ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಸನ್ನ ಕುಮಾರ್‌ ಬಿ (46) ತಂದೆ: ಈಶ್ವರ್‌ ಭಟ್‌ ವಾಸ: ಕರಿಮಣ್ಣು ಮನೆ ಉರುವಾಲು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 22-05-2022 ರಂದು KA 21 X 5258  ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ಸಂಪತ್‌ ಕುಮಾರ್ ಎಂಬವರು ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 4:30 ಗಂಟೆಗೆ ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ KA19 D 9143 ನೇ ಕಾರನ್ನು ಅದರ ಚಾಲಕ ದುಡುಕತನದಿಂದ ಚಲಾಯಿಸಿಕೊಂಡು ಹೋಗಿ ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನ ಸವಾರ ಸಂಪತ್‌ ಕುಮಾರ್‌ ರವರು ದ್ವಿ ಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ಎಡ ಕೋಲು ಕಾಲಿಗೆ, ಬಲಕೈ ಗೆ, ಹಣೆಗೆ ಗುದ್ದಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಜ್ಯೋತಿ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ .ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 75/2022 279,337 ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಚಿನ್ ಜಿ ಭಿಡೆ(49) ತಂದೆ: ಗಣೇಶ್ ಭಿಡೆ  ವಾಸ: ದುಂಬೆಟ್ಟು ಮನೆ ಮುಂಡಾಜೆ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 23-05-2022 ರಂದು KA 21 X 1961  ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಗೋಪಾಲಕೃಷ್ಣ ಜೋಷಿ ಎಂಬವರು ಉಜಿರೆ ಕಡೆಯಿಂದ ಮುಂಡಾಜೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರುಬೆಳಿಗ್ಗೆ 6:30 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ನಿಡಿಗಲ್ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಉಜಿರೆ ಕಡೆಯಿಂದ ಮುಂಡಾಜೆ ಕಡೆಗೆ ಒಂದು ಅಪರಿಚಿತ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಹೋಗಿ  ಗೋಪಾಲಕೃಷ್ಣ ಜೋಷಿ ರವರ ಮೋಟಾರ್ ಸೈಕಲ್ ಗೆ ಢಿಕ್ಕಿ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ  ಗೋಪಾಲಕೃಷ್ಣ ಜೋಷಿ ರವರು ಮೋಟಾರ್ ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು ಕುತ್ತಿಗೆಗೆ, ಬೆನ್ನಿಗೆ, ಬಲಕೈ ಗೆ ಗುದ್ದಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಅಪಘಾತ ನಡೆಸಿದ ಅಪರಿಚಿತ ವಾಹನವನ್ನು ಅದರ ಚಾಲಕ ಅಪಘಾತದ ಬಳಿಕ ನಿಲ್ಲಿಸದೇ , ಗಾಯಾಳನ್ನು ಉಪಚರಿಸದೇ, ಸಂಬಂಧಪಟ್ಟವರಿಗೆ ಮಾಹಿತಿ ನೀಡದೆ ವಾಹನದೊಂದಿಗೆ ಪರಾರಿಯಾಗಿವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 76/2022 ಕಲಂ: 279,337 ಭಾ ದಂ ಸಂ, ಜೊತೆಗೆ ಕಲಂ:134 (ಎ&ಬಿ) R/W 187 ಐಎಮ್‌ ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಮಣ್ಯ ಠಾಣೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಾಮೋದರ ಕೆ ಹೆಚ್, ಪ್ರಾಯ: 49 ವರ್ಷ, ತಂದೆ: ದಿ|| ವೆಂಕಪ್ಪ ಗೌಡ, ವಾಸ: ಕುಲ್ಕುಂದ ಮನೆ, ಸುಬ್ರಹ್ಮಣ್ಯ ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 22-05-2022 ರಂದು ಮದ್ಯಾಹ್ನ ಸುಮಾರು 1:00 ಗಂಟೆಗೆ ಅವರ ಬಾಬ್ತು ಮೋಟಾರ್ ಬೈಕ್ ನ ನಂಬ್ರ ಕೆಎ 21 ಕ್ಯೂ 6379 ನೇದನ್ನು ಸವಾರಿ ಮಾಡಿಕೊಂಡು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಸುಬ್ರಹ್ಮಣ್ಯ ಪೇಟೆಗೆ ಹೋಗುತ್ತಿರುವಾಗ ಕುಲ್ಕುಂದ ಮತ್ತು ಕುಮಾರಧಾರ ಸೇತುವೆ ಮದ್ಯೆ ಡಾಮಾರು ರಸ್ತೆಯ ಸುಬ್ರಹ್ಮಣ್ಯ ಪಂಚಾಯತ್ ನೀರಿನ ಟ್ಯಾಂಕ್ ನ ಪಂಪ್ ಹೌಸ್ ನ ಬಳಿ ತಲುಪಿದಾಗ ಎದುರುಗಡೆಯಿಂದ ಅಂದರೆ ಕೈಕಂಬ ಕಡೆಯಿಂದ ಸುಬ್ರಹ್ಮಣ್ಯದ ಕಡೆಗೆ ಬಿಳಿ ಕಾರೊಂದನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು, ಅವರ ಎಡಗೈ ಹೆಬ್ಬರಳಿಗೆ, ಎಡಗಾಲಿನ ಮೊಣಗಂಟಿಗೆ ಮತ್ತು ಪಾದಕ್ಕೆ, ಬಲಗಾಲಿನ ಕೋಲುಕಾಲು ಮತ್ತು ಹೆಬ್ಬರಳಿಗೆ ಗುದ್ದಿದ ಮತ್ತು ರಕ್ತಗಾಯವಾಗಿದ್ದು, ಕೂಡಲೇ ಅವರನ್ನು ಅಲ್ಲಿನ ಸಾರ್ವಜನಿಕರು ಸುಬ್ರಹ್ಮಣ್ಯದ ನಿಟ್ಟೆ ಸದಾನಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಕಿತ್ಸೆ ಕೊಡಿಸಿ ಬಳಿಕ ಪಿರ್ಯಾದಿದಾರರ ಭಾವ ಉದಯ ಮತ್ತು ಮತ್ತಿತರರು ಆ್ಯಂಬುಲೆನ್ಸ್ ಒಂದರಲ್ಲಿ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ..ಈ ಬಗ್ಗೆ ಸುಬ್ರಮಣ್ಯ ಠಾಣೆ ಅ.ಕ್ರ ನಂಬ್ರ  : 56/2022  ಕಲಂ:   279, 338 ಐಪಿಸಿ       ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ವೇತಾ, ತಂದೆ ಕರಿಯ ಮೂಲ್ಯ, ನೆಲ್ಯ ಪಲ್ಕೆ ಮನೆ, ಮಣಿನಾಲ್ಕೂರು ಗ್ರಾಮ , ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು  ದಿನಾಂಕ: 22-.05.2022 ರಂದು  ಬೆಳಿಗ್ಗೆ 09.30 ಗಂಟೆಗೆ  ಪಿರ್ಯಾದಿದಾರರು ಮತ್ತು ಮನೆಯವರೆಲ್ಲ  ಮನೆಗೆ  ಬಾಗಿಲು ಮುಚ್ಚಿ  ಬೀಗ ಹಾಕಿ  ಅಕ್ಕನ ಮಗುವಿನ ನಾಮಕರಣದ ಬಗ್ಗೆ ಕಲ್ಲಡ್ಕಕ್ಕೆ  ಹೋಗಿದ್ದು  ದಿನಾಂಕ:23.05.2022 ರಂದು ಸಾಯಂಕಾಲ  5.30 ಗಂಟೆಗೆ  ಮನೆಗೆ ಬಂದು ನೋಡಿದಾಗ  ಮನೆಯ ಎದುರಿನ ಬೀಗ ಮತ್ತು  ಚಿಲಕವನ್ನು ಮುರಿದಿರುವುದು  ಕಂಡುಬಂದಿದ್ದು  ಮನೆಯ ಒಳಗೆ ಹೋಗಿ ನೋಡಿದಾಗ  ಬೆಡ್‌ ರೂಮ್‌ ಮತ್ತು ದೈವದ  ಕೋಣೆಯಲ್ಲಿದ್ದ  ಗೋಡ್ರೇಜ್‌ ಬೀಗ ತೆಗೆದಿರುವುದು ಕಂಡು  ಬಂದಿದ್ದು  ಗೋಡ್ರೇಜ್‌ನ ಒಳಗೆ ಒಂದು ಪ್ಲಾಸ್ಟಿಕ್‌  ಬಾಕ್ಸ್‌ನಲ್ಲಿಟ್ಟಿದ 1 ¾ ಪವನ್‌ನ ಕಿವಿಯ ಚಿನ್ನದ ಬೆಂಡೋಲೆಮತ್ತು   2  ಜುಮ್ಕಿ ಇಲ್ಲದೆ ಇದ್ದು ನಂತರ ದೈವದ ಕೋಣೆಯಲ್ಲಿದ್ದ ಗೋಡ್ರೇಜ್‌ ಕಪಾಟನ್ನು ನೋಡಿದಾಗ  ಅದರ ಬಾಗಿಲು ತೆರೆದಿದ್ದು .  ಅದರ ಒಳಗಿನ ಲೋಕರ್‌ನ ಬಾಗಿಲಿ ತೆರೆದಿದ್ದು ಅದರೊಳಗಿದ್ದ ಒಂದು ಚಿನ್ನದ ನೆಕ್ಲಸ್‌  2 ½ ಪವನ್‌,  ಒಂದು  ದೊಡ್ಡ 4 1/4 ಪವನ್‌ನ   ಚಿನ್ನದ   ಮಾಲೆಯನ್ನು ಯಾರೋ ಕಳ್ಳರು  ದಿನಾಂಕ: 22-05-2022 ರ ಬೆಳಿಗ್ಗೆ 09.30 ಗಂಟೆಯಿಂದ ದಿನಾಂಕ: 23.05.2022ರ ಸಂಜೆ  17.30 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯ ಎದುರಿನ ಬೀಗವನ್ನು  ಮುರಿದು ಮನೆಯ ಒಳಗಡೆ ಬಂದು 2  ಗೋಡ್ರೇಜ್‌ನ ಲಾಕರನ್ನು  ಯಾವುದೋ ಆಯುಧದಿಂದ ಮೀಟಿ ಚಿನ್ನಭರಣವನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿದೆ  ಕಳುವಾದ ಚಿನ್ನದ  ಒಡವೆಗಳ  ಅಂದಾಜು ತೂಕ 68 ಗ್ರಾಂ, ಆಗಿದ್ದು  ಸದ್ರಿ ಚಿನ್ನಭಾರಣಗಳ ಅಂದಾಜು ಮೌಲ್ಯ ಅಂದಾಜು 2,92,400/- ಆಗಬಹುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ: 37/2022 ಕಲಂ: 454,457,380 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

  • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 23-05-2022 ರಂದು 11.15 ಗಂಟೆಗೆ ಅವಿನಾಶ್.ಹೆಚ್.ಗೌಡ. ಪೊಲೀಸ್‌ ಉಪ ನಿರೀಕ್ಷಕರು ಬಂಟ್ವಾಳ ನಗರ ಪೊಲೀಸ್‌ ಠಾಣೆರವರು ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಲೋರೆಟೋಪದವು ಎಂಬಲ್ಲಿಗೆ ಧಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ರಾಜೇಶ್ ಪೂಜಾರಿ ಪ್ರಾಯ 43 ವರ್ಷ ವಾಸ. ಪೂವನಬೆಟ್ಟು ಮನೆ. ಪಂಜಿಕಲ್ಲು ಗ್ರಾಮ, ಬಂಟ್ವಾಳ ತಾಲೂಕು ಎಂಬಾತನನ್ನು ಬಂಧಿಸಿದ್ದು, ರೂ 896 ಮೌಲ್ಯದ ಮದ್ಯ ತುಂಬಿದ ಬಾಟಲಿಗಳು, ಮಧ್ಯ ಮಾರಾಟದಿಂದ ಬಂದ 200/- ನಗದು ಹಾಗೂ ಇತರೆ ಸ್ವತ್ತುಗಳನ್ನು ವಶಕ್ಕೆ ಪಡೆದು, ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 52/2022  ಕಲಂ: 15(A), 32(3) ಕರ್ನಾಟಕ ಅಬಕಾರಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

