ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಂದರ ಗೌಡ, ಪ್ರಾಯ: 65 ವರ್ಷ, ತಂದೆ: ದಿ. ಬಾಲಣ್ಣ ಗೌಡ, ವಾಸ: ನೀರಕಜೆ ಮನೆ, ಆರ್ಯಾಪು ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಸುಂದರ ಗೌಡ, ಪ್ರಾಯ: 65 ವರ್ಷ, ತಂದೆ: ದಿ. ಬಾಲಣ್ಣ ಗೌಡ, ವಾಸ: ನೀರಕಜೆ ಮನೆ, ಆರ್ಯಾಪು ಗ್ರಾಮ, ಪುತ್ತೂರು ತಾಲೂಕು.ಎಂಬವರು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 24-02-2023 ರಂದು ಪುತ್ತೂರಿಗೆ ಹೋದವರು, ಬೆಳಗ್ಗೆ 09:10 ನಿಮಿಷಕ್ಕೆ ಪುತ್ತೂರಿನಿಂದ ವಾಪಾಸ್ಸು ಸಂಪ್ಯಕ್ಕೆ ಹೊಗಲು ಪರಿಚಯದ ನಜೀರ್ ರವರು ಚಾಲಕನಾಗಿರುವ ಕೆ ಎ 21 ಸಿ 1248 ನೇ ನಂಬ್ರದ ಆಟೋ ರಿಕ್ಷಾದಲ್ಲಿ ಕುಳಿತು ಹೋಗುವಾಗ ಆಟೋ ರಿಕ್ಷಾ ವನ್ನು ನಜೀರ್ ಎಂಬವರು ಅಜಾಗರೂಕತೆ ಹಾಗೂ ತೀವ್ರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬೆಳಗ್ಗೆ 09:30 ಗಂಟೆ ವೇಳೆಗೆ ಸಂಪ್ಯಕ್ಕಿಂತ  ಮುಂದೆ ಮೇರ್ಲ ಕ್ರಾಸ್ ಎಂಬ ತಿರುವು ರಸ್ತೆಗೆ ತಲುಪಿದಾಗ ಆಟೋ ರಿಕ್ಷಾ ಎದುರು ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ  TATA INTRA  ಗೂಡ್ಸ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಸಮೇತ  ಆಟೋ ರಿಕ್ಷಾ ಚಾಲಕ ನಜೀರ್ ಮತ್ತು ಪಿರ್ಯಾದಿದಾರರು ಮಗುಚಿ ಬಿದ್ದಿದ್ದರ ಪರಿಣಾಮ ಪಿರ್ಯಾದಿದಾರರ ಬಲ ಕೈ ರಟ್ಟೆಗೆ ನೋವುಂಟು ಆಗಿದ್ದು, ಪಿರ್ಯಾದಿದಾರರನ್ನು ಆಟೋ ರಿಕ್ಷಾ ಚಾಲಕ ನಜೀರ್ ಮತ್ತು  TATA INTRA  ವಾಹನದ ಚಾಲಕ ಹಾಗೂ ಮತ್ತೊಂದು ಆಟೋ ರಿಕ್ಷಾದ ಚಾಲಕ ಇಸ್ಮಾಯಿಲ್ ರವರು ಪಿರ್ಯಾದಿದಾರರನ್ನು ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ  ಇಸ್ಮಾಯಿಲ್ ರವರ ಆಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಾಗ ವೈದ್ಯಾಧಿಕಾರಿಯವರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ CR.NO 15-2023 ಕಲಂ 279, 337 ಐ ಪಿ ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದಾಮೋದರ ಪ್ರಾಯ 45 ವರ್ಷ ತಂದೆ:ದಿ||ತನಿಯಪ್ಪ ವಾಸ:ಏಮಾಜೆ ಮನೆ, ನೇರಳಕಟ್ಟೆ ಅಂಚೆ, ನೆಟ್ಲಮುಡ್ನೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:17-02-2023 ರಂದು ಸಂಜೆ 5.30 ಗಂಟೆಯಿಂದ ರಾತ್ರಿ 9.00 ಗಂಟೆಯ ಮಧ್ಯದ ಅವಧಿಯಲ್ಲಿ ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಏಮಾಜೆ ಎಂಬಲ್ಲಿರುವ ಪಿರ್ಯಾಧಿದಾರರ ಬಾಬ್ತು ವಾಸದ ಮನೆಯ ಅಂಗಳದಲ್ಲಿದ್ದ ಹಾಲು ಕರೆಯುವ ಸುಮಾರು 04 ವರ್ಷ ಪ್ರಾಯದ ಗೋಧಿ ಮೈ ಬಣ್ಣದ ಜೆರ್ಸಿ ದನ-01 ಅಂದಾಜು ಮೌಲ್ಯ 30.000/- ರೂ ಆಗಬಹುದು ಹಾಗೂ ಸುಮಾರು 1 ½ ವರ್ಷ ಪ್ರಾಯದ ಕಡು ಕೆಂಪು ಬಣ್ಣದ ಗಿರ್‌ ತಳಿಯ ಕಡಸು ಧನ-1 ಇದರ ಅಂದಾಜು ಮೌಲ್ಯ 10,000/- ರೂ ಆಗಬಹುದು. ಸದ್ರಿ ದನಗಳನ್ನು ಪಿರ್ಯಾಧಿದಾರರು ಹಾಗೂ ಅವರ ಮನೆಯವರು ಮನೆಯಲ್ಲಿಲ್ಲದ ಸಮಯ ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ದನಗಳ ಒಟ್ಟು ಅಂದಾಜು ಮೌಲ್ಯ - 40,000/- ರೂ ಆಗಬಹುದು.