ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರುಕ್ಮಯ್ಯ (42) ವರ್ಷ.ತಂದೆ: ಗಂಗು ಪೂಜಾರಿವಾಸ: ಅಡ್ಯಾಲು ಮನೆ,ಮಣಿನಾಲ್ಕೂರು ಗ್ರಾಮ.ಕುಟ್ಟಿಕಳ ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದಿದಾರರು ದಿನಾಂಕ 22.01.2023 ರಂದು ಅವರ ಬಾಬ್ತು ಕಾರಿನಲ್ಲಿ  ಗೂಡಿನಬಳಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಾ  ಸಮಯ ಸುಮಾರು 19:00 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಚಂಡ್ತಿಮಾರ್ ಎಂಬಲ್ಲಿಗೆ ತಲುಪುತ್ತಿದ್ದಂತೆ ಫಿರ್ಯಾದಿದಾರರ ಮುಂದಿನಿಂದ KA-19-AD-6748 ನೇ ಆಟೋರಿಕ್ಷಾ ವನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡ ಬದಿಗೆ ಹೋಗಿ ರಸ್ತೆ ಬದಿ ಚರಂಡಿಗೆ ಬಿದ್ದು ಅಪಘಾತವಾಗಿದ್ದು, ಪರಿಣಾಮ ಆಟೋರಿಕ್ಷಾ ಚಾಲಕ ದೇಜಪ್ಪ ರವರಿಗೆ ಎಡಬದಿ ತಲೆಗೆ ಗುದ್ದಿದ ರಕ್ತಗಾಯ, ಎಡಬದಿ ಕಿವಿಗೆ ಗುದ್ದಿದ ಮತ್ತು ತರಚಿದ ಗಾಯ, ಎದೆ ಭಾಗಕ್ಕೆ ತರಚಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ, ಈ ಅಪಘಾತದ ಬಗ್ಗೆ ಯಾವುದೇ ಕಾನೂನು ಕ್ರಮ ಬೇಡವೆಂದು ತೀರ್ಮಾನಿಸಿದ್ದು ಆಸ್ಪತ್ರೆಯ ಖರ್ಚು ವೆಚ್ಚ ಜಾಸ್ತಿಯಾಗಿರುವುದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 17/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರದೀಪ್‌ (24)  ತಂದೆ. ಪ್ರಭುಶಂಕರ್‌, ವಾಸ: ಮುಸ್ಟೂರು ಗ್ರಾಮ  ಜಗಳೂರು ತಾಲೂಕು  ದಾವಣಗೆರೆ  ಎಂಬವರ ದೂರಿನಂತೆ ದಿನಾಂಕ: 23-01-2023 ರಂದು  15-00 ಗಂಟೆಗೆ ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮದ  ನೇಲ್ಯಡ್ಕ ಎಂಬಲ್ಲಿ  ಅನಿಕಾ ಕನ್‌ಸ್ಟ್ರಕ್ಷನ್‌  ಕಂಪೆನಿಯಡಿಯಲ್ಲಿ ಅಡ್ಡಹೊಳೆ-ಪೆರಿಯಶಾಂತಿ ರಸ್ತೆ ಕಾಮಗಾರಿ ಕೆಲಸ ಮಾಡಿಕೊಂಡಿದ್ದ ಭರತ್‌ ಎಂಬವರು ರಸ್ತೆಯ ಬದಿಯಲ್ಲಿ  ನಿಂತುಕೊಂಡಿದ್ದಾಗ   ಕೆಎ42ಎಂ 0785  ನೆದನ್ನು ಅದರ ಚಾಲಕ  ಮಂಗಳೂರು ಕಡೆಯಿಂದ ಹಾಸನ ಕಡೆಗೆ  ದುಡುಕುತನದಿಂದ ಚಲಾಯಿಸಿಕೊಂಡು ಬಂದು   ಭರತ್‌ ರವರಿಗೆ ಡಿಕ್ಕಿ ಹೊಡೆದ ಪರಿಣಾಮ  ಭರತ್‌ ರವರು ರಸ್ತೆಗೆ ಬಿದ್ದು ಬಲಕೆನ್ನೆಗೆ, ಬಲಕಿವಿಗೆ ಮತ್ತು ಹಣೆಗೆ ಗುದ್ದಿದ ಗಾಯವುಂಟಾದವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುವುದು. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 06/2023 ಕಲಂ: 279, 337 ಭಾದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೋಹನ್‌ ರಾಜ್‌ ಪಿ, ಪ್ರಾಯ 36 ವರ್ಷ, ತಂದೆ: ಪದ್ಮರಾಜ್  ವಾಸ: ನಂಬ್ರ. 130, ಸೌತ್‌ ಸ್ಟ್ರೀಟ್‌ ಪೆರುಮಾಳ್‌ ಪಾಳಯಂ ಅಂಚೆ ಮತ್ತು ಗ್ರಾಮ, ತುರಯೂರು ತಾಲೂಕು, ತಿರುಚಿನಾಪಳ್ಳಿ ಜಿಲ್ಲೆ, ತಮಿಳುನಾಡು ರಾಜ್ಯ ಎಂಬವರ ದೂರಿನಂತೆ ದಿನಾಂಕ 24-01-2023 ರಂದು 09:00 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಗಣೇಶ ಎಂಬವರು KA-21-Y-7724ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿನಲ್ಲಿ ಹರೀಶ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಕಡಬ ತಾಲೂಕು ಗೋಳಿತೊಟ್ಟು ಗ್ರಾಮದ ಕಾಂಚನ ಕ್ರಾಸ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಮೋಟರ್‌ ಸೈಕಲ್‌ ಸವಾರನ ಹತೋಟಿ ತಪ್ಪಿ ಸ್ಕಿಡ್ಡಾಗಿ ಬಿದ್ದು, ಪಿರ್ಯಾದುದಾರರಾದ ಮೊಹನ್‌ ರಾಜ್‌ ಪಿ ರವರು ಚಾಲಕರಾಗಿ  ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಎಲ್‌.ಪಿ.ಜಿ ಟ್ಯಾಂಕರ್‌ ಲಾರಿ ನೋಂದಣಿ ನಂಬ್ರ KA-01-AL-7923ನೇದರ ಬಲಬದಿ ಹಿಂಭಾಗದ ಚಕ್ರಕ್ಕೆ ಮೋಟಾರ್‌ ಸೈಕಲ್‌ ಅಪಘಾತವಾಗಿ, ಲಾರಿಯ ಚಕ್ರ ಜಖಂಗೊಂಡಿರುತ್ತದೆ ಮತ್ತು ಮೋಟಾರ್‌ ಸೈಕಲ್‌ ಸವಾರ ಗಣೇಶ ಹಾಗೂ ಸಹಸವಾರ ಹರೀಶ ರವರಿಗೆ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಹಿತ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 13/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಜಿತ್ ಕುಮಾರ್ ಎ.ಎಸ್, ಪ್ರಾಯ-25 ವರ್ಷ, ತಂದೆ-ಶಿವಣ್ಣಗೌಡ , ವಾಸ- ಅನಾಜೆ ಮನೆ,  ನರಿಮೊಗರು ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದುದಾರರು ದಿನಾಂಕ 24.01.2023 ರಂದು ಬೆಳಿಗ್ಗೆ ಪುತ್ತೂರು – ಸವಣೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಫಿರ್ಯಾದುದಾರರವರ ಬಾಬ್ತು KA.21.X.4629 ನೇ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಸಮಯ ಸುಮಾರು ಬೆಳಿಗ್ಗ  08;25 ರ ವೇಳೆಗೆ ಪುತ್ತೂರು ತಾಲೂಕು ಮುಂಡೂರು ಗ್ರಾಮದ ನರಿಮೊಗರು ಹಿರಿಯ ಪ್ರಾಥಮಿಕ ಶಾಲೆಯ ಎದುರು ತಲುಪುತ್ತಿದ್ದಂತೆ ಫಿರ್ಯಾದುದಾರರ ಎದುರಿನಿಂದ ಅಂದರೆ ಸವಣೂರುನಿಂದ ಪುತ್ತೂರು ಕಡೆಗೆ KA.21.Y.2776 ನೇ ಮೋಟಾರ್ ಸೈಕಲ್ ನ್ನು ಅದರ ಸವಾರನು ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲ ಬದಿಗೆ ಸವಾರಿ ಮಾಡಿಕೊಂಡು ಬಂದು ಫಿರ್ಯಾದುದಾರರ  ಬಾಬ್ತು  KA.21.X.4629 ನೇ ಮೋಟರ್ ಸೈಕಲ್ ಗೆ ಅಪಘಾತಪಡಿಸಿದ್ದು.  