ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶೃತಿ ಶೆಟ್ಟಿ (29) ಗಂಡ:ಆಶೀತ್‌ ಭಂಡಾರಿ ವಾಸ:ಮರ್ತನಾಡಿ ಮನೆ ಕನ್ಯಾನ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ:23.02.2021ರಂದು ತಮ್ಮ ಬಾಬ್ತು ಕೆಎ 19 ಎಂಕೆ 2043 ನಂಬ್ರದ ಬೆಲೋನೋ ಕಾರಿನಲ್ಲಿ ತನ್ನ ಗಂಡ ,ಗಂಡನ ತಮ್ಮ ,ಗಂಡನ ಹೆಂಡತಿಯನ್ನು ಸಹ ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಸಮಯ 10:45 ಗಂಟೆಗೆ ತಮ್ಮ ಮನೆಯಿಂದ ಹೊರಟು ಸಮಯ 11:00 ಗಂಟೆಗೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮ ಶ್ರೀ ರಾಘವೇಂದ್ರ ಭಜನಾ ಮಂದಿರ ಬಳಿ ಮಂಗಳೂರು ಕಡೆಗೆ ಹೋಗುತ್ತಿರುವಾಗ ಕನ್ಯಾನ ಪೇಟೆ ಕಡೆಯಿಂದ ನೆಲ್ಲಿ ಕಡೆಗೆ ಹೋಗುತ್ತಿದ್ದ ಕೆಎ 31 ಎಂ 2048 ನಂಬ್ರದ ಜೀಪಿನ ಚಾಲಕ ಅಜಾಗರೂಕತೆಯಿಂದ ತಮ್ಮ ಜೀಪನ್ನು ಚಲಾಯಿಸಿ ಕಾರಿಗೆ ತಾಗಿಸಿ ಅಪಘಾತ ಉಂಟು ಮಾಡಿದ ಪರಿಣಾಮ ಕಾರು ಅಪಘಾತಗೊಂಡು ಸುಮಾರು 24 ಸಾವಿರ ನಷ್ಟ ಉಂಟಾಗಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 29/2021 ಕಲಂ: 279, ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೈಯದ್ ಪಲೂಲ್   ಪ್ರಾಯ: 67 ವರ್ಷ ತಂದೆ: ದಿ, ಸೈಯದ್  ಅಬ್ದುಲ್ಲಾ   ವಾಸ :  ತಾಳಿಪಡ್ಪು ಮನೆ,  ಬಿ, ಮೂಡ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ತಾಳಿಪಡ್ಪುವಿನ ಹಿದಾಯುತ್ತುಲ್ ಇಸ್ಲಾಂ ಮದರಸ ಕಮಿಟಿಯ ಅದ್ಯಕ್ಷರಾಗಿದ್ದು,  ದಿನಾಂಕ 21.02.2021 ರ ರಾತ್ರಿ ಸಮಯದಿಂದ ದಿನಾಂಕ 22.02.2021 ರ ಬೆಳಿಗ್ಗೆ 09.00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಸೀದಿಯಲ್ಲಿದ್ದ ಹಳೆಯ ತಾಮ್ರದ ಮಂಡೆ ಮತ್ತು 5 ಬಂಡಲ್ ಕೇಬಲ್ ಗಳನ್ನು  ಕಳವು ಮಾಡಿರುವ ವಿಚಾರ ದಿನಾಂಕ 22.02.2021 ರ ಬೆಳಿಗ್ಗೆ ತಿಳಿದು ಬಂದಿದ್ದು ಅದರಂತೆ ದಿನಾಂಕ 22.02.2021 ರ ರಾತ್ರಿ 11.00 ಗಂಟೆಯ ವೇಳೆಗೆ ಮಸೀದಿ  ಬಳಿ ಆಸಿಫ್ ನು ಅನುಮಾನಾಸ್ಪದವಾಗಿ ಸುತ್ತುತ್ತಿದ್ದು  ಈತನನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ  ಕೃತ್ಯವನ್ನು ಮಾಡಿರುವ ಬಗ್ಗೆ ತಿಳಿದು ಬಂದಿದ್ದು ಕಳವು ಆದ ಸೊತ್ತಿನ ಅಂದಾಜು ಮೌಲ್ಯ ರೂ. 40,000/- ಆಗಿರುವುದಾಗಿದ್ದು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 24-2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಆಶೀಫ್ ಪ್ರಾಯ 26 ವರ್ಷ್ ತಂದೆ: ಅಬೂಬಕ್ಕರ್ ವಾಸ: ತಾಳಿಪಡ್ಪು ಮನೆ ಬಿ ಮೂಡ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ಬಿ ಮೂಡ ಗ್ರಾಮದ ತಾಳಿಪಡ್ಪು ಎಂಬಲ್ಲಿ ಲೀಸ್ ಆಧಾರದಲ್ಲಿ 2 ವರ್ಷಗಳಿಂದ ವಾಸವಾಗಿರುವುದಾಗಿದೆ.  