ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 6

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್‌ ರಫೀಕ್‌,  ಪ್ರಾಯ 50 ವರ್ಷ, ತಂದೆ: ಅಬೂಬಕ್ಕರ್‌ ಮುಸ್ಲಿಯಾರ್‌,  ವಾಸ: ಚಿಂಗಾಣಿಬೆಟ್ಟು ಮನೆ, ತೆಕ್ಕಾರು ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 20-10-2022 ರಂದು 18:00 ಗಂಟೆಗೆ ಆರೋಪಿ ಗ್ರೆಡರ್‌ ವಾಹನ ಚಾಲಕ   ಇರ್ಫಾನ್‌   ಎಂಬವರು  KA-70-M-3052 ನೇ ನೋಂದಣಿ ನಂಬ್ರದ ವಾಹನವನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಒಮ್ಮಲೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ತಮ್ಮ ಅಬ್ದುಲ್‌ ಲತೀಫ್‌ ರವರು ಸವಾರರಾಗಿ ಗೋಳಿತೊಟ್ಟು ಕಡೆಯಿಂದ  ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Q-1738 ನೇ  ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಅಪಘಾತವಾಗಿ, ಅಬ್ದುಲ್‌ ಲತೀಫ್‌ ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಎದೆಯ ಭಾಗಕ್ಕೆ, ಸೊಂಟಕ್ಕೆ ಗುದ್ದಿದ ಹಾಗೂ ರಕ್ತಗಾಯಗೊಂಡವರನ್ನು ಉಪ್ಪಿನಂಗಡಿ ಸೂರ್ಯಂಬೈಲು ಕ್ಲಿನಿಕ್‌ನಲ್ಲಿ  ಪ್ರಥಮ ಚಿಕಿತ್ಸೆ ಬಳಿಕ ಪಿರ್ಯಾದುದಾರರು ಮನೆಗೆ ಕರೆದುಕೊಂಡು ಹೋಗಿದ್ದು, ನಂತರ ರಾತ್ರಿ ಎದೆನೋವು ಕಾಣಿಸಿಕೊಂಡ ಕಾರಣ  ದಿನಾಂಕ 21-10-2022 ರಂದು ಬೆಳಿಗ್ಗೆ ಮಂಗಳೂರಿನ ಅಥೆನಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಗಾಯಾಳುವಿಗೆ ಸಣ್ಣಪುಟ್ಟ ಗಾಯಗಳಾಗಿರುವುದರಿಂದ ದೂರು ದಾಖಲಿಸದೇ ಇದ್ದು, ಹೆಚ್ಚಿನ ಚಿಕಿತ್ಸೆ ಇರುವುದರಿಂದ ಮತ್ತು ಪಿರ್ಯಾದುದಾರರು ಗಾಯಾಳುವಿನ ಆರೈಕೆಯಲ್ಲಿದ್ದು.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 160/2022 ಕಲಂ: 279, 337  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಲ್ಲರ್ಪೆ ಅಬ್ದುಲ್ಲಾ ,ಪ್ರಾಯ:58 ವರ್ಷ, ತಂದೆ:ಅಬ್ದುಲ್‌ ರಹೀಮಾನ್ ವಾಸ:ಸಂಪ್ಯ ಮನೆ, ಆರ್ಯಾಪು ಗ್ರಾಮ & ಅಂಚೆ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 22-10-2022 ರಂದು 14-45 ಗಂಟೆಗೆ ಆರೋಪಿ ಕಾರು ಚಾಲಕ ಗಿರಿಧರ ಎಂಬವರು ನೋಂದಣಿಯಾಗದ ಹೊಸ ಕಾರನ್ನು  ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ಕಡೆಯಿಂದ ಮಾಣಿ ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಜಂಕ್ಷನ್‌ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಗೋಳಿಕಟ್ಟೆ ಕಡೆಯಿಂದ ಸಂಪ್ಯ ಕಡೆಗೆ ಹೋಗಲು ಚಲಾಯಿಸಿಕೊಂಡು ಹೋಗಿ ಹೆದ್ದಾರಿ ದಾಟಲು ನಿಲ್ಲಿಸಿದ್ದ KA-19-ED-0457 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಕಾರು ಅಪಘಾತವಾಗಿ ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಬಲಕೈಯ ಭುಜ, ಬಲಕಾಲಿನ ಕೋಲು ಕಾಲಿಗೆ, ಸೊಂಟಕ್ಕೆ ಗುದ್ದಿದ ಗಾಯವಾಗಿ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 161/2022 ಕಲಂ: 279, 337  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಜೇಶ್ ಕುಮಾರ್.ಡಿ ಪ್ರಾಯ:45 ವರ್ಷ ತಂದೆ: ಪದ್ಮನಾಭ ಭಂಡಾರಿ ವಾಸ: ಕೊಲ್ಯ ಕಣ್ಣೀರು ತೋಟ ಮನೆ, ಸೋಮೇಶ್ವರ ಗ್ರಾಮ, ಮಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ಮಂಗಳೂರು ದೂರದರ್ಶನ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಸಮಯ ಫೋನ್ ಕರೆ ಮಾಡಿ ಪಿರ್ಯಾದಿದಾರರ ಮಕ್ಕಳಾದ ಅಕ್ಷಾಜಿ(12) ಮತ್ತು ಅದ್ವಿಕ್ (9) ರವರು KA-19-C-2663 ಆಟೋರಿಕ್ಷಾದಲ್ಲಿ ಪ್ರಯಾಣಿಸಿಕೊಂಡು ಹೋಗುತ್ತಿರುವ ಸಮಯ ಸುಮಾರು 15:15 ಗಂಟೆಗೆ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ನಲ್ಕೆಮಾರು ಎಂಬಲ್ಲಿ ಆಟೋರಿಕ್ಷಾ ಚಾಲಕ ವಲೇರಿಯನ್ ವಾಸ್ ರವರು ಆಟೋರಿಕ್ಷಾವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಆಟೋರಿಕ್ಷಾದಲ್ಲಿದ್ದಅಕ್ಷಾಜಿ(12) ರವರ ಎಡಭಾಗ ಕಣ್ಣಿನ ಬಳಿ ಗುದ್ದಿದ ಗಾಯ, ಎಡಭಾಗ ಕೆನ್ನೆಯ ಬಳಿ ತರಚಿದ ಗಾಯವಾಗಿದ್ದು, ಅದ್ವಿಕ್(9) ರವರ ಬಲಭಾಗ ಮೊಣ ಕೈಗೆ ಗುದ್ದಿದ ಗಾಯ, ಬಲಭಾಗ ಮೊಣಕಾಳು ಪಾದಕ್ಕೆ ಗುದ್ದಿದ ಹಾಗೂ ತರಚಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಅ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 123/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್ ಹಾರೀಸ್ ಪ್ರಾಯ: 43 ವರ್ಷತಂದೆ: ದಿ|| ಟಿ.