ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 5

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಯಾಕುಬ್ ಪ್ರಾಯ : 65 ವರ್ಷ, ತಂದೆ: ಇಸ್ಮಾಯಿಲ್ ವಾಸ: ಸ್ವಾಗತನಗರ, ಕೆದಿಲ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 23-05-2022 ರಂದು ತನ್ನ ಸ್ನೇಹಿತನ ಮನೆಯಾದ ಕೆಳಗಿನಪೇಟೆಯ ಬಸ್ತಿಪಡ್ಪು ಎಂಬಲ್ಲಿಗೆ ಹೋಗುವರೇ ಬಂಟ್ವಾಳ ತಾಲೂಕು ಬಿ-ಕಸಬಾ ಗ್ರಾಮದ ಮಂಜುನಾಥೇಶ್ವರ ಕಲ್ಯಾಣ ಮಂಟಪದ ಎದುರುಗಡೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ಸುಮಾರು ಬೆಳಿಗ್ಗೆ 10:30 ಗಂಟೆಗೆ ಬಂಟ್ವಾಳ ಪೇಟೆಯ ಕಡೆಯಿಂದ KA-19-EN-6922 ನೇ ಸ್ಕೂಟರನ್ನು ಅದರ ಸವಾರ ಆಸೀಫ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ಬಿದ್ದ ಪರಿಣಾಮ ಬಲಕೋಲು ಕಾಲಿಗೆ ಮತ್ತು ಮಣಿಗಂಟಿಗೆ ಗುದ್ದಿದ ಗಾಯವಾಗಿದ್ದು, ಬಲಕಾಲಿನ ಹೆಬ್ಬೆರಳಿಗೆ, ಬಲ ಕೋಲು ಕೈಗೆ, ಮೊಣಗಂಟಿಗೆ ತರಚಿದ ಗಾಯವಾಗಿದ್ದು ಗಾಯಾಳುವಿಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 57/2022 ಕಲಂ 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸ್ವಾಗತ್ ಪ್ರಾಯ : 29 ವರ್ಷ, ತಂದೆ: ತನಿಯಪ್ಪ ಪೂಜಾರಿ ವಾಸ: ಕೋಡಂಗೆ ಕರಿಯಂಗಳ ಮನೆ, ಕರಿಯಂಗಳ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 20-05-2022 ರಂದು ಮಿಜಾರಿಗೆ ಹೋಗುವರೇ ವಿನಯ್ ಕುಮಾರ್ ರವರ ಬಾಬ್ತು KA-70-1455 ನೇ ಆಟೋರಿಕ್ಷಾವನ್ನು ಬಾಡಿಗೆಗೆ ಗೊತ್ತುಪಡಿಸಿ ಪಿರ್ಯಾದಿದಾರರ ಅಮ್ಮ ಪುಷ್ಪ, ದೊಡ್ಡಪ್ಪನ ಮಗಳು ಆಶ್ವಿತರೊಂದಿಗೆ ಆಟೋರಿಕ್ಷಾದಲ್ಲಿ ಕುಳಿತುಕೊಂಡು ಹೋಗುತ್ತಾ ಸಮಯ ಸುಮಾರು 19:30 ಗಂಟೆಗೆ ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿಗೆ ತಲುಪಿದಾಗ ಅಡ್ಡೂರು ಕಡೆಯಿಂದ KA-19-HB-0748 ನೇ ಸ್ಕೂಟರನ್ನು ಅದರ ಸವಾರ ಪುನೀತ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ರಸ್ತೆಯ ಎಡಬದಿಗೆ ಕೆಳಗೆ ಮಗುಚಿ ಬಿದ್ದು ಆಟೋರಿಕ್ಷಾ ಚಾಲಕ ವಿನಯ್ ಕುಮಾರ್ ರವರ ಬಲಕಾಲಿನ ಮಣಿಗಂಟಿಗೆ ಗುದ್ದಿದ ಗಾಯ, ಹಣೆಗೆ ಗುದ್ದಿದ ನೋವು, ಪಿರ್ಯಾದಿದಾರರ ತಾಯಿ ಪುಷ್ಪರವರಿಗೆ ತುಟಿಗೆ ತರಚಿದ ಗಾಯ, ಎಡಕಣ್ಣಿನ ರೆಪ್ಪೆಗೆ ತರಚಿದ ಗಾಯವಾಗಿದ್ದು ಆಶ್ವಿತಾ ಹಾಗೂ ಪಿರ್ಯಾದಿದಾರರಿಗೆ ಯಾವುದೇ ಗಾಯ ನೋವು ಆಗಿರುವುದಿಲ್ಲ. ಗಾಯಗೊಂಡ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಎ.ಜೆ.ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 58/2022 ಕಲಂ 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಂದ್ರಶೇಖರ್‌ ಆಚಾರ್ಯ (56) ತಂದೆ: ದಿ.ನಾರಾಯಣ ಆಚಾರ್ಯ ವಾಸ: ಕಳಾರ ಮನೆ ಕಡಬ ಗ್ರಾಮ ಕಡಬ ಎಂಬವರ ದೂರಿನಂತೆ ದಿನಾಂಕ:24-05-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು KA 21 EB 8582  ನೇ ಮೋಟಾರ್ ಸೈಕಲ್ ನ್ನು ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಮದ್ಯಾಹ್ನ 1:45 ಗಂಟೆಗೆ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಗೇರುಕಟ್ಟೆ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ KA 21 A 9649 ನೇ ಪಿಕ್‌ ಅಪ್‌ ವಾಹನವನ್ನು ಅದರ ಚಾಲಕ ದುಡುಕತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್‌ ಸೈಕಲ್‌ ನೊಂದಿಗೆ ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿಗೆ , ಬಲಕೈ ಯ ಮಣಿಗಂಟಿಗೆ, ಮೊಣಗಂಟಿಗೆ ಗುದ್ದಿದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 77/2022 ಕಲಂ: 279,337 ಭಾ ದಂ ಸಂ,  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಂದ ಕುಮಾರ್‌  ಆರ್‌, ಪ್ರಾಯ 47 ವರ್ಷ, ತಂದೆ: ಕೆ.ಆರ್‌. ಐಯ್ಯಗಾಂರ್‌, ವಾಸ: ಕೆ.ಎನ್‌.ಆರ್‌. ಕಂನ್ಸ್ರಕ್ಷನ್‌ ಲಿ, ಬಿ.ಸಿ.ರೋಡ್‌, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 23-05-2022 ರಂದು 13-00 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ಜಗದೀಶ್‌ ಎಂಬವರು KA-21-X-2364 ನೇ ನೋಂದಣಿ ನಂಬ್ರದ ಸ್ಕೂಟರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ  ಎಂಬಲ್ಲಿ ಪುರದಮ್ಮ ದೇವಸ್ಥಾನದ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡ್ ಗೆ ಚಲಾಯಿಸಿದ ಪರಿಣಾಮ, ರಾಮ್‌ ಬಹದ್ದೂರ್‌ ಕೇವತ್‌ ಎಂಬವರು ಚಾಲಕರಾಗಿ ಕಾಂಚನ ಕಡೆಯಿಂದ ಬಿ.ಸಿ.ರೋಡ್‌. ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ನೀರಿನ ಟ್ಯಾಂಕರ್‌ ನೋಂದಣಿ ನಂಬ್ರ KL-09-AE-9405 ನೇದಕ್ಕೆ ಅಪಘಾತವಾಗಿ, ಸ್ಕೂಟರ್‌ ಸವಾರನಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  97/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಪ್ರಪುಲ್ಲ ಬಿ  ಪಿ,  ಪ್ರಾಯ: 53 ವರ್ಷ, ಗಂಡ: ಬಾಲಕೃಷ್ಣ ಪಿ ವಿ, ವಾಸ: ಏನಡ್ಕ ಮನೆ, ಗೌತಮ್ ಗಾರ್ಡನ್ಸ್‌ , ಎಡಮಂಗಲ ಅಂಚೆ ಮತ್ತು ಗ್ರಾಮ, ಕಡಬ ಎಂಬವರ ದೂರಿನಂತೆ ಪಿರ್ಯಾದಿರವರ ಗಂಡ ಬಾಲಕೃಷ್ಣ ಪಿ ವಿ ರವರು ದಿನಾಂಕ: 23-05-2022 ರಂದು ಅವರ ಬಾಬ್ತು ದ್ವಿಚಕ್ರ ವಾಹನದಲ್ಲಿ ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಪಂಜ ಪೇಟೆಗೆ ಸಾಮಾನು ಖರೀದಿ ಬಗ್ಗೆ ಹೋದ ಸಮಯ ಪಿರ್ಯಾದಿದಾರರಿಗೆ ಸುಮಾರು 12:00 ಗಂಟೆಗೆ ಪಂಜದ ಸಾರ್ವಜನಿಕರಿಂದ ದೂರವಾಣಿ ಕರೆ ಬಂದಿದ್ದು, ಸುಮಾರು 11:45 ಗಂಟೆಗೆ ಬಾಲಕೃಷ್ಣರವರು ಅಂಗಡಿಯಿಂದ ಸಾಮಾನು ಖರೀದಿಸಿ ವಾಪಾಸ್ಸು ಅವರ ಬಾಬ್ತು ದ್ವಿಚಕ್ರ ವಾಹನದ ಕಡೆಗೆ ಬರುವರೇ ನಿಂತಿಕಲ್ಲು-ಸುಬ್ರಹ್ಮಣ್ಯ ಕಡೆಗೆ ಒಂದು ದ್ವಿಚಕ್ರವಾಹನವನ್ನು ಅದರ ಸವಾರನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಡಾಮಾರು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಬಾಲಕೃಷ್ಣ ಪಿ. ವಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕೃಷ್ಣರವರುಮುಂದಕ್ಕೆ ಬಿದ್ದಿದ್ದು, ಅವರ ಎಡಕಾಳಿನ ಕೋಲುಕಾಲಿಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು,  ಕೂಡಲೇ ಅಲ್ಲಿದ್ದ ಜನರು ಅವರನ್ನು ಆರೈಕೆ ಮಾಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರಿನ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು, ಬಳಿಕ ಪಿರ್ಯಾದಿದಾರರು ಪುತ್ತೂರಿನ ಆಸ್ಪತ್ರೆಗೆ ಹೋಗಿ ನೋಡಲಾಗಿ ಅವರ ಗಂಡ ಮಾತನಾಡುವ ಸ್ಥಿತಿಯಲ್ಲಿರದೇ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಹೋಗಲು ತಿಳಿಸಿದಂತೆ ಆ್ಯಂಬುಲೆನ್ಸ್ ಒಂದರಲ್ಲಿ ಮಂಗಳೂರಿನ S.C.S ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರಿಶೀಲಿಸಿ ಬಾಲಕೃಷ್ಣರವರನ್ನು ಒಳರೋಗಿಯನ್ನಾಗಿ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣಾ ಅ.ಕ್ರ ನಂಬ್ರ  : 58/2022 ಕಲಂ:   279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶೇಕ್ ಇಬ್ರಾಹಿಂ ಸಾಹೇಬ್ ಪ್ರಾಯ:90 ವರ್ಷ ತಂದೆ: ದಿಂ.ದಾವೂದ್ ಇಬ್ರಾಹಿಂ ಸಾಹೇಬ್ ವಾಸ:ಕೇಪು ಮನೆ,ಕುಟ್ರುಪ್ಪಾಡಿ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರಾದ ಶ್ರೀಮತಿ ರೋಶನ್ ಬಿ ಪ್ರಾಯ:41 ವರ್ಷ, ಗಂಡ: ನಜೀರ್‌ ವಾಸ: ಕೇಪು ಮನೆ, ಕುಟ್ರುಪ್ಪಾಡಿ ಗ್ರಾಮರವರ ತಂದೆ ಶೇಖ್ ಇಬ್ರಾಹಿಂರವರಿಗೆ ಸಾಹೀರಬಾನು, ಚಾಂದು.ಬಿ, ರೋಶನ್‌.ಬಿ ಎಂಬ 3 ಜನ ಹೆಣ್ಣು ಮಕ್ಕಳು ಮತ್ತು ಇಸ್ಮಾಯಿಲ್‌ ಎಂಬ ಒಬ್ಬ ಮಗನಿರುತ್ತಾನೆ .ಎಲ್ಲರಿಗೂ ವಿವಾಹವಾಗಿರುತ್ತದೆ  ಪಿರ್ಯಾದುದಾರರೊಂದಿಗೆ ತಂದೆ ಶೇಖ್‌ ಇಬ್ರಾಹಿಂರವರು ವಾಸವಾಗಿರುತ್ತಾರೆ ಅವರಿಗೆ ಸುಮಾರು 90 ವರ್ಷ ವಯಸ್ಸಾಗಿದ್ದು ಮನೆಯಲ್ಲಿ ಇರುವುದಾಗಿರುತ್ತದೆ ಶೇಖ್‌ ಇಬ್ರಾಹಿಂ ರವರಿಗೆ ಆರೋಗ್ಯ ಸರಿ ಇಲ್ಲದೇ ಇದುದರಿಂದ ಆಗಾಗ ಆಸ್ಪತ್ರೆಗೆ ಹೋಗುತ್ತಿರುತ್ತಾರೆ ಅದರಂತೆ ದಿನಾಂಕ;20.05.2022 ರಂದು ಕಡಬ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು ನಂತರ ಸಂಜೆಯಾದರೂ ಮನೆಗೆ ಬಾರದೆ ಇದ್ದು  ಪಿರ್ಯಾದುದಾರರು  ಎಲ್ಲಿಯೋ ಮಗಳ ಮನೆಗೆ ಹೋಗಿರಬಹುದೆಂದು ತಿಳಿದು ಮನೆಗೆ ಬರುತ್ತಾರೆ ಎಂದು ಯೋಚಿಸಿ ಸುಮ್ಮನಿದ್ದು ಆದರೆ ಶೇಖ್‌ ಇಬ್ರಾಹಿಂರವರು  ಇದುವರೆಗೆ ಮನೆಗೆ ಬಾರದೇ ಇದುದರಿಂದ ಪಿರ್ಯಾದುದಾರರು ನೆರೆಕೆರೆ ಹಾಗೂ ಸುತ್ತಮುತ್ತ ಪರಿಸರದಲ್ಲಿ ಹುಡುಕಾಟ ಮಾಡಿದ್ದು ಪತ್ತೆಯಾಗದೇ ಇದ್ದು. ಈ ಬಗ್ಗೆ ಕಡಬ ಠಾಣಾ ಅ.ಕ್ರ 49/2022 ಕಲಂ:00MP  IPC-1860    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

  • ಸುಬ್ರಮಣ್ಯ ಪೊಲೀಸ್ ಠಾಣೆ : ದಿನಾಂಕ: 24-05.2022ರಂದು ಸುಬ್ರಮಣ್ಯ ಪೊಲೀಸ್‌ ಠಾಣೆಯಲ್ಲಿ ಅ.ಕ್ರ ನಂಬ್ರ: 57/2022 ಕಲಂ: 354, 506, 509 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-05-2022 09:49 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080