ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎಲ್ವಿನ್‌ ಪ್ರಶಾಂತ್‌ ಡಿ ಕುನ್ನ ಪ್ರಾಯ 20 ವರ್ಷ ತಂದೆ: ಲಾರೆನ್ಸ್‌ ಡಿ ಕುನ್ನ ,ವಾಸ: 1-110/1, ಅಪ್ಲೋ ನಿವಾಸ್‌, ಹಳೇಕೋಟೆ,ಬೆಳ್ತಂಗಡಿ ನಗರ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾಧಿದಾರರು ದಿನಾಂಕ: 23.09.2022 ರಂದು ಮದ್ಯಾಹ್ನ 2-00 ಗಂಟೆಗೆ ಅಂತಿಮ ವರ್ಷದ ಪರೀಕ್ಷೆ ಇದ್ದುದರಿಂದ ಮನೆಯಿಂದ ಸ್ವಲ್ಪ ತಡವಾಗಿ ಹೊರಟು  ಬಸ್ಸಿನ ಮೂಲಕ ವಿನೋಲ್‌ ಜೊತೆ ಮಡಂತ್ಯಾರಿಗೆ ಬಂದು ಮಡಂತ್ಯಾರು ಪೇಟೆಯಿಂದ ಪಿರ್ಯಾದಿದಾರರು ಮತ್ತು ವಿನೋಲ್‌ ಡಿ ಸೋಜಾ   ಮಾರ್ಗದ ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಬರುತ್ತಾ, ಮದ್ಯಾಹ್ನ ಸುಮಾರು 12.20 ಗಂಟೆಗೆ ಸೇಕ್ರೇಡ್‌ಹಾರ್ಟ್‌ ಕಾಲೇಜಿನ ಬಳಿ ಬಂದು ಗೇಟ್‌ ಬಳಿ ರಸ್ತೆಯ ಎರಡೂ ಬದಿ ನೋಡಿ ವಾಹನ ಬರದಿರುವುದನ್ನು ಖಾತರಿಪಡಿಸಿಕೊಂಡು ರಸ್ತೆ ದಾಟುವರೇ ಪ್ರಯತ್ನಿಸುತ್ತಿದ್ದಂತೆ, ಮಡಂತ್ಯಾರು ಕಡೆಯಿಂದ ಉಪ್ಪಿನಂಗಡಿ ಕಡೆಗೆ  KA21W8003 ನೇದರ ಮೋಟಾರು ಸೈಕಲ್‌ ಸವಾರನು ತನ್ನ ಮೋಟಾರು ಸೈಕಲನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಎಡ ಬದಿಗೆ ಚಲಾಯಿಸಿ  ಪಿರ್ಯಾದಿದಾರರ  ಜೊತೆ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ವಿನೋಲ್‌ ಎಂಬನಿಗೆ ಡಿಕ್ಕಿ ಹೊಡೆಸಿದ ಪರಿಣಾಮ, ವಿನೋಲ್‌ ಹಾಗೂ ಮೋಟಾರು ಸೈಕಲ್‌ ಸವಾರ ಮೋಟಾರು ಸೈಕಲ್‌ ಸಮೇತಾ ರಸ್ತೆಯ ಮೇಲೆ ಬಿದ್ದವರನ್ನು ಪಿರ್ಯಾದಿದಾರರು ಹಾಗೂ ಇತರರು  ಸೇರಿ ಮೇಲಕ್ಕೆತ್ತಿ ಆರೈಕೆ ಮಾಡಿ ಗಾಯಗೊಂಡ ಇಬ್ಬರನ್ನು ಆಂಬ್ಯುಲೆನ್ಸ್‌ ನಲ್ಲಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ  ಕಳುಹಿಸಿಕೊಟ್ಟಿದ್ದು, ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 70/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲ್ಯಾನ್ಸಿ ಡಿಸೋಜ (45) ತಂದೆ: ಹಿಲಾರಿ ಡಿಸೋಜ ವಾಸ: ನೆಲ್ಲಿಕುಮೇರಿ ಮನೆ,, ಕಲ್ಲುಗುಂಡಿ, ಸಂಪಾಜೆ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ಸ್ವಂತ ಟ್ಯಾಕ್ಸಿಯನ್ನು ಹೊಂದಿದ್ದು, ಸುಳ್ಯ ತಾಲೂಕು ಕಲ್ಲುಗುಂಡಿಯಲ್ಲಿ ಬಾಡಿಗೆ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರಿಗೆ ಪರಿಚಯದ ರಿಚಾರ್ಡ್ ಕ್ರಾಸ್ತ ಎಂಬಾತನು ಪಿರ್ಯಾದುದಾರರಿಗೆ ಬರುವ ಬಾಡಿಗೆಯನ್ನು ತಪ್ಪಿಸಿ, ಬೇರೆ ಖಾಸಗಿ  ಕಾರಿನಲ್ಲಿ ಬಾಡಿಗೆಯನ್ನು ಮಾಡಿಕೊಂಡಿರುತ್ತಾನೆ, ಇದೇ ರೀತಿ ರಿಚಾರ್ಡ್ ಕ್ರಾಸ್ತನು ಆತನ ಪರಿಚಯದವರ ಖಾಸಗಿ ಕಾರಿನಲ್ಲಿ ಒಂದು ತಿಂಗಳ ಹಿಂದೆ ಬಾಡಿಗೆ ಮಾಡಿಕೊಂಡು ಕಲ್ಲುಗುಂಡಿಯಿಂದ ಸುಳ್ಯ ಕಡೆಗೆ ಬರುತ್ತಿರುವಾಗ ಸುಳ್ಯದ ಟ್ಯಾಕ್ಸಿ ಸಂಘದವರು ಸದ್ರಿ ಖಾಸಗಿ ಕಾರನ್ನು ಪತ್ತೆ ಮಾಡಿ ಎಚ್ಚರಿಕೆ ನೀಡಿರುತ್ತಾರೆ. ಪಿರ್ಯಾದುದಾರರು ದಿನಾಂಕ 24.09.2022 ರಂದು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಚರ್ಚ್ ಶಾಲೆಯ ಹತ್ತಿರದ ಅಂಗಡಿ ಬಳಿ ನಿಂತುಕೊಂಡಿರುವ ಸಮಯ ಸುಮಾರು 17:00 ಗಂಟೆಗೆ  ರಿಚಾರ್ಡ್ ಕ್ರಾಸ್ತನು ಪಿರ್ಯಾದುದಾರರ ಬಳಿ ಬಂದು “ನೀನು ಕಳೆದ ಒಂದು ತಿಂಗಳ ಹಿಂದೆ ನಾನು ನನ್ನ ಪರಿಚಯದವರ ಖಾಸಗಿ ಕಾರನ್ನು ಸುಳ್ಯ ಕಡೆಗೆ ಬಾಡಿಗೆ ಕಳುಹಿಸಿದ್ದು, ನೀನು ಸುಳ್ಯ ಟ್ಯಾಕ್ಸಿ ಸಂಘದವರಿಗೆ ಮಾಹಿತಿ ನೀಡಿದ್ದು ನಿನೇ”  ಎಂದು ಹೇಳುತ್ತಾ ಅಲ್ಲೇ ಇದ್ದ ಇಂಟರ್ ಲಾಕ್ ನಿಂದ ಪಿರ್ಯಾದುದಾರರ ತಲೆಗೆ ಹೊಡೆದಾಗ ಪಿರ್ಯಾದುದಾರರಿಗೆ  ರಕ್ತಗಾಯವಾಗಿ ಬಿದ್ದಿದ್ದು, ಪಿರ್ಯಾದುದಾರರನ್ನು ಉದ್ದೇಶಿ ಇನ್ನೂ ಮುಂದಕ್ಕೆ ಬಾಡಿಗೆ ವಿಷಯಕ್ಕೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಪಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬಂದಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 106/2022 ಕಲಂ: 324,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಕವಿತಾ , ಕಂಬ್ಲ ಮನೆ, ಬೆಂಜನಪದವು, ಅಮ್ಮುಂಜೆ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ  ಗಂಡ    ಅಶೋಕ್  ಸುವರ್ಣ ರವರು ಅಟೋ ಚಾಲಕರಾಗಿದ್ದು,    ಸುಮಾರು 15 ವರ್ಷ ದಿಂದ ಮಾನಸಿಕ ಖಾಯಿಲೆ ಇದ್ದು, ದಿನಾಂಕ 23-09-2022 ರಂದು ಬೆಳಿಗ್ಗೆ 8.30 ಗಂಟೆಗೆ ಕೆಲಸಕ್ಕೆ ಹೋದವರು ಮದ್ಯಾಹ್ಣ  ಮನೆಗೆ ಬಂದು  ಊಟ ಮಾಡಿ 2.30 ಗಂಟೆಗೆ  ಅಟೋ ರಿಕ್ಷಾದಲ್ಲಿ ಮನೆಯಿಂದ ಹೋದವರು  ರಾತ್ರಿ 8.00 ಗಂಟೆ ಆದರೂ ಕೂಡ ಮನೆಗೆ ಬಾರದೇ ಇದ್ದುದರಿಂದ ರಾತ್ರಿ 9.30 ಗಂಟೆಗೆ  ವರೆಗೂ ಕೂಡ  ಬಾರದೇ ಇದ್ದುದರಿಂದ ಪಿರ್ಯಾದಿದಾರರು   ಗಂಡನ ಮೊಬೈಲ್ ಗೆ  ಪದೇ ಪದೇ ಕರೆ ಮಾಡಿದರೂ ಕರೆ ಸ್ವೀಕರಿಸದೇ ಇದ್ದು  ಸಂಶಯಗೊಂಡು ಪಿರ್ಯಾದಿದಾರರು  ಸಂಬಂದಿಕರ ಮನೆಗೆ ಕರೆ ಮಾಡಿದರೂ ಕರೆ ಸ್ವೀಕರಿಸದೇ ಇದ್ದು  ಪಿರ್ಯಾದಿದಾರರು  ನೆರೆಕರೆಯವರಿಗೆ ತಿಳಿಸಿ ನೆರೆಕರೆಯ ಚಿತ್ತರಂಜನ್ ,ಕಿರಣ್  ಮತ್ತಿತರು ಹುಡುಕಾಡಿದಲ್ಲಿ   ರಾತ್ರಿ  10.45 ಗಂಟೆಗೆ  ಬಡಗಬೆಳ್ಳೂರು ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿ ಅಟೋ ರಿಕ್ಷಾ ಇರುವುದನ್ನು ಕಂಡು  ಅಲ್ಲೇ ಪಕ್ಕ ಗುಡ್ಡ ಪ್ರದೇಶದಲ್ಲಿ ಹುಡುಕಾಡಿದಲ್ಲಿ  ಅಕೇಸಿಯಾ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವುದು  ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್‌ ನಂ 49-2022 ಕಲಂ 174 ಸಿ ಆರ್‌ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-09-2022 10:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080