ಸಿ. ಹುಸೈನ್ ವಾಸ: ನಂದಾವರ ಕೋಟೆ ಮನೆ, ಸಜಿಪ ಮುನ್ನೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 21-10-2022 ರಂದು ಬಂಟ್ವಾಳ ತಾಲೂಕು, ಬಿ-ಮೂಡ ಗ್ರಾಮದ, ನಾರಾಯಣ ಗುರು ವೃತ್ತದ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಸುಮಾರು 19:25 ಗಂಟೆಗೆ ಪಾಣೆಮಂಗಳೂರು ಕಡೆಯಿಂದ KA-70-E-2516 ನೇ ಸ್ಕೂಟರ್ ನ್ನು ಅದರ ಸವಾರ ಬೆಳ್ತಂಗಡಿ ಕಡೆಗೆ ಹೋಗಲು ನಿಧಾನಿಸಿದಾಗ ಮೆಲ್ಕಾರ್ ಕಡೆಯಿಂದ KA-19-EZ-2376 ನೇ ಸ್ಕೂಟರ್ ನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಪರಿಣಾಮ ಎರಡೂ ಸ್ಕೂಟರ್ ಸವಾರರು ಸ್ಕೂಟರ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಮೊಹಮ್ಮದ್ ಸಿದ್ದೀಕ್ ರವರ ಎಡ ಭಾಗ ಭುಜಕ್ಕೆ ಗುದ್ದಿದ ಹಾಗೂ ತರಚಿದ ಗಾಯ ಮತ್ತು ಅವರ ಮಗ ಮೊಹಮ್ಮದ್ ಸಾಹೀಲ್ ರವರಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು ಗಾಯಗೊಂಡವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಅಪಘಾತದಲ್ಲಿ ಮೊಹಮ್ಮದ್ ಸಿದ್ದೀಕ್ ರವರ ಪತ್ನಿ ನಿಶಾನಾ ರವರಿಗೆ ಹಾಗೂ ಅಪಘಾತ ಪಡಿಸಿದ ಸ್ಕೂಟರ್ ಸವಾರನಿಗೆ ಯಾವುದೇ ಗಾಯ ನೋವುಗಳಾಗಿರುವುದಿಲ್ಲ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 124/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಬಶೀರ್  ಪ್ರಾಯ: 40 ವರ್ಷ ತಂದೆ: ದಿ|| ಬಿ ಇಸ್ಮಾಯಿಲ್ ವಾಸ: #6-124 ಕೋರ್ಟ್ ರೋಡ್ ಸಂಜಯನಗರ ಮನೆ ಬೆಳ್ತಂಗಡಿ ಕಸಬಾ ಗ್ರಾಮಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ತನ್ನ ಬಾಬ್ತು KA-70-0019 ನೇ ಕಾರಿನಲ್ಲಿ ಚಾಲಕನಾಗಿ ಬಾಡಿಗೆ ನಿಮಿತ್ತ ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಾ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಕಾರಿಂಜ ಕ್ರಾಸ್ ಎಂಬಲ್ಲಿಗೆ ತಲುಪುತ್ತಿದಂತೆ ಸಮಯ ಸುಮಾರು ಸಂಜೆ 4:46 ಗಂಟೆಗೆ ಬಿ ಸಿ ರೋಡು ಕಡೆಯಿಂದ KA-19-MD-6399 ನೇ ಓಮ್ನಿ ಕಾರೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಓಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಶಮೀರ್ ರವರಿಗೆ ಕೈ ಕಾಲುಗಳಿಗೆ ಹಾಗೂ ಮುಖಕ್ಕೆ ಗುದ್ದಿದ ಹಾಗೂ ತರಚಿದ ಗಾಯವಾಗಿವುದಲ್ಲದೆ ಓಮ್ನಿ ಕಾರು ಚಾಲಕ ಮೊಹಮ್ಮದ್ ಅಶ್ರಫ್ ರವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಮೊಹಮ್ಮದ್ ಶಮೀರ್ ರವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 125/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲಕ್ಷ್ಮಣ ಗೌಡ.