ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಖತೀಜಮ್ಮ (55) ಗಂಡ: ಮಹಮ್ಮದ್ ವಾಸ: 15-96, ಮೊಡಂಕಾಪು ಮನೆ, ಬಿ-ಮೂಡ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 22.07.2021 ರಂದು ಶಾಂತಿಗುರಿ ಎಂಬಲ್ಲಿ ಸೊಸೈಟಿಗೆ ಹೋಗಿ ವಾಪಾಸು ಮನೆ ಕಡೆಗೆ ಹೋಗುವರೇ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಶಾಂತಿಯಂಗಡಿ LIC ಕಛೇರಿ ಎದುರುಗಡೆ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಕೈಕಂಬ ಕಡೆಯಿಂದ KA-70-2524 ನೇ ಆಟೋರಿಕ್ಷಾ ಚಾಲಕ ಮಹಮ್ಮದ್ ಸೈಫ್ ಆಲಿ ಎಂಬವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಖತೀಜಮ್ಮ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಖತೀಜಮ್ಮರವರ ಎಡ ಮುಂಗೈಗೆ ಗುದ್ದಿದ ಗಾಯ, ಹಣೆಗೆ ಮತ್ತು ಎಡಕಾಲ ಹೆಬ್ಬೆರಳಿಗೆ ತರಚಿದ ಗಾಯ ಹಾಗೂ ಎದೆಗೆ ಮೈಕೈಗೆ ಗುದ್ದಿದ ಗಾಯವಾಗಿದ್ದವರನ್ನು ಪರ್ಲಿಯಾ ನರ್ಸಿಂಗ್ ಹೋಂ ನಲ್ಲಿ  ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 63/2021  ಕಲಂ 279, 337  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಸಹಾಯಕ ಪೊಲೀಸ್‌ ಉಪನಿರೀಕ್ಷಕರು ವಿಟ್ಲ ಪೊಲೀಸ್ ಠಾಣೆ ರವರು ದಿನಾಂಕ:23-07-2021 ರಂದು ಬಂಟ್ವಾಳ  ತಾಲೂಕು ಕುಳ ಗ್ರಾಮದ ಅಳಿಕೆ ಮಜಲು ಮನೆ ನಿವಾಸಿ ಶೇಖರ ಪೂಜಾರಿ ಎಂಬವರು ಅವರ ಮನೆಯ ಬದಿಯಲ್ಲಿರುವ ಶೇಂದಿ ಅಂಗಡಿಯ ಪಕ್ಕದಲ್ಲಿ ಗಿರಾಕಿಗಳಿಗೆ ಮದ್ಯ ಸೇವನೆ ಮಾಡಲು ಅವಕಾಶ ನೀಡಿರುತ್ತಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ಸಿಬ್ಬಂದಿಗಳ ಜೊತೆ ಹೋಗಿ ನೋಡಿ ಮದ್ಯದ ಸಾಚೆಟ್ ಗಳನ್ನು ಯಾವುದೇ ಪರವಾನಿಗೆ ಯಾ ದಾಖಲಾತಿಗಳ ಇಲ್ಲದೇ ಕುಡಿಯಲು ಗಿರಾಕಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಅವಕಾಶ ಮಾಡಿರುವುದನ್ನು ಪತ್ತೆ ಹಚ್ಚಿದ್ದು. ಮೈಸೂರು ಲ್ಯಾನ್ಸರ್‌‌ ಕಂಪನಿಯ 90 ಎಂ ಎಲ್‌‌ನ ವಿಸ್ಕಿ  ಸಾಚೆಟ್ಸ -1 ಅಂದಾಜು ಮೌಲ್ಯ ರೂ 35/- ಹಾಗೂ 180 ಎಂ ಎಲ್ ನ ಆಫಿಸರ್ಸ್ ಚಾಯ್ಸ್ ಕಂಪೆನಿಯ ಸ್ಪೆಷಲ್ ವಿಸ್ಕಿ  ಸಾಚೆಟ್ -1 ಅಂದಾಜು ಮೌಲ್ಯ ಸುಮಾರು ರೂ 106/ ಆಗಬಹುದು, ಅಲ್ಲದೆ ಒಂದು ಗಾಜಿನ ಲೋಟ ಮತ್ತು ಒಂದು ನೀರಿನ ಬಾಟಲಿ ಗಳನ್ನು ವಶಕ್ಕೆ ಪಡೆದು ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 100/2021 ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ 1965 ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದಿನೇಶ್‌ ಪ್ರಾಯ: 31 ವರ್ಷ, ತಂದೆ: ದಿ, ಶೀನಪ್ಪ ಗೌಡ, ವಾಸ: ಕರ್ಕುಂಜ ಮನೆ, ಬಪ್ಪಳಿಗೆ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು ರವರ ತಾಯಿ ಲೀಲಾವತಿ ( 65 ವರ್ಷ) ದಿನಾಂಕ 22.07.2021 ರಂದು ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಕರ್ಕುಂಜ ಎಂಬಲ್ಲಿ ತನ್ನ ವಾಸದ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದವರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಸಾರ್ವಜನಿಕ ಸರ್ಕಾರಿ ಆ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿಯ ವೈದ್ಯರಲ್ಲಿ ತೋರಿಸಿದಾಗ , ಅಲ್ಲಿ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು , ಹೋಗಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಫಿರ್ಯಾದಿದಾರರ ತಾಯಿಯವರು ಚಿಕಿತ್ಸೆಯಲ್ಲಿರುತ್ತಾ ದಿನಾಂಕ 23.07.2021 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಫಿರ್ಯಾದಿದಾರರ ತಮ್ಮ ಮರದಿಂದ ಬಿದ್ದು ನಡೆಯಲಾರದ ಸ್ಥಿತಿಯಲ್ಲಿದ್ದು, ಇದೇ ವಿಚಾರದಲ್ಲಿ ಫಿರ್ಯಾದಿದಾರರ ತಾಯಿಯವರು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಯು.ಡಿ.ಆರ್ ನಂ: 21/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವೆಂಕಟೇಶ ಪ್ರಾಯ  42 ವರ್ಷ  ತಂದೆ: ಬಾಬು ವಾಸ: ಶಾಂತಿಗುಡ್ಡೆ ಮನೆ ಅಮ್ಟಾರು ಗ್ರಾಮ ಬಂಟ್ವಾಳ ತಾಲೂಕು ರವರ ಅಣ್ಣನಾದ ಬಾನು ಚಂದ್ರ ಕೃಷ್ಣಾಪೂರ  ಪ್ರಾಯ 52 ವರ್ಷ, ಇವರು ಕಳೆದು 1 ವರ್ಷಗಳಿಂದ ಆತನಿಗಿರುವ ತಲೆನೋವು ಖಾಯಿಲೆಗೆ ಮಂಗಳೂರಿನ ಫಸ್ಟ್ ನ್ಯೂರೊ ಆಸ್ವತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು. ಕಳೆದ ಆರು ತಿಂಗಳ ಹಿಂದೆ ಖಾಯಿಲೆ ಗುಣಮುಖವಾಗದೇ ಆಸ್ವತ್ರೆಯಿಂದ ಬಿಡುಗಡೆಗೊಳಿಸಿ ಮನೆಯಲ್ಲಿ ಇದ್ದರು.  ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡುವರಂತೆ ವರ್ತಿಸುತ್ತಿದ್ದು ದಿನಾಂಕ: 23-07-2021 ರಂದು ಸಂಜೆಯ ತನಕ ಮನೆಯಲ್ಲಿದ್ದು ಪತ್ನಿಯನ್ನು ಅಂಗಡಿಗೆ ಸಾಮಾನು ತರಲು ಕಳುಹಿಸಿಕೊಟ್ಟು ಮನಯೆದುರು ಕಾಡುಮರಕ್ಕೆ ಏಣಿಯ  ಸಹಾಯದಿಂದ ಮರಕ್ಕೆ ಹತ್ತಿ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 27-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 24-07-2021 04:01 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080