ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ ನಾಸಿರ್(36) ತಂದೆ; ಇಬ್ರಾಹಿಂ ವಾಸ:  ಮಂಕುಡೆ ಮನೆ, ಕುಡ್ತಮುಗೇರು ಕೊಳ್ನಾಡು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ಈ ದಿನ ದಿ; 23.09.2022 ರಂದು ಮಧ್ಯಾಹ್ನ ಪೆರ್ಲ ಕಡೆಗೆ ತನ್ನ ಮೋಟಾರು ಸೈಕಲಿನಲ್ಲಿ ವಿಟ್ಲ-ಪೆರ್ಲ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು  ಕೇಪು ಗ್ರಾಮದ ಮೈರ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಒಂದು ಮೋಟಾರು ಸೈಕಲನ್ನು ಅದರ ಸವಾರ ರಸ್ತೆಯ ತೀರಾ ಎಡಬದಿಯಿಂದಾಗಿ ಪೆರ್ಲ ಕಡೆಗೆ ಹೋಗುತ್ತಾ ಎದುರಿನಿಂದ ಅಂದರೆ ಪೆರ್ಲ ಕಡೆಯಿಂದ ಒಂದು ಪಿಕ್ ಅಪ್ ವಾಹನವನ್ನು ಅದರ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಮೋಟಾರು ಸೈಕಲಿಗೆ ಅಪಘಾತಪಡಿಸಿದ ಪರಿಣಾಮ ಮೋಟಾರು ಸೈಕಲು ಸವಾರರು ಮೋಟಾರು ಸೈಕಲು ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರ ಹೋಗಿ ನೋಡಲಾಗಿ ಪರಿಚಯದ ಬದಿಯಡ್ಕದ ಸಂದೇಶ್ ಎಂಬವರಾಗಿದ್ದು ಅವರ ತಲೆಯ ಭಾಗಕ್ಕೆ, ಬಲ ಕಾಲಿಗೆ ಹಾಗೂ ದೇಹದ ಇತರ ಕಡೆಗಳಲ್ಲಿ ರಕ್ತಗಾಯವಾಗಿದ್ದು ಅಲ್ಲಿ ಇದ್ದವರು ಅಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿ ಅಂಬ್ಯುಲೆನ್ಸ್ ವಾಹನ ಬಂದ ಬಳಿಕ ಗಾಯಾಳುವನ್ನು ವಿಟ್ಲ ಕಡೆ ಆಸ್ಪತ್ರೆಗೆ ಮಧ್ಯಾಹ್ನ 3.25 ಗಂಟೆ ಸಮಯಕ್ಕೆ ಅಂಬ್ಯುಲೆನ್ಸ್ ವಾಹನದವರು ಕರೆದುಕೊಂಡು ಹೋದಾಗ ಅಲ್ಲಿನ ವೈಧ್ಯರು ಗಾಯಾಳುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಪಿರ್ಯಾದಿದಾರರಿಗೆ ತಿಳಿಸಿದ್ದು, ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 150/2022  ಕಲಂ: 279,304(A) ಬಾಧಂಸಂ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಫೌಜೀಯಾ (38) ಗಂಡ :ಮಹಮ್ಮದ್ ಎ, ವಾಸ :ಸುಂಕದಕಟ್ಟೆ ಮನೆ,ಬಡಗಕಾರಂದೂರು ಗ್ರಾಮ, ಅಳದಂಗಡಿ ಅಂಚೆ,ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 22-09-2022 ರಂದು  ರಾತ್ರಿ  09:00  ಗಂಟೆಯಿಂದ   ದಿನಾಂಕ: 23-09-2022 ರಂದು  ಬೆಳಿಗ್ಗೆ  07:00 ಗಂಟೆಯ  ಮಧ್ಯ ಅವಧಿಯಲ್ಲಿ   ಬೆಳ್ತಂಗಡಿ ತಾಲೂಕು ಬಡಗಕಾರಂದೂರು  ಗ್ರಾಮದ ಅಳದಂಗಡಿ  ಸುಂಕದಕಟ್ಟೆ ಎಂಬಲ್ಲಿ   ಪಿರ್ಯಾದಿದಾರರ  ವಾಸ್ತವ್ಯ  ಇರುವ  ಮನೆಯ  ಬಾಗಿಲಿನ  ಬೀಗ ವನ್ನು  ಯಾರೋ  ಕಳ್ಳರೂ  ಮುರಿದು  ಒಳ ಪ್ರವೇಶಿಸಿ ಮನೆಯ  ಬೆಡ್‌ ರೂಂ ನಲ್ಲಿದ್ದ   ಗೋದ್ರೇಜ್‌   ಕಪಾಟನ್ನು  ತೆರದು   ಅದರಲ್ಲಿದ್ದ  ಒಟ್ಟು 8 ½  ಪವನ್‌   ತೂಕದ ಚಿನ್ನ ದ ಅಂದಾಜು  ಮೌಲ್ಯ 2,72,000 ಹಾಗೂ ನಗದು ರೂ 25,000/-ಸೇರಿ   ಒಟ್ಟು ರೂ  2,97,000/-  ಗಳಾಗಬಹುದು. ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 59/2022 ಕಲಂ:,457,380  IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವೀಣಾ ಸೊರೆಸ್ ಪ್ರಾಯ 25 ವರ್ಷ ಗಂಡ ಆಕಾಶ್ ವಾಸ ಬರಿಮಾರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ಮುಂಬೈಯಲ್ಲಿ ವಾಸವಾಗಿದ್ದು ಸುಮಾರು 1  ವರ್ಷದ ಹಿಂದೆ ಗಂಡನೊಂದಿಗೆ  ಡಿವೋರ್ಸ್‌  ಹೊಂದಿ ತಾಯಿ ಮನೆಯಾದ  ಬರಿಮಾರು ಎಂಬಲ್ಲಿ ವಾಸವಾಗಿರುವುದಾಗಿದೆ, ಪಿರ್ಯಾದಿದಾರರ ಚಿಕ್ಕಪ್ಪ ನವರಿಗೆ ಮತ್ತು ಪಿರ್ಯಾದಿದಾರರ ತಾಯಿಯ  ಜಾಗದ ವಿಚಾರದಲ್ಲಿ ಇತ್ತಂಡದವರ  ಮೇಲೆ  ಸಿವಿಲ್‌ ಕೇಸ್‌ ಇದ್ದು.  ದಿನಾಂಕ 22-09-2022 ರಂದು ಮದ್ಯಾಹ್ನ 12.30 ಗಂಟೆಗೆ  ಪಿರ್ಯಾದಿದಾರರ ತಂದೆಯ ತಂಗಿಯಾದ ಜೂಲಿಯಾನ ಸೋರೆಸ್ ರವರು ಪಿರ್ಯಾದಿದಾರರ  ಮನೆಗೆ ಏಕ ಏಕಿ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ನಮ್ಮ ಜಾಗದ ವಿಚಾರದಲ್ಲಿ ಯಾಕೆ ಮದ್ಯ ಪ್ರವೇಶಿಸುತ್ತೀಯ ಎಂದು ಕೇಳಿ, ಅವ್ಯಾಚವಾಗಿ ಶಬ್ದಗಳಿಂದ ಬೈದು ಕೈಯಿಂದ  ಪಿರ್ಯಾದಿರಾರರ ತಲೆಯನ್ನು ಗೋಡೆಗೆ ದೂಡಿ ಕೈಯಿಂದ ತಲೆ ಕೂದಲನ್ನು ಹಿಡಿದು ಎಳೆದು ನೋವುಂಟು ಮಾಡಿದ್ದು  ಈ ಬಗ್ಗೆ   