ಎಂ, 60 ವರ್ಷ, ತಂದೆ: ನಾಗಪ್ಪ ಗೌಡ, ವಾಸ: ಮೊಗರಂಜ ಮನೆ, ಕಾಣಿಯೂರು ಗ್ರಾಮ, ಕಡಬ ಎಂಬವರ ದೂರಿನಂತೆ ದಿನಾಂಕ 21-10-2022 ರಂದು ಸಂಜೆ ಸುಳ್ಯ ದಿಂದ ಮೋಟಾರು ಸೈಕಲ್ ನಂ KA21EC-3142ನೇಯದ್ದರಲ್ಲಿ ಕಾಣಿಯೂರು ಗ್ರಾಮದ ಮೊಗರಂಜ ಮನೆಗೆ ಬರುತ್ತಿದ್ದ ರಕ್ಷಿತ್ ಎಂ.ಎಲ್ ಎಂಬವರು ನಿಂತಿಕಲ್ಲು-ಕಾಣಿಯೂರು ರಸ್ತೆಯಲ್ಲಿ ಕಾಣಿಯೂರು ಕಡೆಗೆ ಹೋಗುತ್ತಾ ಕಡಬ ತಾಲೂಕು ಕಾಣಿಯೂರು ಗ್ರಾಮದ ಏಲಡ್ಕ ಎಂಬಲ್ಲಿಗೆ ತಲಪಿದಾಗ ಸಂಜೆ 18-30 ಗಂಟೆಗೆ ರಸ್ತೆಯಲ್ಲಿ ನಾಯಿಯೊಂದು ಬಂದಾಗ ನಿರ್ಲಕ್ಷ್ಯತನದಿಂದ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದು ಸವಾರ ರಕ್ಷಿತ್.ಎಂ.ಎಲ್ ಗೆ ಎಡ ಕಣ್ಣಿನ ಮೇಲ್ಭಾಗ ಹುಬ್ಬಿನ ಬಳಿ ಗುದ್ದಿದ ಹಾಗೂ ತರಚಿದ ಗಂಭೀರ ಗಾಯ, ಎಡ ಕೈಯ ತೋಳಿನಲ್ಲಿ ತರಚಿದ ರಕ್ತಗಾಯ, ಎಡ ಕಾಲಿನ ಮೊಣಗಂಟಿನಲ್ಲಿ ತರಚಿದ ಗಾಯ ಉಂಟಾಗಿದ್ದು, ಗಾಯಾಳುವನ್ನು ಸ್ಥಳೀಯರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಕಾಣಿಯೂರುನಲ್ಲಿರುವ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ರಕ್ಷಿತ್. ಎಂ.ಎಲ್ ರವರನ್ನು ಪರೀಕ್ಷಿಸಿ ಹುಬ್ಬಿನ ಬಳಿ ಉಂಟಾದ ಗುದ್ದಿದ ಗಂಭೀರ ಗಾಯದ ಪರಿಣಾಮ ಗಾಯಾಳು ರಕ್ಷಿತ್. ಎಂ.ಎಲ್ ಪ್ರಜ್ಞಾ ಹೀನನಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಅಪಘಾತದ ವಿಚಾರ ತಿಳಿದು ಕಾಣಿಯೂರು ಆಸ್ಪತ್ರೆಗೆ ಬಂದ ಅವರ ತಂದೆ ಈ ಪ್ರಕರಣದ ಪಿರ್ಯಾದುದಾರರಾದ ಲಕ್ಷ್ಮಣ ಗೌಡರವರು ಗಾಯಾಳುವನ್ನು ಅಂಬುಲೆನ್ಸ್ ವಾಹನದಲ್ಲಿ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಅದೇ ಅಂಬುಲೆನ್ಸ್ ವಾಹನದಲ್ಲಿ ಗಾಯಾಳುವನ್ನು ಮಂಗಳೂರಿನ ಫಸ್ಟ್ ನ್ಯುರೋ ಆಸ್ಪತ್ರೆಗೆ ಕರೆದಕೊಂಡು ಹೋದಾಗ ಅಲ್ಲಿನ ವೈದ್ಯರು ಗಾಯಾಳುವನ್ನು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. C,PÀæ, 84/2022 ಕಲಂ 279.338. ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚರಣ್ ಕುಮಾರ್ ಆರ್ (25) ತಂದೆ: ರಮೇಶ ಕುಲಾಲ್ ವಾಸ: ಶಿವಕೃಪಾ ನಿಲಯ ಏರಮಲೆ ಅಂತರ ಮನೆ, ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ  21.10.2022  ರಂದು ಸರ್ವಿಸ್ ಸೆಂಟರ್ ನಲ್ಲಿ ಕೆಲಸಮಾಡಿಕೊಂಡಿದ್ದಾಗ ಕರೆಮಾಡಿದ ವ್ಯಕ್ತಿ ಕೆಎ 70 ಹೆಚ್ 8170 ನಂಬ್ರದ ಮೋಟಾರು ಸೈಕಲ್‌ ರಿಪೇರಿಯಾಗಿದೆಯೇ ಎಂದು ವಿಚಾರಿಸಿದಾಗ ಪಿರ್ಯಾದಿದಾರರು ವಾಹನದ ಬಿಡಿ ಭಾಗಗಳು