಿದ್ದು  ಸದ್ರಿ ಮೋಟಾರ್‌ ಸೈಕಲ್ ನ್ನು ಸುತ್ತ ಮುತ್ತ ಹುಡಾಕಾಡಿ ಪತ್ತೆಯಾಗಿರುವುದಿಲ್ಲ.  ಸದ್ರಿ ಮೋಟಾರ್‌ ಸೈಕಲ್ ನ್ನು ದಿನಾಂಕ;20-05-2022 ರಂದು 22:00 ಗಂಟೆಯಿಂದ ದಿನಾಂಕ:21-05-2022 ರಂದು ಬೆಳಿಗ್ಗೆ ಸಮಯ 5:00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರಬಹುದಾಗಿದ್ದು ಮೋಟಾರ್‌ ಸೈಕಲ್‌ ಅಂದಾಜು ಬೆಲೆ 20,000/ ರೂ  ಆಗಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ  41/2022 ಕಲಂ 379 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: ೦3

ವಿಟ್ಲ ಪೊಲೀಸ್ ಠಾಣೆ : ದಿನಾಂಕ 22.05.2022 ರಂದು 18.00 ಗಂಟೆಗೆ ಸಮಯಕ್ಕೆ ವಿಟ್ಲ ಪೊಲೀಸ್ ಠಾಣಾ ಕಾನೂನು ಮತ್ತು ಸುವ್ಯವವಸ್ಥೆ ವಿಭಾಗದ ಪಿ ಎಸ್ ಐ ಸಂದೀಪ್ ಕುಮಾರ್ ಶೆಟ್ಟಿರವರು  ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ಠಾಣೆಯಿಂದ ತೆರಳಿ ಉಕ್ಕುಡ ಬೈರಿಕಟ್ಟೆ ಆನೇಕಲ್ ಮುಂತಾದ ಕಡೆಗಳಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸಿ 19.15 ಗಂಟೆ ಸಮಯಕ್ಕೆ ಕನ್ಯಾನ ಎಂಬಲ್ಲಿ ಇರುವ ಸಮಯ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿರುವ ಬಾಬು ಗೌಡ ಎಂಬುವರ ದಿನಸಿ ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡುವ ಬಗ್ಗೆ ದಾಳಿ ನಡೆಸಲು ಪಂಚರನ್ನು ಜೊತೆಗೆ ಕರೆದುಕೊಂಡು ಸಮಯ 20.30 ಗಂಟೆಗೆ ಸದ್ರಿ ಸ್ಥಳಕ್ಕೆ ಹೋಗಿ ಸ್ಥಳದಲ್ಲಿದ್ದ ವ್ಯಕ್ತಿಯನ್ನು ಹಿಡಿದು ಈತನ ಹೆಸರು ಬಾಬು ಗೌಡ ಎಂಬುದಾಗಿದ್ದು ಈತನು  ಮದ್ಯದ ಸ್ಯಾಚೆಟ್ ಗಳನ್ನು ಹಾಗೂ ಪ್ಲಾಸ್ಟಿಕ್ ಬಾಟ್ಲಿಗಳನ್ನು ವಿವಿಧ ವೈನ್ಸ್ ಶಾಫ್ ಗಳಿಂದ ಖರೀದಿಸಿಕೊಂಡು ಬಂದು ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿದವನನ್ನು ವಿಚಾರಿಸಿ ಈತನು ಸ್ವಾದೀನ ಹೊಂದಿದ್ದ ಪ್ಲಾಸ್ಟಿಕ್ ಚೀಲವನ್ನು  ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ 1) ಪ್ರೆಸ್ಟಿಜ್  