ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಟಿ.ಕೆ ಖಾಸಿಂ (37 ವರ್ಷ)ತಂದೆ: ಟಿ.ಕೆ ಮೊಹಮ್ಮದ್‌ ವಾಸ: ಬದಿಹಿತ್ಲು ಮನೆ, ತೆಕ್ಕಾರು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾಧಿದಾರರು ದಿನಾಂಕ 21.09.2022 ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಬಂದು ಬಳಿಕ ತನ್ನ ಬಾಬ್ತು ಮೋಟಾರ್‌ ಸೈಕಲ್‌ KA21L1120 ನೇದಕ್ಕೆ ಪೆಟ್ರೋಲ್‌ ತುಂಬಿಸುವ ಸಲುವಾಗಿ ತನ್ನೊಂದಿಗೆ ಕೆಲಸಕ್ಕೆ ಬರುವ ಅಬೂಬಕ್ಕರ್‌ ರವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಕಕ್ಕೆಪದವು ಪೇಟೆಗೆ ಹೋಗಿ, ಕಕ್ಕೆಪದವು ಪೆಟ್ರೋಲ್ ಪಂಪ್‌ನಲ್ಲಿ ಬೈಕ್‌ಗೆ ಪೆಟ್ರೋಲ್‌ ತುಂಬಿಸಿ ವಾಪಾಸು ಮನೆಗೆ ಕಡೆಗೆ ಹೋಗುತ್ತಿರುವಾಗ ರಾತ್ರಿ 9:15 ಗಂಟೆಯ ಸುಮಾರಿಗೆ ಬಂಟ್ವಾಳ ತಾಲೂಕು, ಉಳಿ ಗ್ರಾಮದ, ಕಕ್ಕೆಪದವು ಪೇಟೆಯಲ್ಲಿರುವ ಶ್ರೀ ಸಿದ್ದಿವಿನಾಯಕ ಸರ್ವಿಸ್‌ ಸ್ಟೇಷನ್‌ ಹತ್ತಿರ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ದ್ವಿಚಕ್ರ ವಾಹನ KA21EB6281ನೇದನ್ನು ಅದರ ಸವಾರ ಉಮೇಶ್‌ ಎಂಬಾತನು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳು ರಸ್ತೆಗೆ ಮಗುಚಿ ಬಿದ್ದಿದ್ದು, ಅಪಘಾತದಿಂದಾಗಿ  ಮೋಟಾರ್‌ ಸೈಕಲ್‌ನಲ್ಲಿದ್ದ ಪಿರ್ಯಾದಿದಾರರ ಸೊಂಟಕ್ಕೆ ತರಚಿದ ರಕ್ತಗಾಯವಾಗಿರುವುದಲ್ಲದೆ, ಸಹ ಸವಾರ ಅಬೂಬಕ್ಕರ್‌ ರವರಿಗೆ ಸೊಂಟಕ್ಕೆ ಗುದ್ದಿದ ಹಾಗೂ ತರಚಿದ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಫಿರ್ಯಾಧಿದಾರರು ತುಂಬೆ ಫಾದರ್‌ ಮುಲ್ಲರ್‌ ಅಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಅಬೂಬಕ್ಕರ್‌ ರವರು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 69/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಶಾಂತ್‌ (36) ತಂದೆ: ದಿ ಮಂಜುನಾಥ ವಾಸ: ಶಾರದ ನಿಲಯ ಪೆರುವಾಯಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:21-09-2022 ರಂದು ಪೆರುವಾಯಿ ಗ್ರಾಮದ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗುವರೆ ತನ್ನ ತಾಯಿಯ ಅಣ್ಣನ ಹೆಂಡತಿ ಅತ್ತೆ ಸೀತಾರರೊಂದಿಗೆ ಮಾಣಿಲ-ಪೆರುವಾಯಿ ಡಾಮಾರು ರಸ್ತೆಯ ಎಡ ಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಬೆಳಿಗ್ಗೆ 11.00 ಗಂಟೆಗೆ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಅಡ್ಕ ಎಂಬಲ್ಲಿಗೆ ತಲುಪಿದಾಗ ಪಿರ್ಯಾಧಿದಾರರ ಹಿಂದಿನಿಂದ ಅಂದರೆ ಮಾಣಿಲ ಕಡೆಯಿಂದ ಕೆಎ-19-ಹೆಚ್‌ಡಿ-6410ನೇ ದ್ವಿಚಕ್ರ ವಾಹನವನ್ನು ಅದರ ಸವಾರ ಗೋಪಾಲಕೃಷ್ಣ್‌ ಭಟ್‌ರವರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿಯ ಅತ್ತೆ ಸೀತಾರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸೀತಾರವರು ರಸ್ತೆಗೆ ಬಿದ್ದ ಪರಿಣಾಮ ತಲೆಯ ಹಿಂಬದಿಗೆ ಗುದ್ದಿದ ಗಾಯವಾಗಿರುತ್ತದೆ ಮತ್ತು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಸದ್ರಿ ಅಪಘಾತದ ಸಮಯ ದ್ವಿಚಕ್ರ ವಾಹನ ಸವಾರನಿಗೂ ತರಚಿದ ಗಾಯವಾಗಿರುತ್ತದೆ. ಅದೇ ರಸ್ತೆಯಲ್ಲಿ ಅಟೋ ರಿಕ್ಷಾದಲ್ಲಿ ಹೋಗುತ್ತಿದ್ದ ಸೀತಾರವರ ಮಗ ಸುರೇಶ್ ಗಾಯಾಳುವನ್ನು ಅದೇ ರಿಕ್ಷಾದಲ್ಲಿ ಪೆರುವಾಯಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದೈರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಜ್ಯೋತಿ ಕೆ. ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರಿಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 149/2022  ಕಲಂ: 279,337 ಬಾಧಂಸಂ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ದಿನಾಂಕ: 22.09.2022 ರಂದು ಸಮಯ ಸುಮಾರು 11:30 ಗಂಟೆಗೆ ದಿಲೀಪ್ ಜಿ. ಆರ್., ಪೊಲೀಸ್ ಉಪನಿರೀಕ್ಷಕರು, ಸುಳ್ಯ ಪೊಲೀಸ್ ಠಾಣೆ ರವರು ಠಾಣಾ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದ್ಲಲಿ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಬಸ್ ನಿಲ್ದಾಣದ ಬಳಿ ಯುವಕನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಹೀನಾಯವಾಗಿ ಮಾತನಾಡುತ್ತಾ ಅನುಚಿತವಾಗಿ ತೊಂದರೆ ನೀಡುತ್ತಿರುವುದನ್ನು ಪಿರ್ಯಾದಿದಾರರು ಕಂಡು ಆತನ ಬಳಿ ಹೋಗಿ ವಿಚಾರಿಸಲಾಗಿ ಆತನ ವರ್ತನೆಯಿಂದ ಆತನು ಮಾದಕ ದ್ರವ್ಯ ಗಾಂಜಾ ಸೇವನೆ ಮಾಡಿರುವ ಬಗ್ಗೆ ಸಂಶಯಗೊಂಡು ಆತನನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಗ್ಲಾನ್ಸಿ ಕುಮಾರ್ ಡಿ. ಪ್ರಾಯ: 23 ವರ್ಷ, ತಂದೆ: ಡೇವಿಡ್ ಚಂದ್ರ ಟಿ. ಎಸ್, ನಾಗೇಗೌಡ ಎಕ್ಸ್ಟೆನ್ಸನ್, ಬೇತಲ್ ಚರ್ಚ್, ಮುಳ್ಳುಸೋಗೆ ಹತ್ತಿರ, ಕುಶಾಲನಗರ, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ ಎಂಬುದಾಗಿ ತಿಳಿಸಿದ್ದು, ನಂತರ ಆತನನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಕೆವಿಜಿ ಮೆಡಿಕಲ್ ಕಾಲೇಜು ಸುಳ್ಯ ವೈದ್ಯಾಧಿಕಾರಿಯವರ ಮುಂದೆ ಹಾಜರು ಪಡಿಸಿದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಸದ್ರಿ ವ್ಯಕ್ತಿಯು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ದೃಢಪತ್ರವನ್ನು ನೀಡಿರುತ್ತಾರೆ. ಆದುದರಿಂದ ಸದ್ರಿ ಆರೋಪಿತನು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅನುಚಿತವಾಗಿ ವರ್ತಿಸಿರುವ ಮೇರೆಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 105/2022 ಕಲಂ: 27 NDPS Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಭವಾನಿ ಪ್ರಾಯ 58 ವರ್ಷ ಗಂಡ ಜನಾರ್ಧನ ಬೆಳ್ಚಾಡ ಶಾಂತಿಗುರಿ ಮನೆ ಇರಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 22.09.2022 ರಂದು ಮಧ್ಯಾಹ್ನ 2.00 ಗಂಟೆಯ ಸಮಯಕ್ಕೆ  ಪಿರ್ಯಾದುದಾರರ ಮಗ ಅಶ್ವಿತ್‌ ವಿಪರೀತ ಕುಡಿದು ಬಂದು  ಸೊಸೆ ಮತ್ತು ಮಗ ನಿಗೆ ತೊಂದರೆ ಕೊಡುತ್ತಿದ್ದು  ಪಿರ್ಯಾದುದಾರರ ಸೊಸೆ ತೊಂದರೆ ತಡೆಯಲಾರದೇ ನೆರೆ ಮನೆಗೆ ಹೋಗಿದ್ದು  ಆ ಸಮಯ ಪಿರ್ಯಾದುದಾರರ ಮಗ ಅಶ್ವಿತ್‌ ಎದುರಿನ ಬಾಗಿಲಿನ ಒಳಗಡೆಯಿಂದ ಚಿಲಕ ಹಾಕಿ ಫ್ಯಾನಿಗೆ ನೇಣು ಬಿಗಿದು ನೇತಾಡಿಕೊಂಡಿರುವುದಾಗಿ ಪಿರ್ಯಾದುದಾರರ ಗಂಡ ತಂಗಿ ತಿಳಿಸಿದ್ದು ಕೂಡಲೇ ಹೋಗಿ ನೋಡಲಾಗಿ ಮನೆಯ ಹಾಲ್‌ ನಲ್ಲಿ  ಸೀಲಿಂಗ್‌ ‍ಪ್ಯಾನ್‌ ಗೆ  ಸೀರೆಯಿಂದ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್‌ ನಂ 48-2022 ಕಲಂ 174 ಸಿ ಆರ್‌ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-09-2022 10:11 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080