ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್‌ ರಝಾಕ್‌ (35)ತಂದೆ:ದಿ||ಆದಂ ಕುಂಞ ವಾಸ:ಬುಡೋಳಿ ಮನೆ ಮತ್ತು ಪೆರಾಜೆ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:20-08-2022 ರಂದು ಸಂಜೆ ಸಮಯ ಸುಮಾರು 5.45 ಗಂಟೆಗೆ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬುಡೋಳಿ ಜಂಕ್ಷನ್‌ ಬಳಿಯ ಅಟೋರಿಕ್ಷಾ ಪಾರ್ಕಿಂಗ್‌ ಬಳಿ ನನ್ನ ಅಟೋ ಪಾರ್ಕಿಂಗ ಇದ್ದ ಸಮಯದಲ್ಲಿ ನಾನು ನೋಡುತ್ತಿದ್ದಂತೆ ಕೆಎ-19-ಈಆರ-9208ಸ್ಕೂಟರ್‌ ಸವಾರ ಅಬೂಬಕ್ಕರ್‌ ರಸ್ತೆಯ ತೀರಾ ಎಡಬದಿಯಲ್ಲಿ ನಿಧಾನವಾಗಿ ಬೆಂಗಳೂರು-ಮಂಗಳೂರು ರಾ ಹೇ 75ರ ಉಪ್ಪಿನಂಗಡಿ ಕಡೆಯಿಂದ ಮಾಣಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಅದರ ಹಿಂಬದಿಯಿಂದ ಅಂದರೆ ಉಪ್ಪಿನಂಗಡಿ ಕಡೆಯಿಂದ ಮಾಣಿ ಕಡೆಗೆ ಕೆಎ-70-ಎಂ-3046ನೇ ಮಾರುತಿ ಸ್ವಿಫ್ಟ ಕಾರನ್ನು ಅದರ ಚಾಲಕ ರಾಘವ ಆಚಾರಿ ಅಜಾಗರೂಕತೆ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರಗೆ ಅಪಘಾತಪಡಿಸಿದನು. ಪರಿಣಾಮ ಸ್ಕೂಟರ್ ಸವಾರನು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ಮತ್ತು ಕಣ್ಣಿಗೆ ಹಾಗೂ ಕೈಕಾಲುಗಳಿಗೆ ರಕ್ತ ಗಾಯವಾಗಿರುತ್ತದೆ. ನಂತರ ಪಿರ್ಯಾಧಿ ಮತ್ತು ಅಲ್ಲಿ ಸೇರಿದ ಜನರು ಒಂದು ಅಂಬುಲೆನ್ಸ ತರಿಸಿ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಕಡೆಗೆ ಕಳುಹಿಸಿಕೊಟ್ಟಿರುತ್ತಾರೆ, ಗಾಯಾಳುವನ್ನು ಪಡಿಲ್‌ನಲ್ಲಿರುವ ಫಸ್ಟ ನ್ಯೂರು ಆಸ್ಪತ್ರೆಗೆ ಕರೆದುಕೊಂಡು ಅಂಬುಲೆನ್ಸ ಚಾಲಕ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಗಾಯಾಳುವನ್ನು ಪರೀಕ್ಷೀಸಿ ತೀವೃ ನಿಗಾಘಟಕದಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 133/2022 ಕಲಂ : 279,337 ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಮೀಮಾ, 36 ವರ್ಷ ತಂದೆ: ಮಹಮ್ಮದ್ ಅಸ್ಲಾಂ ವಾಸ: ಕೋಡಿಮಜಲು ಮನೆ ಕುಂಪನಮಜಲು, ಪುದು ಗ್ರಾಮ, ಫರಂಗಿಪೇಟೆ ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ‍ಪಿರ್ಯಾದಿದಾರರು ದಿನಾಂಕ 22-08-2022 ರಂದು KA 19 EY 2075 ನೇ ಸ್ಕೂಟರ್ ನಲ್ಲಿ ಸಹ ಸವಾರಿಣಿಯಾಗಿ ಕುಳಿತುಕೊಂಡು ಮನೆಯಿಂದ ಮೇರಮಜಲು ಶಾಲೆಗೆ ಹೋಗಿ ವಾಪಾಸು ಮನೆ ಕಡೆಗೆ ಬರುತ್ತಾ ಸಮಯ ಸುಮಾರು ಸಂಜೆ 04:00 ಗಂಟೆಗೆ ಬಂಟ್ವಾಳ ತಾಲೂಕು ಮೇರಮಜಲು ಗ್ರಾಮದ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ತಲುಪಿದಾಗ ಸ್ಕೂಟರ್ ನ್ನು ಸವಾರ ಮೊಶಿನ್ ಸಲ್ವಾನ್ ರವರು ದುಡುಕುತನ ಹಾಗೂ ನಿರ್ಲಕ್ಯ್ಷತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಅರ್ಕುಳ-ಅಬ್ಬೆಟ್ಟು ರಸ್ತೆಯ ಎಡ ಬದಿಯ ಗುಂಡಿಗೆ ಬಿದ್ದು ಪಿರ್ಯಾದಿದಾರರು ಹಾಗೂ ಸ್ಕೂಟರ್ ಸವಾರ ಸ್ಕೂಟರ್ ಸಮೇತ ಎಸೆಯಲ್ಪಟ್ಟು ಸ್ಕೂಟರ್ ಸವಾರನಿಗೆ ತರಚಿದ ಗಾಯವಾಗಿದ್ದು ಪಿರ್ಯಾದಿದಾರರ ಎರಡು ಕೈ ಗಳ ಮಣಿಗಂಟಿಗೆ, ಮುಖಕ್ಕೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 95/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎನ್‌ ರಾಜೇಂದ್ರನ್‌, ಪ್ರಾಯ: 47 ವರ್ಷ, ತಂದೆ: ನಾಗ ನಾಯ್ಕರ್‌, ವಾಸ: ನಂ: 13, ನೈಕರ್‌ ಕಾಲೋನಿ, ವಾನಿ ಪುತ್ತೂರು, ಗೋಬಿ ಚೆಟ್ಟಿಪಳ್ಯಂ ತಾಲೂಕು, ಈರೋಡ್‌ ಜಿಲ್ಲೆ, ತಮಿಳುನಾಡು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಎನ್‌. ರಾಜೇಂದ್ರನ್‌ ರವರು ರಂಜಿತ್‌ ಕುಮಾರ್‌ ಎಂಬವರ ಬಾಬ್ತು ಮಾಲೀಕತ್ವದ TN36BW5699 ನೇ ಈಚರ್‌ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 22.08.2022 ರಂದು ತಮಿಳುನಾಡಿನ ಸತ್ಯಮಂಗಲ ಎಂಬಲ್ಲಿಂದ ಸದ್ರಿ ಈಚರ್‌ ಲಾರಿಯಲ್ಲಿ ಎಳನೀರು ಲೋಡ್‌ ಮಾಡಿಕೊಂಡು ಮಂಗಳೂರಿಗೆಂದು ಹೊರಟು ಮೈಸೂರು  ಮಡಿಕೇರಿ ಮಂಗಳೂರು ಮಾರ್ಗವಾಗಿ ಪಿರ್ಯಾದಿದಾರರು ಈಚರ್‌ ಲಾರಿಯನ್ನು ಚಲಾಯಿಸಿಕೊಂಡು ಮಾಣಿ ಮೈಸೂರು ಹೆದ್ದಾರಿಯಲ್ಲಿ ಬರುತ್ತಾ ದಿನಾಂಕ: 23.08.2022 ರಂದು ಬೆಳಿಗ್ಗೆ 7:00 ಗಂಟೆಗೆ ಸುಳ್ಯ ತಾಲೂಕು ಕನಕಮಜಲು ಗ್ರಾಮದ ಸುಣ್ಣಮಜಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಮಾಣಿ ಮೈಸೂರು ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ತಿರುವು ರಸ್ತೆಯಲ್ಲಿ ಮಾರುತಿ 800 ಕಾರೊಂದನ್ನು ಅದರ ಚಾಲಕ ಅಜಾಗರೂಕತೆ ಮತ್ತು ತೀರಾ ನಿರ್ಲಕ್ಚ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಲಾರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು ಚಾಲಕನ ಬಲಕಾಲಿಗೆ ರಕ್ತಗಾಯವಾಗಿದ್ದು, ಸದ್ರಿಯವನ್ನು