ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 01

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಇಸುಬು (65), ತಂದೆ: ಹಾಮದ್‌ ಬ್ಯಾರಿ, ಮಜೂರು ಮನೆ, ಪಡಂಗಡಿ ಗ್ರಾಮ, ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ   ದಿನಾಂಕ: 22-11-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು ಕೆಎ 70H6947 ನೇ ದ್ವಿಚಕ್ರ ವಾಹನದಲ್ಲಿ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 10.30 ಗಂಟೆಗೆ ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಮಸೀದಿಯ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಕೆಎ 05 HS 9826 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸಮೇತಾ ರಸ್ತೆಗೆ ಬಿದ್ದು ಅವರಿಗೆ ಸೊಂಟಕ್ಕೆ, ಎಡಕಾಲಿನ ತೊಡೆಗೆ ಗುದ್ದಿದ ಗಾಯವಾಗಿರುತ್ತದೆ, ಗಾಯಾಳು ಮಂಗಳೂರು ಪಾಧರ್‌ಮುಲ್ಲಾರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 144/2022 ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕೊಲೆ ಪ್ರಕರಣ: 01

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ: ಸಂತೋಷ್ ಕೆ. ಪ್ರಾಯ: 28 ವರ್ಷ, ತಂದೆ: ಚಿದಾನಂದ ಕೆ. ಕುಂಭಕೋಡು ಮನೆ, ಕೋಲ್ಚಾರ್ ಅಂಚೆ, ಆಲೆಟ್ಟಿ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ   ಪಿರ್ಯಾದಿದಾರರು ಬಾಬ್ತು ಸುಳ್ಯದ ಓಡಬಾಯಿ ಎಂಬಲ್ಲಿ ಲಿಕ್ವಿಡ್ ಕಾಂಟಿನೆಂಟ್ ಎಂಬ ಬಾರ್ ನ್ನು ನಡೆಸಿಕೊಂಡು ಬರುತ್ತಿದ್ದು, ಕಳೆದ 8 ತಿಂಗಳಿನಿಂದ ಇಮ್ರಾನ್ ಶೇಕ್ ಎಂಬಾತನು ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದು, ಆತನು ಸುಳ್ಯದ ಬೀರಮಂಗಲ ಎಂಬಲ್ಲಿ ಗುತ್ತಿಗಾರಿನ ಶಿವರಾಮ ಶಾಸ್ತ್ರಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆತನು ಬಂದ ಸಮಯ ಸುಮಾರು 15 ದಿನ ಪಿರ್ಯಾದಿದಾರರ ಬಾರ್‌ ನಲ್ಲಿ ಕೆಲಸ ಮಾಡಿ ಬಳಿಕ ತನ್ನ ಊರಾದ ಪಶ್ಚಿಮ ಬಂಗಾಳಕ್ಕೆ ಹೋಗಿ ಮದುವೆಯಾಗಿ ತನ್ನ ಹೆಂಡತಿಯೊಂದಿಗೆ ಬಂದವನು ಪಿರ್ಯಾದಿದಾರರ ಬಾಬ್ತು ಬಾರ್ ರೂಮಿನಲ್ಲಿ ಹೆಂಡತಿ ಜೊತೆ 15 ದಿವಸ ಇದ್ದು,  ಆತನ ಹೆಂಡತಿ ಅಂಗವಿಕಲೆಯಾಗಿದ್ದು ಊರುಗೋಲಿನ ಸಹಾಯದಲ್ಲಿ ನಡೆದಾಡುತ್ತಿದ್ದು, ಬಳಿಕ ಇಮ್ರಾನ್ ಶೇಕ್ ನು ಹೆಂಡತಿ ಜೊತೆ ಸುಳ್ಯ ಬೀರಮಂಗಲದಲ್ಲಿ ಗುತ್ತಿಗಾರಿನ ಶಿವರಾಮ ಶಾಸ್ತ್ರಿಯವರ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಲ್ಲಿಂದಲೇ ಪಿರ್ಯಾದಿದಾರರ ಬಾರ್‌ ಗೆ ಕೆಲಸಕ್ಕೆ ಬಂದು ಹೋಗಿ ಮಾಡುತ್ತಿದ್ದು. ಕಳೆದ 1 ತಿಂಗಳ ಹಿಂದೆ ಪಿರ್ಯಾದಿದಾರರಲ್ಲಿ ಇಮ್ರಾನ್ ಶೇಕ್ ನು  ತನ್ನ ಪತ್ನಿ ಗರ್ಭೀಣಿಯಾಗಿದ್ದು ಆಕೆಗೆ ಯಾರೂ ಇಲ್ಲದೇ ಇರುವುದರಿಂದ ತನ್ನ ಊರಿನ ಮನೆಯಲ್ಲಿ ಬಿಟ್ಟು ವಾಪಾಸು ಕೆಲಸಕ್ಕೆ ಬರುವುದಾಗಿ ಹೇಳಿ ದಿನಾಂಕ 19.11.2022 ರಂದು ಸಂಬಳವನ್ನು ಪಡೆದು ಹೋಗಿರುತ್ತಾನೆ. ಸದ್ರಿ ಇಮ್ರಾನ್ ಶೇಕ್‌ನನ್ನು ಹೆಚ್ಚಾಗಿ ಪಿರ್ಯಾದಿದಾರರ ಬಾರ್‌ ನಲ್ಲಿ ವೈಟರ್ ಆಗಿ ಕೆಲಸ ಮಾಡುವ ಸುಳ್ಯ ಬೆಟ್ಟಂಪಾಡಿಯ ನಿವಾಸಿ ಕೀರ್ತನ್ ಶೆಟ್ಟಿ ಎಂಬವರು ಅವರ ಬೈಕಿನಲ್ಲಿ ರಾತ್ರಿ ಬಾಡಿಗೆ ಮನೆಗೆ ಬಿಡುತ್ತಿದ್ದುದಾಗಿದೆ.  ದಿನಾಂಕ 21.11.2022 ರಂದು ಕೀರ್ತನ್ ಶೆಟ್ಟಿಯವರು ಪಿರ್ಯಾದಿದಾರರಲ್ಲಿ ಇಮ್ರಾನ್ ಶೇಕ್ ನ ಬಾಡಿಗೆ ಮನೆಯ ಪಕ್ಕದ ಬಾಡಿಗೆ ಮನೆಯಲ್ಲಿ ವಾಸವಿರುವ ರೋಹಿತ್‌ರವರು  ಇಮ್ರಾನ್‌ನ ಮನೆಯಿಂದ ದಿನಾಂಕ 20.11.2022 ರಂದು ರಾತ್ರಿ 7.30 ಗಂಟೆಗೆ ಜೋರಾಗಿ ಹೆಂಗಸು ಕಿರುಚಿದ ಶಬ್ದ ಕೇಳಿಸಿದ್ದು, ಅವರ ಮನೆಗೆ ಹೋದ ರೋಹಿತ್‌ರವರು ಬಾಗಿಲು ತಟ್ಟಿದಾಗ ಅಲ್ಲಿದ್ದ ಇಮ್ರಾನ್ ಶೇಕ್‌ರವರು ಹೆಂಡತಿಯು ಶೌಚಾಲಯದಲ್ಲಿ ಬಿದ್ದರು ಎಂದು ಹೇಳಿರುವುದಾಗಿ ಕೀರ್ತನ್‌ರವರಿಗೆ ರೋಹಿತ್‌ರವರು ಹೇಳಿದ್ದನ್ನು ಪಿರ್ಯಾದಿದಾರರಲ್ಲಿ ತಿಳಿಸಿದ್ದು ಅಂತೆಯೇ ಪಿರ್ಯಾದಿದಾರರು ಇಮ್ರಾನ್ ಗೆ ಕರೆ ಮಾಡಿದಾಗ ಸ್ವಿಚ್ ಅಫ್ ಬರುತ್ತಿತ್ತು.  ಇದರಿಂದ ಸಂಶಯ ಪಿರ್ಯಾದಿದಾರರು ಕೀರ್ತನ್ ಜೊತೆ ಸಂಜೆ 4:00 ಗಂಟೆ ಸುಮಾರಿಗೆ ಬೀರಮಂಗಲದ ಇಮ್ರಾನ್ ಶೇಕ್ ನ ಬಾಡಿಗೆ ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿಕೊಂಡಿದ್ದು, ಕಿಟಕಿ ತೆರೆದಿದ್ದು, ಒಳಗಡೆ ವಿದ್ಯುತ್ ದೀಪ ಉರಿಯುತ್ತಿತ್ತು, ಕಿಟಕಿಯಲ್ಲಿ ನೋಡಿದಾಗ ಮೊಬೈಲ್ ಫೋನ್ ಟೇಬಲ್‌ನ ಮೇಲಿದ್ದು ಹಾಗು ಶೌಚಾಲಯದಲ್ಲಿ  ಲೈಟ್ ಹಾಕಿದ್ದು, ಅದರೊಳಗಿಂದ ಪ್ಲಾಸ್ಟಿಕ್ ಗೋಣಿ ಚೀಲ ಕಟ್ಟಿ ಇಟ್ಟದ್ದು ಕಂಡು ಬಂದಿದ್ದು, ಅದನ್ನು ನೋಡಿದಾಗ ಸಂಶಯ ಬಂದು ಪಿರ್ಯಾದಿದಾರರು ರೋಹಿತ್‌ರಲ್ಲಿ ವಿಚಾರಿಸಿದಾಗ ದಿನಾಂಕ 20.11.2022 ರಂದು ರಾತ್ರಿ 8.30 ಗಂಟೆ ಸಮಯಕ್ಕೆ ಇಮ್ರಾನ್ ಶೇಕ್ ಮಾತ್ರ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಹೋಗಿರುವುದನ್ನು ನೋಡಿರುತ್ತೇನೆ ಆತನ ಜೊತೆ ಆತನ ಹೆಂಡತಿ ಹೋಗಿರುವುದಿಲ್ಲ ಎಂದು ತಿಳಿಸಿದ್ದರಿಂದ ಪಿರ್ಯಾದಿದಾರರಿಗೆ ಇಮ್ರಾನ್ ಶೇಕ್ ಆತನ ಪತ್ನಿಗೆ ಹಲ್ಲೆ ನಡೆಸಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಮನೆಗೆ ಬೀಗ ಹಾಕಿ ಹೋಗಿರುವ ಬಗ್ಗೆ ಬಲವಾದ ಸಂಶಯ ಬಂದಿರುವುದರಿಂದ ಪಿರ್ಯಾದಿದಾರರು  ಸುಳ್ಯ ಪೊಲೀಸ್ ಠಾಣೆಗೆ ಬಂದು ಠಾಣೆಯಲ್ಲಿ ಪಿಎಸ್ಐರವರಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದು, ಅದರಂತೆ ಪಿಎಸ್ಐರವರು ಸದ್ರಿ ಇಮ್ರಾನ್ ಶೇಕ್ ನ ಬಾಡಿಗೆ ಮನೆಗೆ ಹೋಗಿ ಪರಿಶೀಲಿಸಿ ಪಂಚರನ್ನು ಬರಮಾಡಿಕೊಂಡು ಅವರ ಸಮಕ್ಷಮದಲ್ಲಿ ಮಹಜರು ಮಾಡಿ ಮುಚ್ಚಿದ ಬಾಗಿಲನ್ನು ತೆರೆದು ಒಳಗೆ ಹೋಗಿ ಶೌಚಾಲಯದಲ್ಲಿ ಕಟ್ಟಿ ಇಟ್ಟಿದ್ದ  ಪ್ಲಾಸ್ಟಿಕ್ ಗೋಣಿ ಚೀಲವನ್ನು ನೋಡಿದಾಗ ಪ್ಲಾಸ್ಟಿಕ್ ಗೋಣಿ ಚೀಲದ ಒಳಗೆ ಮನುಷ್ಯ ಮೃತದೇಹವೊಂದು ಕಂಡು ಬಂದಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 138/2022 ಕಲಂ: 302 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 01

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕರ್ತ, ಪ್ರಾಯ: 60 ವರ್ಷ ತಂದೆ: ಗುರುವ ಮೇರ ವಾಸ: ಕೇರಿಮಾರು ಮನೆ, ಸಾಮೇದ ಕಲಾಪು  ಪುದುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 21.11.2022 ರಂದು 15.00 ಗಂಟೆಗೆ ಪಿರ್ಯಾದಿದಾರರು ಪುದುವೆಟ್ಟು ಪೇಟೆಗೆಂದು ಹೊರಟ ಸಮಯ ಪಿರ್ಯಾದಿದಾರರ ತಮ್ಮ ಓಡಿಯಪ್ಪ ಎಂಬವರು ಕಾಡಿನಿಂದ ಅಣಬೆಯನ್ನು ತಂದು ಪದಾರ್ಥಕ್ಕೆಂದು ಶುಚಿ ಮಾಡುತ್ತಿದ್ದು, ಪಿರ್ಯಾದಿದಾರರ ತಂದೆ ಮನೆಯಲ್ಲಿಯೇ ಮಲಗಿಕೊಂಡಿದ್ದರು. ಬಳಿಕ ಪಿರ್ಯಾದಿದಾರರು ಪುದುವೆಟ್ಟು ಪೇಟೆಗೆಂದು ಹೋದವರು ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ದಿನಾಂಕ: 22.11.2022 ರಂದು ಬೆಳಿಗ್ಗೆ 06.30 ಗಂಟೆಗೆ ಮನೆಗೆ ಬಂದಾಗ ಪಿರ್ಯಾದಿದಾರರ ತಂದೆ ಗುರುವ ಮತ್ತು ತಮ್ಮ ಓಡಿಯಪ್ಪ ಅಂಗಳದಲ್ಲಿ ಬಿದ್ದುಕೊಂಡಿದ್ದು, ಪಿರ್ಯಾದಿದಾರರು ಅವರಿಬ್ಬರನ್ನು ಆರೈಕೆ ಮಾಡಿ ನೋಡಿದಾಗ ಅವರಿಬ್ಬರೂ ಮೇಲೆ ಏಳದೇ ಇದ್ದು, ಬಳಿಕ ಸಂಬಂದಿಕರಿಗೆ ಹಾಗೂ ನೆರೆಕರೆಯವರಿಗೆ ವಿಚಾರ ತಿಳಿಸಿ ಅವರೆಲ್ಲ ಬಂದು ನೋಡಿದಾಗ ಪಿರ್ಯಾದಿದಾರರ ತಮ್ಮ  ಮತ್ತು ತಂದೆ ಮೃತಪಟ್ಟಿದ್ದು ನಂತರ ಪಿರ್ಯಾದಿದಾರರು ಮನೆಯ ಒಳಗೆ ಹೋಗಿ ನೋಡಿದಾಗ ಮೃತರಿಬ್ಬರೂ ವಿಷಕಾರಿ ಅಣಬೆಯನ್ನು ಪದಾರ್ಥ ಮಾಡಿ ತಿಂದು ಮೃತಪಟ್ಟಂತೆ ಕಂಡು ಬರುತ್ತಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ ಯುಡಿಆರ್‌ 67/2022 ಕಲಂ: 174 ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-11-2022 11:49 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080