Feedback / Suggestions

ಅಪಘಾತ ಪ್ರಕರಣ: 3

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಾಯ :37 ವರ್ಷ, ತಂದೆ: ದಿ|| ಕೋರಗಪ್ಪ ಗೌಡ ವಾಸ: ಮಾವಿನಕಟ್ಟೆ ಮನೆ,  ಮೂಡಪಡುಕೋಡಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 23-04-2022 ರಂದು ಆಟೋರಿಕ್ಷಾದಲ್ಲಿ ಬಿ ಸಿ ರೋಡ್ ಕಡೆಯಿಂದ ತನ್ನ ಮನೆ ಕಡೆಗೆ ಪ್ರಯಾಣಿಸುತ್ತಾ ಸಮಯ ಸುಮಾರು ಸಂಜೆ 7-30 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿಗೆ ತಲುಪಿದಾಗ ಬೆಳ್ತಂಗಡಿ ಕಡೆಯಿಂದ KA-19-MH-1897 ನೇ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದಿನಿಂದ ಪದ್ಮಯ್ಯ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-19EW-6322 ನೇ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ವಾಹನಗಳೆರಡು ಜಖಂಗೊಂಡಿದ್ದು, ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರ  ಪದ್ಮಯ್ಯ ರವರ ತಲೆಗೆ, ಎಡ ಕಾಲಿಗೆ, ಬಲ ಕೈಗೆ, ಸೊಂಟಕ್ಕೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಕಾರಿನಲ್ಲಿದ್ದ ಪದ್ಮರವರ ಹಣೆಗೆ ತರಚಿದ ಗಾಯ, ನಿಶ್ಚಿತ ರವರ ಎಡ ಮುಖಕ್ಕೆ, ಎಡ ಕೆನ್ನೆಗೆ, ತಲೆಗೆ, ಎಡ ಕೈಗೆ ಗುದ್ದಿದ ಹಾಗೂ ರಕ್ತ ಗಾಯವಾಗಿದ್ದು, ಗಾಯಗೊಂಡ ಪದ್ಮಯ್ಯ ರವರು ಮಂಗಳೂರು ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಪದ್ಮ ಮತ್ತು ನಿಶ್ಚಿತರವರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 47/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಮಸೂದ್ (32ವರ್ಷ)ತಂದೆ; ಬಿ ಎಂ ಮುಸ್ತಾಫ್ ವಾಸ; ಪಟ್ಟೆ,ದೋಂತಿಲ ಮನೆ ಕೌಕ್ರಾಡಿ ಗ್ರಾಮ  ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 24.04.2022 ರಂದು ರಾ ಹೆ 75 ರಸ್ತೆಯ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿ ಸಂತೆಕಟ್ಟೆ ಬಳಿ  ಬೆಳಿಗ್ಗೆ 06.00 ಗಂಟೆಯ ವೇಳೆಗೆ KA 05 NB 8080 ನೇ ಕಾರಿನ ಚಾಲಕನು ಕಾರನ್ನು ನಿರ್ಲಕ್ಷ  ಹಾಗೂ  ಅಜಾಗರೂಕತೆಯಿಂದ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬಂದು ಅದರ ಎದುರುಗಡೆಯಿಂದ ಹೋಗುತ್ತಿದ್ದ ಬಸ್ಸನ್ನು ಓವರ್ ಟೇಕ್ ಮಾಡಿ ಎದುರುಕಡೆಯಿಂದ ಅಂದರೆ ನೆಲ್ಯಾಡಿ ಪೇಟೆ ಕಡೆಗೆ ಬರುತ್ತಿದ್ದ  ಅಟೋರಿಕ್ಷಾ ನಂಬ್ರ KA 21 C 0468 ನೇದಕ್ಕೆ ಡಿಕ್ಕಿಯಾಗಿ ,ಪರಿಣಾಮ ಅಟೋ ಚಾಲಕ ಅಟೋ ರಿಕ್ಷಾದಿಂದ ರಸ್ತೆಗೆ ಎಸೆಯಲ್ಪಟ್ಟು ಅಟೋ ರಿಕ್ಷಾ ಚಾಲಕ ಮಹಮ್ಮದ್ ರಿಜ್ವಾನ್ ಎಂಬವನಿಗೆ ತಲೆಗೆ ಮತ್ತು ಮುಖಕ್ಕೆ, ಬಲದ ಕೈಯಿಗೆ ಹಾಗೂ ಕಾಲುಗಳಿಗೆ ರಕ್ತಗಾಯ ಉಂಟಾಗಿ ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 50/2022 ಕಲಂ:279.337 ಭಾದಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಬ್ರಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀ ಹರ್ಷ, ಪ್ರಾಯ: 28 ವರ್ಷ, ತಂದೆ: ಪುರುಷೋತ್ತಮ ಭಟ್, ಇಂಜಾಡಿ ಮನೆ, ಸುಬ್ರಹ್ಮಣ್ಯ ಗ್ರಾಮ, ಕಡಬ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 23.04.2022 ರಂದು ಮದ್ಯಾಹ್ನ ಸುಮಾರು 03:15 ಗಂಟೆಗೆ ಅವರ ಬಾಬ್ತು ಬೈಕ್ ನಂಬ್ರ KA 21 K 7920 ನೇದರಲ್ಲಿ ಅವರ ತಂದೆ ಪುರುಷೋತ್ತಮ ಭಟ್ ರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ದೇವಸ್ಥಾನಕ್ಕೆ ಹೋಗಿ ಅಲ್ಲಿ ಊಟ ಮಾಡಿ, ನಂತರ ಕುಲ್ಕುಂದ ಪೆಟ್ರೋಲ್ ಬಂಕ್ ನಲ್ಲಿ ಇಂಧನ ತುಂಬಿಸಿಕೊಂಡು ವಾಪಸ್ಸು ಬರುತ್ತಾ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕೆಎಸ್ ಎಸ್ ಪದವಿ ಕಾಲೇಜಿನ ಎದುರುಗಡೆ ಇರುವ ಅನುಗ್ರಹ ಹಾರ್ಡ್ ವೇರ್ ಅಂಗಡಿಯಿಂದ ಮನೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿಕೊಂಡು ಬೈಕ್ ಹತ್ತಿ ಸ್ಟಾರ್ಟ್ ಮಾಡಿದ್ದು, ಹಿಂಬದಿ ಸವಾರರಾಗಿ ಪಿರ್ಯಾದಿದಾರರ ತಂದೆ ಕುಳಿತುಕೊಂಡಿದ್ದ ಸಮಯ ಕುಮಾರದಾರ ಕಡೆಯಿಂದ ಒಂದು ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ತಂದೆ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರ ತಂದೆಗೆ ತಲೆಯ ಹಿಂಬದಿಗೆ, ಬಲಕಾಲಿನ ಮೊಣಗಂಟಿಗೆ ಮತ್ತು ಎಡಕೋಲು ಕಾಲಿಗೆ ರಕ್ತಗಾಯವಾಗಿದ್ದು, ಪಿರ್ಯಾದಿದಾರರಿಗೆ ಎಡಕೆನ್ನೆ ಬಳಿ ಮತ್ತು ಬಲತೊಡೆಗೆ ತೆರಚಿದ ಗಾಯವಾಗಿರುತ್ತದೆ. ಬಳಿಕ ಅವರನ್ನು ಅವರ ಪರಿಚಯದ ಶಿವರಾಮ್ ಭಟ್ ಮತ್ತು ಕಾರ್ತಿಕ್ ಎಂಬವರು ಉಪಚರಿಸಿ ಆ್ಯಂಬುಲೆನ್ಸ್ ಒಂದರಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು, ಪಿರ್ಯಾದಿದಾರರ ತಂದೆಯವರಿಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ ಅವರನ್ನು ಮಂಗಳೂರಿನ ಕೆಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆ .ಕ್ರ ನಂಬ್ರ  : 46/2022 ಕಲಂ:   279, 337, 338 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಳವು ಪ್ರಕರಣ: 2

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹರ್ಷ  ಪ್ರಾಯ: 41 ವರ್ಷ ತಂದೆ; ದಿ|| ಲಕ್ಷ್ಮಿ ನಾರಾಯಣ ಭಟ್ ವಾಸ; ಒಂಜರೆಬೈಲು ಮನೆ ಮುಂಡಾಜೆ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿಯಾದುದಾರರು ದಿನಾಂಕ: 23-04-2022 ರಂದು ಊಟ ಮಾಡಿ ರಾತ್ರಿ ಮಲಗಿದ್ದು ಪಿರ್ಯಾದಿದಾರರ ಪತ್ನಿ ಮಗು ಎಚ್ಚರವಿದ್ದರಿಂದ ದಿನಾಂಕ: 24-04-2022 ರಂದು 01.00 ಗಂಟೆಗೆ ಮಲಗಿದ್ದು ರಾತ್ರಿ ಸಮಯ ಸುಮಾರು 02.00 ಗಂಟೆಯ ಸಮಯಕ್ಕೆ ಮನೆಯಲ್ಲಿ ಕರೆಂಟು ಹೋದ ಕಾರಣ ಮಗು ಎಚ್ಚರಗೊಂಡಿದ್ದರಿಂದ  ಪಿರ್ಯಾದಿದಾರರು ಹಾಗೂ ಅವರ ಪತ್ನಿ ಎಚ್ಚರಗೊಂಡವರು ಮನೆಯ ಇನ್ ವರ್ಟರ್ ಬಳಿ ಹೋಗಿ ಹೋದಾಗ ಇನವರ್ಟರ್ ಸ್ಥಗಿತಗೊಂಡಿದ್ದು ನಂತರ ಮನೆಯ ಹೊರಗಿನ ಹಾಲ್ ಬಳಿ ಯಾವುದೋ ಶಬ್ದ ಕೇಳಿ ಹಾಲ್ ಗೆ ಬಂದಾಗ ಮುಂಬಾಗದ ಬಾಗಿಲು ತೆರೆದುಕೊಂಡಿರುವುದರಿಂದ ಅನುಮಾನಗೊಂಡು ಪಿರ್ಯಾದಿದಾರರು ಅತ್ತೆ ತಾಯಿಯನ್ನು ಎಬ್ಬಿಸಿ ಜೊತೆಯಲ್ಲಿ ಬಂದು ಬೆಡ್ ರೂಮ್ ನೋಡಿದಾಗ ರೂಮ್ ನಲ್ಲಿದ್ದ ಒಂದು ಗೊದ್ರೆಜ್ ಬಾಗಿಲು ತೆರೆದು ಇರುವುದು ಕಂಡು ಬಂದಿರುತ್ತದೆ. ನಂತರ ಲಾಕರ್ ನ ಬೀಗ ಕೂಡ ತೆಗೆದು ಅದರ ಬಾಗಿಲನ್ನು ತರೆದಿರುವುದು ಕಂಡು ಬಂದಿದ್ದು ಲಾಕರ್ ನಲ್ಲಿದ್ದ ಚಿನ್ನಾಭರಣಗಳನ್ನು