ಪಿರ್ಯಾದಿದಾರರು ಮತ್ತು ಸ್ಥಳೀಯರು ಸೇರಿ ಉಪಚರಿಸಿ ಚಿಕಿತ್ಸೆಯ ಬಗ್ಗೆ 108 ವಾಹನದಲ್ಲಿ   ಪುತ್ತೂರು ಗೆ  ಕಳೂಹಿಸಿಕೊಟ್ಟಿದ್ದು, ಅಪಘಾತ ಉಂಟು ಮಾಡಿದ ಕಾರಿನ ಚಾಲಕನ ಹೆಸರು ರಮೇಶ್‌ ಎಂಬುದಾಗಿ ತಿಳಿದು ಬಂದಿದ್ದು, ಕಾರಿನ ನಂಬ್ರ ನೋಡಲಾಗಿ KA21M5286 ಆಗಿರುತ್ತದೆ. ಈ ಬಗ್ಗೆ ಸುಳ್ಯ ಠಾಣಾ ಪೊಲೀಸ್‌ ಠಾಣಾ ಅ. ಕ್ರ 94/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕುಸುಮಾಧರ ಪ್ರಾಯ: 29 ವರ್ಷ,  ತಂದೆ:ದಾಮೋಧರ ಗೌಡ, ಕಡಂಬಾಳ ಪಿರನ ಮನೆ, ಕೊಲ್ಲಮೊಗ್ರು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 12-08-2022 ರಂದು ಚಂದ್ರಶೇಖರ ರವರೊಂದಿಗೆ ಮೋಟಾರ್‌‌ ಸೈಕಲ್‌ ನಂ ಕೆಎ 21 ಎಲ್‌ 4903 ನೇದರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಸುಳ್ಯಕ್ಕೆ ಹೋಗಿ ವಾಪಾಸ್ಸು ಬರುವ ಸಮಯ ಮೋಟಾರ್‌‌ ಸೈಕಲ್ಲನ್ನು ಚಂದ್ರಶೇಖರ ರವರು ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಂಜೆ 5:45 ಗಂಟೆ ವೇಳೆಗೆ ಹರಿಹರಪಲ್ಲತ್ತಡ್ಕ ಗ್ರಾಮದ ಅಂಗನವಾಡಿ ಶಾಲೆ ಬಳಿ ತಲುಪಿದಾಗ ಮೋಟಾರ್‌‌ ಸೈಕಲ್‌‌ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಚಂದ್ರಶೇಖರ್‌ ರವರ ತಲೆಗೆ ತೀವ್ರ ತರಹದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕೆವಿಜಿ ಆಸ್ಪತ್ರೆ ಸುಳ್ಯಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಪಸ್ಟ್‌‌‌ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೆದುಳು ನಿಷ್ಕ್ರೀಯಗೊಂಡಿರುವುದಾಗಿ ತಿಳಿಸಿದ್ದು, ವೈದ್ಯಾಧಿಕಾರಿಯವರ ಸಲಹೆಯಂತೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಚಿಕಿತ್ಸೆ ಫಲಕಾರಿಯಾಗದೇ ಕೆವಿಜೆ ಆಸ್ಪತ್ರೆಯಲ್ಲಿ ದಿನಾಂಕ 23-08-2022 ರಂದು ಬೆಳಿಗ್ಗೆ 10:15 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಯವರು ತಿಳಿಸಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ ಅ.