ಪಿರ್ಯಾದಿದಾರರು  ತಾಯಿಯ ಜೊತೆ ಚಿಕಿತ್ಸೆಯ ಬಗ್ಗೆ ಬಂಟ್ವಾಳ ಆಸ್ಪತ್ರಗೆ  ಬಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 75/2022 ಕಲಂ 448,504,323 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದುಂಡಪ್ಪ ಸೋಮಪ್ಪ ಜಂಗಪ್ಪಗೋಳ ಪ್ರಾಯ 28 ವಷ  ತಂದೆ ಸೋಮಪ್ಪ ವಾಸ;  ಜೈನ್‌ ಪುರ ಗ್ರಾಮ ಬಬಲೇಶ್ವರ ತಾಲೂಕೂ ವಿಜಯಪುರ ಜಿಲ್ಲೆ ಹಾಲಿ ವಿಳಾಸ ; ಕೆಕೆ ವಾಸು  ಹಳ್ಳಂಗೆರಿ  ಕೊಕ್ಕಡ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರು ಉಜಿರೆ ಉಪವಿಭಾಗದ ಕೊಕ್ಕಡ ಮೆಸ್ಕಾಂ ಶಾಖೆಯಲ್ಲಿ ಲೈನ್ ಮೆನ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ: 22.09.2022 ರಂದು ಕರ್ತವ್ಯದ ನಿಮಿತ್ತ ಕೊಕ್ಕಡ ಶಾಖೆಗೆ ಹೋಗಿ ಅಲ್ಲಿಂದ ವಾಪಾಸು ಕರ್ತವ್ಯ ನಿಮಿತ್ತ ಕೊಕ್ಕಡ ಜಂಕ್ಷನ್‌ ಬಂದಾಗ ಸಮಯ ಸುಮಾರು ರಾತ್ರಿ 9.12 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸುಮುಖ ಸ್ಟೋರ್‌ ಬಳಿ ಪಿರ್ಯಾದಿದಾರರ ಸಹೋದ್ಯೋಗಿಗಳಾದ ಉಮೇಶ್‌ ಹೈನಾಪೂರ, ಅನ್ವರ್‌,  ಉಮೇಶ್‌ ಬಿ ಮತ್ತು ಅಶೋಕ್‌ ರಾಥೋಡ್‌ ರವರು ನಿಂತು ಕೊಂಡು ಮಾತನಾಡುತ್ತಿದ್ದು, ಅವರನ್ನು ನೋಡಿ ಅವರ ಬಳಿ ಹೋಗಿ ಮಾತನಾಡಿಕೊಂಡಿದ್ದ ಸಮಯ  ಉಮೇಶ್‌ ಹೈನಾಪೂರ ರವರು  ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಪರಿಸರದ ಹತ್ಯಡ್ಕ ಗ್ರಾಮದ ಮುದ್ದಿಗೆ ನಿವಾಸಿ ಕಾಂತು ಪೂಜಾರಿ ಎಂಬವರ ಬಾಬ್ತು  ಮನೆಯವರು ಸುಮಾರು 5-6 ತಿಂಗಳಿಂದ ವಿದ್ಯುತ್‌ ಬಿಲ್‌ ಪಾವತಿಸದ ಕಾರಣ ಇಲಾಖಾ ಮೇಲಾದಿಕಾರಿಗಳ ಆದೇಶದಂತೆ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿರುತ್ತಾರೆ. ಸದ್ರಿ ಮನೆಯವರು ಈ ದಿನ ಉಜಿರೆ ಮೆಸ್ಕಾಂ ಉಪವಿಭಾಗ ಹಣ ಪಾವತಿಸಿರುವುದರಿಂದ ಸದ್ರಿ ಮನೆಗೆ ವಿದ್ಯುತ್‌ ಸಂಪರ್ಕವನ್ನು ಕೊಡುವಂತೆ ತಿಳಿಸಿದ್ದು, ಉಮೇಶ್‌ ಹೈನಾಪೂರರವರು  ಹೋಗಿ ವಿದ್ಯುತ್‌ ಸಂಪರ್ಕ ಕೊಟ್ಟು