ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಾಹುಲ್‌ ಹಮೀದ್‌ (40), ತಂದೆ: ಅಬ್ಬೋನು ಹಾಜಿ, ವಾಸ: ಐಡಿಯಲ್‌ ಮಂಝಿಲ್‌, ನಾವೂರು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 22-10-2022 ರಂದು ತನ್ನ ದ್ವಿಚಕ್ರ ವಾಹನ ಕೆಎ 21 ಎಕ್ಸ್‌ 9681 ನೇದರಲ್ಲಿ ಸಹಸವಾರನಾಗಿ ಬಶೀರ್‌ ಎಂಬವರನ್ನು ಕುಳ್ಳಿರಿಸಿಕೊಂಡು ಮಂಜೋಟ್ಟಿ ಕಡೆಯಿಂದ ನಾವೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಸಮಯ ಸುಮಾರು ಬೆಳಿಗ್ಗೆ  08.00 ಗಂಟೆಗೆ ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ದೇರಲಕ್ಕಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ನಾವೂರು ಕಡೆಯಿಂದ ಮಂಜೋಟ್ಟಿ ಕಡೆಗೆ ಮೋಟಾರು ಸೈಕಲ್‌ ಕೆಎ 70 ಎಚ್‌ 3928 ನೇದರ ಸವಾರನು ತಾನು ಚಲಾಯಿಸುತ್ತಿದ್ದ ಮೋಟಾರು ಸೈಕಲ್‌ನ್ನು ದುಡುಕುತನದಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲ ಕೋಲು ಕೈಗೆ ಭುಜಕ್ಕೆ ಗುದ್ದಿದ ಗಾಯ, ಸಹಸವಾರ ಬಶೀರ್‌ರವರಿಗೆ ಎಡಕಾಲಿಗೆ ಗುದ್ದಿದ ಗಾಯ, ಹಾಗೂ ಆರೋಪಿ ಮೋಟಾರು ಸೈಕಲ್‌ ಸವಾರನಿಗೆ ಮುಖಕ್ಕೆ ಗುದ್ದಿದ ಗಾಯವಾಗಿರುತ್ತದೆ ಗಾಯಾಳುಗಳ ಪೈಕಿ ಪಿರ್ಯಾದಿದಾರರು ಮತ್ತು ಬಶೀರ್‌  ಉಜಿರೆ ಬೆನಕ ಆಸ್ಪತ್ರೆಯಲ್ಲಿ ಹೋರರೋಗಿಯಾಗಿ ಹಾಗೂ ಆರೋಪಿ ಮೋಟಾರು ಸೈಕಲ್‌ ಸವಾರ ಮಂಗಳೂರು ಕೆಎಸ್‌ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 130/2022 ಕಲಂ; 279,  337 ಭಾದಂಸಂ ಮತ್ತು ಕಲಂ: R.R Rules 7 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜನಿಶ್ (26)ತಂದೆ : ಜಯಂತ ವಾಸ : ಸುವರ್ಣ ವಿ ಸುರಕ್ಷಾ ಮನೆ, ವರಕಬೆ , ಕುವೆಟ್ಟು ಗ್ರಾಮ, ಬೆಳ್ತಂಗಡಿ  ಎಂಬವರ ದೂರಿನಂತೆದಿನಾಂಕ 23-10-2022 ರಂದು 13.30 ಗಂಟೆಗೆ ಪಿರ್ಯಾದಿದಾರರು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ವರಕಬೆ ಎಂಬಲ್ಲಿಗೆ ಅವರ ಬಾಬ್ತು ಸ್ಕೂಟರ್‌ ನಲ್ಲಿ ತಲುಪುತ್ತಿದ್ದಂತೆ ಮೋಟಾರು ಸೈಕಲು ಕೆಎ 19 EX 3356 ನೇದರ ಚಾಲಕರು ಬಂಟ್ವಾಳ ಕಡೆಯಿಂದ ಬರುತ್ತಾ ತನ್ನ ಮೋಟಾರು ಸೈಕಲಿನ ಬಲಬದಿಯ ಇಂಡಕೇಟರ್‌ ಹಾಕಿ,ಎರಡು ಕಡೆಗಳಿಂದ ವಾಹನಗಳು ಬಾರದೇ ಇರುವುದಾನ್ನು ಗಮನಿಸಿ ತನ್ನ ಮೋಟಾರು ಸೈಕಲ್‌ ನ್ನು ಸಂಪೂರ್ಣವಾಗಿ ವರಕಬೆ ಕಡೆಗೆ ತಿರುಗಿಸುತ್ತಿದ್ದಂತೆ,ಬೆಳ್ತಂಗಡಿ ಕಡೆಯಿಂದ ಬಂಟ್ವಾಳ ಕಡೆಗೆ ಮೋಟಾರು ಸೈಕಲು ಕೆಎಲ್‌ 25 G 8078 ನೇದರ ಚಾಲಕ ಅಬ್ದುಲ್‌ ರೆಹಮಾನ್‌ ತಾನು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್‌ ನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಮೋಟಾರು ಸೈಕಲು ಕೆಎ 19 EX 3356 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ಮೋಟಾರು ಸೈಕಲ್‌ ಸವಾರರು ಮೋಟಾರು ಸೈಕಲ್‌ ಸಹಿತ  ರಸ್ತೆಗೆ ಬಿದ್ದಿರುತ್ತಾರೆ. ಇದರ ಪರಿಣಾಮ ಎರಡು ಮೋಟಾರು ಸೈಕಲ್‌ ಗಳು ಜಖಂ ಗೊಂಡಿರುತ್ತದೆ. ಈ ಅಪಘಾತದಿಂದ  ಮೋಟಾರು ಸೈಕಲು ಕೆಎ 19 EX 3356 ನೇದರ ಚಾಲಕ ಪಿರ್ಯಾದಿದಾರರ ಪರಿಚಯಸ್ತನಾಗಿದ್ದು ಅವರ ಹೆಸರು ಶ್ರೀಕಾಂತ್‌ ಆಗಿರುತ್ತದೆ. ಅವರಿಗೆ ಎಡಕಾಲಿನ ಮೊಣಗಂಟಿಗೆ ,ಎಡಕಾಲಿನ ಕೋಲುಕಾಲಿಗೆ, ಎಡಕೈಗೆ ರಕ್ತಗಾಯವಾಗಿರುತ್ತದೆ ಕೆಎಲ್‌ 25 G 8078 ನೇದರ ಚಾಲಕ ಅಬ್ದುಲ್‌ ರೆಹಮಾನ್‌ರವರಿಗೆ ಬಲಕಾಲಿಗೆ ತರಚಿದ ತರಹದ ಸಾಮಾನ್ಯ ಗಾಯವಾಗಿರುತ್ತದೆ ಪ್ರಕರಣದ ಗಾಯಾಳು ಶ್ರೀಕಾಂತ್‌ ರವರು ಗುರುವಾಯನಕೆರೆಯ ಅಭಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಹಾಗೂ ಅರೋಪಿ ಮೋಟಾರು ಸೈಕಲ್‌ ಸವಾರ ಅಬ್ದುಲ ರೆಹಮಾನ್‌ ಗುರುವಾಯನಕೆರೆಯ ಅಭಯಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ .ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ:131/2022 ಕಲಂ 279,337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಾರ್ತಿಕ್ ಕೆ ಪ್ರಾಯ 20 ವರ್ಷ ತಂದೆ: ದಿ|| ಕೇಶವ ಗೌಡ ವಾಸ: ಕೆಳಗಿನ ಮನೆ ವಳಾಲು, ಬಜತ್ತೂರು ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಕಾರ್ತಿಕ್ ಕೆ ಪ್ರಾಯ 20 ವರ್ಷ ತಂದೆ: ದಿ|| ಕೇಶವ ಗೌಡ ವಾಸ: ಕೆಳಗಿನ ಮನೆ ವಳಾಲು, ಬಜತ್ತೂರು ಗ್ರಾಮ ಪುತ್ತೂರು ತಾಲೂಕು ಎಂಬವರು ನೆಲ್ಯಾಡಿಯ ಕೆ.