ತುಂಬಿಸಿಟ್ಟಿದ್ದ ಪ್ಲಾಸ್ಟಿಕ್ ಬಾಕ್ಸ್ ಇರಲಿಲ್ಲ ಸದ್ರಿ ಬಾಕ್ಸ್ ನಲ್ಲಿ  ಒಂದು ಪವನ್ ತೂಕದ 2 ಚಿನ್ನದ ಬಳೆಗಳು, 1 ಗ್ರಾಂ ತೂಕದ ಚಿನ್ನದ ಮೂಗೂತಿ,  1 ಗ್ರಾಂ ತೂಕದ ಪೆಂಡೆಟ್ , 2 ½ ಗ್ರಾಂ ತೂಕದ ಚಿನ್ನದ ಚೈನ್-1   1 ½  ಪವನ್ ತೂಕದ ಚೈನ್ -1  ಮತ್ತು 19000ರೂ ನಗದು ಇದ್ದು ದಿನಾಂಕ: 24-04-2022 ರಂದು ರಾತ್ರಿ 01.00 ಗಂಟೆಯಿಂದ 02.00 ಗಂಟೆಯ ಮಧ್ಯಧ ಅವಧಿಯಲ್ಲಿ ಮುಂಬಾಗದ ಬಾಗಿಲಿನ ಚಿಲಕವನ್ನು ಕಿಟಕಿ ಬಾಗಿಲಿನ ಮೂಲಕ ಯಾವುದೋ ಆಯುಧದಿಂದ ತೆಗೆದು ಮುಂಬಾಗದ ಬಾಗಿಲಿನಿಂದ ಮನೆಯೊಳಗೆ ಪ್ರವೇಶಿಸಿ ಗೊದ್ರೇಜ್ ಲಾಕರ್ ನಲ್ಲಿದ್ದ ಚಿನ್ನಾಭರಣಗಳನ್ನು ಹಾಗೂ ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ ರೂ 150000/-ಆಗಬಹುದು. ಹಾಗೂ ನಗದು 19000 ರೂ ಸೇರಿ ಒಟ್ಟು ಮೌಲ್ಯ 169000/- ರೂ ಆಗಬಹುದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 31/2022 ಕಲಂ: 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ:-24.04.2022 ರಂದು ಸಿ. ಹೆಚ್.ನಾರಾಯಣ ಗೌಡ. ಸಹಾಯಕ  ಪೊಲೀಸ್ ಉಪ-ನಿರೀಕ್ಷಕರು ಪುತ್ತೂರು ಗ್ರಾಮಾಂತರ ಠಾಣೆ ರವರು ಹೆಚ್.ಸಿ.483ನೇ ಸುಂದರರವರ ಜೊತೆಯಲ್ಲಿ  ಠಾಣಾ ವ್ಯಾಪ್ತಿಯಲ್ಲಿ  ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಸುಮಾರು 18.30 ಗಂಟೆಗೆ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸೆಂಟ್ಯಾರು ಎಂಬಲ್ಲಿಗೆ ತಲುಪಿದಾಗ ಸದ್ರಿ ಹೆದ್ದಾರಿಯ ಬದಿಯಲ್ಲಿ ಸ್ಕೂಟರೊಂದರ ಬಳಿಯಲ್ಲಿ  ನಿಂತುಕೊಂಡಿದ್ದ ವ್ಯಕ್ತಿಯೊಬ್ಬನು ಫಿರ್ಯಾದುದಾರರನ್ನು ನೋಡಿ ಸ್ಕೂಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದ್ದು, ಇದರಿಂದ ಸಂಶಯಗೊಂಡ ಸದ್ರಿಯವರು ಬೆನ್ನಟ್ಟಿ ಹಿಡಿದು ನಿಲ್ಲಿಸಿ, ಆತನ ಹೆಸರು, ವಿಳಾಸ ಮತ್ತು ಆತನು ನೋಡಿ ಓಡಿ ಹೋಗಲು ಕಾರಣ ವಿಚಾರಿಸಿದಾಗ ಆತನು ತಡವರಿಸುತ್ತಾ ಮೊದಲು ತಾನು ವಿಟ್ಲದ ಮಹಮ್ಮದ್ ಎಂಬುದಾಗಿ ತಿಳಿಸಿದ್ದು, ಬಳಿಕ ಉಪ್ಪಿನಂಗಡಿಯ ಆಸಿಫ್ ಎಂಬುದಾಗಿಯೂ ತಿಳಿಸಿದ್ದು, ಬಳಿಕ ಅವನನ್ನು ಕೂಲಂಕುಶವಾಗಿ ವಿಚಾರಿಸಲಾಗಿ ತನ್ನ ಹೆಸರು ಉಮೈದ್, ಪ್ರಾಯ: 24 ವರ್ಷ, ತಂದೆ: ಹಂಝ, ವಾಸ: ಮಸೂರ್ ಹಾಜಿಯವರ ಬಾಡಿಗೆ ಮನೆ, ಮಸ್ರುಲ್ಲಾಯಿ ಮಸೀದಿಯ ಎದುರು, ಅಡ್ಕಸ್ಥಳ, ಎಣ್ಮಕಜೆ ಗ್ರಾಮ, ಕಾಸರಗೋಡು ತಾಲೂಕು ಎಂದು ತಿಳಿಸಿದ್ದು, ಸದ್ರಿಯವನ ಬಳಿ ಇದ್ದ KA19 HK 1041 ನೇ ನೋಂದಣಿ ಸಂಖ್ಯೆಯ Honda Dio ಸ್ಕೂಟರಿನ ದಾಖಲಾತಿಗಳ ಬಗ್ಗೆ ಕೇಳಿದಾಗಲೂ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ. ಇದರಿಂದ ಸದ್ರಿಯವನು ಯಾವುದೋ ತಕ್ಷೀರು ನಡೆಸಿರುವ ಬಗ್ಗೆ ಬಲವಾದ ಸಂಶಯಗೊಂಡ ಫಿರ್ಯಾದುದಾರರು  ಸದ್ರಿ ರಸ್ತೆಯಲ್ಲಿ ಬರುತ್ತಿದ್ದ ಎರಡು ಜನರನ್ನು ನಿಲ್ಲಿಸಿ, ಸದ್ರಿಯವರಿಗೆ ಉಮೈದ್ ಎಂಬವನನ್ನು ತಪಾಸಣೆ ಮಾಡುವ ವೇಳೆ ಪಂಚರಾಗಿ ಹಾಜರಿದ್ದು ಫಿರ್ಯಾದುದಾರರಿಗೆ ಸಹಕರಿಸುವರೇ ವಿನಂತಿಸಿದಂತೆ ಸದ್ರಿಯವರು ಒಪ್ಪಿಕೊಂಡ ಮೇರೆಗೆ ಅವರಿಗೆ ನೋಟೀಸನ್ನು ನೀಡಿ.   ಬಳಿಕ ಪಂಚರ ಸಮಕ್ಷಮ ಸದ್ರಿ   ಉಮೈದ್ ಎಂಬವನನ್ನು ತಪಾಸಣೆ ಮಾಡಿದಾಗ ಸದ್ರಿಯವನ ಪ್ಯಾಂಟಿನ ಕಿಸೆಗಳಲ್ಲಿ ಒಟ್ಟು 5 ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ 1)SAMSUNG  ಕಂಪೆನಿಯ 1 ಮೊಬೈಲ್ ಫೋನಿನ ಅಂದಾಜು ಮೌಲ್ಯ ರೂಪಾಯಿ 8,000/-,   2)Mi ಕಂಪೆನಿಯ 1 ಮೊಬೈಲ್ ಫೋನಿನ  ಅಂದಾಜು ಮೌಲ್ಯ ರೂಪಾಯಿ 12,000/-, 3) OPPO  ಕಂಪೆನಿಯ 1 ಮೊಬೈಲ್ ಫೋನಿನ ಅಂದಾಜು ಮೌಲ್ಯ ರೂಪಾಯಿ 12,000/-, 4) SAMSUNG  ಕಂಪೆನಿಯ 1 ಮೊಬೈಲ್ ಫೋನಿನ ಅಂದಾಜು ಮೌಲ್ಯ ರೂಪಾಯಿ 8,000/-, 5) MI ಕಂಪನಿಯ 1 ಮೊಬೈಲ್ ಫೋನಿನ ಅಂದಾಜು ಮೌಲ್ಯ ರೂಪಾಯಿ 12,000/- ಆಗಬಹುದು. ಸದ್ರಿ ಮೊಬೈಲ್‌ಗಳ ಬಗ್ಗೆ ಉಮೈದ್‌ನಲ್ಲಿ ವಿಚಾರಿಸಲಾಗಿ ಸದ್ರಿಯವನು ಸರಿಯಾದ ಮಾಹಿತಿಯನ್ನು ನೀಡದೇ ಅವುಗಳನ್ನು ಮಾಡಾವು ಮತ್ತು ಬೆಳ್ಳಾರೆ ಕಡೆಯ ಮನೆಗಳಿಂದ ತಾನು ಕಳವು ಮಾಡಿಕೊಂಡು ಬರುತ್ತಿರುವುದಾಗಿ   ತಿಳಿಸಿರುವುದಾಗಿ ಅದರಂತೆ ಸದ್ರಿ ಮೊಬೈಲ್ ಫೋನ್‌ಗಳನ್ನು ಪಂಚರ ಸಮಕ್ಷಮದಲ್ಲಿ ಆರೋಪಿಯಿಂದ ಸ್ವಾಧೀನಪಡಿಸಿಕೊಳ್ಳಲಾಗಿದ್ದು,. ಅದೇ ರೀತಿ ಸದ್ರಿಯವನ ಬಳಿ  ಇದ್ದ  KA19 HK 1041 ನೇ ನೋಂದಣಿ ಸಂಖ್ಯೆಯ Honda Dio  ಸ್ಕೂಟರನ್ನು ಕೂಡಾ ಸ್ವಾಧೀನಪಡಿಸಿಕೊಂಡಿದ್ದು  ಅದರ ಅಂದಾಜು ಮೌಲ್ಯ ರೂಪಾಯಿ 85,000/- ಆಗಬಹುದು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ ಕ್ರ 54/2022 ಕಲಂ:41(D),102 CRPC, ಕಲಂ.380 IPC  . ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಕಾರ್ಮಿನ್ ರೀಟಾ ಸಿಕ್ವೇರಾ, ಪ್ರಾಯ: 72 ವರ್ಷ, ಗಂಡ: ದಿ| ರಿಚರ್ಡ್ ಸಿಕ್ವೇರಾ, ವಾಸ: ಆಶೀರ್ವಾದ್ ಮನೆ, ಜಕ್ರಿಬೆಟ್ಟು,ಬಂಟ್ವಾಳ ಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 24.04.2022 ರಂದು ಅಪರಾಹ್ನ 3.00 ಗಂಟೆಗೆ ಫಿರ್ಯಾದುದಾರರ ಬಾಬ್ತು ಜಾಗಕ್ಕೆ ಆರೋಪಿತರಾದ 1ರಿಂದ 5ನೇಯವರು ಅಕ್ರಮ ಪ್ರವೇಶ ಮಾಡಿ ಅವರ ಜಾಗವನ್ನು ಹಾರೆ ಮತ್ತು ಪಿಕ್ಕಾಸಿನಿಂದ ಅಗೆಯುತ್ತಿರುವ ಸಮಯ ಫಿರ್ಯಾದುದಾರರು ಆಕ್ಷೇಪಿಸಿದಕ್ಕೆ ಆರೋಪಿ 1ನೇಯವರು ಫಿರ್ಯಾದಿದಾರರನ್ನು ನೆಲಕ್ಕೆ ದೂಡಿ ಹಾಕಿದ್ದು, ಎಬ್ಬಿಸಲು ಬಂದ ಮನೆಯ ಕೆಲಸದಾಳು ರೇವತಿಯವರಿಗೆ ಆರೋಪಿಗಳು ಹಾರೆ ಪಿಕ್ಕಾಸನ್ನು ಕೈಯಲ್ಲಿ ಹಿಡಿದು ಝಳಪಿಸಿ ನೀನು ಬಂದರೆ ನಿನ್ನನ್ನು ಇದರಿಂದ ಹೊಡೆದು ಕೊಲ್ಲುವುದಾಗಿ ಬೆದರಿಸಿ, ಆರೋಪಿ 1ನೇಯವರು ರೇವತಿಯನ್ನು ಪಿಕ್ಕಾಸಿನಿಂದ ದೂಡಿದ ಪರಿಣಾಮ ಆಕೆಯು ನೆಲಕ್ಕೆ ಬಿದ್ದಾಗ ಬೊಬ್ಬೆ ಕೇಳಿ. ನೆರೆಕೆರೆಯವರು ಸೇರಿ ನಂತರ ಚಿಕಿತ್ಸೆಗಾಗಿ ಬಂಟ್ಔಆಳ ಸರಕಾರಿ ಆಸ್ವತ್ರೆಗೆ ದಾಖಲಿಸಿರುವುದಾಗಿದೆ..ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 44/2022  ಕಲಂ: 143, 147, 148, 447,  323, 504, 506 ಜೊತೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 24-04-2022 ರಂದು ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 43/2022  ಕಲಂ: 143, 147, 148, 323, 324, 504, 354 (ಎ), 506 ಜೊತೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 25-04-2022 11:31 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080