ಫಿರ್ಯಾದುದಾರರ ಹಿಂದಿನಿಂದ ಬರುತ್ತಿದ್ದ KA.21.EB.8331 ಆ್ಯಕ್ಟೀವಾ ಮೋಟಾರ್ ಸೈಕಲ್ ಗೂ ಅಪಘಾತಪಡಿಸಿ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಯ ಬಲಬದಿಗೆ ಬಿದ್ದಿದ್ದು, ಈ ಅಪಘಾತದಿಂದ ಫಿರ್ಯಾದುದಾರರು  ಹಾಗೂ ಹಿಂಬದಿ ಮೋಟಾರು ಸೈಕಲ್ ಸವಾರೆಯು ಕೂಡ ರಸ್ತೆಗೆ ಬಿದ್ದು, ಫಿರ್ಯಾದುದಾರರ ಬಲಭುಜಕ್ಕೆ, ಬಲಕೈಯ ಕಿರುಬೆರಳಿಗೆ ತರಚಿದ ಗಾಯವಾಗಿದ್ದು ಹಿಂಬದಿ ಮೋಟಾರು ಸೈಕಲ್ ಸವಾರೆಗೂ ಕೂಡ ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಈ ಅಪಘಾತವನ್ನು ಕಂಡು ಅಲ್ಲಿ ಸೇರಿದ್ದ ಜನರು ಅವರನ್ನು ಎಬ್ಬಿಸಿ ಉಪಚರಿಸಿದ್ದು, ಈ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನನ್ನು ಫಿರ್ಯಾದುದಾರರು ನೋಡಲಾಗಿ ಆತನಿಗೆ ಬಲಕೈ ರಟ್ಟೆ ಬಲಕಾಲಿನ ತೊಡಗೆ ತರಚಿದ ಗಾಯಗಳಾಗಿದ್ದು, ಈ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನ ಹೆಸರು ವಿಳಾಸ ಕೇಳಲಾಗಿ ಆತನ ಹೆಸರು ಮಹಮ್ಮದ್ ಮುಸ್ತಾಪ್  ಪ್ರಾಯ 23 ವರ್ಷ, ತಂದೆ.ದಿ.ರಫೀಕ್ ದರ್ಖಾಸು ಮನೆ, ಬೆಳ್ಳಾರೆ ಗ್ರಾಮ ಸುಳ್ಯ ತಾಲೂಕು ಎಂದು ತಿಳಿದಿದ್ದು ಹಿಂಬದಿ ಮೋಟಾರ್ ಸೈಕಲ್ ಸವಾರೆಯನ್ನು ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಪುತ್ತೂರು ಕಡೆಗೆ ಕಳುಹಿಸಿ ಕೊಟ್ಟಿದ್ದು,.ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ 08-2023 ಕಲಂ:279, 337, IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸರೋಜ, ಪ್ರಾಯ: 39 ವರ್ಷ ಗಂಡ: ಬಾಬು ವಾಸ: ಮತ್ತಿಲ ಮನೆ, ಕನ್ಯಾಡಿ-2  ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ತಮ್ಮ ರವಿ ಎಂಬವರು ಪಜಿರಡ್ಕ ನಿವಾಸಿ ಗಣೇಶ್‌ ಪೂಜಾರಿ ಎಂಬಬವರ ಜೊತೆ ಕಬ್ಬಿನ ಹಾಲು ತೆಗೆಯುವ ಕೆಲಸಕ್ಕೆ ಹೋಗುತ್ತಿದ್ದು ಕೆಲಸ ಮುಗಿದ ನಂತರ ಗಣೇಶ್‌ ಪೂಜಾರಿಯವರ ಮನೆಯಲ್ಲಿ ಉಳಕೊಳ್ಳುತ್ತಿದ್ದ. ದಿನಾಂಕ: 14-01-2023 ರಂದು ಉಪ್ಪಿನಂಗಡಿ ಬಜತ್ತೂರು ಗ್ರಾಮದ ಪಡ್ಪು ಎಂಬಲ್ಲಿಗೆ ಜಾತ್ರೆಗೆ ಹೋಗಿ ಜಾತ್ರೆ ಮುಗಿದ ಬಳಿಕ ಮೋಗ್ರು ಗ್ರಾಮದ ಮುಗೇರಡ್ಕ ಗ್ರಾಮದ ಜಾತ್ರೆಗೆ ಕೂಡಾ ಹೋಗಿದ್ದು ಅಲ್ಲಿ ದಿನಾಂಕ: 23-01-2023 ರಂದು ತಮ್ಮ ರವಿಗೆ ವಿಪರೀತ ಕಫ ಕೆಮ್ಮು ಶೀತ ಆಗಿ ಕೈಕಾಲು ನಡುಕ ಬರುತ್ತಿದ್ದು ಈ ಬಗ್ಗೆ ಗಣೇಶ್‌ ರವರು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಚಿಕಿತ್ಸೆ ನೀಡಿರುವುದಾಗಿದೆ. ಅಲ್ಲದೇ ದಿನಾಂಕ: :23-01-2023 ರಂದು ವಾಪಾಸ್ಸು ವಿಪರೀತ ,ಕೆಮ್ಮು ಕಫ , ರಕ್ತದೊತ್ತಡದಿಂದ ನಡುಕ ಬರುತ್ತಿದ್ದದ್ದನ್ನು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ನೀಡಿ ಗಣೇಶ್‌ ಪೂಜಾರಿಯವರ ಮನೆಗೆ ಕರೆದುಕೊಂಡು ಹೋಗಿದ್ದು ಈ ದಿನ ಬೆಳಿಗ್ಗೆ 24-01-2023 ರಂದು 7:30 ಗಂಟೆಗೆ ಹುಷಾರಿಲ್ಲದವರನ್ನು  ಚಿಕಿತ್ಸೆ ಬಗ್ಗೆ ಬೆನಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ನೀವು ಅಲ್ಲಿಗೆ ಬನ್ನಿ ಎಂದು ಪಿರ್ಯಾದಿದಾರರಿಗೆ ಹೇಳಿದ್ದು ಪಿರ್ಯಾದಿದಾರರು ಬೆನಕ ಆಸ್ಪತ್ರೆಗೆ ಹೋಗಿ ವೈಧ್ಯರಲ್ಲಿ ಪರಿಕ್ಷೀಸಿದಾಗ ರವಿಯು ಕಡಿಮೆ ರಕ್ತದೊತ್ತಡ ಕಾಯಿಲೆಯಿಂದ ಮತ್ತು ವಿಪರೀತ ಕೆಮ್ಮು ಕಫ ಕಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ UDR 06/2023 ಕಲಂ: 174 ಸಿ ಆರ್‌ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಶ್ವನಾಥ ನಾಯ್ಕ್, ಪ್ರಾಯ: 37 ವರ್ಷ ತಂದೆ:ಶೀನಪ್ಪ ನಾಯ್ಕ್  ವಾಸ: ಕುವೆತ್ತಳಿಕೆ, ಪಡುಬೆಟ್ಟು ಮನೆ  ನೆಲ್ಯಾಡಿ ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ತಂದೆಗೆ ಸುಮಾರು 20 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಮಾಡಿಸಿರುತ್ತಾರೆ. ದಿನಾಂಕ: 24-01-2023 ರಂದು ತಂದೆಯನ್ನು ಬೆಳಿಗ್ಗೆ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಹೋಗುವ ಎಂದು ಹೇಳಿದಾಗ ಈ ದಿನ ಬೇಡ  ನಾಳೆ ಹೋಗುವ ಎಂದು ತಿಳಿಸಿದ ಮೇರೆಗೆ ಪಿರ್ಯಾದುದಾರರು  ಮತ್ತು ಪಿರ್ಯಾದುದಾರರ ಪತ್ನಿ ನೆಲ್ಯಾಡಿಗೆ ಕೆಲಸಕ್ಕೆಂದು ಬಂದಿರುತ್ತೇವೆ. ಮನೆಯಲ್ಲಿ ತಾಯಿ ತಂದೆ ಮತ್ತು ಮಗಳು ಮಾತ್ರ ಇದ್ದರು. ಈ ದಿನ ಮದ್ಯಾಹ್ನ ಸುಮಾರು 1.00 ಗಂಟೆಯ ಸಮಯಕ್ಕೆ ಚಿಕ್ಕಪ್ಪನ ಮಗ ನಾಗೇಶ ಕರೆ ಮಾಡಿ ತಂದೆಗೆ ಉಷಾರಿಲ್ಲ ಬೇಗ ಮನೆಗೆ ಬನ್ನಿ ಎಂಬುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾದುದಾರರು ಮತ್ತು ಪತ್ನಿ ನೆಲ್ಯಾಡಿಯಿಂದ ಹೊರಟು 1.30 ಗಂಟೆಯ ಸಮಯಕ್ಕೆ ಮನೆಗೆ ತಲುಪಿದೆವು. ಮನೆಯಲ್ಲಿ ತಾಯಿಯಲ್ಲಿ ವಿಚಾರಿಸಿದಾಗ 12.00 ಗಂಟೆಯವರೆಗೆ ನಾವು ಮನೆಯಲ್ಲಿದ್ದು, ನಂತರ ತಾನು ದನಗಳಿಗೆ ನೀರು ಕೊಡಲು ಹೋದ ಸಮಯ ಗಂಡ ಮತ್ತು ಮೊಮ್ಮಗಳು ಮನೆಯಲ್ಲಿಯೇ ಇದ್ದರು. ನೀರು ಕೊಟ್ಟು ವಾಪಾಸು ಮನೆಗೆ ಬಂದಾಗ ಗಂಡ ಮನೆಯಲ್ಲಿ  ಇಲ್ಲದೆ ಇದ್ದು, ಹುಕಾಡಿದಾಗ ಅಡಿಕೆ ತೋಟದ ಬದಿಯಲ್ಲಿ ಗೇರು ಬೀಜದ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿರುವುದಾಗಿ ತಾಯಿ ತಿಳಿಸಿದಂತೆ, ಪಿರ್ಯಾದುದಾರರು ಹೋಗಿ ನೋಡಲಾಗಿ ತಂದೆಯವರಯ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಮೃತಪಟ್ಟು ನೇತಾಡುವ ಸ್ಥಿತಿಯಲ್ಲಿ ಕಂಡಬಂತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 07/2023 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-01-2023 10:42 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080