ಬಂದಿರುವುದಾಗಿ ಪಿರ್ಯಾದಿದಾರರಲ್ಲಿ ಮತ್ತು ಇತರರಲ್ಲಿ ತಿಳಿಸುತ್ತಿದ್ದ ಸಮಯ ಅದೇ ಸಮಯಕ್ಕೆ ಆಪಾದಿತನು ಪಿರ್ಯಾದಿದಾರರು ಮತ್ತು ಅವರ ಸಹೋದ್ಯೋಗಿಗಳು ನಿಂತುಕೊಂಡಿದ್ದ  ಬಳಿ ಬಂದು ಸಮ ವಸ್ತ್ರದಲ್ಲಿದ್ದ ಪಿರ್ಯಾದಿದಾರರು ಮತ್ತು ಇತರರನ್ನು ನೋಡಿ “ಇದರಲ್ಲಿ ಉಮೇಶ್‌ ಹೈನಾಪೂರ ಎಂಬ ಲೈನ್‌ ಮ್ಯಾನ್‌ ಯಾರು? ಎಂದು ಕೇಳಿದಾಗ ಉಮೇಶ್‌ ರವರು ನಾನೇ ಉಮೇಶ್‌ ಹೈನಾಪೂರ ಲೈನ್‌ ಮ್ಯಾನ್‌ ನೀವು ಯಾರು ಎಂದು ಕೇಳಿದಾಗ ಆಪಾದಿತನು ನಾನು ರಿಜೀಶ್‌ ನೀವು ಮುದ್ದಿಗೆ ಮನೆ ಕಾಂತು ಪೂಜಾರಿಯವರ ಮನೆಯ ಬಾಬ್ತು ವಿದ್ಯುತ್‌ ಸಂಪರ್ಕವನ್ನು ಯಾಕೆ ಕಡಿತಗೊಳಿಸಿದ್ದು, ಕರೆಂಟ್‌ ನಿನ್ನ ಅಪ್ಪನದಾ? ಎಂದು ಅವಾಚ್ಯ ಶಬ್ದಗಳಿಂದ ಬೈದು  ಉಮೇಶ್‌ ಹೈನಾಪೂರ ರವರ ಕುತ್ತಿಗೆಗೆ ಕೈ ಹಾಕಿ ದೂಡಿ  ಆಪಾದಿತನು ಅಲ್ಲಿಯೇ ಅಂಗಡಿಯ ಬದಿಯಲ್ಲಿ ಇದ್ದ ಸೋಡಾ ಬಾಟ್ಲಿಯನ್ನು ಕೈಯಲ್ಲಿ ತೆಗೆದು ಕೊಂಡು ಉಮೇಶ್‌ ಹೈನಾಪೂರರವರಿಗೆ ಹಲ್ಲೆ ನಡೆಸಲು ಮುಂದಾದಾಗ ಪಿರ್ಯಾದಿದಾರರು ಮತ್ತು ಅವರ ಜೊತೆಯಲ್ಲಿದ್ದವರು ತಡೆಯಲು ಹೋದಾಗ ಆಪಾದಿತನು ಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ ಸೋಡಾ ಬಾಟಲಿಯಿಂದ ಹೊಡೆದಾಗ ಎಲ್ಲರೂ ಸೇರಿ ಗಲಾಟೆಯನ್ನು ಬಿಡಿಸಿದಾಗ ಆಪಾದಿತನು ಈಗ ನೀವು ಬದುಕಿದ್ದೀರಾ ಮುಂದಕ್ಕೆ ಇದೇ ರೀತಿ ವಿದ್ಯುತ್‌ ಸಂಪರ್ಕ ಕಡಿತ ಗೊಳಿಸಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಸೋಡಾ ಬಾಟಲಿಯನ್ನು ಅಲ್ಲೇ ಬಿಸಾಡಿ ಅಲ್ಲಿಂದ ಹೊರಟು ಹೋಗಿದ್ದು, ಆಪಾದಿತನು ನಡೆಸಿದ ಹಲ್ಲೆಯಿಂದ ಪಿರ್ಯಾದಿದಾರರ ತಲೆಯ ಹಿಂಬದಿಗೆ ರಕ್ತಗಾಯವಾಗಿ ಬೆಳ್ತಂಗಡಿ ಸರಕಾರಿ  ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದು. ಈ ಬಗ್ಗೆ ಧರ್ಮಸ್ಥಳ ಠಾಣೆ C R NO 65-2022 353.504.332.506 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-09-2022 10:30 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080