ಕ್ರ ನಂ 83/2022 ಕಲಂ:279, 304(ಎ) ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದಪ್ಪ ಪ್ರಾಯ 45 ತಂದೆ: ದಿ . ತುಕ್ರ ಮುಗೇರು ವಾಸ: ಚಿಲಿಂಬಿ ಮನೆ ನೀರಪಾದೆ ಬಾಳ್ತಿಲ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರಿಗೂ ಹಾಗೂ ಚಿಕ್ಕಪ್ಪನ ಮಗನಾದ ರವಿಗೂ ಆಸ್ತಿ ವಿಚಾರದಲ್ಲಿ ತಕರಾರು ಇದ್ದು. ದಿನಾಂಕ 23-08-2022 ರಂದು ಫಿರ್ಯಾದಿದಾರರು ಕೂಲಿ ಕೆಲಸದ ನಿಮಿತ್ತ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಸಣ್ಣ ಕುಕ್ಕು ಬಸ್  ನಿಲ್ದಾಣ ಬಳಿ ಬಸ್ಸಿಗಾಗಿ ಬೆಳಿಗ್ಗೆ 8.30 ಗಂಟೆಗೆ ಕಾಯುತ್ತಿದ್ದ ಸಮಯ ಚಿಕ್ಕಪ್ಪನ ಮಗನಾದ ರವಿಯು ಫಿರ್ಯಾದಿದಾರನ್ನು ನೋಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ರಸ್ತೆ ಬದಿಯಲ್ಲಿ ಇದ್ದ ಜಲ್ಲಿ ಕಲ್ಲನ್ನು ಹೆಕ್ಕಿ ಫಿರ್ಯಾದಿದಾರರ ಎಡ ಕಿವಿಯ ಹಿಂಭಾಗ ತಲೆಗೆ ಜೋರಾಗಿ ಹೊಡೆದು,  ಕೈಯಿಂದ ಫಿರ್ಯಾದಿದಾರರ ಕುತ್ತಿಗೆಯನ್ನು ಹಿಚುಕಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಆ ಸಮಯ ಫಿರ್ಯಾದಿದಾರರು ಬೊಬ್ಬೆ ಹಾಕುತ್ತಿರುವುದನ್ನು ನೋಡಿದ ತಮ್ಮ ಸಂಕಪ್ಪ ಹಾಗು ಅಳಿಯ ರಜನೀಶ ಬಂದು ಗಲಾಟೆಯನ್ನು ಬಿಡಿಸಿದ್ದು, ಆಗ ಆರೋಪಿತ ರವಿಯು ಫಿರ್ಯಾದಿಧಾರರನ್ನು ಉದ್ದೇಶಿಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳುತ್ತಾ ಅಲ್ಲಿಂದ ಹೋಗಿರುತ್ತಾನೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 78/2022  ಕಲಂ:  504, 324,323, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಪದ್ಮಾವತಿ ಪ್ರಾಯ 40 ವರ್ಷ ಗಂಡ: ವೀರೇಂದ್ರ ಪಾಟೀಲ್ ನಾಯ್ಕ್ .ಎಂ, ವಾಸ: ದುರ್ಗಾಪ್ರಸಾದ್ ನಿಲಯ, ಬೆರ್ಕಳ ರಸ್ತೆ,  ಪಿಲಾತಬೆಟ್ಟು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ತನ್ನ ಗಂಡ ಮತ್ತು ಮಕ್ಕಳೊಂದಿಗೆ ಬಂಟ್ವಾಳ ತಾಲೂಕು ಪಿಲಾತ್ತಬೆಟ್ಟು ಗ್ರಾಮದ ಬೆರ್ಕಳ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಪಿರ್ಯಾದಿದಾರರ ಗಂಡ 52 ವರ್ಷದ  ವೀರೇಂದ್ರ ಪಾಟೀಲ್ ನಾಯ್ಕ್ ಎಂ ಎಂಬವರು ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು.   ದಿನಾಂಕ: 20.8.2022 ರಂದು ಪಿರ್ಯಾದಿದಾರರು ತನ್ನ ಮಕ್ಕಳೊಂದಿಗೆ ಸಂಬಂಧಿಕರ ಮದುವೆ ಕಾರ್ಯದ ಬಗ್ಗೆ ಚಿತ್ರದುರ್ಗ ಜಿಲ್ಲೆಯ  ಹೊಸದುರ್ಗ ತಾಲೂಕು ಗುತ್ತಿಕಟ್ಟೆ ಲಂಬಾಣಿಹಟ್ಟಿಗೆ ಹೋಗಿದ್ದು ಅವರ ಗಂಡ ಮನೆಯಲ್ಲೆ ಇದ್ದರು.  ದಿನಾಂಕ: 22.8.2022 ರಂದು ಪಿರ್ಯಾದಿದಾರರು  ತನ್ನ  ಗಂಡನಿಗೆ ಫೋನು ಮಾಡುತ್ತಿದ್ದು ಮೊಬೈಲ್ ಸ್ವಿಚ್ ಆಫ್  ಆಗಿದ್ದುದರಿಂದ  ಅನುಮಾನಗೊಂಡು ಊರಿಂದ ವಾಪಾಸು ಹೊರಟು ದಿನಾಂಕ: 23.8.2022 ರಂದು ಬೆಳಿಗ್ಗೆ 4.30 ಗಂಟೆಗೆ ಮನೆ ತಲುಪಿ ನೋಡಿದಾಗ ಪಿರ್ಯಾದಿದಾರರ ಗಂಡ ಮನೆಯಲ್ಲಿ ಮಂಚದ ಮೇಲೆ ಕುಳಿತ ಭಂಗಿಯಲ್ಲೆ ಇದ್ದು ಕರೆದರೂ ಮಾತನಾಡದೇ ಇದ್ದುದರಿಂದ  ಕೂಡಲೇ 108 ಆಂಬ್ಯುಲೆನ್ಸ್ ತರಿಸಿ ಅದರಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ UDR NO 18/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಹಾಸ ಪ್ರಾಯ 38 ವರ್ಷ ತಂದೆ: ರಾಚೇ ಗೌಡ, ವಾಸ: ಚಿಕ್ಕಮಳಲಿ ಗ್ರಾಮ ದೂರಿನಂತೆ ಪಿರ್ಯಾದಿದಾರರು ಕೆಎ-19-ಎಬಿ-9393ನೇ ಟಾಂಕರ್ ಲಾರಿ ಚಾಲಕರಾಗಿದ್ದು, ತನ್ನ  ಗೆಳೆಯನಾದ ಮಹಾದೇವ ಪ್ರಾಯ 36 ವರ್ಷ, ತಂದೆ: ದಿ|| ಅಣ್ಣೇ ಗೌಡ ಎಂಬವರು ದಿನಾಂಕ 15-08-2022ರಿಂದ ಚಾಲಕ ಕೆಲಸ ಮಾಡುವುದಾಗಿ ಬಂದಿದ್ದವರು ಇಬ್ಬರೂ ಟಾಂಕರ್ ಲಾರಿಯಲ್ಲಿ ಚಾಲಕ ಕೆಲಸ ಮಾಡಿಕೊಂಡು,  ದಿನಾಂಕ 22-08-2022ರಂದು ಸಂಜೆ ಸಮಯ ಸುಮಾರು 3.00 ಗಂಟೆಗೆ ಮಂಗಳೂರಿನ ಎಂ ಆರ್ ಪಿ ಎಲ್ ನಲ್ಲಿ ಟಾಂಕರ್ ಲಾರಿಗೆ ಡಾಮರು ಲೋಡ್ ಮಾಡಿಕೊಂಡು ಬೆಂಗಳೂರು ಕಡೆಗೆ ಹೋಗುವರೇ ರಾ ಹೆ 75 ರಲ್ಲಿ ಚಲಾಯಿಸಿಕೊಂಡು ಕಡಬ ತಾಲೂಕು, ಶಿರಾಡಿ ಗ್ರಾಮದ ಅಡ್ಡೊಳೆ ಎಂಬಲ್ಲಿಗೆ ರಾತ್ರಿ ಸುಮಾರು 11.00 ಗಂಟೆಗೆ ತಲುಪಿದಾಗ ಶಿರಾಡಿ ಘಾಟಿ ಜರಿದ ಕಾರಣ ಯಾವುದೇ ಸರಕು ವಾಹನಗಳು ಹೋಗದೇ ಇದ್ದು, ರಸ್ತೆ ಬದಿಗೆ ಟಾಂಕರ್ ಲಾರಿ ನಿಲ್ಲಿಸಿಕೊಂಡು ಪಿರ್ಯಾದಿ ಮತ್ತು ಮಹದೇವ ಲಾರಿಲ್ಲಿ ಮಲಗಿದ್ದು, ದಿನಾಂಕ 23-08-2022ರಂದು ಬೆಳಗ್ಗಿನ ಜಾವ ಸುಮಾರು 3.45 ಗಂಟೆಗೆ ಮಹಾದೇವನು ಎದ್ದು, ಮೂತ್ರ ವಿಸರ್ಜನೆ ಮಾಡಿ ಲಾರಿ ಮೇಲೆ ಹತ್ತಲು ಆದಗೇ ಎದೆ ನೋವು ಎಂಬುದಾಗಿ ತಿಳಿಸಿದಾತನನ್ನು ಪಿರ್ಯಾದಿ ಉಪಚರಿಸಿದರೂ, ಎದೆ ನೋವು ಹೆಚ್ಚಾದವರನ್ನು 108 ಅಂಬ್ಯೂಲೆನ್ಸ್ ನಲ್ಲಿ ಮಹದೇವನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಮಹದೇವನನ್ನು ಪರೀಕ್ಷಿಸಿ ಬೆಳಿಗ್ಗೆ 6.20 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 21/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-08-2022 10:34 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080