ವಿಸ್ಕಿ 90 ಎಂಎಲ್ ಮದ್ಯ ತುಂಬಿರುವ 20 ಸ್ಯಾಚೆಟ್  2) ಪ್ರೆಸ್ಟಿಜ್  ವಿಸ್ಕಿ 180 ಎಂಎಲ್ ಮದ್ಯ ತುಂಬಿರುವ 4 ಪ್ಲಾಸ್ಟಿಕ್ ಬಾಟ್ಲಿ   3) ಮೈಸೂರ್ ಲ್ಯಾನ್ಸರ್ 90 ಎಂಎಲ್ 22 ಸ್ಯಾಚೆಟ್ 4)   ಮೈಸೂರ್ ಲ್ಯಾನ್ಸರ್ 180 ಎಂಎಲ್ 8 ಸ್ಯಾಚೆಟ್ ಗಳು ಆಗಿದ್ದು ಒಟ್ಟು ಪ್ರಮಾಣ 5.760 ಲೀಟರ್ ನ ಅಂದಾಜು ಮೌಲ್ಯ 2315 ರೂಪಾಯಿಗಳು ಆಗಿರುತ್ತದೆ,  ಹಾಗೂ ಆತನ ಕಿಸೆಯಲ್ಲಿದ್ದ ಮದ್ಯ ಮಾರಾಟದಿಂದ ಬಂದ ರೂಪಾಯಿ 5,860 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 79/2022  ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ: 22-05-2022 ರಂದು ಬೆಳಿಗ್ಗೆ ಸುಮಾರು 10-15 ಗಂಟೆಯಷ್ಟರಲ್ಲಿ ಪುತ್ತೂರು ನಗರ ಠಾಣೆ ಪೊಲೀಸ್‌ ಉಪನಿರೀಕ್ಷಕರಾದ ಶ್ರೀಮತಿ ನಸ್ರೀನ್‌ ತಾಜ್ ರವರು ಬಾತ್ಮಿದಾರರಿಂದ ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ವೀರಮಂಗಲ ರೈಲ್ವೇ ಹಳಿಗಳ ಸಮೀಪ ಯಾರೋ ಗುಮಾನಿ ಆಸಾಮಿಯು ಒಂದು ಬ್ಯಾಗ್ ನಲ್ಲಿ ಮಾದಕ ದ್ರವ್ಯ ವಸ್ತುವಾದ ಗಾಂಜಾವನ್ನು ಸ್ವಾದೀನದಲ್ಲಿಟ್ಟುಕೊಂಡು ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಇಲಾಖಾ ಮೇಲಾಧಿಕಾರಿಯವರಿಗೆ ತಿಳಿಸಿ ಅನುಮತಿ ಪಡೆದು ತಕ್ಷೀರು ಸ್ಥಳಕ್ಕೆ ಪತ್ರಾಂಕಿತ ಅಧಿಕಾರಿ ಮತ್ತು ಪಂಚರುಗಳೊಂದಿಗೆ ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ  ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ವೀರಮಂಗಲ ರೈಲ್ವೇ ಗೇಟ್ ಕಡೆಗೆ ಹೋಗುತ್ತಾ ರೈಲ್ವೇ ಗೇಟ್ ಬಳಿ 11.15 ಗಂಟೆಗೆ  ತಲುಪಿದಾಗ ರೈಲ್ವೇ ಗೇಟಿನ ಬಳಿ ಆರೋಪಿಗಳಾದ  1) ಶಫೀಕ್ ಕೆ.ವಿ ಪ್ರಾಯ: 24 ವರ್ಷ ತಂದೆ: ಉಮ್ಮರಬ್ಬ ವಾಸ: ಕುಂತೂರು ಕೋಚಕಟ್ಟೆ ಪೆರಾಬೆ ಗ್ರಾಮ ಕುಂತೂರು ಕಡಬ ತಾಲೂಕು 2) ರಾಝೀಕ್ ಪ್ರಾಯ: 28 ವರ್ಷ ತಂದೆ:ಅಬ್ದುಲ್ಲ ವಾಸ: ಎರ್ಮಲ ಮನೆ ಪೆರಾಬೆ ಗ್ರಾಮ ಕುಂತೂರು ಕಡಬ ತಾಲೂಕು ರವರುಗಳು  ಗಾಂಜಾ  ಇಟ್ಟುಕೊಂಡು ನಿಂತಿರುವುದು ಕಂಡು ಬಂದಿರುತ್ತದೆ . ಸದ್ರಿ ಆರೋಪಿಗಳನ್ನು  ವಿಚಾರಿಸಿ 1.850 ಗ್ರಾಂ ತೂಕದ ಗಾಂಜಾ  ಮತ್ತು ಎರಡು ಮೊಬೈಲ್ ಪೋನ್ ಗಳನ್ನು ಪಂಚರ ಸಮಕ್ಷಮ ಸ್ಥಳ ಪಂಚನಾಮೆ  ಮಾಡಿ  ಸ್ವಾಧೀನಪಡಿಸಿಕೊಂಡಿರವುದಾಗಿದೆ. ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 21,500/- ರೂ ಆಗಬಹುದು. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ   ಅ.ಕ್ರ: 38/2022 ಕಲಂ: 8© r/w  20 (b) (ii) , B  NDPS Actಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ: 22-05-2022 ರಂದು ಪುತ್ತೂರು  ನಗರ ಪೊಲೀಸ್ ಠಾಣಾ ಅ.ಕ್ರ:38/2022   ಪ್ರಕರಣದಲ್ಲಿ   ದಸ್ತಗಿರಿಯಾದ ಆರೋಪಿ ಶಫೀಕ್ ಕೆ.ವಿ ಎಂಬಾತನನ್ನು ಪೊಲೀಸ್ ನಿರೀಕ್ಷಕರು ವಿಚಾರಣೆ ನಡೆಸುವ ಸಮಯ  ಮಹಮ್ಮದ್ ಮುವಾಝ್ ಎಂಬಾತನ ಬಳಿ  ಹೆಚ್ಚಿನ ಗಾಂಜಾ ಇದ್ದು ಇದನ್ನು ಆತನು  ಮಂಗಳೂರಿನಲ್ಲಿ ಅಲ್ಲಲ್ಲಿ ಮಾರಾಟ ಮಾಡಿ ಐ20  KL 13-AP-1609 ನೇ ಕಾರಿನಲ್ಲಿ ಮಂಗಳೂರಿನಿಂದ ಉಪ್ಪಿನಂಗಡಿ-ಗುಂಡ್ಯ ಕಡೆಗೆ ಸಂಜೆ ಸುಮಾರು 6.15 ಗಂಟೆಗೆ ಬರುವುದಾಗಿ ತಿಳಿಸಿರುತ್ತಾನೆ ಅದರಂತೆ  ಪಿರ್ಯಾದಿದಾರರು   ಠಾಣಾ  ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿ ಪ್ರಕರಣವನ್ನು ಪತ್ತೆ ಹಚ್ಚುವ  ಬಗ್ಗೆ ಮೇಲಾಧಿಕಾರಿಗಳ ಅನುಮತಿ ಪಡೆದು  ಗೆಜಿಟೆಡ್‌ ಅಧಿಕಾರಿಯೊಂದಿಗೆ  ಸಂಜೆ 5.30 ಗಂಟೆಗೆ ಠಾಣೆಯಿಂದ ಹೊರಟು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಪೇರಮೊಗರು ಎಂಬಲ್ಲಿಗೆ ಸಂಜೆ 6.00 ಗಂಟೆಗೆ ತಲುಪಿ ಪಂಚರನ್ನು ಬರಮಾಡಿಸಿಕೊಂಡು    ಮಾಹಿತಿ ಆಧಾರದಲ್ಲಿ ವಾಹನಕ್ಕಾಗಿ ರಸ್ತೆ ಬದಿಯಲ್ಲಿ ನಿಂತುಕೊಂಡು ಕಾಯುತ್ತಿದ್ದಂತೆ ಸಂಜೆ ಸುಮಾರು 6.15 ಗಂಟೆಗೆ ಮಂಗಳೂರು ಕಡೆಯಿಂದ ಐ20  KL-13-AP-1609ನೇ ನಂಬ್ರದ ವಾಹನ ಬರುವುದನ್ನು ಕಂಡು ಜೊತೆಯಲ್ಲಿದ್ದ ಸಿಬ್ಬಂದಿಗಳು   ವಾಹನವನ್ನು ನಿಲ್ಲಿಸಿದಾಗ ಅದರ ಚಾಲಕನು ಕಾರನ್ನು ರಸ್ತೆಯ ಬದಿಯಲ್ಲಿ  ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದವನನ್ನು ಸಿಬ್ಬಂದಿಗಳು ಸುತ್ತುವರಿದು ಹಿಡಿದು ವಿಚಾರಿಸಿದಾಗ ಆತನು ತನ್ನ  ಹೆಸರು ಮೊಹಮ್ಮದ್ ಮುವಾಝ್ , ಪ್ರಾಯ: 30 ವರ್ಷ ತಂದೆ: ಇಬ್ರಾಹಿಂ  ವಾಸ: ವಿಜಯಮಾರು ಮನೆ, ಕುಂಡಡ್ಕ ಶಾಂತಿಮಾರು ವಿಟ್ಲ ಮುಡ್ನೂರು ಗ್ರಾಮ, ಬಂಟ್ವಾಳ ತಾಲೂಕು ಎಂಬುದಾಗಿ ತಿಳಿಸಿದನು. ಆತನ ಕಾರಿನಲ್ಲಿ ಅಕ್ರಮ ಗಾಂಜಾ ಮಾರಾಟ ಹಾಗೂ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯಂತೆ   ಪತ್ರಾಂಕಿತ ಅಧಿಕಾರಿ ಹಾಗೂ ಪಂಚರ ಸಮಕ್ಷಮದಲ್ಲಿ  ಕಾರು ಹಾಗೂ ಕಾರಿನಲ್ಲಿದ್ದ ಮಹಮ್ಮದ್ ಮುವಾಝ್ ನನ್ನು ತಪಾಸಣೆ ಮಾಡಿದಾಗ   1] ಕಾರಿನ ಡಿಕ್ಕಿಯಯಲ್ಲಿದ್ದ  2.075 ಕೆ.ಜಿ ಗಾಂಜಾ ಇದರ ಒಟ್ಟು ಮೌಲ್ಯ 20,000/-  ಆಗಬಹುದು. 2] ಮಡಚುವ ಒಂದು ಸ್ಟೀಲ್‌ ಸ್ಟಿಕ್ ಇದರ ಅಂದಾಜು ಮೌಲ್ಯ 500/- ರೂ ಆಗಬಹುದು 3] ಗಾಂಜಾ ತುಂಬಿದ 05 ಪ್ಯಾಕೆಟುಗಳು ಅಂದಾಜು ತೂಕ  ಸುಮಾರು 50 ಗ್ರಾಂ ಗಾಂಜಾ ಆಗಬಹುದು ಇದರ ಅಂದಾಜು ಮೌಲ್ಯ  500/- ರೂ ಆಗಬಹುದು. 4] 03 ಮೊಬೈಲ್‌ ಫೋನುಗಳು ಇವುಗಳ ಅಂದಾಜು ಮೌಲ್ಯ 5000/- ಆಗಬಹುದು 5] ಪಿಸ್ತೂಲ್‌ ಮಾದರಿಯ ಸಿಗಾರ ಲೈಟ್‌ 01 ಇದರ ಅಂದಾಜು ಮೌಲ್ಯ 200/- ರೂ ಆಗಬಹುದು. 6] ಡ್ಯಾಶ್ ಬೋರ್ಡನಲ್ಲಿದ್ದ ಮಾತ್ರೆಗಳು 7] ಆರೋಪಿ ಮಹಮ್ಮದ್‌ ಮುವಾಝ್‌ ಪ್ಯಾಂಟಿನ ಕಿಸೆಯಲ್ಲಿ ಪಿಸ್ತೂಲ್‌ ಹಾಗೂ ಎರಡು ಸಜೀವ ಗುಂಡುಗಳು ಇವುಗಳು 50,000/- ರೂ ಆಗಬಹುದು.  8] ನಗದು ರೂ 330/- , 9] ಮುಹಮ್ಮದ್ ಮುಹಾದ್‌ ಎಂಬವರ ಪಾನ್ ಕಾರ್ಡ್  ಗಳು 02, ಜಗದೀಶ್‌ ಪ್ರಸಾದ್‌ ಎಂಬವರ ಬ್ಯಾಂಕ್‌ ಆಫ್‌ ಬರೋಡ ಎಟಿಎಂ ಕಾರ್ಡ್  -01, ಕರ್ನಾಟಕ ಬ್ಯಾಂಕಿನ ಎಟಿಎಂ ಕಾರ್ಡ್-01 ಇರುತ್ತದೆ. ಹಾಗೂ ಹೊಟೇಲ್‌ ಸಾಯಿ ಸಿದ್ದಾರ್ಥ ಲಾಡ್ಜ್‌ ನ ವಿಸಿಟಿಂಗ್‌ ಕಾರ್ಡ್, 10] ಕೆಎಲ್‌ -13-ಎಪಿ-1609ನೇ ನಂಬ್ರದ ಹುಂಡೈ ಐ 20 ,ಪರ್ಪಲ್‌ ಗ್ರೇ ಬಣ್ಣದ ಕಾರು ಇದರ ಅಂದಾಜು ಮೌಲ್ಯ 5,00,000/- ರೂ ಆಗಬಹುದು ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 5,86,530 ರೂ ಆಗಬಹುದು.  