ಬರಲು ಬಾಕಿ ಇದೆ ಈ ತಿಂಗಳ ಅಂತ್ಯದೊಳಗೆ ರೆಡಿ ಮಾಡಿಕೊಡುತ್ತೇವೆ ಎಂದು ಹೇಳಿದಾಗ, ಕರೆ ಮಾಡಿದ ವ್ಯಕ್ತಿಯು ಅವ್ಯಾಚ ಶಬ್ದಗಳಿಂದ ಬೈದು ನಾನು  ಈಗಲೇ ಬರುತ್ತೇನೆಂದು ಕರೆಕಟ್‌ ಮಾಡಿರುತ್ತಾನೆ. ಆದಾದ ಬಳಿಕ ಪಿರ್ಯಾದಿದಾರರು ಸರ್ವಿಸ್ಸೆಂಟರ್ನಲ್ಲಿ ಕೆಲಸಮಾಡಿಕೊಂಡಿರುವಾಗ ಸಂಜೆ 6 ಗಂಟೆ 6 ನಿಮಿಷಕ್ಕೆ ಸರ್ವಿಸ್‌ ಸೆಂಟರ್‌ ಗೆ ಬಂದ ಮೊಹಮ್ಮದ್ ಮುಸ್ತಾಫ, ಮೊಹಮ್ಮದ್ ಅನ್ಸಾರ್, ಹಾಸಿಂ ರವರು ಪಿರ್ಯಾದಿದಾರರಲ್ಲಿ ಪೋನ್‌ ಕರೆಯಲ್ಲಿ ಮಾತಾನಾಡಿದವರು ಯಾರು ಎಂದಾಗ ಪಿರ್ಯಾದಿದಾರರು ನಾನೇ ಎಂದು ಉತ್ತರಿಸಿದಾಗ ಆರೋಪಿಗಳು ಸೇರಿ ಚರಣ್‌ ರವರಿಗೆ ಹಲ್ಲೆ ನಡೆಸಿದ್ದು  ಸರ್ವಿಸ್‌ ಸೆಂಟರ್‌ ನಲ್ಲಿದ್ದ ಪ್ರಕಾಶ್, ಸಂದೀಪ್,  ಆಶಿಶ್,ರಿತೇಶ್ ರವರು ಆರೋಪಿಗಳನ್ನು ತಡೆದು ಹೆಚ್ಚಿನ ಹಲ್ಲೆಯಾಗುವುದನ್ನು ತಡೆದಿದ್ದು, ಆ ಸಮಯ ಆರೋಪಿಗಳು ನಿನ್ನನ್ನು ಮುಂದಕ್ಕೆ ನೋಡಿಕೊಳ್ಳುತ್ತೇವೆಂದು ಬೆದರಿಕೆಹಾಕಿ ಸ್ವಿಫ್ಟ್ ಕಾರಿನಲ್ಲಿ ಹೋಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ:98/2022 ಕಲಂ: 504, 323, 324, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 22-10-2022 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 376, 506 ಐಪಿಸಿ  6,  ಪೊಕ್ಸೋ ಕಾಯ್ದೆ 2012,ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲತೀಶ್‌.ಬಿ. ಸಿ. ಪ್ರಾಯ(42)ತಂದೆ: ಬಿ.ಕೆ ಚಂದ್ರಹಾಸವಾಸ:  ಬಂಡಿತ್ತಡ್ಕ ಮನೆ, ಕನ್ಯಾನ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ಸಹೋದರ  ಯೋಗೀಶ್‌  ಪ್ರಾಯ (35) ವರ್ಷ ಎಂಬವರು ತನ್ನ ತಂದೆಯ ಆರೋಗ್ಯದ ಬಗ್ಗೆ  ಚಿಂತಿಸಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವರು ಮನೆಯಲ್ಲಿ ಒಬ್ಬನೇ ಇರುತ್ತಿದ್ದು ಯಾರಲ್ಲೂ ಮಾತಡುತ್ತಾ ಇರದವರು, ದಿನಾಂಕ:22.10.2022  ರಂದು ಬೆಳಿಗ್ಗೆ 08.00  ಗಂಟೆಯಿಂದ 08.45 ಗಂಟೆಯ ಮಧ್ಯದ ಅವದಿಯಲ್ಲಿ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಬಂಡಿತಡ್ಕ ಭಜನಾ ಮಂದಿದರ ಹಿಂಬದಿಯ ಗುಡ್ಡದಲ್ಲಿ  ಯೋಗೀಶ್‌  ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 42/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-10-2022 09:46 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080