ಅಪಘಾತ ಪ್ರಕರಣ: 04
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಭಾಸ್ಕರ್ ಪ್ರಾಯ: 37 ತಂದೆ: ದಿ|| ತಿಮ್ಮಪ್ಪ ಮೂಲ್ಯ ವಾಸ: ಮಿತ್ತಗಿರಿ ಮನೆ, ಬಿ ಕಸಬಾ ಗ್ರಾಮ , ಜೋಡು ಮಾರ್ಗ ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 23-11-2022 ರಂದು ಪಿರ್ಯಾಧಿದಾರರು ಕೆಲಸ ನಿಮಿತ್ತ ವಗ್ಗ ಕಡೆಗೆ ಸಮಯ ಸುಮಾರು ಬೆಳಿಗ್ಗೆ 09:40 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಬೈಪಾಸ್ ಜಂಕ್ಷನ್ ಬಳಿ ತಲುಪುತ್ತಿದಂತೆ ಪಿರ್ಯಾಧಿದಾರರ ಮುಂದಿನಿಂದ ಅದೇ ಮಾರ್ಗವಾಗಿ ಆಟೋರಿಕ್ಷಾವೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಹೋಗಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಾದಚಾರಿ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಬಲ ಮೊಣ ಕೈಗೆ ಗುದ್ದಿದ ರಕ್ತ ಗಾಯ, ಹಿಂಬದಿ ತಲೆಗೆ ಗುದ್ದಿದ ನೋವಾದವರನ್ನು ಪಿರ್ಯಾಧಿದಾರರು ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 147/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಚಿದಾನಂದ (50), ತಂದೆ: ಕೊಟ್ಯಾಪ್ಪ ಪೂಜಾರಿ, ವಾಸ: ಬರಂಗಾಯ ಮನೆ, ನಿಡ್ಲೆ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 23-11-2022 ರಂದು ಪಿರ್ಯಾದಿದಾರರ ಬಾಬ್ತು ಕೆಎ26M5438 ನೇ ಬೋಲೆರೋ ಜೀಪಿನಲ್ಲಿ ಮತ್ತು ತಾರನಾಥರವರ ಬಾಬ್ತು ಕೆಎ 70-3191 ನೇ ಇಕೋ ವಾಹನದಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಯಾತ್ರಾರ್ಥಿಗಳು ದೇವಸ್ಥಾನಗಳಿಗೆ ಬೇಟಿ ನೀಡಲು ಎರಡು ವಾಹನಗಳನ್ನು ಬಾಡಿಗೆಗೆ ಗೊತ್ತು ಮಾಡಿದ್ದು ಅವರುಗಳನ್ನು ಎರಡು ವಾಹನಗಳಲ್ಲಿ ಕುಳ್ಳಿರಿಸಿಕೊಂಡು ಸೌತಡ್ಕ, ವೈದ್ಯನಾಥೇಶ್ವರ, ಶಿಶಿಲ ದೇವಸ್ಥಾನ ಕಡೆಗಳಿಗೆ ಬೇಟಿ ನೀಡಿ ವಾಪಸ್ಸು ಧರ್ಮಸ್ಥಳದ ಕಡೆ ಬರುತ್ತಿರುವಾಗ ಬೋಳಿಯಾರು ಎಂಬಲ್ಲಿಗೆ ತಲುಪುತ್ತಿದ್ದಂತೆ ವಾಹನಗಳಲ್ಲಿದ್ದ ಪ್ರಯಾಣಿಕರು ರಸ್ತೆ ಬದಿಯಲ್ಲಿರುವ ಹಣ್ಣುಗಳನ್ನು ಸೇವಿಸಲು ಕಚ್ಚಾ ಮಣ್ಣುರಸ್ತೆಯಲ್ಲಿ ನಿಂತುಕೊಂಡಿರುವ ಸಮಯ ಸುಮಾರು ಸಂಜೆ 5.10 ಗಂಟೆಗೆ ಧರ್ಮಸ್ಥಳ ಕಡೆಯಿಂದ ಕೊಕ್ಕಡ ಕಡೆಗೆ ಕೆಎ 09 F 5506 ನೇ KSRTC ಬಸ್‌ನ್ನು ಅದರ ಚಾಲಕ ದುಡುಕುತನದಿಂದ ರಸ್ತೆಯ ತೀರ ಎಡಬದಿಗೆ ಕಚ್ಚಾ ಮಣ್ಣು ರಸ್ತೆಗೆ ಚಲಾಯಿಸಿದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಪ್ರಯಾಣಿಕರಿಗೆ ಬಸ್ಸು ಢಿಕ್ಕಿಯಾಗಿ ಬಳಿಕ ಕಚ್ಚ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ್ದ ಕೆಎ26M5438 ನೇ ಬೋಲೆರೋ ಜೀಪಿಗೆ ಢಿಕ್ಕಿ ಹೊಡೆದ ಪರಿಣಾಮ ಬೊಲೇರೋ ಜೀಪು ಕೂಡ ಜಖಂಗೊಂಡಿರುತ್ತದೆ, ಈ ಅಪಘಾತದಿಂದ ಪ್ರಯಾಣಿಕರಾದ ಮಹಾದೇವರವರಿಗೆ ತೀವ್ರ ರಕ್ತಗಾಯ, ಉಳಿದ ಪ್ರಯಾಣಿಕರಾದ ಸಿದ್ದಪ್ಪ, ಚೆನ್ನಮ್ಮ, ಪವಿತ್ರಾ, ಪಾರ್ವತ್ತಮ್ಮ, ಅಂಬಾಮನಿ, ರಮ್ಯ, ಮಗು ಕುಶಲ್, ಬಸ್ಸು ಚಾಲಕ ವಿಜಯಕುಮಾರ್ ರವರುಗಳಿಗೆ ಕೂಡ ಮೈ ಕೈಗಳಿಗೆ ರಕ್ತಗಾಯಗಳಾಗಿರುವ ಕಾರಣ ಉಜಿರೆ ಎಸ್‌ಡಿಎಮ್ ಆಸ್ಪತ್ರೆಯಲ್ಲಿ ಹಾಗೂ ಮಗು ಕುಶಲ್ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ, ತೀವ್ರ ಗಾಯಗೊಂಡ ಮಹಾದೇವರವರು ಆಸ್ಪತ್ರೆಗೆ ಕೊಂಡುಹೊಗುವ ಸಮಯ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 146/2022 ಕಲಂ; 279, 337,304 (A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಅಬೂಬಕ್ಕರ್, ಪ್ರಾಯ 56 ವರ್ಷ, ತಂದೆ: ಕೆ.ಹೆಚ್. ಮಹಮ್ಮದ್, ವಾಸ: ಎಂ.ಎಂ. ಮಂಝಿಲ್, ಕೂರ್ನಡ್ಕ, ದರ್ಬೆ ಅಂಚೆ, ಕೆಮ್ಮಿಂಜೆ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 23-11-2022 ರಂದು 09:30 ಗಂಟೆಗೆ ಆರೋಪಿ ಕಾರು ಚಾಲಕ ಅವಿನಾಶ್ ಎಂಬವರು KA-21-P-2337 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ದ್ವಿ ಪಥ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿದ ಪರಿಣಾಮ, ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ರಸ್ತೆಯ ಎಡಬದಿಯ ಡಾಮಾರು ಅಂಚಿನಲ್ಲಿ ನಿಂತುಕೊಂಡಿದ್ದ ಮೈಮುನಾ ರವರಿಗೆ ಕಾರು ಅಪಘಾತವಾಗಿ ಮೈಮುನಾರವರಿಗೆ ತಲೆಗೆ, ಎರಡು ಕೈಗಳಿಗೆ ಗುದ್ದಿದ ಮತ್ತು ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆಯ ಬಳಿಕ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 179/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿನ್ಯಾಸ್ ಬಿ.