ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಶೋಕ , ಪ್ರಾಯ 36  ವರ್ಷ,ತಂದೆ :ಸುಂದರ  ಮಲೆಕುಡಿಯ, ವಾಸ: ಶ್ರೀ ಗಣೇಶ್ ಮನೆ, ಅರಸಿಕಟ್ಟೆ, ಕುತ್ಲೂರು  ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ:23-04-2022 ರಂದು  ಮಧ್ಯಾಹ್ನ ಸುಮಾರು  2:00 ಗಂಟೆಗೆ  ಬೆಳ್ತಂಗಡಿ  ತಾಲೂಕು ಕುತ್ಲೂರು ಗ್ರಾಮದ  ಬೋವುಪಾಡಿ ಎಂಬಲ್ಲಿ ನಾರಾವಿ-  ಗುರುವಾಯನಕೆರೆ ಸಾರ್ವಜನಿಕ  ರಸ್ತೆಯಲ್ಲಿ ಕಾರು ಕೆಎ.47.ಎಂ.8906 ನೇ ದನ್ನು  ಅದರ  ಚಾಲಕ   ಗುರುವಾಯನಕೆರೆ ಕಡೆಯಿಂದ ನಾರಾವಿ  ಕಡೆಗೆ ತಿರುವು  ರಸ್ತೆಯಲ್ಲಿ  ದುಡುಕುತನ  ಹಾಗೂ  ನಿರ್ಲಕ್ಷತನದಿಂದ  ಒಮ್ಮೆಲೇ  ರಸ್ತೆಯ  ರಾಂಗ್  ಕಡೆಗೆ  ಚಲಾಯಿಸಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ  ಮಾರುತಿ ಓಮಿನಿ ಕಾರು  ನಂ  ಕೆಎ 21. ಪಿ. 7239 ನೇದಕ್ಕೆ  ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ವಾಹನಗಳು  ಜಖಂಗೊಂಡು  ಮಾರುತಿ  ಓಮಿನಿ  ಕಾರು ಚಾಲಕ  ಶೇಖರವರಿಗೆ  ಬಲ  ಕಾಲಿಗೆ  ಗಾಯ  ಹಾಗೂ  ಓಮಿನಿ  ಕಾರಿನಲ್ಲಿದ್ದ  ಶ್ರೀಮತಿ   ಮಲ್ಲಿಕರವರಿಗೆ  ಮುಖಕ್ಕೆ,  ಎದೆಗೆ  ಗುದ್ದಿದ  ಗಾಯ  ಹಾಗೂ  ತರಚಿದ  ಗಾಯಗಳಾಗಿ  ಮಂಗಳೂರು  ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 25-2022 ಕಲಂ:  279,337 , ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಜೇಶ್ ಶೆಟ್ಟಿ (33)  ತಂದೆ: ಶೀನ ಶೆಟ್ಟಿ ವಾಸ: ಕೆಂಬರ್ಜೆ ಮನೆ ಬೆಳ್ತಂಗಡಿ ಕಸಬಾ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 22-04-2022  ರಂದು KA 21 J 7583 ನೇ ಮೋಟಾರ್‌ ಸೈಕಲ್‌ ನಲ್ಲಿ ಅದರ ಸವಾರ ಪ್ರಕಾಶ್‌ ಎಂಬವರು ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ರಾತ್ರಿ 8:30 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಚರ್ಚ್‌ ಕ್ರಾಸ್‌ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ KA 28 M 8718 ನೇ ಇಕೋ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್‌ ಸೈಕಲ್‌ ಗೆ ಹಿಂದಿನಿಂದ ಢಿಕ್ಕಿ ಹೊಡೆದನು ಪರಿಣಾಮ ಮೋಟಾರ್‌ ಸೈಕಲ್‌ ಸವಾರ ರಸ್ತೆಗೆ ಬಿದ್ದು ಬಲಕಾಲಿನ ಮಣಿಗಂಟಿಗೆ, ಮುಖಕ್ಕೆ, ಹಣೆಗೆ ಗುದ್ದಿದ ತರಚಿದ ಗಾಯಗಳಾಗಿದ್ದು ಗಾಯಾಳು ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 62/2022 ಕಲಂ; 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಶ್ವನಾಥ ಪ್ರಾಯ 46 ವರ್ಷ ತಂದೆ: ಪೆರ್ನು ಪೂಜಾರಿ ವಾಸ: ಪುಣ್ಕೇದಡಿ ಮನೆ, ನಾವೂರು ಗ್ರಾಮ, ಬೆಳ್ತಂಗಡಿ ತಾಲೂಕು   ಎಂಬವರ ದೂರಿನಂತೆ ದಿನಾಂಕ: 22-04-2022 ರಂದು ಪಿರ್ಯಾಧಿದಾರರು ಕೆಎ 21 ಯು 6198 ನೇ ದ್ವಿ ಚಕ್ರ ವಾಹನದಲ್ಲಿ ಸಹ ಸವಾರನಾಗಿ ಕುಳಿತುಕೊಂಡು ದ್ವಿ ಚಕ್ರ ವಾಹನವನ್ನು ಸವಾರ ಉಮೇಶ್‌ ರವರು ಸವಾರಿ ಮಾಡಿಕೊಂಡು ಲಾಯಿಲ ಕಡೆಯಿಂದ ಕಿಲ್ಲೂರು ಕಡೆಗೆ ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 2.15 ಗಂಟೆಗೆ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಸಂಜೀವನ ಕೊಲ್ಯೋಟ್ಟು ಎಂಬಲ್ಲಿ ದುಡುಕುತನದಿಂದ ಸವಾರಿ ಮಾಡಿ ಕೊಲ್ಯೋಟ್ಟು ಒಳ ಮಣ್ಣು ರಸ್ತೆಯಿಂದ ಲಾಯಿಲ ಕಡೆಗೆ ಕೆಎ 19 ಎಲ್‌ 2710 ನೇ M80 ದ್ವಿ ಚಕ್ರ ವಾಹನವನ್ನು ಅದರ ಸವಾರ ಎಸ್‌ ಎ ಶರೀಫ್‌ ಯಾನೆ ಸಬನಾ ಸಾಹೇಬ್‌ ಎಂಬವರು ಸವಾರಿ ಮಾಡಿಕೊಂಡು ಬಂದು M80 ದ್ವಿ ಚಕ್ರ ವಾಹನದ ಬಲ ಇಂಡಿಕೇಟರ್‌ ಹಾಕಿ ರಸ್ತೆಯ ಪೂರ್ತಿ ಬಲಬದಿಗೆ ತಿರುಗಿಸುತ್ತಿರುವಾಗ ಪಿರ್ಯಾಧಿದಾರರು ಸಹ ಪ್ರಯಾಣಿಕನಾಗಿ ಹೋಗುತ್ತಿದ್ದ ದ್ವಿ ಚಕ್ರ ವಾಹನವು M80 ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ಹಾಗೂ ವಾಹನ ಸವಾರರು ವಾಹನದೊಂದಿಗೆ ರಸ್ತೆಗೆ ಬಿದ್ದು M80 ದ್ವಿ ಚಕ್ರ ವಾಹನ ಸವಾರ ಎಸ್‌ ಎ ಶರೀಫ್‌ ಯಾನೆ ಸಬನಾ ಸಾಹೇಬ್‌ ರವರು ತಲೆಯ ಹಿಂಬದಿಗೆ ಗುದ್ದಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಫಾಧರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 63/2022 ಕಲಂ; 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪಿ.ಎಸ್‌. ಸಲೀಂ, ಪ್ರಾಯ 36 ವರ್ಷ, ತಂದೆ: ಪಿ.ಎಸ್‌. ಅಬ್ದುಲ್ಲ, ವಾಸ: ಉಜಿರುಬೆಟ್ಟು ಮನೆ, ಕರಾಯ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 23-04-2022 ರಂದು 08-30 ಗಂಟೆಗೆ ಆರೋಪಿ ಕಾರು ಚಾಲಕ ಕೃಷ್ಣ ನಾಯ್ಕ್‌ ಎಂಬವರು  KA- 21-p-2184 ನೇ ನೋಂದಣಿ ನಂಬ್ರದ ಕಾರನ್ನು ಕಲ್ಲೇರಿ-ವಗ್ಗ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮೂರುಗೋಳಿ ಕಡೆಯಿಂದ ಕಲ್ಲೇರಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ನೀಲಗಿರಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಚಾಲಕರಾಗಿ, ಮುಝಮ್ಮಿಲ್‌ ಬಾಕಿರ್‌ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಕಲ್ಲೇರಿ ಕಡೆಯಿಂದ ಮೂರುಗೋಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ka-21-c-1398 ನೇ ನೋಂದಣಿ ನಂಬ್ರದ ಅಟೋರಿಕ್ಷಾಕ್ಕೆ ಅಪಘಾತವಾಗಿ, ಅಟೋರಿಕ್ಷಾ ರಸ್ತೆಯ ಬಲಭಾಗಕ್ಕೆ ಮಗುಚಿಬಿದ್ದು, ಪಿರ್ಯಾದುದಾರರಿಗೆ ಮುಖಕ್ಕೆ, ಬಲಮೊಣಕಾಲಿಗೆ ತರಚಿದ ಗಾಯ, ಸೊಂಟದ ಕೆಳಭಾಗ ತೊಡೆಗೆ ಗುದ್ದಿದ ನೋವು