ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನವೀನ ಕೆ.ಹೆಚ್‌, ಪ್ರಾಯ; 22 ತಂದೆ; ನಾರಾಯಣ ಕುಳಾಲು ಹೊಸಮನೆ, ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ;22.08.2022 ರಂದು ಮಧ್ಯಾಹ್ನ ಪಿರ್ಯಾಧಿ ಮತ್ತು ಚಂದ್ರಹಾಸರವರು ಹಟ್ಟಿ ಗೊಬ್ಬರವನ್ನು ಪಿಕ್ಅಪ್ ವಾಹನಕ್ಕೆ ಲೋಡು ಮಾಡಿ ಬಳಿಕ ಅದನ್ನು ಅನ್ ಲೋಡು ಮಾಡಲು ಕಲ್ಕಾಜೆ ಎಂಬಲ್ಲಿಗೆ ಪಿರ್ಯಾಧಿಯ ಬಾಬ್ತು ಹೋಂಡಾ ಆಕ್ಟಿವಾ ಸ್ಕೂಟರ್ ಕೆಎ-19-ಇಪಿ-1104ನೇಯದನ್ನು ಪಿರ್ಯಾಧಿ ಸವಾರಿ ಮಾಡುತ್ತಾ ಹಿಂಬದಿ ಸೀಟಿನಲ್ಲಿ ಚಂದ್ರಹಾಸರವರನ್ನು ಕುಳ್ಳಿರಿಸಿಕೊಂಡು ಸಾಲೆತ್ತೂರು-ವಿಟ್ಲ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬರುತ್ತಾ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಕ್ಸ್ಚೇಂಜ್ ಆಫೀಸಿನ ಬಳಿಗೆ ಮಧ್ಯಾಹ್ನ ಸುಮಾರು 1.30 ಗಂಟೆ ಸಮಯಕ್ಕೆ ತಲುಪಿದಾಗ ಪಿರ್ಯಾಧಿಯ ಎದುರಿನಿಂದ ಅಂದರೆ ವಿಟ್ಲ ಕಡೆಯಿಂದ ಬರುತ್ತಿದ್ದ ಒಂದು ಲಾರಿಯನ್ನು ಓವರ್ ಟೇಕ್ ಮಾಡುತ್ತಾ ಅಜಾಗರೂಕತೆ ಹಾಗೂ ದುಡುಕುತನದಿಂದ ರಸ್ತೆಯ ಬಲ ಬದಿಯಿಂದಾಗಿ ಕೆಎ-21-ಎಕ್ಸ್-6551ನೇ ಮೋಟಾರು ಸೈಕಲ್‌ ಸವಾರರ ಗುರುಪ್ರಸಾದ್ರರಾದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಎಡ ಬದಿಯಿಂದಾಗಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾಧಿಯ ಸ್ಕೂಟರ್ಗೆ ಅಪಘಾತಪಡಿಸಿದ ಪರಿಣಾಮ ಪಿರ್ಯಾಧಿ ಸ್ಕೂಟರ್ ಹಾಗೂ ಅಪಘಾತಪಡಿಸಿದ ಮೋಟಾರು ಸೈಕಲು ರಸ್ತೆಗೆ ಬಿದ್ದು ಪಿರ್ಯಾಧಿಯ ಹಿಂಬದಿ ಸವಾರ ಚಂದ್ರಹಾಸರವರ ತಲೆಯ ಭಾಗಕ್ಕೆ ರಕ್ತಗಾಯವಾಗಿದ್ದು ಕೂಡಲೇ ಪಿರ್ಯಾಧಿ  ಚಂದ್ರಹಾಸನನ್ನು ಉಪಚರಿಸಿ ಒಂದು ಅಂಬ್ಯುಲೆನ್ಸ್ ವಾಹನ ತರಿಸಿ ಅದರಲ್ಲಿ ಚಂದ್ರಹಾಸರವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈಧ್ಯರು ಚಂದ್ರಹಾಸರವನ್ನು ಪರಿಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 132/2022 ಕಲಂ : 279,304ಎ  ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜೈನುದ್ದೀನ್‌ ಡಿ.ಕೆ ಪ್ರಾಯ 28 ವರ್ಷ, ತಂದೆ: ಮಹಮ್ಮದ್‌ ಕೆ, ವಾಸ: ನಿಹಾಲ್‌ ಮಂಜಿಲ್‌, ಜೋಡುಕಟ್ಟೆಮನೆ, ಬನ್ನೂರು ಅಂಚೆ ಮತ್ತು ಗ್ರಾಮ, ಪುತ್ತೂರು ಎಂಬವರ ದೂರಿನಂತೆದಿನಾಂಕ 22-08-2022 ರಂದು 13:30 ಗಂಟೆಗೆ ಆರೋಪಿ ಕಾರು ಚಾಲಕ ರವಿಚಂದ್ರ ಗೌಡ.ಕೆ ಎಂಬವರು KA-21-Z-3490ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬೊಳುವಾರು ಕಾರ್ಪೊರೆಶನ್‌ ಬ್ಯಾಂಕ ಬಳಿ ರಸ್ತೆಯ ಎಡ ಬದಿ ನಿಲ್ಲಿಸಿದನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೇಲೆ ರಸ್ತೆಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಜೈನುದ್ದೀನ್‌ ಡಿ.