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 28/2023  ಕಲಂ: 379 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರೋಹಿತ್  ಪ್ರಾಯ;40 ವರ್ಷ  ವಾಸ; #221/1 ಲಾಯಿಲಾ ಗ್ರಾಮ ಉಜಿರೆ ಅಂಚೆ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ;09-02-2023 ರಂದು  ಬೆಳಿಗ್ಗೆ ಸುಮಾರು 9.30 ಗಂಟೆಗೆ  ಪಿರ್ಯಾದಿಯವರು  ಮಂಗಳೂರಿನಲ್ಲಿರುವ ಸಮಯ  ಪಿರ್ಯಾದುದಾರರ ತಾಯಿ ದೂರವಾಣಿ ಮೂಲಕ  ತಿಳಿಸಿದ ಮಾಹಿತಿ ಏನೆಂದರೆ  ಪಿರ್ಯಾದುದಾರರು  ಸೂಪರ್ ವೈಸರ್ ಆಗಿ ನೋಡಿಕೊಳ್ಳುತ್ತಿರುವ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ  ಜಾಗದಲ್ಲಿ ನೇಮಣ್ಣ ನಾಯ್ಕ ಮತ್ತು ಇತರರು  ಸೇರಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ  ಜಮೀನಿನ ಇನ್ನೊಂದು ಭಾಗದಿಂದ ದಾರಿ ಹಾಗೂ ರಸ್ತೆಯನ್ನು  ನಿರ್ಮಿಸುತ್ತಿದ್ದ ಸಮಯ ಕೇಶವ ಎಂಬವರು  ವಿಡಿಯೋ ರಿಕಾರ್ಡ್   ಮಾಡುತ್ತಿದದ್ದನ್ನು  ನೋಡಿದ ಅಲ್ಲಿ ಸೇರಿದ ಜನರು  ಓಡಿಸಿಕೊಂಡು  ಬಂದು ಹಲ್ಲೆ ಮಾಡಿದ್ದು  ಜೀವ ಭಯದಿಂದ ಗೇಟ್ ಹಾಕಲು ಪ್ರಯತ್ನಿಸುತ್ತಿದ್ದಾಗ  ಗೇಟ್ ನ್ನು ಕಿತ್ತು ಹಾಕಿ ಕಳವು ಮಾಡಿದ್ದು  ಕಳವಾದ ಸ್ವತ್ತಿನ ಅಂದಾಜು ಮೌಲ್ಯ 1,50.000 ರೂ ಆಗಬಹುದು. ಸ್ಥಳಕ್ಕೆ ಹೋದ ಕೇಶವ  ಮತ್ತು ಯಶೋಧಾ ರವರನ್ನು  ಕತ್ತಿ, ಸಬ್ಬಲು ಕೊರೆ ಇತ್ಯಾದಿ ಮಾರಾಕ ಅಸ್ತ್ರವನ್ನು ಹಿಡಿದುಕೊಂಡು  ನಿಮ್ಮನ್ನು  ಮತ್ತು ರೋಹಿತ್ ನನ್ನು ಕೊಂದು ಹಾಕುತ್ತೇವೆಂದು ಜೀವ ಬೆದರಿಕೆ  ಹಾಕಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅಕ್ರ ನಂ 11/2023 ಕಲಂ:447,379,143,148,323,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ಪ್ರಕರಣದ ದೂರುದಾರರಾದ ಸಂತ್ರಸ್ಥ ಮಹಿಳೆಯು ದಿನಾಂಕ:24-02-2023 ರಂದು  ಬೆಳ್ತಂಗಡಿ ರಿಜಿಸ್ಟರ್ ಕಛೇರಿಗೆ ಹೋಗಿದ್ದ ಸಮಯ ಬೆಳಿಗ್ಗೆ  10.30 ಗಂಟೆಗೆ ಅಲ್ಲಿದ್ದ ಆಕೆಯ ಗಂಡ ಹಾಗೂ ಗಂಡನ ತಂದೆ ಸಂತ್ರಸ್ಥೆಯ ಬಟ್ಟೆಯನ್ನು ಎಳೆದು ಸಾರ್ವಜನಿಕರ ಎದುರಲ್ಲಿ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 354(B), 323, R/W 34 IPC ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-02-2023 10:57 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080