  • ಬಂಟ್ವಾಳ ನಗರ ,ಪೊಲೀಸ್ ಠಾಣೆ : ದಿನಾಂಕ 23.05.2022 ರಂದು ಪೂರ್ವಾಹ್ನ ಅವಿನಾಶ್.ಹೆಚ್.ಗೌಡ. ಪೊಲೀಸ್‌ ಉಪ ನಿರೀಕ್ಷಕರು ಬಂಟ್ವಾಳ ನಗರ ಪೊಲೀಸ್‌ ಠಾಣೆರವರು ಠಾಣಾ ಸಿಬ್ಬಂದಿಗಳೊಂದಿಗೆ ನಂದಾವರ ಜಂಕ್ಷನ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ 1) ಮೊಹಮ್ಮದ್ ಇಮ್ತಿಯಾಜ್, ಪ್ರಾಯ:37 ವರ್ಷ, ವಾಸ; ಮನೆ ನಂಬ್ರ 1/63 ನಂದಾವರ ಮನೆ, ಸಜೀಪ ಮುನ್ನೂರು  ಗ್ರಾಮ ಬಂಟ್ವಾಳ ತಾಲೂಕು. 2)  ಉಬೈದ್ ,ಪ್ರಾಯ:  34 ವರ್ಷ, ,ವಾಸ: ನಂದಾವರ ಮನೆ ಸಜೀಪಮುನ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರುಗಳನ್ನು ವಿಚಾರಿಸಿದಾಗ ಅವರು ಸಮರ್ಪಕವಾದ ಉತ್ತರವನ್ನು ನೀಡಲು ಅಸಮರ್ಥರಾಗಿದ್ದು, ಅವರು ಯಾವುದೋ ಅಮಲು ಪದಾರ್ಥ ಅಥವಾ ಅಮಲು ದ್ರವ್ಯವನ್ನು ಸೇವಿಸಿದ ಬಗ್ಗೆ ಘಾಟು ವಾಸನೆ ಕಂಡು ಬಂದಿರುತ್ತದೆ. ಇದರಿಂದ ಸಂಶಯಗೊಂಡು ಸದ್ರಿ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಡಪಟ್ಟಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 53/2022  ಕಲಂ: 27 (ಬಿ) NDPS Act 1985ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 23.4.2022 ರಂದು ಹರೀಶ್ ಎಮ್ ಆರ್, ಪಿ ಎಸ್ ಐ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆರವರು ಠಾಣಾ ಸಿಬ್ಬಂದಿಗಳೊಂದಿಗೆ  12.00 ಗಂಟೆಯ ಸಮಯಕ್ಕೆ  ಸಜಿಪಪಡು ಗ್ರಾಮದ  ಕೊಟೆಕಣಿ ಜಂಕ್ಷನ್  ಬಳಿ 1)ಮಹಮ್ಮದ್ ಶಮೀರ್, 2) ಮಹಮ್ಮದ್ ಅಪ್ಸಾನ್ ಎಂಬವರುಗಳು ಯಾವುದೋ ನಶೆ ಬರುವ  ವಸ್ತುವನ್ನು  ಸೇವಿಸಿ ತೂರಾಡಿಕೊಂಡು  ಸಾರ್ವಜನಿಕರಿಗೆ ತೊಂದರೆ  ಆಗುವ ರೀತಿಯಲ್ಲಿ  ವರ್ತಿಸುತ್ತಿದ್ದವರನ್ನು  ಕಂಡು ಕೂಡಲೇ ಪಿರ್ಯಾದುದಾರರು  ಅವರ ಬಳಿ ಹೋಗಿ ವಿಚಾರಿಸಲಾಗಿ  ಇಬ್ಬರು ನಶೆಯ ಅಮಲಿನಲ್ಲಿ  ಉತ್ತರಿಸುತ್ತಿದ್ದದವರನ್ನು  ಮತ್ತೆ  ಮತ್ತೆ ವಿಚಾರಿಸಲಾಗಿ  ನಿಷೇದಿತ  ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ತನ್ನ ತಪ್ಪನ್ನು  ಒಪ್ಪಿಕೊಂಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ: 36/2022 ಕಲಂ: 27(ಬಿ) ಎನ್ ಡಿ ಪಿ ಎಸ್  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-05-2022 12:07 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080