ಪಿ ತೋಮಸ್ ರವರ ಹೆಚ್.ಪಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 23-10-2022 ರಂದು ತನ್ನ ಬಾಬ್ತು ಕೆಎ 21 ಇಬಿ 9676 ನೇ ಮೋಟಾರ್ ಸೈಕಲ್ ನಲ್ಲಿ ಮನೆಯಿಂದ ಹೊರಟು ನೆಲ್ಯಾಡಿಗೆ ಕೆಲಸಕ್ಕೆ ಹೋಗುವರೇ ರಾ. ಹೆದ್ದಾರಿ 75 ರಲ್ಲಿ  ಕಡಬ ತಾಲೂಕು ಕೊಣಾಲು ಗ್ರಾಮದ ಆರ್ಲ ಎಂಬಲ್ಲಿಗೆ ಬೆಳಿಗ್ಗೆ 09:00 ಗಂಟೆಗೆ ತಲುಪುವಾಗ ಎದುರಿನಿಂದ ಅಂದರೆ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ  ಬರುತ್ತಿದ್ದ ಕೆಎ 19ಇಸಿ 5145 ನೇ ಮೋಟಾರ್ ಸೈಕಲ್ ಸವಾರ ಯಾವುದೇ ಸೂಚನೇ ನೀಡದೇ ಒಮ್ಮೇಲೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತನ್ನ ಮೋಟಾರ್ ಸೈಕಲ್ ನ್ನು ಬಲ ಬದಿಗೆ ಚಲಾಯಿಸಿದ ಪರಿಣಾಮ ಎರಡೂ ಮೋಟಾರ್ ಸೈಕಲ್ ರಸ್ತೆಗೆ ಬಿದ್ದು, ಫಿರ್ಯಾದಿದಾರರಿಗೆ ಮೂಗಿಗೆ, ಎಡಕಾಲಿನ ಮಣಿಗಂಟಿಗೆ , ಹಾಗೂ ಬೆನ್ನಿನ ಎಡಭಾಗಕ್ಕೆ ಗಾಯಗಳಾಗಿದ್ದು, ಎರಡೂ ಮೋಟಾರ್ ಸೈಕಲ್ ಜಖಂಗೊಂಡಿರುತ್ತದೆ. ಅಪಘಾತಪಡಿಸಿದ ಕೆಎ 19ಇಸಿ 5145 ನೇ ಮೋಟಾರ್ ಸೈಕಲ್ ಸವಾರರಿಗೂ ಗಾಯವಾಗಿರುತ್ತದೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 114/2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಕಲಾ (43) ಗಂಡ: ದೇವಿಪ್ರಸಾದ್ ವಾಸ: ದೇರಾಜೆ ಮನೆ, ಅರಂತೋಡು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಗಂಡ ದೇವಿಪ್ರಸಾದ್ ಎಂಬಾತನು ಮಧ್ಯಪಾನ ಸೇವನೆ ಮಾಡುವ ಚಟವನ್ನು ಹೊಂದಿದ್ದು, ಮದ್ಯಪಾನ ಮಾಡಿ ವಿನಃ ಕಾರಣ ಬೈಯುವ,  ಜಗಳ ಮಾಡುವ ಸ್ವಭಾವದವನಾಗಿದ್ದು, ದಿನಾಂಕ: 22.10.2022 ರಂದು ಸಮಯ ಸುಮಾರು 17:45 ಗಂಟೆಗೆ ಪಿರ್ಯಾದುದಾರರು ಸುಳ್ಯ ತಾಲೂಕು ಅರಂತೋಡು ಗ್ರಾಮದ ದೇರಾಜೆ ಮನೆ ಎಂಬಲ್ಲಿರುವ ಸಮಯ, ಆರೋಪಿಯು ಪಿರ್ಯಾದುದಾರರನ್ನು ಉದ್ದೇಶಿಸಿ ಕ್ಷುಲ್ಲಕ ವಿಚಾರದಲ್ಲಿ ತಕರಾರು ತೆಗೆದು  ಮನೆಯಲ್ಲಿದ್ದ ಕತ್ತಿಯೊಂದನ್ನು ತಂದು ಪಿರ್ಯಾದುದಾರರ ತಲೆಗೆ ಕಡೆದು, ನಂತರ ಎಡತೋಡೆಗೆ ಕಡಿದುದರಿಂದ ರಕ್ತಗಾಯವಾಗಿದ್ದು, ಪಿರ್ಯಾದುದಾರರು ಬೊಬ್ಬೆ ಹೊಡೆದಿದ್ದು, ಆಗ ಸ್ಥಳಕ್ಕೆ ಪಿರ್ಯಾದುದಾರರ ಅತ್ತೆ ಧರ್ಮಾವತಿ, ಮತ್ತು ಅವರ ಗಂಡ ನಾಗೇಂದ್ರ ಪಿರ್ಯಾದುದಾರರ ಬಳಿ ಬಂದು, ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಕತ್ತಿಯಿಂದ ಹಲ್ಲೆ ಮಾಡಿದ್ದುದರಿಂದ ಪಿರ್ಯಾದುದಾರರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ: 122/2022, 324,326,504, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗೋಪಿನಾಥ ಕಾಮತ್ (71) ತಂದೆ: ದಿ| ಬಿವೆಂಕಟೇಶ ಕಾಮತ್ ವಾಸ: ಹರಿಪ್ರಸಾದ, ಬೈಪಾಸ್ ರಸ್ತೆ ಬಂಟ್ವಾಳ ಬಿ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರಿಗೆ ಮಕ್ಕಳಿಲ್ಲದೇ ಇದ್ದು, ಇದರಿಂದಾಗಿ ಪಿರ್ಯಾದಿದಾರರ ಪತ್ನಿ ಗೀತಾರವರು ಮಾನಸಿಕ ಖಾಯಿಲೆಗೆ ತುತ್ತಾಗಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದರು. ನಿನ್ನೆ ದಿನಾಂಕ:22-10-2022 ರಂದು ಸೋಮಯಾಜಿ ಆಸ್ಪತ್ರೆಯಿಂದ ತಪಾಸಣೆ ನಡೆಸಿ ಔಷಧಿಯನ್ನು ಪಡೆದುಕೊಂಡು ಬಂದಿರುತ್ತಾರೆ. ಬಳಿಕ ರಾತ್ರಿ 10.30 ಗಂಟೆಗೆ ಊಟ ಮಾಡಿ ಕೋಣೆಯಲ್ಲಿ ಮಲಗಿದ್ದು, ಪಿರ್ಯಾದಿದಾರರು ರಾತ್ರಿ 2.30 ಗಂಟೆಗೆ ಮೂತ್ರಶಂಕೆಗೆ ಎದ್ದು ಹೋಗುವಾಗ ಮೃತ ಗೀತಾರವರು ಮಲಗಿರುವುದನ್ನುನೋಡಿರುತ್ತಾರೆ. ಈ ದಿನ ದಿನಾಂಕ:23-10-2022 ರಂದು ಬೆಳಿಗ್ಗೆ 6.30 ಗಂಟೆಗೆ ಎದ್ದು ನೋಡುವಾಗ ಪಿರ್ಯಾದಿದಾರರ ಪತ್ನಿ ಮೃತ ಗೀತಾರವರು ಎಲ್ಲಿಯೂ ಕಾಣದೇ ಇದ್ದು, ಎಲ್ಲಾ ಕಡೆ ಹುಡುಕಾಡಿದಾಗ ಮನೆಯ ಹಿಂಬದಿಯಲ್ಲಿರುವ ಬಾವಿಯಲ್ಲಿ ನೀರು ಸೇದುವ ಹಗ್ಗವನ್ನು ಕುತ್ತಿಗೆಗೆ ಹಾಕಿಕೊಂಡು ನೀರಿನಲ್ಲಿ ಮುಳುಗಿ ತೇಲಾಡುತ್ತಿದ್ದು, ಕೂಡಲೇ ಅಗ್ನಿಶಾಮಕದಳದವರನ್ನು ಬರಮಾಡಿಕೊಂಡು ಅವರ ಸಹಾಯದಿಂದ ದೇಹವನ್ನು ಮೇಲಕ್ಕೆ ಎತ್ತಿ ನೋಡಲಾಗಿ ಮೃತಪಟ್ಟಿದ್ದಾರೆ.ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 37-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುನಾದ್‌ರಾಜ್ ಶೆಟ್ಟಿ, (29),ತಂದೆ: ಸುಪ್ರೀತ್ ಶೆಟ್ಟಿ,ಬೊಂಡಾಲ ಅಂತರಗುತ್ತು ಮನೆ, ಪಾಣೆಮಂಗಳೂರು ಗ್ರಾಮ, ಶಂಭೂರು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾಧಿದಾರರು ಹಾಗೂ ಮೃತ ಭರತ್‌ ಕೆ ಶೆಟ್ಟಿ (32ವರ್ಷ)  ರವರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಲಿ. ದರ್ಬೆ ಪುತ್ತೂರು ಇಲ್ಲಿ ಕೆಲಸ ಮಾಡಿಕೊಂಡಿದ್ದು, ಈ ಸಂಘದ ಹೊಸ ಶಾಖೆಯು ಬೆಳ್ತಂಗಡಿ ತಾಲೂಕು, ಮಾಲಾಡಿ ಗ್ರಾಮದ, ಮಡಂತ್ಯಾರು ಎಂಬಲ್ಲಿರುವ ಪೊಂಪೈ ಆರ್ಕೆಡ್‌ನಲ್ಲಿ ನವೆಂಬರ್‌ನಿಂದ ಕಾರ್ಯಾರಂಭ ಮಾಡಲಿರುವುದರಿಂದ ಕಛೇರಿಯ ಪೈಂಟಿಂಗ್‌ ಹಾಗೂ ಪಿಠೋಪಕರಣ ಜೋಡಣೆಯ ಕೆಲಸಗಳು ನಡೆಯುತ್ತಿದ್ದು, ದಿನಾಂಕ: 22.10.2022 ರಂದು ಸಂಜೆ ವೇಳೆ ಈ ಕಛೇರಿಗೆ ಪುತ್ತೂರು ಮಹಾಲಕ್ಷ್ಮೀ ಹಾರ್ಡ್‌ವೇರ್‌ನಿಂದ ಪ್ಲೈವುಡ್‌ ಬರುತ್ತಿದ್ದರಿಂದ ಫಿರ್ಯಾಧಿದಾರರು ಹಾಗೂ ಭರತ್‌ ಕೆ ಶೆಟ್ಟಿ ರವರು ಮಡಂತ್ಯಾರಿಗೆ ಬಂದಿದ್ದು, ಪ್ಲೈವುಡ್‌ನ್ನು ಕಛೇರಿಗೆ ಒಳಗಡೆ ಇಟ್ಟು ಬಳಿಕ ಸಂಜೆ 6:55 ಗಂಟೆಯ ಸುಮಾರಿಗೆ ಫಿರ್ಯಾಧಿದಾರರು ಹಾಗೂ ಭರತ್‌ ರವರು ಜ್ಯೂಸ್‌ ಕುಡಿಯಲು ಅದೇ ಕಾಂಪ್ಲೆಕ್ಸ್‌ನಲ್ಲಿದ್ದ ನಯನ್‌ ಬೇಕರಿ ಹೋದಾಗ ಅಲ್ಲಿ ಭರತ್ ರವರು ನನಗೆ ಜ್ಯೂಸ್‌ ಬೇಡ ನೀರು ಮಾತ್ರ ಸಾಕು ಎಂದು ಹೇಳಿ ನೀರಿನ ಬಾಟಲಿಯನ್ನು ಪಡೆದುಕೊಂಡು ಹೊರಗಡೆ ಬಂದು ಅದೇ ಕಾಂಪ್ಲೆಕ್ಸ್‌ ನಲ್ಲಿರುವ ರಚನಾ ಸಿಲ್ಕ್ ನ ಬಳಿ ಕುಸಿದು ಬಿದ್ದಿದ್ದವರನ್ನು ಫಿರ್ಯಾಧಿದಾರರು ಹಾಗೂ ಇತರರು ಅಲ್ಲೆ ಇದ್ದ ಜಾನ್‌ ಅಪ್ಟಿಕಲ್ಸ್‌ & ಶ್ರೇಯಾ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಅಲ್ಲಿನ ವೈಧ್ಯರಿಂದ ಪರೀಕ್ಷಿಸಿದಲ್ಲಿ ವೈಧ್ಯರು ಭರತ್‌ ರವರಿಗೆ ಹೃದಯಾಘಾತವಾಗಿದೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಉನ್ನತ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಅಂಬ್ಯುಲೆನ್ಸ್‌‌‌‌‌ ವೊಂದರಲ್ಲಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈಧ್ಯರು ಭರತ್‌ರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ UDR NO: 20/2022 ಕಲಂ: 174 CrPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-10-2022 09:57 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080