ಗಾಂಜಾ   ಹಾಗೂ ಪಿಸ್ತೂಲ್‌ನ ಬಗ್ಗೆ ಆರೋಪಿಯಲ್ಲಿ ವಿಚಾರಿಸಿದಾಗ ಪರವಾನಿಗೆ ಇರುವುದಿಲ್ಲವಾಗಿ ತಿಳಿಸಿರುತ್ತಾನೆ.  ಪಂಚರ ಹಾಗೂ ಪತ್ರಾಂಕಿತ ಅಧಿಕಾರಿಯವರ ಸಮಕ್ಷಮ ಮಹಜರು ಮುಖೇನಾ  ಆರೋಪಿಯನ್ನು ಹಾಗೂ ಸೊತ್ತುಗಳನ್ನು ಸ್ವಾದೀನಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.  ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಅ.ಕ್ರ: 39/2022 ಕಲಂ: 8[C] R/W 20 [b] [ii]  B NDPS ACT 1985 ಮತ್ತು 3 ಜೊತೆಗೆ 25 ಬಾರತೀಯ ಸಶಸ್ತ್ರ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: ೦3

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಗುಲಾಬಿ  [47] ಗಂಡ: ಚಂದ್ರಶೇಖರ ಸುವರ್ಣ, ವಾಸ: ಕುಟ್ಟಿಕಳ ಮನೆ, ಕರಿಯಂಗಳ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಮೃತ ಸುಂದರ [38] ನು ವಿಪರೀತ ಅಮಲು ಪದಾರ್ಥ ಸೇವನೆ ಮಾಡುವವನಾಗಿದ್ದು,, ದಿನಾಂಕ: 20.05.2022 ರಂದುನ ಬೆಳಿಗ್ಗೆ 11.00 ಗಂಟೆಗೆ ವಿಪರೀತ ಅಮಲು ಪದಾರ್ಥ ಸೇವನೆ ಮಾಡಿ ಬಡಕಬೈಲು ಬಸ್ಸು ತಂಗುದಾಣದಲ್ಲಿ ಮಲಗಿದ್ದವನನ್ನು ಸ್ಥಳೀಯ ಯುವಕರು 108 ಆಂಬ್ಯುಲೆನ್ಸ್ ವಾಹನದಲ್ಲಿ ಕರೆದುಕೊಂಡು ಬಂದು ಮಂಗಳೂರಿನ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 21.05.2022 ರಂದು ಸಂಜೆ 5 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ  ಯು ಡಿ ಆರ್  ನಂ 29/2022 ಕಲಂ: 174 ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ರಾಘವ  ಪ್ರಾಯ:50 ವರ್ಷ  ತಂದೆ: ನಾರಾಯಣ ಆಚಾರ್ಯ  ವಾಸ:ನೇತ್ರ  ನಗರ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:22-05-2022 ರಂದು ಬೆಳಿಗ್ಗೆ 07:00 ಗಂಟೆ ಸಮಯಕ್ಕೆ ಬೆಳ್ತಂಗಡಿ ತಾಲೂಕು ಧ್ರಮಸ್ಥಳ ಗೃಆಮದ ನೇತ್ರಾವತಿ ಹಳೆ ಸೇತುವೆಯ ಬಳಿ ರಸ್ತೆ ಬದಿ ಸುಮಾರು 50 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸು ನರಳಾಡುತ್ತಿದ್ದು ಆವರ ಬಾಯಿಯಿಂದ ಘಾಟು ವಾಸನೆ ಹಾಗೂ ನೊರೆ ಬರುತ್ತಿದ್ದುದ್ದನ್ನು  ನೋಡಿದ ಪಿರ್ಯಾದಿದಾರರು ಸದ್ರಿ ವ್ಯಕ್ತಿಯನ್ನು 108 ಅಂಬುಲೆನ್ಸ್‌ ಕರೆ ಮಾಡಿ ಬರಮಾಡಿಕೊಂಡು ಅವರನ್ನು ಅಂಬುಲೆನ್ಸ್‌ ನಲ್ಲಿ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಹಿಸಿಕೊಟ್ಟಿದ್ದು ಸದ್ರಿ ವ್ಯಕ್ತಿಯು ದಾರಿ ಮದ್ಯೆ ಮೃತಪಟ್ಟಿರುತ್ತಾನೆ ಸದ್ರಿ ವ್ಯಕ್ತಿಯು ಯಾವುದೋ ಕಾರಣಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ ಯು ಡಿ ಆರ್‌ 31/2022 ಕಲಂ: 174 ಸಿಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎನ್ ಎ ಅಬೂಬಕ್ಕರ್ ಪ್ರಾಯ: 52 ವರ್ಷ ತಂದೆ: ಅಬ್ದುಲ್ ರಹಿಮಾನ್ ವಾಸ: ನೆಕ್ಕರೆ ಮನೆ,ಆಲಂಕಾರು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರಿಗೆ ದಿನಾಂಕ:22.05.2022 ರಂದು ಮದ್ಯಾಹ್ನ 02.00 ಗಂಟೆ ಸಮಯಕ್ಕೆ ಪರಿಚಯದವರು ಮೊಬೈಲ್‌ ಕರೆ ಮಾಡಿ ಕಡಬ ತಾಲೂಕು ಅಲಂಕಾರು ಗ್ರಾಮದ ಕೇಪುಳ KCDC ಗೇರು ತೋಟದಲ್ಲಿ ಮರವೊಂದಕ್ಕೆ ಅಂದಾಜು 20-22 ವರ್ಷ ಪ್ರಾಯದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವಿಷಯ ತಿಳಿಸಿದಂತೆ ಪಿರ್ಯಾದುದಾರರು ದಿನೇಶ್‌ ಎಂಬಾತನೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಅಪರಿಚಿತ ಯುವಕನೋರ್ವ ಎಲ್ಲಿಂದಲೋ ಕೂಲಿ ಕೆಲಸಕ್ಕೆ ಬಂದವನು ಯಾವುದೋ ಖಾಯಿಲೆಯಿಂದಲೋ ಅಥವಾ ಮನನೊಂದು ಬೈರಾಸ್‌ನಿಂದ ಗೇರು ಮರವೊಂದರ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹ್ಯತ್ಯೆ ಮಾಡಿಕೊಂಡಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂ;17/2022 ಕಲಂ. 174 Crpc    ಯಂತೆ ಪ್ರಕರಣ ದಾಖಲಾಗಿರುತ್ತದೆ

Last Updated: 23-05-2022 01:56 PM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080