ಹಾಗೂ ಮುಸಂಮ್ಮಿಲ್‌ ಬಾಕಿರ್‌ ರವರಿಗೆ ಮುಖಕ್ಕೆ ತರಚಿದ ಗಾಯ, ಬಲಮೊಣಕಾಲಿಗೆ ಗುದ್ದಿದ ಒಳನೋವಿರುವ ಗಾಯವಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  78/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಯಮುನಾ (46 ವರ್ಷ) ಗಂಡ: ತಿಮ್ಮಪ್ಪ ಗೌಡ  ವಾಸ: ಪಾಲೆತ್ತಡಿ ಕನ್ನಡ್ಕ ಮನೆ, ಸುಳ್ಯಪದವು ಅಂಚೆ, ಪಡುವನ್ನೂರು ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದುದಾರರಾದ ಶ್ರೀಮತಿ ಯಮುನಾ (46 ವರ್ಷ) ಗಂಡ: ತಿಮ್ಮಪ್ಪ ಗೌಡ  ವಾಸ: ಪಾಲೆತ್ತಡಿ ಕನ್ನಡ್ಕ ಮನೆ, ಸುಳ್ಯಪದವು ಅಂಚೆ, ಪಡುವನ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರು ಗಂಡ ಹಾಗೂ ಮಕ್ಕಳ ಜತೆಯಲ್ಲಿ ವಾಸವಾಗಿದ್ದು, ಇಬ್ಬರು ಗಂಡು ಮಕ್ಕಳ ಪೈಕಿ ಹಿರಿಯ ಮಗ ಧನುಷ್ ಪ್ರಾಯ:20 ವರ್ಷ ಎಂಬವನಾಗಿದ್ದು, ದಿನಾಂಕ:22-4-2022 ರಂದು ರಾತ್ರಿ ಸುಮಾರು 8.00 ಗಂಟೆಗೆ ಮನೆಯಿಂದ ಕುಲದಪಾರೆಯಲ್ಲಿ ನಡೆಯುವ ಒತ್ತೆಕೋಲಕ್ಕೆ ಹೋಗುತ್ತೇನೆಂದು ಹೇಳಿ ಹೋದವನು ದಿನಾಂಕ:23-4-2022 ರಂದು ಬೆಳಗಾದರೂ ಮನೆಗೆ ಬಾರದೆ ಇದ್ದುದರಿಂದ ಆತನ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುವುದು ಕಂಡುಬಂದಿರುತ್ತದೆ. ನಂತರ ಫಿರ್ಯಾದುದಾರರ 2ನೇ ಮಗ ಭವಿತ್ ನು ಮನೆಯ ಸುತ್ತ ಮುತ್ತ ತೋಟದಲ್ಲಿ ಎಲ್ಲಾ ಕಡೆ ಹುಡುಕಾಡಿದಾಗ ರವೀಂದ್ರ ಎಂಬವರ ಅಡಿಕೆ ತೋಟದಲ್ಲಿ ಇರುವ ಕೆರೆಯ ಮೇಲೆ ತೋಟದಲ್ಲಿ ಧನುಷ್ ನ ಚಪ್ಪಲಿ ಇರುವುದು ಕಂಡುಬಂದಿದ್ದು, ಇದರಿಂದ ಸಂಶಯಗೊಂಡು ಫಿರ್ಯಾದುದಾರರು, ಫಿರ್ಯಾದುದಾರರ ಗಂಡನ ಅಣ್ಣ ಪುಂಡರೀಕಾಕ್ಷ ಹಾಗೂ ಸುತ್ತಮುತ್ತಲಿನ ಮನೆಯವರು ಕೆರೆಯ ಬಳಿ ಬಂದು ಕೆರೆಯ ನೀರಿಗೆ ಬಿದಿರಿನ ಕೋಲನ್ನು ಹಾಕಿ ಹುಡುಕಾಡಿದಾಗ ಧನುಷ್ ನ ಮೃತದೇಹವು ನೀರಿನಲ್ಲಿ ಮುಳುಗಿರುವುದು ಕಂಡುಬಂದಿರುತ್ತದೆ. ಧನುಷ್ ನು ಕುಂದಪಾರೆಯಿಂದ ರಾತ್ರಿ ಸುಮಾರು 12.00 ಗಂಟೆಗೆ ಪಿಲಿಪ್ಪುಡೆ ಸೇತುವೆಯಿಂದ ನಡೆದುಕೊಂಡು ಮನೆಗೆ ಬರುತ್ತಿದ್ದವನು ನೆರೆಮನೆಯ ನೆರೆಮನೆಯ ಸೂರಪ್ಪ ಗೌಡರ ಮಗ ಸುಖೇಶ್ ಎಂಬವರ ಮೋಟಾರ್ ಸೈಕಲ್ ನಲ್ಲಿ ಬಂದು ಸುಖೇಶನು ಉದಯ ರವರ ಮನೆಯ ಹತ್ತಿರ ರಾತ್ರಿ 12.30 ಗಂಟೆಗೆ ಬಿಟ್ಟು ಹೋಗಿದ್ದು, ನಂತರ ಧನುಷ್ ಮನೆಯ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ನೆರೆಮನೆಯ ರವೀಂದ್ರ ಎಂಬವರ ಅಡಿಕೆ ತೋಟದಲ್ಲಿರುವ ಕೆರೆಗೆ ಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಯುಡಿಆರ್  ಕ್ರಮಾಂಕ: 12/2022  ಕಲo: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-04-2022 10:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080