ಸದ್ರಿ ಮನೆಯ ವಾರಸುದಾರರು ಬಂದು  ಸೇರಿಕೊಂಡಿದ್ದು. ಪಿರ್ಯಾಧಿದಾರರಿಗೆ ವಾರಸುದಾರರಿಂದ ಹಣ ಬರಲು ಬಾಕಿಯಿರುವುದರಿಂದ ಪಿರ್ಯಾಧಿದಾರರು ಸದ್ರಿ ಮನೆಯನ್ನು ಬಿಟ್ಟು ಹೋಗದೇ ಇದ್ದು, ಇದನ್ನು ಸಹಿಸದೆ ಹಸೈನಾರ್ ಹಾಗೂ ಇತರರು ಸೇರಿ ಪಿರ್ಯಾಧಿದಾರರ ಮೇಲೆ ಮಸೀದಿಯಿಂದ ಹಂಡೆ ಕದ್ದೆ ಎಂದು ಆಪಾದನೆ ಹೋರಿ ದಿನಾಂಕ 22-02-2021 ರಂದು ರಾತ್ರಿ 10.30 ಗಂಟೆಗೆ ಪಿರ್ಯಾಧಿದಾರರಿಗೆ ರೀಪಿನಿಂದ ಬಲ ಮತ್ತು ಎಡಕೈಗಳಿಗೆ ಹೊಡೆದಿದ್ದು, ನೆಲಕ್ಕೆ ಬಿದ್ದಾಗ ಕಾಲಿನಿಂದ ತುಳಿದಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 22-2021 ಕಲಂ: 324 ಜೊತೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 23-02-2021 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 23-2021 ಕಲಂ: 498(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ 23.02.2021 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 18/2021 ಕಲಂ: 354 (ಎ)(1) ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶೇಷಪ್ಪ ಪ್ರಾಯ: 44 ವರ್ಷ, ವಾಸ:ಬಿಳಿನೆಲೆ ಗ್ರಾಮ ಪಂಚಾಯತ್ ಎಂಬವರ ದೂರಿನಂತೆ ಪಿರ್ಯಾದುದಾರರು ಕಡಬ ತಾಲೂಕು ಬಿಳಿನೆಲೆ ಗ್ರಾಮದ ಬಿಳಿನೆಲೆ ಗ್ರಾಮ ಪಂಚಾಯತ್‌ನಲ್ಲಿ ಸುಮಾರು 26 ವರ್ಷಗಳಿಂದ ಗುಮಾಸ್ತ ಕೆಲಸ ಮಾಡಿಕೊಂಡಿದ್ದು ಪಿರ್ಯಾದುದಾರರು ದಿನಾಂಕ:23.02.2021 ರಂದು ಬಿಳಿನಲೆ ಗ್ರಾಮ ಪಂಚಾಯತ್‌ನಲ್ಲಿ ಕರ್ತವ್ಯದಲ್ಲಿರುವ ಸಮಯ ಬೆಳಗ್ಗೆ 10.00 ಗಂಟೆ ಸಮಯಕ್ಕೆ ಗ್ರಾಮ ಪಂಚಾಯತ್‌ ದೂರವಾಣಿಗೆ ಬಿಳಿನೆಲೆ ಗ್ರಾಮದ ಕೋಟೇಸಾರ್ ಎಂಬಲ್ಲಿ ಹರಿಯುತ್ತಿರುವ ಹೊಳೆಯ ಬ್ರಿಡ್ಜ್‌ನ ಬಳಿ ಅಪರಿಚಿತ ಶವವೊಂದು ತೇಲಾಡುತ್ತಿರುವುದಾಗಿ ದೂರವಾಣಿ ಕರೆಯೊಂದು ಬಂದಂತೆ  ಸದ್ರಿ ಕರೆಯ ಆಧಾರದ ಮೇಲೆ ಗ್ರಾಮ ಪಂಚಾಯತ್‌ನ ಅಭಿವೃದ್ದಿ ಅಧಿಕಾರಿಯವರ ಆದೇಶದಂತೆ ಪಿರ್ಯಾದುದಾರರು ಸಮಯ 11.00 ಗಂಟೆಗೆ ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೋಟೆಸಾರ್‌ ಎಂಬಲ್ಲಿಗೆ ತಲುಪಿ ಹರಿಯುತ್ತಿರುವ ನದಿಯಲ್ಲಿ ನೋಡಲಾಗಿ ಸುಮಾರು 60 ರಿಂದ 70 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಶವವೊಂದು ತೇಲಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 03/2021 ಕಲಂ: 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-02-2021 10:08 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080