ಜೆ, ಪ್ರಾಯ: 21 ವರ್ಷ, ವಾಸ: ಬದಿಯಡ್ಕ ಮನೆ, ದೇವಚ್ಚಳ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 23.11.2022 ರಂದು ಫಿರ್ಯಾದಿದಾರರು ಮಂಗಳೂರಿಗೆ ಕೆಲಸಕ್ಕೆ ತೆರಳಲು ಕೆ ಎ 19 ಇ ವೈ 8469 ನೇ ಮೋಟಾರು ಸೈಕಲ್ ನಲ್ಲಿ ತನ್ನ ತಂದೆಯಾದ ಗಿರಿಯಪ್ಪ ರವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಜಾಲ್ಸೂರಿನಿಂದ ಪುತ್ತೂರು ಕಡೆಗೆ ರಾಷ್ಟ್ರಿಯ ಹೆದ್ದಾರಿಯಲ್ಲಿ ಬರುತ್ತಾ ಸಮಯ ಸುಮಾರು ಬೆಳಗ್ಗೆ 08:00 ಗಂಟೆಗೆ ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಲಾರಿಯೊಂದನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮತ್ತು ಗಿರಿಯಪ್ಪ ರವರು ರಸ್ತೆಗೆ ಬಿದ್ದು ರಕ್ತ ಗಾಯವಾಗಿರುತ್ತದೆ. ಅಪಘಾತಪಡಿಸಿದ ಲಾರಿಯನ್ನು ಅದರ ಚಾಲಕನು ರಸ್ತೆಯ ಬಳಿ ನಿಲ್ಲಿಸಿ ಪಿರ್ಯಾದಿದಾರರ ಬಳಿ ಬಂದಿದ್ದು. ಆ ಸಮಯದಲ್ಲಿ ಲಾರಿಯ ನಂಬ್ರವನ್ನು ನೋಡಲಾಗಿ ಕೆ ಎ 52 ಎ 7296 ಆಗಿದ್ದು, ಚಾಲಕನು ತನ್ನ ಹೆಸರು ಇಲಿಯಾಸ್ ಎಂದು ತಿಳಿಸಿದ್ದು. ಪಿರ್ಯಾದಿದಾರರನ್ನು ಹಾಗೂ ಗಿರಿಯಪ್ಪ ರವರನ್ನು ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷೀಸಿ ಪಿರ್ಯಾದಿದಾರರನ್ನು ಹೊರ ರೋಗಿಯಾಗಿ ಮತ್ತು ಗಿರಿಯಪ್ಪರವರನ್ನು ಓಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ : 102/2022 ಕಲo: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಕಳವು ಯತ್ನ ಪ್ರಕರಣ: 01
ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವೆಂಕಪ್ಪ ಕೆ ಪ್ರಾಯ 50 ವರ್ಷ ತಂದೆ:ಗುರುವ ವಾಸ:ಕಡಂಬು ಮನೆ, ವಿಟ್ಲಪಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕೊಡಂಪದವು ಎಂಬಲ್ಲಿರುವ ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ:22-11-2022 ರಂದು ಸಂಜೆ 5.00 ಗಂಟೆಗೆ ಪಿರ್ಯಾಧಿ ಹಾಗೂ ಸಿಬ್ಬಂದಿ ಕೆಲಸ ಮುಗಿಸಿ ಸದ್ರಿ ಬ್ಯಾಂಕಿನ ಬಾಗಿಲನ್ನು ಭದ್ರಪಡಿಸಿ ಮನೆಗೆ ಹೋಗಿದ್ದು ದಿನಾಂಕ:23-11-2022 ರಂದು ಬೆಳಿಗ್ಗೆ 06.00 ಗಂಟೆಗೆ ಅಬೂಬಕ್ಕರ್ ರವರು