ಕೆ ರವರು ಬನ್ನೂರು ಕಡೆಯಿಂದ ಪುತ್ತೂರು ಹೊಂಡಾ ಶೋ ರೂಂ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EC-4666ನೇ ನೋಂದಣಿ ನಂಬ್ರದ ಸ್ಕೂಟರಿಗೆ ಕಾರಿನ ಮುಂಭಾಗ ಅಪಘಾತವಾಗಿ ಪಿರ್ಯಾದುದಾರರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಬಲಕಾಲಿನ ಮೊಣಗಂಟಿಗೆ ಗುದ್ದಿದ ಹಾಗೂ ಬಲ ಕಾಲಿನ ಕೋಲು ಕಾಲಿಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ . ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  134/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಯತ್ನ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಧ್ಮನಾಭ ಗೌಡ ಪ್ರಾಯ 39 ವರ್ಷ ತಂದೆ:ಗೋಪಾಲ ಗೌಡ ವಾಸ:ಮುನ್ನಲಾಯಿ ಪದವು ಮನೆ, ಸರಪಾಡಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಸಾರಾಂಶವೆನೇಂದರೆ   ಪಿರ್ಯಾದುದಾರರು ಸರಪಾಡಿ ಗ್ರಾಮದ ಮುನ್ನಲಾಯಿಪದವು ಎಂಬಲ್ಲಿ ಸ್ವಂತ ಕಟ್ಟಡ ಹೊಂದಿದ್ದು ಅದರಲ್ಲಿ ಶ್ರೀದೇವಿ ಕೃಪಾ ಜನರಲ್ ಸ್ಟೋರ್ ನಡೆಸಿಕೊಂಡು ಬರುತ್ತಿರುವುದಾಗಿದೆ. ಪಿರ್ಯಾದುದಾರರ ಮೂಲಜಾಗದ ಪೈಕಿ 700 ಅಡಿಕೆ ಗಿಡಗಳಿದ್ದು ಅವುಗಳನ್ನು ಪಿರ್ಯಾದುದಾರರೇ ನೋಡಿಕೊಂಡಿದ್ದು ಅಲ್ಲಿ ಬೆಳೆದಿದ್ದ ಅಡಿಕೆಗಳ ಪೈಕಿ 15 ಕೆಜಿ ತೂಕದ ಸಿಪ್ಪೆ ಸಹಿತ ಅಡಿಕೆಯನ್ನು ಸುಲಿಯುವ ಬಗ್ಗೆ ಪಿರ್ಯಾದುದಾರರು ತಮ್ಮ ಅಂಗಡಿಯ ಪಕ್ಕದ ತೆರೆದ ಶಡ್ಡು ಜಾಗದಲ್ಲಿ ಇಟ್ಟಿದ್ದು ದಿನಾಂಕ:16.08.2022 ರಂದು ಮದ್ಯಾಹ್ನ 2.00 ಗಂಟೆಗೆ ಅಡಿಕೆಯನ್ನು ಸುಲಿಯುವರೇ ಹೋದಾಗ ಅಡಿಕೆ ಇರದೆ ಇದ್ದು ದಿನಾಂಕ:15.08.2022 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ: 16.08.2022 ರಂದು ಮಧ್ಯಾಹ್ನ 2.00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಅಂದಾಜು 6000/- ಮೌಲ್ಯದ 15 ಕೆಜಿ ಅಡಿಕೆಯನ್ನು ಸಿಪ್ಪೆಸಹಿತ ಕಳವು ಮಾಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ:63/2022 ಕಲಂ : 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಬು (60) ತಂದೆ:ದಿ| ಬೂದ ವಾಸ:ಕೊರಕಟ್ಟೆ ಮನೆ ಅಜ್ಜಿಬೆಟ್ಟು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ.21-08-2022 ರಂದು ರಾತ್ರಿ 09.00 ಗಂಟೆಗೆ  ಪಿರ್ಯಾದಿದಾರರಾದ ಬಾಬು ಹಾಗೂ ಮಾಲತಿಯು  ಪುತ್ತೂರು ತಾಲೂಕು 34 ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿಯ ಸಂತೆ ಕಟ್ಟೆಯ ಕಟ್ಟಡದೊಳಗೆ 09.00 ಗಂಟೆಗೆ ಊಟ ಮಾಡಿ ಮಲಗಿದ್ದು, ಈ ದಿನ ಬೆಳಿಗ್ಗೆ 09.00 ಗಂಟೆಗೆ ಎದ್ದು ನೋಡಲಾಗಿ ಪತ್ನಿ ಮಾಲತಿಯು ಏಳದೇ ಇದ್ದು ಎಬ್ಬಿಸಿದರೂ ಏಳಲಿಲ್ಲ. . ನೋಡಲಾಗಿ ಆಕೆ ಮೃತಪಟ್ಟಿದ್ದಳು. ಮಾಲತಿಗೆ ಕಳೆದ 15 ವರ್ಷಗಳಿಂದ ಬಿ.ಪಿ.ಕಾಯಿಲೆ ಇದ್ದು ಅದಕ್ಕೆ ಔಷಧಿ ಮಾಡಿಸಿದ್ದವು ಮಾಲತಿಯು ಬಿ.ಪಿ.ಕಾಯಿಲೆಯಿಂದಲೇ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 20/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-08-2022 11:24 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080