ಪಿರ್ಯಾಧಿಗೆ ಕರೆ ಮಾಡಿ ಬ್ಯಾಂಕ್‌ನ ಕಟ್ಟಡದ ಬಾಗಿಲನ್ನು ಮುರಿದಿರುವ ಬಗ್ಗೆ ತಿಳಿಸಿದಂತೆ ಪಿರ್ಯಾಧಿ ಸ್ಥಳಕ್ಕೆ ಬಂದು ನೋಡಿದಾಗ ಬ್ಯಾಂಕ್ ಕಟ್ಟಡದ ಬಾಗಿಲನ್ನು ಯಾರೋ ಕಳ್ಳರೂ ಯಾವುದೋ ಆಯುಧದಿಂದ ಮುರಿದು ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 180/2022 ಕಲಂ: 457, 511 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: 01
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೋನಪ್ಪ ನಾಯ್ಕ, ಪ್ರಾಯ:67 ವರ್ಷ, ತಂದೆ: ದಿ. ನಾರ್ಣ ನಾಯ್ಕ, ವಾಸ: ಮೂಡಾಯೂರು ಮನೆ, ಪಡುಮಲೆ, ಪಡುವನ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ 2 ನೇ ಮಗನಾದ ಶಶಿಧರರವರು ಪಿರ್ಯಾದಿದಾರರ ಮನೆಯ ಬಳಿ ಮನೆ ಮಾಡಿಕೊಂಡು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು, ಶಶಿಧರರವರು ಈಶ್ವರಮಂಗಲದ ಆಸು ಪಾಸಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮಾನಸಿಕ ಖಿನ್ನತೆ ಇರುವವನಂತೆ ವರ್ತಿಸುತ್ತಿದ್ದು, ದಿನಾಂಕ 23.11.2022 ರಂದು ಬೆಳಗ್ಗೆ ಫಿರ್ಯಾದಿದಾರರ ಸೊಸೆ ಸುನೀತಳು ಬೊಬ್ಬೆ ಹೊಡೆಯುವುದನ್ನು ಕೇಳಿ ಮನೆಯ ಅಂಗಳಕ್ಕೆ ಬಂದು ನೋಡಿದಾಗ ಫಿರ್ಯಾದಿದಾರರ ಮಗ ಶಶಿಧರನು ಮನೆಯ ಅಂಗಳದಲ್ಲಿರುವ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ನೇತಾಡುತ್ತಿದ್ದನ್ನು ಕಂಡು ಫಿರ್ಯಾದಿದಾರರು ಸೊಸೆ ಸುನೀತರವರಲ್ಲಿ ವಿಚಾರಿಸಿದಾಗ ದಿನಾಂಕ 22.11.2022 ರಂದು ರಾತ್ರಿ 10.00 ಗಂಟೆಗೆ ಮಲಗಿದ್ದು ದಿನಾಂಕ 23.11.2022 ರಂದು ಬೆಳಗ್ಗೆ 3:30 ಗಂಟೆಗೆ ಎದ್ದು ಮೂತ್ರ ಬರುವುದಾಗಿ ತಿಳಿಸಿ ತಲೆಗೆ ಹೆಡ್ ಲೈಟ್ ಕಟ್ಟಿ ಹೊರಗೆ ಹೋಗಿದ್ದು, ಬೆಳಗ್ಗೆ 06:00 ಗಂಟೆಗೆ ಎದ್ದು ಮನೆಯಲ್ಲಿ ನೋಡಿದಾಗ ಶಶಿಧರನು ಕಾಣದೇ ಇದ್ದುದರಿಂದ ಮನೆಯ ಹೊರಗೆ ಅಂಗಳಕ್ಕೆ ಬಂದು ನೋಡಿದಾಗ ಮನೆಯ ಅಂಗಳದ ಬಳಿ ಇರುವ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ಮೃತ ಪಟ್ಟಿದ್ದು ಕಂಡು ಬಂದಿರುತ್ತದೆ ಎಂಬುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ UDR.NO 35/2022 ಕಲಂ: 174 CRPCಯಂತೆ ಪ್ರಕರಣ ದಾಖಲಾಗಿರುತ್ತದೆ.